ಬೆಂಗಳೂರಿನಲ್ಲಿ ರೈತರಿಂದ ಬೃಹತ್ ಪ್ರತಿಭಟನೆ ಇಲ್ಲಿದೆ ಮುಖ್ಯಾಂಶಗಳು

0
595

ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ರೈತರ ವಿಷಯದಲ್ಲಿ ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಬೇಜವಬ್ದಾರಿ ಮತ್ತು ರೈತರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ಜೆಡಿಎಸ್ ಮತ್ತು ರೈತ ಸಂಘಟನೆಗಳು, ಈ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಹೆಚ್ ಡಿ ದೇವೇಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಆನಂದ್ ರಾವ್ ಸರ್ಕಲ್ ಹತ್ತಿರವಿರುವ ಮೌರ್ಯ ಪ್ರತಿಮೆಯಿಂದ ಫ್ರೀಡಂ ಪಾರ್ಕ್ ವರೆಗೂ ಮೆರವಣಿಗೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೋಡಿಹಳ್ಳಿ ಚಂದ್ರಶೇಖರ್ ಅವರ ಉಸ್ತುವಾರಿಯಲ್ಲಿ 200 ಜನ ರೈತರು ಭಾಗಿಯಾಗಿದ್ದಾರೆ. ಮುಂದೆ ಓದಿ

ರಾಷ್ಟ್ರ ಧ್ವಜಕ್ಕೆ ಇರುವ ಮೌಲ್ಯತೆ ನಮ್ಮ ಶಾಲುಗಳಿಗಿವೆ

ಜೆ ಪಿ ಭವನದಿಂದ ಮೆರವಣಿಗೆ ಹೊರಟಿದ್ದು, ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ರೈತರ ಸಂಘದ ಶಾಲುಗಳನ್ನು ಉಪಯೋಗಿಸಬೇಡಿ ಯಡಿಯೂರಪ್ಪನವರೇ, ನಿಮ್ಮ ಭಾಷಣ ಮತ್ತು ಪ್ರಮಾಣ ವಚನ ಸಂದರ್ಭದಲ್ಲಿ ಶಾಲುಗಳನ್ನು ಬಳಸಬೇಡಿ. ರಾಷ್ಟ್ರ ಧ್ವಜಕ್ಕೆ ಇರುವ ಮೌಲ್ಯತೆ ನಮ್ಮ ಶಾಲುಗಳಿಗಿವೆ. ಮಾಧ್ಯಮ ನಿರ್ಬಂಧ ಹಿನ್ನಲೆಯಲ್ಲಿ ಮಾತನಾಡಿದ ರೈತರು, ಹಳ್ಳಿ ಹಳ್ಳಿಗಳಿಗೂ ರಾಜ್ಯದ ವರದಿ ರೈತರಿಗೆ ತಿಳಿಸಬೇಕಾಗಿದೆ. ರಾಜಕಾರಣಿಗಳ ಹೇಳಿಕೆಗಳನ್ನು ತಿಳಿಸುವುದು ಸರಿ ಅಲ್ಲ ಎನ್ನುವುದು ರೈತರ ಅಭಿಪ್ರಾಯವಾಗಿದೆ. ಕೃಷ್ಣ ಜಲಾಶಯ ಎತ್ತರವಾಗಬೇಕು. ಮಹದಾಯಿ ಯೋಜನೆ ಕಾರ್ಯರೂಪಕ್ಕೆ ಬರುತ್ತಿಲ್ಲ. ಮೇಕೆದಾಟು ಅಣೆಕಟ್ಟು ಯಾಕೆ ನಿರ್ಮಾಣವಾಗುತ್ತಿಲ್ಲ ಎಂದು ಕೊಡಿಹಳ್ಳಿ ಚಂದ್ರಶೇಖರ್ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

ವಿಧಾನಸೌಧ ಮುತ್ತಿಗೆ ಹಾಕಿಕೊಳ್ಳಲು ಸಿದ್ಧರಾಗಿದ್ದೇವೆ

ಸರ್ಕಾರ ನೀಡಿದ ತಾತ್ಕಾಲಿಕ ಹಣ ಪರಿಹಾರ ರೈತರಿಗೆ ಇನ್ನು ತಲುಪಿಲ್ಲ. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡುವ ಯೋಜನೆ ಇಲ್ಲ. ಆದ್ದರಿಂದ ವಿಧಾನಸೌಧ ಮುತ್ತಿಗೆ ಹಾಕಿಕೊಳ್ಳಲು ಸಿದ್ಧರಾಗಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ನಿಮ್ಮ ಸುಳ್ಳು ಭರವಸೆಗೆ ಸ್ಪಷ್ಟನೆ ಸಿಗಬೇಕಾಗಿದೆ, ನೆರ ಪೀಡಿತ ಪ್ರದೇಶಗಳಿಗೆ ತಲುಪಬೇಕಾಗಿದ್ದ ಪರಿಹಾರದ ಹಣ ತಲುಪಿಲ್ಲ. ಕಾವೇರಿ ನೀರಿನ ಮಂಡಳಿಯ ಹಾಗೆ ಕೃಷ್ಣ ನದಿಗೂ ಮಂಡಳಿ ಸ್ಥಾಪನೆಯಾಗಿದ್ದರೆ ಪ್ರವಾಹ ಆಗುತ್ತಿರಲಿಲ್ಲ. ನೀರಿನ ಶೇಖರಣೆ ವಿಚಾರದಲ್ಲಿ ನಮ್ಮ ರಾಜ್ಯ ಬಹಳ ಹಿಂದಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರು ತಿಳಿಸಿದ್ದಾರೆ.

ಸಿಟಿ ರೈಲು ನಿಲ್ದಾಣದಲ್ಲಿ 200 ಕ್ಕು ಹೆಚ್ಚು ಪೋಲೀಸರ ನಿಯೋಜನೆ

ಪ್ರತಿಭಟನೆಯಿಂದಾಗಿ ವಾಹನ ಸವಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಸಲುವಾಗಿ, ಭಾಸ್ಕರ್ ರಾವ್ ಸಿಎಂ ಅವರನ್ನು ಭೇಟಿ ಮಾಡಿದ್ದಾರೆ. ಸಿಟಿ ರೈಲು ನಿಲ್ದಾಣದಲ್ಲಿ 200 ಕ್ಕು ಹೆಚ್ಚು ಪೋಲೀಸರ ನಿಯೋಜನೆ. ಬೃಹತ್ ಪ್ರತಿಭಟನೆಯ ಹಿನ್ನಲೆಯಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಹಲವಾರು ಪ್ರದೇಶಗಳಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸುಮಾರು 10 ಸಾವಿರ ರೈತರು ಬೆಂಗಳೂರಿಗೆ ಆಗಮಿಸುವ ಸಾಧ್ಯತೆವಿದೆ.

ಸವಾರರಿಗೆ ತೊಂದರೆಯಿಲ್ಲ

ಮಂತ್ರಿಮಾಲ್ ರಸ್ತೆ, ಶೇಷಾದ್ರಿಪುರಂ ರೋಡ್, ಮೆಜೆಸ್ಟಿಕ್ ಸುತ್ತಾಮುತ್ತ ರಸ್ತೆ, ಕಾರ್ಪೋರೇಷನ್ ಸರ್ಕಲ್, ವಿಧಾನಸೌಧ ಸುತ್ತಾಮುತ್ತ ರಸ್ತೆ, ಆನಂದ್ ರಾವ್ ಸರ್ಕಲ್ ಬಳಿ ಟ್ರಾಫಿಕ್ ಇರಲಿದೆ. ಶೇಷಾದ್ರಿ ರಸ್ತೆಯಲ್ಲಿ ವಾಹನ ಚಲಾಯಿಸುವುದು ಸ್ಥಗಿತವಾಗಿದೆ. ಆನಂದ್ ರಾವ್ ಫ್ಲೈ ಓವರ್ ಹತ್ತಿರ ಎಡ ತಿರುವು ಪಡೆದುಕೊಳ್ಳುವುದರ ಮೂಲಕ ರೇಸ್ ಕೋರ್ಸ್ ರಸ್ತೆಯತ್ತ ಸಾಗಬೇಕಾಗಿದೆ. ಸಿಐಡಿ ಜಂಕ್ಷನ್, ಪ್ಯಾಲೇಸ್ ರಸ್ತೆ ಮೂಲಕ ಕೆ ಆರ್ ಸರ್ಕಲ್ ತಲುಪಬಹುದೆಂದು ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here