ಭ್ರಷ್ಟಾಚಾರವನ್ನು ಏಕಾಂಗಿಯಾಗಿ ಮಟ್ಟ ಹಾಕಿದ ವೆಂಕಟಾಚಲನವರು ಇನ್ನಿಲ್ಲ. ಇವರ ಸಾಧನೆಯ ಒಂದು ಕಿರುನೋಟ

0
707

ನಂಜೇಗೌಡ ವೆಂಕಟಾಚಲ ಅವರು ಭಾರತೀಯ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದು, ನಂತರ ಕರ್ನಾಟಕ ರಾಜ್ಯದ ಲೋಕಾಯುಕ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ತಾವು ಮಾಡುತ್ತಿದ್ದ ಕೆಲಸದಲ್ಲಿ ಕಟ್ಟುನಿಟ್ಟಾದ ನಿರ್ಧಾರವನ್ನು ತೆಗೆದುಕೊಳ್ಳುವುದರ ಪ್ರಕ್ರಿಯೆಯಿಂದ ಹೆಸರುವಾಸಿಯಾಗಿದ್ದರು. ಭ್ರಷ್ಟರು ಯಾರೆ ಇರಲಿ ಹಿಂದು ಮುಂದು ನೋಡದೆ ಅವರ ಮೇಲೆ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳುತ್ತಿದ್ದರು. ವಯಕ್ತಿಕವಾಗಿ ರೇಡ್ ಅನ್ನು ಮಾಡುತ್ತಿದ್ದ ಲೋಕಾಯುಕ್ತರು ಎನ್ನುವ ಹೆಗ್ಗಳಿಕೆಗೆ ಸಹ ಇವರು ಪಾತ್ರರಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಲೋಕಾಯುಕ್ತರಲ್ಲಿ ಇವರು ಮೊದಲಿಗರು.

ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನರಾಗಿದ್ದರು

ಎನ್ ವೆಂಕಟಾಚಲ ಅವರು ಜನಿಸಿದ್ದು ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನಲ್ಲಿ. ಶಾಲಾ ವಿದ್ಯಾಭ್ಯಾಸ ಮುಗಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಆಗಮಿಸುತ್ತಾರೆ. ಇವರು ಬ್ಯಾಚುಲರ್ ಆಫ್ ಸೈನ್ಸ್ ಮತ್ತು ಬ್ಯಾಚುಲರ್ ಆಫ್ ಲಾ ಡಿಗ್ರಿ ಅನ್ನು ಮೈಸೂರು ವಿಶ್ವವಿದ್ಯಾಲಯದದಿಂದ ಪಡೆದುಕೊಳ್ಳುತ್ತಾರೆ. ಭ್ರಷ್ಟಾಚಾರವನ್ನು ಮಟ್ಟ ಹಾಕುವುದರಲ್ಲಿ ವೆಂಕಾಟಾಚಲ ಅವರ ಪಾತ್ರ ದೊಡ್ಡದು ಅಂತಾನೆ ಹೇಳಬಹುದಾಗಿದೆ. ಸುಮಾರು 50,000 ಕೇಸ್ ಗಳನ್ನು ಸಾರ್ವಜನಿಕರ ಹಿತಾಶಕ್ತಿಯಲ್ಲಿ ತೆಗೆದುಕೊಂಡಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಹೋರಾಡಿದ್ದರು. ರಾಜಕಾರಣಿಗಳನ್ನು ಸಹ ಇವರು ಬಿಟ್ಟಿರಲಿಲ್ಲ. ಎರಡನೆ ಬಾರಿಗೆ ಇವರು ಲೋಕಾಯುಕ್ತರಾಗಿ ಮುಂದುವರೆವುದಿಲ್ಲ. ಇವರು ಹೆಚ್ಚು ಜನಪ್ರಿಯರಾಗಿದ್ದರಿಂದ ಲಂಚ ಸಾಮ್ರಾಜ್ಯ ಎನ್ನುವ ಚಿತ್ರದಲ್ಲಿ ನಟಿಸಿದ್ದು, ಭ್ರಷ್ಟರ ವಿರುದ್ಧ ಹೋರಾಡುವ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು.

ವೆಂಕಟಾಚಲನವರ ಆತ್ಮಕ್ಕೆ ಶಾಂತಿ ಸಿಗಲಿ

ಆದರೆ ಇಂದು ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತೆಯಲ್ಲಿ ವೆಂಕಟಾಚಲಯ್ಯನವರು ತಮ್ಮ ಕೊನೆಯುಸಿರನ್ನು ಎಳೆದಿದ್ದಾರೆ. ವಾಯಲಿಕಾವಲ್ ಮನೆಯಲ್ಲಿ ವೆಂಕಾಟಾಚಲ ಅವರ ಪಾರ್ಥಿವ ಶರೀರವನ್ನ ಅಂತಿಮ ದರ್ಶನಕ್ಕಾಗಿ ಇಡಲಾಗುತ್ತಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ಇನ್ನು ಇಂತಹ ಪವರ್ ಫುಲ್ ವ್ಯಕ್ತಿಯ ಅಗಲಿಕೆಯಿಂದ ಜನರಿಗೆ ಬೇಸರವಾಗಿದೆ. ಸಮಾಜಕ್ಕೆ ಇವರು ನೀಡಿದ ಕೊಡುಗೆ ಇಂದಿಗೂ ಜನರು ಮರೆಯಲು ಸಾಧ್ಯವಿಲ್ಲ. ಬಹುಶ ಇವರು ಕಾರ್ಯ ನಿರ್ವಹಿಸುತ್ತಿದ್ದ ಕಾಲಾವಧಿಯಲ್ಲಿ ಭ್ರಷ್ಟಾಚಾರದ ಕ್ರಮ ಸಂಖ್ಯೆ ತಗ್ಗಿತ್ತು. ಭ್ರಷ್ಟರ ಕನಸಿನಲ್ಲಿ ಬಂದು ಇವರು ಕಾಡುತ್ತಿದ್ದರು ಅಂತ ಹೇಳಿದರೆ ತಪ್ಪಾಗಲಾರದು. ವೆಂಕಟಾಚಲನವರ ಆತ್ಮಕ್ಕೆ ಶಾಂತಿ ಸಿಗಲಿ. ವೆಂಕಟಾಚಲನವರು ಎಂದಿಗೂ ಅಜರಾಮರ.

LEAVE A REPLY

Please enter your comment!
Please enter your name here