ಕ್ಯಾಪ್ಸಿಕಂ ಭಜ್ಜಿಯಿಂದ ಐಸ್ ಕ್ರೀಮ್ ಬೊಂಡಾಸ್. ಬೆಂಗಳೂರಿನ ಈ ಅಡ್ಡಾಗಳು ಮಿಸ್ ಮಾಡಲೇಬಾರದಾಗಿದೆ

0
889

ಚಳಿಗಾಲ ಆವರಿಸುತ್ತಿದ್ದಂತೆ ಜನರು ರಸ್ತೆಯ ಬದಿಯಲ್ಲಿ ಬಿಸಿ ಬಿಸಿಯಾದ ಟೀ, ಕಾಫಿ ಗಾಗಿ ಎದುರು ನೋಡುತ್ತಿರುತ್ತಾರೆ. ಇನ್ನು ಟೀ, ಕಾಫಿ ಜೊತೆಗೆ ಭಜ್ಜಿ ಅಥವಾ ರುಚಿ ಬದ್ಧವಾದ ಪಕೋಡ ಅಂಗಡಿಗಳು ಸಿಕ್ಕಿ ಬಿಟ್ಟರಂತೂ ಸ್ವರ್ಗಾನೆ ಭೂಮಿಗೆ ಅಪ್ಪಳಿಸಿದಂತೆ ಭಾಸವಾಗುತ್ತದೆ. ಬೆಂಗಳೂರಿನಲ್ಲಿ ನಿಮಗೆ ಟೀ ಕಾಫಿ ಜೊತೆಗೆ ಸಾಕಷ್ಟು ಬೊಂಡ, ಪಕೋಡಗಳ ಅಂಗಡಿ ಮುಂಗಟ್ಟುಗಳು ಕೈ ಬೀಸಿ ಕರೆಯುತ್ತವೆ. ಬಾಯಲ್ಲಿ ನೀರೂರಿಸುವಂತಹ ವಡಾಗಳು, ಭಜ್ಜಿಗಳು, ಆಳುಗಡ್ಡಿ, ಈರುಳ್ಳಿ, ಡೊಣ್ಣ ಮೆಣಶಿನಕಾಯಿಗಳಿಂದ ಮಾಡಿದ ಬೋಂಡಾಗಳು ನಿಮ್ಮನ್ನು ಆಹ್ವಾನಿಸುತ್ತದೆ. ಬನ್ನಿ ವಿವರವಾಗಿ ಇಂತಹ ಅಂಗಡಿಗಳ ಕುರಿತು ತಿಳಿದುಕೊಳ್ಳೋಣ. ಮುಂದೆ ಓದಿ

ಎಸ್ ಎಲ್ ಏನ್ ಭಜ್ಜಿ, ನೆಟ್ಟಕಾಲಪ್ಪ ಸರ್ಕಲ್

ಎಸ್ ಎಲ್ ಏನ್ ಭಜ್ಜಿಸ್: ಪಿನ್ ಆಪಲ್ ನಿಂದ ಮಾಡಿರುವಂತಹ ಭಜ್ಜಿಗಳು ಮತ್ತು ಅದರ ಮೇಲ್ಭಾಗದಲ್ಲಿ ಕರಬೇವಿನಿಂದ ಅಲಂಕರಿಸಿದ ಘಮ ನಿಮ್ಮ ಮೂಗಿಗೆ ಬಡಿಯುತ್ತಿದೆ ಮತ್ತು ಎಳೆ ಎಳೆಯಾಗಿ ಕತ್ತರಿಸಿದಂತಹ ಕ್ಯಾರಟ್, ಈರುಳ್ಳಿ ಸಹ ನೀಡಲಾಗುತ್ತಿದೆ. ಇನ್ನು ಈ ಜಾಗದಲ್ಲಿ ರುಚಿ ಭರಿತವಾದ ಮುಷ್ ರೂಮ್ ಮತ್ತು ಹಸಿ ಬಾಳೆ ಹಣ್ಣಿನ ಭಜ್ಜಿ ರಿಯಾಯಿತಿಯಲ್ಲಿ ಸಿಗುತ್ತದೆ. ಬೆಂಗಳೂರಿನ ವಿಶೇಷವಾದ ಈರುಳ್ಳಿ, ಮೆಣಶಿನಕಾಯಿ, ಕ್ಯಾಪ್ಸಿಕಂ ಭಜ್ಜಿ ನಿಮಗೆ 20 ರುಪಾಯಿಗೆ ಸಿಗುತ್ತದೆ.

ಶ್ರೀ ಗುರು ಕೊಟ್ಟೂರೇಶ್ವರ ದಾವಣಗೆರೆ ಬೆಣ್ಣೆ ದೋಸೆ, 49/1, ಸುಬ್ಬರಾವ್ ಶೆಟ್ಟಿ ರಸ್ತೆ, ನೆಟ್ಟಕಾಲಪ್ಪ ಸರ್ಕಲ್ ಬಸವನಗುಡಿ

ದಾವಣಗೆರೆ ಬೆಣ್ಣೆ ದೋಸೆ: ಹೋಟೆಲ್ ನ ಹೆಸರು ಸೂಚಿಸುವಂತೆ ಇದು ದಾವಣಗೆರೆ ಬೆಣ್ಣೆ ದೋಸೆಗೆಂದೆ ಪ್ರಸಿದ್ದಿ ಹೊಂದಿದೆ. ಬೆಣ್ಣೆ ದೋಸೆಯ ಜೊತೆಗೆ ರುಚಿಯಾದ ಭಜ್ಜಿಗಳ ಕರಾಮತ್ತು ಸಹ ಅನುಭವಿಸಬಹುದಾಗಿದೆ. ಹಲಸಂಧಿ ವಡಾ ಮತ್ತು ಮೆಣಶಿನಕಾಯಿ ಭಜ್ಜಿ ಪ್ರಸಿದ್ದವಾದ ತಿನಿಸುಗಳಾಗಿವೆ. ಸಂಜೆಗೆ ಗಡಿಯಾರ 4:20 ಆಗುತ್ತಿದ್ದಂತೆ ನೀವು ಇಲ್ಲಿ ಹಾಜರ್ ಇರಬೇಕು. 10 ರುಪಾಯಿಗೆ ಒಂದು ಪ್ಲೇಟ್ ಸಿಗಲಿದ್ದು, ಬಿಸಿ ಬಿಸಿಯಾದ ಭಜ್ಜಿಯನ್ನು ಸವಿಯಬಹುದಾಗಿದೆ.

ಬಸವರಾಜ್ ಭಜ್ಜಿ ಬಂಡಿ, 12 ಕ್ರಾಸ್ ರಸ್ತೆ ಕಮರ್ಷಿಯಲ್ ಏರಿಯಾ, ಜೀವನ್ ಗ್ರಿಹ ಕಾಲೋನಿ, ಜೆ ಪಿ ನಗರ

ಬಸವರಾಜ್ ಭಜ್ಜಿ ಬಂಡಿ: ಇಲ್ಲಿ ಭಜ್ಜಿ ಮಾರುವ ವ್ಯಕ್ತಿ ಮೂಲತಃ ತುಮಕೂರು ಊರಿನವರಾಗಿದ್ದು, ಭಜ್ಜಿ ಮಾರಾಟವಾಗುತ್ತಿದ್ದಂತೆ ಇವರ ಮೊಗದಲ್ಲಿ ಮಂದಹಾಸವು ಗಮನಿಸಬಹುದಾಗಿದೆ. ಬಸವರಾಜ್ ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಜೆಪಿ ನಗರದ ಹತ್ತಿರದ ನಿವಾಸಿಗರಿಗೆ ತನ್ನ ಕ್ಯಾಪ್ಸಿಕಂ ಭಜ್ಜಿಗಳ ಮೂಲಕ ಪರಿಚಿತ. ಕ್ಯಾಪ್ಸಿಕಂ ಭಜ್ಜಿಗಳನ್ನು ಹೊರತು ಪಡಿಸಿ ವಿಶೇಷವಾದ ತಿನಿಸುಗಳ ಸಾಲಿನಲ್ಲಿ ಈರುಳ್ಳಿ ಭಜ್ಜಿ, ಆಳುಗಡ್ಡಿ ಭಜ್ಜಿ, ಹಸಿ ಬಾಳೆಹಣ್ಣಿನ ಭಜ್ಜಿ ಮತ್ತು ಚಿಲ್ಲಿ ಬೋಂಡಾಗಳು ಸೇರ್ಪಡೆಯಾಗುತ್ತದೆ.

ಬಾಲರಾಜ ಭಜ್ಜಿ ಬಂಡಿ, ಕಿತ್ತೂರು ರಾಣಿ ಸ್ಟೇಡಿಯಂ ಹತ್ತಿರ, ಜಯನಗರ

ಬಾಲ ರಾಜ್ ಭಜ್ಜಿ ಅಂಗಡಿ: ಇದು ಪುರಾತನವಾದ ಜಯನಗರದಲ್ಲಿ ಹುಡುಕಲಾರದ ಸ್ಥಳವಾಗಿದ್ದು, ಆಲೂ ಬೊಂಡ, ಬ್ರೆಡ್ ಭಜ್ಜಿ, ಕರಿದ ಬ್ರೆಡ್ ಪಕೋಡ ಇಲ್ಲಿ ಸಿಗುತ್ತವೆ. ಕೇವಲ 20 ರಿಂದ 30 ರೂಪಾಯಿ ಒಳಗಡೆ ನಿಮ್ಮ ಜೇಬಿಗೆ ಖತ್ತರಿ ಬೀಳಬಹುದು. ಕ್ಯಾಪ್ಸಿಕಂ ಭಜ್ಜಿ ಬಹಳ ವೇಗವಾಗಿ ಮಾರಾಟವಾಗುವ ತಿನಿಸಾಗಿದೆ.

 

ರಾಘವೇಂದ್ರ ಸ್ಟೋರ್ಸ್ ಬೊಂಡ ಅಂಗಡಿ, 1/3 ಅಪ್ಪು ರಸ್ತೆ, ಉಮಾ ಥೀಯೇಟರ್ ಸರ್ಕಲ್, ಚಾಮರಾಜ್ ಪೇಟೆ

ರಾಘವೇಂದ್ರ ಸ್ಟೋರ್ಸ್ ಬೋಂಡಾದ ಅಂಗಡಿ: ರುಚಿ ಬದ್ಧವಾದ ಬೊಂಡ, ಭಜ್ಜಿ, ಮದ್ದೂರ್ ವಡೆ ಇಲ್ಲಿ ದೊರೆಯಲಿದ್ದು,ನಿವಾಸಿಯರಿಗೆ ಖಾಯಂ ಅಡ್ಡವಾಗಿದೆ. ಇನ್ನು ವಿಶಿಷ್ಟವಾದ ತಿನಿಸುಗಳೆಂದರೆ ಮಸಾಲ ಬೊಂಡ, ಬಾಳೆಕಾಯಿ ಭಜ್ಜಿ, ಮತ್ತು ದೊಣ್ಣೆ ಮೆಣಶಿನಕಾಯಿಯ ಭಜ್ಜಿಗಳಾಗಿವೆ. 40 ರಿಂದ 50 ರೂಪಾಯಿಗಳಷ್ಟು ನೀವು ಖರ್ಚು ಮಾಡಲು ಸಿದ್ಧವಾಗಿದ್ದರೆ ಭಿನ್ನ ವಿಭಿನ್ನವಾದ ಕುರುಕು ತಿಂಡಿಗಳನ್ನು ಸವಿಯಬಹುದಾಗಿದೆ. ಆದರೆ ಸಂಜೆಯ ವೇಳೆಯಲ್ಲಿ ಬಹಳ ಬೇಗ ನೀವು ಇಲ್ಲಿ ತಲುಪಬೇಕಾಗಿದೆ. ಸಂಜೆ 8:30 ಕ್ಕೆ ಈ ಅಂಗಡಿ ಮುಚ್ಚಲಾಗುತ್ತದೆ.

ಅಮರನಾಥ್ ಭಜ್ಜಿ,೫, ಆರ್ ವಿ ರಸ್ತೆ, ಬಸವಗುಡಿ

ಅಮರನಾಥ್ ಭಜ್ಜಿ: ಸಾಮಾನ್ಯವಾದ ಭಜ್ಜಿ ಬೋಂಡಾಗಳಿಗಿಂತ ಕೊಂಚ ಭಿನ್ನವಾದ ತಿನಿಸುಗಳು ಸಿಗಲಿದ್ದು ಅದರ ಸಾಲಿಗೆ ಬೋಂಡಾ ಜೊತೆಗೆ ಗುಲಾಬ್ ಜಾಮೂನ್ ಹಾಗು ಐಸ್ ಕ್ರೀಮ್ ಕಾಂಬಿನೇಶನ್ ಸೇರುತ್ತದೆ. ಕ್ಯಾಪ್ಸಿಕಂ ಭಜ್ಜಿ ಇಲ್ಲಿ ರುಚಿಮಯವಾಗಿರುತ್ತದೆ. ಆದರೆ ಐಸ್ ಕ್ರೀಮ್ ಬೊಂಡ ಮಾತ್ರ ಇಲ್ಲಿ ಮಿಸ್ ಮಾಡಲೆಬಾರದಾಗಿದೆ. ಒಂದು ಪ್ಲೇಟ್ ಗೆ ನಿಮಗೆ ಇಪ್ಪತ್ತು ರೂಪಾಯಿ ಬೀಳುತ್ತದೆ.

LEAVE A REPLY

Please enter your comment!
Please enter your name here