ಕೊನೆಗೂ ಸಿಕ್ಕಿ ಬಿದ್ದ ಪೈಲ್ವಾನ್ ಪೈರಸಿ ಮಾಡಿದ ಪಾಪಿ

0
679

ಪೈಲ್ವಾನ್ ಸಿನಿಮಾ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಿತ್ತು. ಪೈಲ್ವಾನ್ ಸಿನಿಮಾ ಸೆಪ್ಟೆಂಬರ್ 19 ರಂದು ಪೈರಸಿ ಆಗಿದೆ ಎಂದು ಚಿತ್ರದ ನಿರ್ಮಾಪಕರಾದ ಸ್ವಪ್ನ ಕೃಷ್ಣ ಸೈಬರ್ ಕ್ರೈಂ ಪೊಲೀಸರಿಗೆ ದೂರನ್ನು ನೀಡಿದ್ದರು. ಈ ವಿಷಯದ ಅಂಗವಾಗಿ ತನಿಖೆಯನ್ನು ನಡೆಸಿದ ಪೊಲೀಸರು ರಾಕೇಶ್ ವಿರಾಟ್ ಎನ್ನುವ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ವಿಚಾರಣೆಯ ಸಮಯದಲ್ಲಿ ಆರೋಪಿ ತಾನು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿದ್ದಾನೆ. ನಂತರ ಪೈಲ್ವಾನ್ ಚಿತ್ರವನ್ನು ಪೈರಸಿ ಮಾಡಿದ್ದೇನೆ ಎನ್ನುವ ತಪ್ಪನ್ನು ಒಪ್ಪಿಕೊಂಡಿದ್ದಾನೆ. ವಿಚಾರಣೆಯ ವೇಳೆಯಲ್ಲಿ ರಾಕೇಶ್ ಬಿಚ್ಚಿಟ್ಟ ಮಾಹಿತಿ ಹೀಗಿವೆ. ಮುಂದೆ ಓದಿ

ತಾನು ಮಾಡಿದ ತಪ್ಪಿಗೆ ಶರಣಾಗಿದ್ದಾನೆ

ನಾನು ದರ್ಶನ್ ಅಭಿಮಾನಿ. ನಮಗೆ ಡಿ ಬಾಸ್ ಸಿನಿಮಾಗಳೆ ಗ್ರೇಟ್. ದರ್ಶನ್ ಮೇಲಿರುವ ಅಭಿಮಾನಕ್ಕಾಗಿ ಪೈಲ್ವಾನ್ ಸಿನಿಮಾವನ್ನು ಲೀಕ್ ಮಾಡಿದ್ದೇನೆ. ನಾನು ದುಡ್ಡಿಗಾಗಿ ಈ ಕೆಲಸವನ್ನು ಮಾಡಿಲ್ಲ ಎಂದು ರಾಕೇಶ್ ಹೇಳಿಕೆ ನೀಡುವ ಮೂಲಕ ತಾನು ಮಾಡಿದ ತಪ್ಪಿಗೆ ಶರಣಾಗಿದ್ದಾನೆ. ವಿಚಾರಣೆಯ ಸಮಯದಲ್ಲಿ ರಾಕೇಶ್ ಸತ್ಯ ಸಂಗತಿಗಳನ್ನು ಒಪ್ಪಿಕೊಂಡಿದ್ದಾನೆ. ಇನ್ನು ರಾಕೇಶ್ ಫೇಸ್ಬುಕ್ ಖಾತೆಯಲ್ಲಿ ದರ್ಶನ್ ಅವರ ಫೋಟೋಗಳನ್ನ ಹಾಕಿಕೊಂಡಿದ್ದು, ತಾನು ದರ್ಶನ್ ಅಭಿಮಾನಿ ಎಂದು ನಿರೂಪಿಸಿದ್ದಾನೆ. ಇದು ಕೇವಲ ಸಾಮಾಜಿಕ ಜಾಲ ತಾಣಕ್ಕೆ ಮಾತ್ರ ಸೀಮಿತವಾಗಿಲ್ಲ ತನ್ನ ಹೆಸರಿಗೆ ದರ್ಶನ್ ಅಭಿನಯಿಸಿದ್ದ ವಿರಾಟ್ ಚಿತ್ರದ ಹೆಸರನ್ನು ಸಹ ಅಂಟಿಸಿಕೊಂಡಿದ್ದಾನೆ.

ಉಳಿದ ಅಭಿಮಾನಿಗಳಿಗೂ ಕೆಟ್ಟ ಹೆಸರು ಬಂದಂತೆ ಆಗುತ್ತದೆ

ರಾಕೇಶ್ ಬೆಂಗಳೂರಿನ ನೆಲಮಂಗಲ ನಿವಾಸಿಯಾಗಿದ್ದು, ಪೈಲ್ವಾನ್ ಚಿತ್ರವನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಹರಿದು ಬಿಟ್ಟಿದ್ದ. ಲೀಕ್ ಮಾಡಿದ ವಿಡಿಯೋ ಲಿಂಕ್ ಅನ್ನು ತಮ್ಮ ಸ್ನೇಹಿತರಿಗೆ ಕಳುಹಿಸಿದ್ದ. ಇದರ ಜೊತೆಗೆ ಸಿನಿಮಾವನ್ನು ನೋಡಲು ನನಗೆ ಇನ್ಬಾಕ್ಸ್ ಮೆಸೇಜ್ ಮಾಡಿ ಎಂದು ಬರೆದುಕೊಂಡಿದ್ದನು. ಡಿಸಿಪಿ ರವಿ ಕುಮಾರ್ ಅವರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ರಾಕೇಶ್ ಅವರನ್ನು ಬಂಧಿಸಲಾಗಿದೆ. ರಾಕೇಶ್ ಅವರು ಯಾರ ಅಭಿಮಾನಿ ಎನ್ನುವುದಕ್ಕಿಂತ ಅವನು ಮಾಡಿದ ತಪ್ಪಿನ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಯಾರೊ ಒಬ್ಬರು ಮಾಡಿದ ತಪ್ಪಿನಿಂದಾಗಿ ಆ ನಟನ ಉಳಿದ ಅಭಿಮಾನಿಗಳಿಗೂ ಕೆಟ್ಟ ಹೆಸರು ಬಂದಂತೆ ಆಗುತ್ತದೆ.

ಪೈರಸಿ ಆಗುವುದರಿಂದ ಸಿನಿಮಾಗಳಿಗೆ ಬಹಳ ದೊಡ್ಡ ಹೊಡೆತ ಬೀಳುತ್ತಿದೆ

ಸ್ಟಾರ್ ನಟರ ನಡುವೆ ಈ ರೀತಿಯಾದ ಬಿರುಕು ಉಂಟಾಗಬಾರದಿತ್ತು. ಚಿತ್ರರಂಗವನ್ನು ನಾವು ಒಂದೆ ದೃಷ್ಟಿಕೋನದಲ್ಲಿ ನೋಡಬೇಕಾಗಿದೆ. ಕನ್ನಡ ಚಿತ್ರರಂಗ ಉನ್ನತ ಸ್ಥಾನಕ್ಕೆ ಏರಬೇಕಾಗಿದೆ. ಮೊದಲು ಚಿತ್ರರಂಗದ ವಾಣಿಜ್ಯ ಮಂಡಳಿಯವರು ಯಾವುದೆ ಕನ್ನಡ ಚಿತ್ರಗಳಿಗೆ ಪೈರಸಿ ಆಗಲಾರದಂತೆ ಎಚ್ಚರಿಕೆಯ ಕ್ರಮವನ್ನು ವಹಿಸಬೇಕಾಗಿದೆ.

ಒಂದು ಚಿತ್ರವನ್ನು ಮಾಡಬೇಕಾದರೆ ಇಡೀ ಚಿತ್ರತಂಡದವರು ಸಾಕಷ್ಟು ಶ್ರಮ ಪಟ್ಟಿರುತ್ತಾರೆ. ಪೈರಸಿ ಆಗುವುದರಿಂದ ಸಿನಿಮಾಗಳಿಗೆ ಬಹಳ ದೊಡ್ಡ ಹೊಡೆತ ಬೀಳುತ್ತಿದೆ. ಚಿತ್ರಮಂದಿರಗಳಲ್ಲಿ ಕದ್ದು ಶೂಟ್ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕದ್ದು ಶೂಟ್ ಮಾಡಿ ಆ ವಿಡಿಯೋ ಗಳನ್ನೂ ಹಾಕುವ ವೆಬ್ ಸೈಟ್ ಗಳನ್ನೂ ಸಹ ರದ್ದು ಪಡಿಸಬೇಕಾಗಿದೆ.

LEAVE A REPLY

Please enter your comment!
Please enter your name here