ರಾಬರ್ಟ್ ಚಿತ್ರಕ್ಕೆ ಯಾರು ನಾಯಕಿ ಆಗಲಿದ್ದಾರೆ? ಅಭಿಮಾನಿಗಳಿಂದ ಬಂತು ಲಿಸ್ಟ್

0
588
robert

ಕನ್ನಡ ಚಿತ್ರರಂಗದಲ್ಲಿ ಈಗ ಡಿ ಬಾಸ್ ಅವರದ್ದೆ ಹವಾ ಹೌದು ಚಾಲ್ಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಯಜಮಾನ ಚಿತ್ರ ಯಶಸ್ಸು ಕಂಡ ನಂತರ, ಮತ್ತಷ್ಟು ಹಿಟ್ ಚಿತ್ರಗಳು ಅಭಿಮಾನಿಗಳಿಗೆ ಕೊಡಲು ಮುಂದಾಗಿದ್ದಾರೆ. ಈಗ ದರ್ಶನ್ ಅಭಿಮಾನಿಗಳ ಬಾಯಲ್ಲಿ ರಾಬರ್ಟ್ ಅನ್ನೋ ಚಿತ್ರದ ಹೆಸರು ಹರಿದಾಡುತ್ತಿದೆ. ಅಕ್ಷಯ ತೃತೀಯ ದಿನದಂದು ಚಿತ್ರದ ಮುಹೂರ್ತವಾಗಿದ್ದು, ಅದೇ ದಿನದಂದು ಚಿತ್ರೀಕರಣ ಕೂಡ ಶುರುವಾಗಿತ್ತು. ರಾಬರ್ಟ್ ಚಿತ್ರಕೆ ನಾಯಕ ನಟ ಅಂತು ಸಿದ್ದರಾಗಿದ್ದಾರೆ. ಚಿತ್ರ ತಂಡ ಈಗ ನಾಯಕಿಯ ಹುಡುಕಾಟದಲ್ಲಿದ್ದಾರೆ.

ಪರಭಾಷೆಯ ನಟಿಯರ ಹೆಸರು ಹೆಚ್ಚಾಗಿ ಲಿಸ್ಟ್ ನಲ್ಲಿ ಇತ್ತು

ನಾಯಕಿಯ ವಿಚಾರಕ್ಕಾಗಿ ಸಿನಿಮಾ ಸುದ್ದಿಯಲ್ಲಿದೆ. ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗುವ ಮುನ್ನವೆ ಅನೇಕ ಸ್ಟಾರ್ ನಟಿಯರ ಹೆಸರು ಕೇಳಿ ಬರುತಿತ್ತು. ಸಾಯಿ ಪಲ್ಲವಿ, ರಾಕುಲ್ ಪ್ರೀತ್ ಸಿಂಗ್, ಪ್ರಣಿತಾ ಸುಭಾಶ್, ಐಶ್ವರ್ಯ ರೈ ಹೀಗೆ ಒಂದಾದ ನಂತರ ಒಂದು ಹೆಸರು ಕಿವಿಗೆ ಬೀಳುತಿತ್ತು. ಪರಭಾಷೆಯ ನಟಿಯರ ಹೆಸರು ಹೆಚ್ಚಾಗಿ ಲಿಸ್ಟ್ ನಲ್ಲಿ ಇತ್ತು. ಐಶ್ವರ್ಯ ರೈ ಅವರು ನನ್ನ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಡಿ ಬಾಸ್ ಅವರು ಸ್ಪಷ್ಟವಾಗಿ ಹೇಳಿದ್ದರು. ಸಿನಿಮಾ ತಂಡದವರು ಇಲ್ಲಿಯವರೆಗು ಯಾವ ನಾಯಕಿಯನ್ನು ಸಹ ಆಯ್ಕೆ ಮಾಡಿಲ್ಲ. ಸ್ವಲ್ಪ  ನಾಯಕಿಯರ ಜೊತೆ ಸಂಪರ್ಕ ಮಾಡಿದ್ದೇವೆ ಆದರೆ ಇನ್ನು ಯಾರ ಹೆಸರು ಸಹ ನಿಗಧಿ ಆಗಿಲ್ಲ ಎಂದು ಚಿತ್ರದ ನಿರ್ದೇಶಕ ತರುಣ್ ಸುಧೀರ್ ಅವರು ಹೇಳಿದ್ದಾರೆ.

ಕನ್ನಡ ನಟಿಯರೇ ಇರಲಿ, ಆದರೆ ಪರಭಾಷೆಯ ನಟಿಯರು ಬೇಡ

ಸಾಮಾಜಿಕ ಜಾಲ ತಾಣಗಳಲ್ಲಿ ರಾಬರ್ಟ್ ಚಿತ್ರಕ್ಕೆ ಇವರೇ ನಾಯಕಿ ಆಗಲಿ ಎಂದು ಅಭಿಮಾನಿಗಳು ಕೆಲವರ ಹೆಸರು ಸೂಚಿಸಿದ್ದಾರೆ. ಕನ್ನಡ ನಟಿಯರೇ ಇರಲಿ, ಆದರೆ ಪರ ಭಾಷೆಯ ನಟಿಯರು ಬೇಡ ಎನ್ನುವುದು ಅಭಿಮಾನಿಗಳ ಅಭಿಪ್ರಾಯವಾಗಿತ್ತು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆನ್ನುವುದು ಜನರ ನಿಲುವಾಗಿತ್ತು. ದರ್ಶನ್ ಗೆ ನಾಯಕಿ ನಟಿ ಆಗಿ ರಚಿತಾ ರಾಮ್ ಅವರು ಇರಲಿ ಎಂದು ಸ್ವಲ್ಪ ಜನ ಹೇಳಿದ್ದರೆ, ರಚಿತ ರಾಮ್ ಬೇಡ ಎಂದು ಇನ್ನು ಕೆಲವರು ಹೇಳಿದ್ದಾರೆ.

rachitha ram

ಅನುಪಮಾ ಪರಮೇಶ್ವರಂ ಅವರ ಹೆಸರು ಜನರು ಸೂಚಿಸುತ್ತಿದ್ದಾರೆ

ಪುನೀತ್ ರಾಜ್ ಕುಮಾರ್ ಅವರ ನಾಟಸಾರ್ವಭೌಮ ಚಿತ್ರದಲ್ಲಿ ಅನುಪಮ ಪರಮೇಶ್ವರಂ ಅವರು ನಟಿಸಿದ್ದರು. ಈ ಚಿತ್ರದ ನಂತರ ಅಪ್ಪು ಯುವ ರತ್ನ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಯುವ ರತ್ನ ಚಿತ್ರಕ್ಕು ಅನುಪಮಾ ಅವರ ಹೆಸರು ಜನರು ಸೂಚಿಸುತ್ತಿದ್ದಾರೆ. ಡಿ ಬಾಸ್ ಗೆ ಜೋಡಿ ಆಗಿ ಇವರೆ ಇರಲಿ ಎನ್ನುವುದು ಅಭಿಮಾನಿಗಳ ಒಂದು ಬಯಕೆ ಆಗಿದೆ.

ಕೀರ್ತಿ ಸುರೇಶ್ ಅವರ ಹೆಸರು ಕೇಳಿ ಬರುತ್ತಿದೆ

ದರ್ಶನ್ ಅವರು ಮುಂದೆ ನಟಿಸಲಿರುವ ಗಂಡುಗಲಿ ಮದಕರಿ ಚಿತ್ರಕ್ಕೆ ಕೀರ್ತಿ ಸುರೇಶ್ ಅವರು ನಾಯಕಿ ಆಗಬಹುದು ಎನ್ನುವ ಮಾತು ಕೇಳಿ ಬರುತ್ತಿವೆ, ಆದ್ದರಿಂದ ಇವರೇ ಈ ಚಿತ್ರಕ್ಕು ನಾಯಕಿ ಆಗಲಿ ಎನ್ನುವುದು ಅಭಿಮಾನಿಗಳ ಒಂದು ಬೇಡಿಕೆ ಆಗಿದೆ. ಮದಕರಿ ಆಗಲಿ ರಾಬರ್ಟ್ ಆಗಲಿ ಒಟ್ಟಿನಲ್ಲಿ ಕೀರ್ತಿ ಸುರೇಶ್ ಅವರು ಡಿ ಬಾಸ್ ಜೊತೆಗೆ ಪರದೆ ಹಂಚಿಕೊಳ್ಳಬೇಕು ಎಂದು ಅಭಿಮಾನಿಗಳು ತಿಳಿಸಿದ್ದಾರೆ.

keerthi suresh

ಅನುಷ್ಕಾ ಶೆಟ್ಟಿ ಡಚ್ಚುಗೆ ಒಳ್ಳೆಯ ಜೋಡಿ

ಅನುಷ್ಕಾ ಶೆಟ್ಟಿ ಕರ್ನಾಟಕದವರು, ಆದರೆ ಇವರು ಹೆಚ್ಚು ಜನಪ್ರಿಯವಾಗಿದ್ದು ತೆಲುಗು ಚಿತ್ರರಂಗದಲ್ಲಿ. ಇಲ್ಲಿಯವರೆಗು ಅನುಷ್ಕಾ ಶೆಟ್ಟಿ ಅವರು ಕನ್ನಡ ಚಿತ್ರಗಳಲ್ಲಿ ನಟಿಸಿಲ್ಲ. ರಾಬರ್ಟ್ ಚಿತ್ರಕ್ಕೆ ಇವರನ್ನು ಆಯ್ಕೆ ಮಾಡಿ ಎಂದು ಕೆಲವರು ಹೇಳುತ್ತಿದ್ದಾರೆ. ಇವರಿಬ್ಬರನ್ನು ತೆರೆ ಮೇಲೆ ನೋಡೊದಿಕ್ಕೆ ಚೆನ್ನಾಗಿ ಇರುತ್ತದೆ. ಇವರನ್ನೆ ಆಯ್ಕೆ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

anushka shetty

ದರ್ಶನ್ ಗೆ ಜೊತೆಯಾಗಿ ರಾಧಿಕಾ ಪಂಡಿತ್ ಇರಲಿ

ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟ ರಾಧಿಕಾ ಪಂಡಿತ್ ದರ್ಶನ್ ಗೆ ಜೋಡಿಯಾಗಿ ಯಾವ ಸಿನಿಮಾದಲ್ಲಿಯು ಕಾಣಿಸಿಕೊಂಡಿಲ್ಲ. ರಾಬರ್ಟ್ ಚಿತ್ರಕ್ಕೆ ರಾಧಿಕಾ ಅವರ ಹೆಸರು ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ರಾಧಿಕಾ ಅವರು ಮದುವೆ ಆದ ನಂತರ ಹೆಚ್ಚಾಗಿ ಯಾವ ಚಿತ್ರದಲ್ಲಿ ನಟಿಸಿಲ್ಲ, ಡಿ ಬಾಸ್ ಮತ್ತು ರಾಧಿಕಾ ಪಂಡಿತ್ ಅವರ ಜೋಡಿಯನ್ನು ಒಮ್ಮೆ ಆದರೂ ತೆರೆ ಮೇಲೆ ನೋಡಬೇಕೆನ್ನುವುದು ಜನರ ಇಚ್ಛೆ.

raadhika pandit

ಶ್ರೀನಿಧಿ ಶೆಟ್ಟಿ ಅವರ ಹೆಸರು ಕೂಡ ಲಿಸ್ಟ್ ಗೆ ಸೇರ್ಪಡೆ ಆಗುತ್ತದೆ

ಕೆ‌ಜಿ‌ಎಫ್ ಚಿತ್ರದ ಮೂಲಕ ಲಗ್ಗೆ ಇಟ್ಟ ಚಲುವೆ ಶ್ರೀನಿಧಿ ಶೆಟ್ಟಿ. ಇವರ ಹೆಸರು ಕೂಡ ಲಿಸ್ಟ್ ನಲ್ಲಿ ಇದೆ. ಕೆ‌ಜಿ‌ಎಫ್ ಚಿತ್ರದಲ್ಲಿ ನಟಿಸಿದ ನಂತರ ಇವರಿಗೆ ಬಾರಿ ಬೇಡಿಕೆ ಬಂದಿದೆ. ಅಂತಿಮವಾಗಿ ಕನ್ನಡ ನಟಿಯರೇ ಆಗಲಿ ಪರಭಾಷೆಯ ನಟಿಯರು ಬೇಡ, ಕರ್ನಾಟಕದಲ್ಲಿ ಹೊಸ ಕಲಾವಿದರು ಅವಕಾಶಕ್ಕಾಗಿ ಪರದಾಡುತ್ತಿದ್ದಾರೆ. ಇಂತವರಿಗೆ ಅವಕಾಶ ನೀಡಿ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

shrinidhi shetty

LEAVE A REPLY

Please enter your comment!
Please enter your name here