ಚಿತ್ರ ತಂಡದ ಮೇಲೆ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದ ಶಂಕರ್ ಅಶ್ವಥ್ ಇಲ್ಲಿದೆ ಮಾಹಿತಿ

0
287

ಕನ್ನಡ ಚಿತ್ರರಂಗದಲ್ಲಿ ಸಿ ಅಶ್ವಥ್ ಅವರು ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದರು. ನಾಗರಹಾವು ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರಾಗಿ ಇವರು ನಟಿಸಿದ್ದು, ಇಂದಿಗೂ ಸಹ ಆ ಪಾತ್ರವು ಜನರ ಮನಸ್ಸಿನಲ್ಲಿ ಆಳವಾಗಿ ಉಳಿದಿದೆ ಎಂದರೆ ತಪ್ಪಾಗಲಾರದು. ಇನ್ನು ಇವರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಚಿತ್ರರಂಗದ ಮೇರು ಕಲಾವಿದರ ಸಾಲಿನಲ್ಲಿ ಸಿ. ಅಶ್ವಥ್ ಅವರ ಹೆಸರು ಸಹ ಸೇರ್ಪಡೆಯಾಗುತ್ತದೆ. ಸಿ ಅಶ್ವಥ್ ಅವರ ಮಗನಾದ ಶಂಕರ್ ಅಶ್ವಥ್ ಬಹಳ ಏಳು ಬೀಳುಗಳ ನಂತರ ಮತ್ತೊಮ್ಮೆ ಸಿನಿಜಗತ್ತಿಗೆ ಲಗ್ಗೆ ಇಟ್ಟಿದ್ದಾರೆ.

ನನ್ನ ಗೌರವವನ್ನು ನಾನು ಪಡೆಯಲೇಬೇಕು

ಶಂಕರ್ ಅಶ್ವಥ್ ಅವರು ಒಂದು ಚಿತ್ರ ತಂಡದವರ ಮೇಲೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ನಾನು ದೇವರ ಹತ್ತಿರ ನನ್ನ ನೋವನ್ನು ಹೇಳಿಕೊಳ್ಳುತ್ತಿದ್ದೇನೆ ಹೊರತು ಬೇರೆ ಯಾರ ಮೇಲು ನಾನು ಆಪಾಧನೆಯನ್ನು ಹೊರೆಸುತ್ತಿಲ್ಲ. ನಾನೊಬ್ಬ ಚಾಲಕನೆಂದು ಅಥವಾ ನಾನೇನು ಆಪೇಕ್ಷಿಸುವುದಿಲ್ಲವೆಂದು ನನ್ನನ್ನು ನಿರ್ಲಕ್ಷದಿಂದ ನೋಡಿದರೆ ನಾನು ಹಿಂದುರುಗಿ ಕೇಳಲೇಬೇಕು, ನನ್ನ ಗೌರವವನ್ನು ನಾನು ಪಡೆಯಲೇಬೇಕು. ನಾನು ಊಬರ್ ಚಾಲಕನಾಗಿದ್ದಾಗ ಸಿನಿರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಅನ್ನು ಆರಂಭಿಸಿದ್ದೆ. ಯಾವುದೋ ಒಂದು ಸಣ್ಣ ಚಿತ್ರೀಕರಣಕ್ಕಾಗಿ ಚಿತ್ರ ತಂಡದವರು ನನ್ನನ್ನು ಕರೆಸಿಕೊಂಡಿದ್ದರು. ಮುಂದೆ ಓದಿ

ಊಟ ಬಿಡಿ ಕನಿಷ್ಠ ಪಕ್ಷ ನೀರನ್ನು ಕೊಡುವವರು ಯಾರು ಇಲ್ಲ

ಚಿತ್ರೀಕರಣಕ್ಕಾಗಿ ನಾನು ಬೆಂಗಳೂರಿನಿಂದ ಸುಮಾರು ನೂರು ಕಿಲೋಮೀಟರ್ ದಾಟಿ ಚಿತ್ರೀಕರಣದ ತಾಣಕ್ಕೆ ಹೋಗಿದ್ದೆ. ಆದರೆ ಇಲ್ಲಿ ಊಟದ ಸಮಯವಾದರು ಊಟವನ್ನು ಕೊಡುವವರು ಇಲ್ಲ. ಊಟ ಬಿಡಿ ಕನಿಷ್ಠ ಪಕ್ಷ ನೀರನ್ನು ಕೊಡುವವರು ಯಾರು ಇಲ್ಲ. ಚಿತ್ರ ತಂಡದವರ ಈ ವರ್ತನೆ ನಿಜಕ್ಕೂ ಬೇಸರ ತರುವಂತಹ ಸಂಗತಿಯಾಗಿದೆ. ಕಲಾವಿದರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಇದನ್ನು ಪ್ರಶ್ನಿಸಿದರೆ ನಾವು ಈಗಿನ ಕಾಲದ ಯುವಕರು ಎಂದು ಹೇಳುತ್ತಾರಂತೆ. ಶಂಕರ್ ಅಶ್ವಥ್ ಅವರ ಈ ಸ್ಥಿತಿಗೆ ಕಾರಣರಾದ ಚಿತ್ರ ತಂಡದವರ ಯಾರೆನ್ನುವುದು ಇನ್ನು ತಿಳಿದು ಬಂದಿಲ್ಲ.

ಚಿತ್ರರಂಗದ ಕಲಾವಿದರು ಇವರನ್ನು ಪ್ರೋತ್ಸಾಹಿಸಿದ್ದರು

ಕನ್ನಡ ಚಿತ್ರರಂಗದಲ್ಲಿ ಶಂಕರ್ ಅಶ್ವಥ್ ಕಾಣಿಸಿಕೊಳ್ಳದೆ ಬಹಳ ವರ್ಷಗಳೇ ಕಳೆದುಹೋಗಿತ್ತು. ಇವರು ಯಾವಾಗ ಸಾಮಾಜಿಕ ಜಾಲ ತಾಣಗಳಲ್ಲಿ ಓಲಾ ಕ್ಯಾಬ್ ಡ್ರೈವರ್ ವೃತ್ತಿಯನ್ನು ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದರೋ ಆಗ ಮಾದ್ಯಮದವರು ಮತ್ತು ಚಿತ್ರರಂಗದ ಕಲಾವಿದರು ಇವರನ್ನು ಪ್ರೋತ್ಸಾಹಿಸಿದ್ದರು. ಇದಾದ ಬಳಿಕ ನನಗೆ ಸಿನಿಮಾಗಳಲ್ಲಿ ಹೆಚ್ಚು ನಟಿಸುವ ಅವಕಾಶ ಸಿಕ್ಕಿದ್ದು ಎಂದು ಈ ಹಿಂದೆ ಶಂಕರ್ ಅಶ್ವಥ್ ಅವರು ಹೇಳಿದ್ದರು.

ಮಾದ್ಯಮದವರು ತೋರಿದ ಗೌರವವನ್ನು ನಾನು ಮರೆಯೋದಿಲ್ಲ

ನಾನು ಕ್ಯಾಬ್ ಓಡುಸುತ್ತಿರೋ ವಿಷಯ ಬೆಳಕಿಗೆ ಬಂದ ಮೇಲೆ ಮಾದ್ಯಮದವರು ತೋರಿದ ಗೌರವವನ್ನು ನಾನು ಮರೆಯೋದಿಲ್ಲ. ಸಿನಿಮಾ ಇಂಡಸ್ಟ್ರಿ ಅವರನ್ನು ಸಹ ನಾನು ದೂರುವುದಿಲ್ಲ. ನನ್ನ ಜೀವನಕ್ಕೆ ನಾನೆ ಹೊಣೆ. ಸಿನಿಮಾ ರಂಗಕ್ಕೆ ಬಂದು 30 ವರ್ಷ ಆಗುತ್ತ ಬಂತು. ಸ್ಯಾಂಡಲ್ ವುಡ್ ನಲ್ಲಿ ಲಾಂಗೆಸ್ಟ್ ಪಿರಿಯಡ್ ಇದ್ದಿದ್ದು ಅಂದ್ರೆ ಈಗ ಎಂದು ಹೇಳುವ ಮೂಲಕ ಸಂತಸವನ್ನು ಈ ಹಿಂದೆ ವ್ಯಕ್ತ ಪಡಿಸಿದ್ದರು.

LEAVE A REPLY

Please enter your comment!
Please enter your name here