ಕಷ್ಟದ ಸಂದರ್ಭದಲ್ಲು ಮಹಾದಾಯಿ ಹೋರಾಟವನ್ನು ಮುಂದುವರೆಸಿದ ರೈತರು

0
245

ಉತ್ತರ ಕರ್ನಾಟಕದಲ್ಲಿ ರೈತರು ಮಹದಾಯಿಯನ್ನು ನಂಬಿಕೊಂಡಿದ್ದಾರೆ, ಆದರೆ ರೈತರಿಗೆ ಸರಿಯಾದ ಸಮಯದಲ್ಲಿ ಮಹದಾಯಿ ನದಿಯಿಂದ ನೀರು ಸಿಗುತ್ತಿಲ್ಲ. ಸುಮಾರು ವರ್ಷಗಳಿಂದ ಮಹದಾಯಿಗಾಗಿ ಹೋರಾಟ ನಡೆಯುತ್ತಿದೆ. ಆದರೆ ಸರ್ಕಾರ ಯಾವುದೆ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಈಗ ಮತ್ತೊಮ್ಮೆ ಉತ್ತರ ಕರ್ನಾಟಕದ ರೈತರು ಮಹದಾಯಿಗಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ರಾಜ್ಯಪಾಲರಾದ ವಜುಭಾಯಿ ವಾಲಾ ಅವರನ್ನು ಭೇಟಿಯಾಗುವವರೆಗೂ ನಾವು ಪ್ರತಿಭಟನೆಯನ್ನ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ. ಇಲ್ಲಿಯವರೆಗೂ ರೈತರನ್ನು ಭೇಟಿ ಮಾಡುವ ಮನಸ್ಸು ರಾಜ್ಯಪಾಲರು ಮಾಡಿಲ್ಲ. ಮುಂದೆ ಓದಿ

ಮಲಗಲು ಸರಿಯಾದ ಜಾಗವಿಲ್ಲದೆ ಒದ್ದಾಡಿದರು

ಇನ್ನು ಈ ಹೋರಾಟದಲ್ಲಿ ಮಹಿಳೆಯರು ಸಹ ಪಾಲ್ಗೊಂಡಿದ್ದರು. ಉತ್ತರ ಕರ್ನಾಟಕದಿಂದ ರಾಜ್ಯಪಾಲರು ಬೆಂಗಳೂರಿಗೆ ಬಂದಿದ್ದಾರೆ.  ಅವರನ್ನ ಭೇಟಿ ಮಾಡಬೇಕೆಂದು ರೈತರ ಜೊತೆ ಕೆಲ ಮಹಿಳೆಯರು ಸಹ ಭಾಗಿಯಾಗಿದ್ದರು. ಧರಣಿಯಲ್ಲಿ ಮಹಿಳೆಯರು ಅನೇಕ ಕಷ್ಟವನ್ನು ಎದುರಿಸುವಂತಹ ಸಂದರ್ಭಗಳು ಎದುರಾಗಿತ್ತು. ಮಹಿಳೆಯರು ಶೌಚಾಲಯದ ಸಮಸ್ಯೆ ಎದುರಿಸುವಂತಾಗಿತ್ತು. ಕೆಲ ಮಹಿಳೆಯರು ತಮ್ಮ ಮಕ್ಕಳನ್ನು ಸಹ ಕರೆ ತಂದಿದ್ದು, ಮಲಗಲು ಸರಿಯಾದ ಜಾಗವಿಲ್ಲದೆ ಒದ್ದಾಡಿದರು. ಸರಿಯಾದ ನಿದ್ದೆ ಇಲ್ಲದೆ ತೊಂದರೆಯನ್ನು ಅನುಭವಿಸಿದ್ದಾರೆ. ಮುಂದೆ ಓದಿ

ನಮಗೆ ಕುಡಿಯುವುದಕ್ಕೆ ಸ್ವಲ್ಪ ನೀರು ಕೊಟ್ಟರೆ ಸಾಕು

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಎದುರು ಹೋರಾಟ ನಡೆಯುತ್ತಿದ್ದು, ಧಾರಾಕಾರವಾದ ಮಳೆಯಿಂದಾಗಿ ರೈತರು ನೆಂದಿದ್ದಾರೆ. ಆದರು ಸಹ ರೈತರು ತಮ್ಮ ಧರಣಿಯನ್ನು ಮುಂದುವರೆಸಿದ್ದಾರೆ. ಊರಿನಿಂದ ಬುತ್ತಿಯಲ್ಲಿ ಊಟವನ್ನು ರೈತರು ತಂದಿದ್ದರು. ನಮಗೆ ಕುಡಿಯುವುದಕ್ಕೆ ಸ್ವಲ್ಪ ನೀರು ಕೊಟ್ಟರೆ ಸಾಕು ಮತ್ತೇನು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದರಿಂದ ಈ ಮಾಹಿತಿ ಲಭ್ಯವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉತ್ತರಕ್ಕಾಗಿ ಕಾಯುತ್ತಿದ್ದೇವೆ

ಸರ್ಕಾರ ನೀಡಿದ ತಾತ್ಕಾಲಿಕ ಹಣ ಪರಿಹಾರ ರೈತರಿಗೆ ಇನ್ನು ತಲುಪಿಲ್ಲ. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡುವ ಯೋಜನೆ ಇಲ್ಲ. ಆದ್ದರಿಂದ ವಿಧಾನಸೌಧ ಮುತ್ತಿಗೆ ಹಾಕಿಕೊಳ್ಳಲು ಸಿದ್ಧರಾಗಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ನಿಮ್ಮ ಸುಳ್ಳು ಭರವಸೆಗೆ ಸ್ಪಷ್ಟನೆ ಸಿಗಬೇಕಾಗಿದೆ, ನೆರ ಪೀಡಿತ ಪ್ರದೇಶಗಳಿಗೆ ತಲುಪಬೇಕಾಗಿದ್ದ ಪರಿಹಾರದ ಹಣ ತಲುಪಿಲ್ಲ. ಕಾವೇರಿ ನೀರಿನ ಮಂಡಳಿಯ ಹಾಗೆ ಕೃಷ್ಣ ನದಿಗೂ ಮಂಡಳಿ ಸ್ಥಾಪನೆಯಾಗಿದ್ದರೆ ಪ್ರವಾಹ ಆಗುತ್ತಿರಲಿಲ್ಲ. ನೀರಿನ ಶೇಖರಣೆ ವಿಚಾರದಲ್ಲಿ ನಮ್ಮ ರಾಜ್ಯ ಬಹಳ ಹಿಂದಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರು ಈ ಹಿಂದೆ ತಿಳಿಸಿದ್ದರು.

LEAVE A REPLY

Please enter your comment!
Please enter your name here