ಟ್ವಿಟ್ಟರ್ ನಲ್ಲಿ ಶುರುವಾಯಿತು ಭಾಷೆಯ ಮಾನ್ಯತೆಗಾಗಿ ಅಭಿಯಾನ

0
609

ಕರಾವಳಿ ಕರ್ನಾಟಕ ಜನರ ಮುಖ್ಯ ಭಾಷೆ ತುಳುವಾಗಿದ್ದು, ಅಲ್ಲಿಯ ಜನರು ಹೆಚ್ಚಾಗಿ ತುಳು ಭಾಷೆಯನ್ನು ಉಪಯೋಗಿಸುತ್ತಾರೆ. ಆದ್ದರಿಂದ ಕರಾವಳಿ ಭಾಷೆಗೆ ಅಧಿಕೃತವಾಗಿ ಮಾನ್ಯತೆ ನೀಡಬಕೆಂದು ಟ್ವಿಟ್ಟರ್ ನಲ್ಲಿ ಒಂದು ಅಭಿಯಾನ ಶುರು ಮಾಡಿದ್ದಾರೆ. ತುಳು ಭಾಷೆಗೆ 8 ನೇ ಸ್ಥಾನ ಮಾನ ನೀಡಬೇಕೆಂದು ಒತ್ತಾಯಿಸಲಾಗಿದೆ. ಇನ್ನು ಈ ಅಭಿಯಾನಕ್ಕೆ ಸ್ಯಾಂಡಲ್ ವುಡ್ ನ ಕಲಾವಿದರು, ರಾಜಕೀಯದ ಗಣ್ಯರು ಬೆಂಬಲವನ್ನು ನೀಡುತ್ತಿದ್ದಾರೆ. ನಿರ್ದೇಶಕ ಅನೂಪ್ ಭಂಡಾರಿ, ನವರಸ ನಾಯಕ ಜಗ್ಗೇಶ್, ನಿರೂಪ್ ಭಂಡಾರಿ, ರಕ್ಷಿತ್ ಶೆಟ್ಟಿ, ವಿಲಾಸ್ ನಾಯಕ್. ರಾಜಕೀಯದ ವ್ಯಕ್ತಿಗಳಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಪ್ರಮೋದ್ ಮಧ್ವರಾಜ್ ಸೇರಿದಂತೆ ಇನ್ನು ಅನೇಕರು ಟ್ವಿಟ್ಟರ್ ನಲ್ಲಿ ಅಭಿಯಾನವನ್ನು ಶುರು ಮಾಡಿದ್ದಾರೆ.

ನವರಸ ನಾಯಕನ ಅಭಿಪ್ರಾಯ

ಸಹೋದರರೆ ಉಸಾರ್ ಉಲ್ಲೇರ !ಬೊಕ್ಕ ತುಳು ಭಾಷೆಯ ವಿಷಯ ಯಾನ್ ಲಾ ನಿಮ್ಮೊಟ್ಟಿಗೆ ಬರ್ಪೇ!
ಹೌದು ತುಳು ಭಾಷೆ ಭಾರತದ ಸನಾತನ ಭಾಷೆ! ಸನಾತನ ಕನ್ನಡದ ಸಹೋದರ ಭಾಷೆ ಉಳಿಯಲು ತುಳು ಭಾಷೆಯ ಎಲ್ಲಾಪಕ್ಷದ ನಾಯಕರು ಚಿಂತಕರು ಸಾಹಿತಿಗಳು ಮಾಧ್ಯಮದಲ್ಲಿರುವವರು ನಟನಟಿ ಪ್ರಾಮಾಣಿಕವಾಗಿ ಯತ್ನಿಸಬೇಕು!
ಭಾಷೆ ಉಳಿದರೆ ಸನಾತನ ಭಾವನೆ ಉಳಿಯುತ್ತದೆ ಎಂದು ನವರಸ ನಾಯಕ ಜಗ್ಗೇಶ್ ಅವರು ತಮ್ಮ ಅನಿಸಿಕೆಯನ್ನ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ರಾಜಕಾರಣಿಗಳ ಅನಿಸಿಕೆ

ತುಳು ಭಾಷೆನ್ ಸಂವಿಧಾನೊದ 8ನೇ ಪರಿಚ್ಛೇದೊಗು ಸೇರ್ಪಾವೊಡು ಪನ್ಪಿನವು ನಮ್ಮ ಅರಿಕೆ. ಇತ್ತೆ ರಾಜ್ಯ ಬೊಕ್ಕ ಕೇಂದ್ರೊಡು ಬಿಜೆಪಿ ಸರ್ಕಾರ ಉಪ್ಪುನೇರ್ದಾವರ ತುಳು ಭಾಷೆನ್ ಸಂವಿಧಾನೊದ 8ನೇ ಪರಿಚ್ಛೇದೊಗು ಸೇರ್ಪಾವಿನ ಬೇಲೆ ಅಪುಂಡು ಪನ್ಪಿ ನಂಬಿಕೆ ಎಂಕುಂಡ ಎಂದು ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮಾಡಿದರೆ, ಪೊರ್ಲುದ ಭಾಷೆ ತುಳುಗ್ ಅಧಿಕೃತ ಸ್ಥಾನಮಾನ ತಿಕ್ಕೊಡು, ನಮ್ಮ ಅಪ್ಪೆ ಭಾಷೆನ್ ಸಂವಿಧಾನತ 8ನೇ ಪರಿಚ್ಛೇದಗ್ ಸೇರ್ಪಾವುನ ಮಾತ ಪ್ರಯತ್ನಗ್ ಎನ್ನ ಬೆರಿಸಾಯ ಏಪಲಾ ಉಪ್ಪುಂಡು. ತುಳು ಭಾಷೆಗಾದ್ ನಡಪ್ಪುನ ಮಾತ ಹೋರಾಟಕುಲ ಎನ್ನ ಸಾಕಾರ ಏಪಲ ಕೊರ್ಪೆ. ನಮ್ಮ ಭಾಷೆ, ನಮಕ್ ಪೆರ್ಮೆ! ಎಂದು ಶೋಭ ಕರಂದ್ಲಾಜೆ ಅವರು ಟ್ವೀಟ್ ಮಾಡಿದ್ದಾರೆ.

ಅಣ್ಣಾಮಲೈ ಅವರ ಟ್ವೀಟ್

ತುಳು ದ್ರಾವಿಡ ಭಾಷೆಗಳಲ್ಲಿ ಒಂದು ಎಂಬುದನ್ನು ಇತಿಹಾಸ ಮತ್ತು ಸಂಪ್ರದಾಯ ಹೇಳುತ್ತದೆ. ಆ ಪ್ರದೇಶದಲ್ಲಿ ಸೇವೆಯನ್ನು ಸಲ್ಲಿಸಿದ್ದರಿಂದ ಭಾಷೆಯ ಶ್ರೀಮಂತಿಕೆ ಮತ್ತು ಅದ್ಧೂರಿತನವನ್ನು ಗಮನಿಸಿದ್ದೇನೆ. ಸಿರಿ, ಕೋಟಿ ಮತ್ತು ಚನ್ನಯ್ಯ ಕಥೆಯಿಂದ ತುಳು ಭಾಷೆಯ ಶ್ರೀಮಂತಿಕೆ ಅರ್ಥವಾಗುತ್ತದೆ. ಹಾಗಾಗಿ ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಲು ಅರ್ಹತೆಯನ್ನು ಹೊಂದಿದೆ ಎಂದು ಅಣ್ಣಾಮಲೈ ಅವರು ತಿಳಿಸಿದ್ದಾರೆ.

ಸಾಥ್ ನೀಡಿದ ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಅವರು ನಮ್ಮ ಭಾಷೆ, ಸಂಪ್ರದಾಯ, ಸಂಸ್ಕೃತಿಗಾಗಿ ನಡೆಯುತ್ತಿರುವ ಅಭಿಯಾನದಲ್ಲಿ ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ. ಕೇವಲ ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ಆರಂಭಿಸಿದ್ರೆ ಭಾಷೆಗೆ ಮಾನ್ಯತೆ ಸಿಗಲಾರದು.

ಇದಕ್ಕಾಗಿ ತುಳು ಸಮುದಾಯದ ಎಲ್ಲರು ಜೊತೆಗೂಡಿ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗಬೇಕಿದೆ ಎಂದು ರಕ್ಷಿತ್ ಶೆಟ್ಟಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here