ಶ್ರೇಷ್ಠ ಬೌಲರ್ ಬೈಯೋಪಿಕ್ ಚಿತ್ರದಲ್ಲಿ ಸಚಿನ್ ಇಲ್ಲಿದೆ ಸ್ಟೋರಿ

0
511

ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ತೆಂಡುಲ್ಕರ್ ಅವರ ಹೆಸರು ಅಜರಾಮರ ಅಂತಾನೆ ಹೇಳಬಹುದಾಗಿದೆ. ಮಾಸ್ಟರ್ ಬ್ಲಾಸ್ಟರ್ ಎಂದೆ ಜನರು ಇವರನ್ನು ಕರೆಯುತ್ತಿದ್ದರು. ಕ್ರಿಕೆಟ್ ಕ್ಷೇತ್ರಕ್ಕೆ ಸಚಿನ್ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಹೌದು ರನ್ ಮಷೀನ್, ದಾಖಲೆಗಳ ಸರದಾರ ಎಂದೆ ಜನಪ್ರಿಯರಾದ ಏಕೈಕ ಆಟಗಾರ ಸಚಿನ್ ತೆಂಡುಲ್ಕರ್. ಟೆಸ್ಟ್ ಮ್ಯಾಚ್, ಏಕದಿನ ಪಂದ್ಯ, ಟ್ವೆಂಟಿ ಟ್ವೆಂಟಿ ಎಲ್ಲ ಕ್ರಿಕೆಟ್ ಫಾರ್ಮಟ್ಸ್ ಗಳನ್ನು ಇವರು ಆಡಿದ್ದಾರೆ. ಹಲವಾರು ದಾಖಲೆಗಳನ್ನು ಮುರಿದು ಸರ್ವಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಎಂದು ಗುರುತಿಸಿಕೊಂಡಿದ್ದರು. ಸರ್ ಡಾನ್ ಬ್ರಾಡ್ಮನ್ ನಂತರ ವಿಶ್ವದ ಅತಿ ಶ್ರೇಷ್ಠ ಆಟಗಾರರೆಂದು ಹೆಸರಿಸಿತ್ತು. ಸಣ್ಣ ವಯಸ್ಸಿನಲ್ಲೇ ಕ್ರಿಕೆಟ್ ವೃತ್ತಿಯನ್ನು ಆರಿಸಿಕೊಂಡು ಸಾಧನೆ ಮಾಡಿ, ಎಲ್ಲ ಕ್ರಿಕೆಟ್ ಫಾರ್ಮಟ್ಸ್ ಗು ವಿದಾಯ ಹೇಳಿದ್ದಾರೆ.

ಇವರ ಬೈಯೋಪಿಕ್ ನಲ್ಲಿ ಒಂದು ಸಿನಿಮಾ ತಯಾರಾಗಲಿದೆ

ಶ್ರೀಲಂಕಾ ತಂಡದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳಿಧರನ್ ಅವರ ಹೆಸರು ಯಾರು ತಾನೆ ಕೆಳದಿರುವುದಕ್ಕೆ ಸಾಧ್ಯ. ಈ ಆಟಗಾರನ ಸ್ಪಿನ್ ದಾಳಿಗೆ ಸಾಲು ಸಾಲಾಗಿ ವಿಕೆಟ್ಸ್ ಗಳು ಉರುಳುತ್ತಿದ್ದವು. ಖ್ಯಾತ ಸ್ಪಿನ್ ಬೌಲರ್ಸ್ ಗಳಲ್ಲಿ ಇವರ ಹೆಸರು ಸಹ ಸೇರ್ಪಡೆಯಾಗುತ್ತದೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ಸ್ ಗಳನ್ನು ಪಡೆದಿರುವ ಬೌಲರ್ ಮುತ್ತಯ್ಯ ಮುರಳಿಧರನ್ icc ಹಾಲ್ ಆಫ್ ಫೇಮ್ ನಲ್ಲಿ ಭಾಗವಹಿಸಿದ ಏಕೈಕ ಶ್ರೀಲಂಕಾದ ಆಟಗಾರ. icc ಟೆಸ್ಟ್ ಮ್ಯಾಚ್ ಬೌಲಿಂಗ್ ವಿಭಾಗದಲ್ಲಿ ಇವರು ಸುಮಾರು 17,11 ದಿನಗಳ ಕಾಲ ಅಗ್ರ ಸ್ಥಾನದಲ್ಲೆ ಇದ್ದರು. ಇವರು ಬೌಲಿಂಗ್ ಮಾಡುವ ಶೈಲೆಯೆ ವಿಭಿನ್ನವಾಗಿರುತ್ತದೆ. ಈಗ ಇವರ ಬೈಯೋಪಿಕ್ ನಲ್ಲಿ ಒಂದು ಸಿನಿಮಾ ತಯಾರಾಗಲಿದೆ.

ಮೊದಲನೆ ಬಾರಿಗೆ ಸಚಿನ್ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

ಹೌದು ಈ ಚಿತ್ರ ತಮಿಳು ಭಾಷೆಯಲ್ಲಿ ಮೂಡಿ ಬರಲಿದೆ. ಇನ್ನೊಂದು ಈ ಚಿತ್ರದ ವಿಶೇಷತೆ ಏನೆಂದರೆ ಸಚಿನ್ ತೆಂಡುಲ್ಕರ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಹೆಸರು 800. ಮೊದಲನೆ ಬಾರಿಗೆ ಸಚಿನ್ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುರಳೀಧರನ್ ಜೀವನಾಧಾರಿತವಾದ ಚಿತ್ರದಲ್ಲಿ ಸಚಿನ್ ನಟಿಸುತ್ತಿರುವುದು ಡಿ ಏ ಆರ್ ಮೋಷನ್ ಸಿನಿಮಾ ನಿರ್ಮಾಣ ಸಂಸ್ಥೆ ಖಚಿತ ಪಡಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಚಿತ್ರ ನಿಮ್ಮ ಮುಂದೆ ಬರಲಿದೆ. ಕ್ರಿಕೆಟ್ ರಂಗದಲ್ಲಿ ಸಚಿನ್ ಮತ್ತು ಮುರಳಿ ಇಬ್ಬರು ಸರಿಸಮಾನರಾದ ಆಟಗಾರರೆಂದು ಗುರುತಿಸಿಕೊಂಡಿದ್ದಾರೆ. ಇಬ್ಬರ ಕ್ರಿಕೆಟ್ ವೃತ್ತಿ ಜೀವನವು ಒಂದೆ ಸಮಾನವಾಗಿ ಸಾಗುತ್ತಿತ್ತು. ಆದ್ದರಿಂದ ಸಚಿನ್ ಸಹ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂದು ಚಿತ್ರದ ನಿರ್ದೇಶಕ ಸೇತು ಮಾಧವನ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಕ್ರಿಕೆಟ್ ಕ್ಷೇತ್ರದ ದಿಗ್ಗಜರು

ಬ್ಯಾಟಿಂಗ್ ನಲ್ಲಿ ಸಚಿನ್ ಮುಂದೆ ಇದ್ದರೆ, ಬೌಲಿಂಗ್ ನಲ್ಲಿ ಮುರಳಿ ಮುಂದೆ ಇರುತ್ತಿದ್ದರು. ಹೆಚ್ಚು ರನ್ಸ್ ಗಳಿಸುವ ಮೂಲಕ ಸಚಿನ್ ರೆಕಾರ್ಡ್ ಮಾಡಿದ್ದರೆ, ಹೆಚ್ಚು ವಿಕೆಟ್ಸ್ ತೆಗೆಯುವದರಿಂದ ಮುರಳಿ ದಾಖಲೆ ಬರದಿದ್ದರು. ಕ್ರಿಕೆಟ್ ಕ್ಷೇತ್ರದ ದಿಗ್ಗಜರೆಂದೆ ಇವರು ಹೆಸರುವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here