ಅಟ್ಲಾಂಟಿಕ್ ಸಾಗರವನ್ನು ವಿಮಾನದ ಮೂಲಕ ದಾಟಿದ ಪ್ರಥಮ ಭಾರತೀಯ ಮಹಿಳಾ ಪೈಲೆಟ್

0
504
aarohi pandit

ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಸಹ ಏನಾದರು ಸಾಧನೆ ಮಾಡಬೇಕೆಂದು ಮುನ್ನುಗ್ಗುತ್ತಿದ್ದಾರೆ. ಇದರಲ್ಲಿ ಭಾರತೀಯ ಮಹಿಳೆಯರ ಹೆಸರು ಕೂಡ ಸೇರ್ಪಡೆ ಆಗುತ್ತದೆ. ಮೊದಲು ಪುರುಷರು ಮಾತ್ರ ಕಾರ್ ಡ್ರೈವಿಂಗ್ ಅಥವಾ ಬೈಕ್ ರೈಡಿಂಗ್ ಮಾಡುತ್ತಿದ್ದರು. ಆದರೆ ಈಗ ಮಹಿಳೆಯರು ಸಹ ಡ್ರೈವಿಂಗ್ ವಿದ್ಯೆಯನ್ನು ಕಲಿತು ಸ್ವತಃ ತಾವೆ ಬೈಕ್ ಅಥವಾ ಕಾರ್ ಅನ್ನು ಸಲೀಸಾಗಿ ಚಲಿಸುತ್ತಿದ್ದಾರೆ. ಇನ್ನು ಮೆಟ್ರೊ ರೈಲುಗಳ ವಿಷಯಕ್ಕೆ ಬಂದರೆ ನೀವು ಅಂದುಕೊಳ್ಳಬಹುದು ಗಂಡಸರು ಮಾತ್ರ ಮೆಟ್ರೊ ರೈಲುಗಳನ್ನು ಚಾಲನೆ ಮಾಡುತ್ತಾರೆಂದು, ಇಲ್ಲ ಹೆಣ್ಣು ಮಕ್ಕಳು ಸಹ ಮೆಟ್ರೊ ರೈಲುಗಳನ್ನು ಚಲಿಸುವ ಒಂದು ಯತ್ನಕ್ಕೆ ಕೈ ಹಾಕಿದ್ದರು. ಈಗಲು ಅನೇಕ ಹೆಣ್ಣು ಮಕ್ಕಳು ಮೆಟ್ರೊ ರೈಲುಗಳನ್ನು ಓಡಿಸುತ್ತಿದ್ದಾರೆ.

120 ಘಂಟೆಗಳ ಕಾಲ ವಿಮಾನವನ್ನು ಚಲಿಸುತ್ತಿದ್ದರು

ಆರೋಹಿ ಪಂಡಿತ್ ಅವರು ಬಹಳ ಹಗುರವಿರುವ ವಿಮಾನದಲ್ಲಿ 18 ದೇಶಗಳನ್ನು ಸುತ್ತಿದ್ದಾರೆ. ಇವರಿಗೆ ಕೇವಲ 23 ವರ್ಷ, ಸಣ್ಣ ವಾಯಸಿನಲ್ಲೆ ಇಂತಹದೊಂದು ಸಾಧನೆಯನ್ನು ಮಾಡಿದ್ದಾರೆ. ಅಲ್ಟ್ರಾ ಲೈಟ್’ ಸೈನಸ್ -912 ಎಂಬ ಹಗುರ ವಿಮಾನದ ಮೂಲಕ ಅಟ್ಲಾಂಟಿಕ್ ಸಾಗರವನ್ನು ದಾಟಿದ ಮೊದಲನೆ ಭಾರತೀಯ ಮಹಿಳೆ ಇವರಾಗಿದ್ದಾರೆ. ಬರಿ ಹತ್ತು ದಿನಗಳಲ್ಲಿ 18 ರಾಷ್ಟ್ರಗಳನ್ನು ತಲುಪಿ, 37000 ಕಿಮೀ ಅಷ್ಟು ಅಂತರವನ್ನು ಕವರ್ ಮಾಡಿದ್ದಾರೆ. ತಮ್ಮ ಗುರಿಯನ್ನು ಸಕಾರಗೊಳಿಸಲು ಇವರು 120 ಘಂಟೆಗಳ ಕಾಲ ವಿಮಾನವನ್ನು ಚಲಿಸುತ್ತಿದ್ದರಂತೆ.

aarohi pandit

ಅಟ್ಲಾಂಟಿಕ್ ಸಾಗರವನು ದಾಟಿದ ಹಾಗು 18 ರಾಷ್ಟಗಳನ್ನು ತಲುಪಿದ ಪ್ರಪ್ರಥಮ ಮಹಿಳೆ

ಆಪ್ತಗೆಳತಿ ಮತ್ತು ಪೈಲಟ್ ಕೀಥ್ ಹೇರ್ ಮಿಸ್ ಕ್ವಿಟಾ ಅವರು ಆರೋಹಿಗೆ ಈ ವಿಷಯದಲ್ಲಿ ಸಹಾಯ ಮಾಡಿದ್ದಾರೆ. ಎಲ್ಲಾ ಕಡೆ ಸುತ್ತಾಡಿದ ನಂತರ ಆರೋಹಿ ಅವರು ಕೊನೆದಾಗಿ ಇಕಾಲ್ಯೂಟ್ ಏರ್ ಪೋರ್ಟ್ ಅಲ್ಲಿ ಸೋಮವಾರ ಸಂಜೆ 6:29 ಕ್ಕೆ ತಮ್ಮ ವಿಮಾನವನ್ನು ಭೂ ಸ್ಪರ್ಶ ಮಾಡಿ, ತಮ್ಮ ಸಾಹಸಮಯವಾದ ವಾಯುಸಂಚಾರಕ್ಕೆ ಅಂತ್ಯ ಹಾಡಿದ್ದಾರೆ. ಮೈಕ್ರೋ ಲೈಟ್ ಎಂಬ ವಿಮಾನದಲ್ಲಿ ಅಟ್ಲಾಂಟಿಕ್ ಸಾಗರವನು ದಾಟಿ, ಹಾಗು 18 ರಾಷ್ಟಗಳನ್ನು ತಲುಪಿದ ಪ್ರಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

aarohi pandit

ಸೈನಸ್ -912 ವಿಮಾನ 2016 ರಲ್ಲಿ ನಿರ್ಮಾಣವಾಗಿತ್ತು

ಇವರು ಹುಟ್ಟಿದ ಊರು ಬರೋಡಾ, ಬೆಳೆದಿದ್ದು ಮುಂಬೈ ನಲ್ಲಿ. ಮುಂಬೈ ಫ್ಲಯಿಂಗ್ ಕ್ಲಬ್ ಅಲ್ಲಿ ತರಬೇತಿಯನ್ನು ಪಡೆದುಕೊಂಡು ಈಗ ಇಂತಹದೊಂದು ವಿಭಿನ್ನವಾದ ಪ್ರಯತ್ನವನ್ನು ಮಾಡಿ ಯಶಸ್ವಿ ಆಗಿದ್ದಾರೆ. ಅಂತರಾಷ್ಟ್ರೀಯ ಸಾಹಸಯಾನ ಏರ್ಪಡಿಸಿದ್ದ ತಂಡದಲ್ಲಿ ಇವರು ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ. ಹಗುರ ಕ್ರೀಡಾ ವಿಮಾನದಲ್ಲಿ ವಿಶ್ವ ಸರ್ವ ಮಹಿಳಾ ಪೈಲಟ್ ಗಳ ತಂಡದಲ್ಲಿ ಕೂಡ ಇವರು ಇದ್ದರು. ಸೈನಸ್ -912 ವಿಮಾನ 2016 ರಲ್ಲಿ ನಿರ್ಮಾಣವಾಗಿತ್ತು. ನಾಲಕ್ಕು ಮನುಷ್ಯರ ಸಾರಿಸಮಾನವಾದ ತೂಕ ಈ ವಿಮಾನ ಹೊಂದಿದೆ. ಒಂದೇ ಯಂತ್ರ ಮತ್ತು ಎರಡು ಸೀಟ್ ಮಾತ್ರ ಈ ವಿಮಾನದಲ್ಲಿದ್ದು, ಅದ್ಬುತವಾದ ಇಂಧನ ಕ್ಷಮತೆ ಹೊಂದಿದೆ.

LEAVE A REPLY

Please enter your comment!
Please enter your name here