ಸಾಹಸ ಸಿಂಹ ವಿಷ್ಣುವರ್ಧನ್ ಅವರ ಕುರಿತು ನಿಮ್ಮಗೆ ಗೊತ್ತಿರದ ವಿಷಯಗಳು

0
532

ಇಂದು ರಾಜ್ಯಾದ್ಯಂತ ವಿಷ್ಣು ವರ್ಧನ್ ಅವರ ಅಭಿಮಾನಿಗಳು ದಾದಾ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ. ಈ ದಿನ ಸಾಹಸಸಿಂಹ ನೆನೆಯುತ್ತ ಅವರ ನೆನಪುಗಳ ಮೆಲುಕನ್ನು ಹಾಕೋಣ ಬನ್ನಿ. ಸಿನಿರಂಗದಲ್ಲಿ ವಿಷ್ಣುವರ್ಧನ್ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದು, ಇಂದಿಗೂ ಜನರ ಮನಸ್ಸಿನಲ್ಲಿ ಶಾಶ್ವವಾತವಾಗಿ ಉಳಿಯುವಂತಹ ಸಿನಿಮಾಗಳಾಗಿವೆ. ತಮ್ಮ ಅಭಿನಯ ಕೌಶಲ್ಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದರು ಸಂಪತ್ ಕುಮಾರ್. ಚಿತ್ರರಂಗವನ್ನು ಹೊರತು ಪಡಿಸಿ ದಾದಾ ಹಲವಾರು ವಿಚಾರಗಳ ಕುರಿತು ಚಿಂತನೆಯನ್ನು ನಡೆಸುತ್ತಿದ್ದು, ಅದನ್ನು ಜನರಿಗೆ ತಲುಪಿಸುತ್ತಿದ್ದರು. ಎಲ್ಲರಲ್ಲು ನಾನು ಸಹ ಒಬ್ಬ ನಾನು ನಿಮ್ಮಂತೆಯೆ, ಎಲ್ಲ ನಿಮ್ಮದೇ ಎಂದು ಹೇಳುತ್ತಿದ್ದರು. ಅಪ್ಪಾಜಿ ಅವರಿಗೆ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವಿತ್ತು. ಮುಂದೆ ಓದಿ

ದಾದಾ ಅವರ ಕಾರ್ ನಲ್ಲಿ ಬಣ್ಣ ಬಣ್ಣದ ಕವರ್ ಇರುತ್ತಿತ್ತು

ವಿಷ್ಣುವರ್ಧನ್ ಅವರ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳ ಕುರಿತು ಇಂದು ನಾವು ಹೇಳಲು ಹೊರಟಿದ್ದೇವೆ. ವಿಷ್ಣು ಹೊರಗಡೆ ಹೋಗಬೇಕಾದರೆ ತಮ್ಮ ಕಾರ್ ನಲ್ಲಿ ಬಣ್ಣ ಬಣ್ಣದ ಕವರ್ ಗಳನ್ನ ಇಟ್ಟುಕೊಳ್ಳುತ್ತಿದ್ದರಂತೆ. ಕವರ್ ಗಳಲ್ಲಿ ಏನಿತ್ತು ಇದನ್ನು ಯಾಕೆ ತಮ್ಮ ಕಾರ್ ನಲ್ಲಿ ಇಟ್ಟುಕೊಳ್ಳುತ್ತಿದ್ದರು ಎನ್ನುವ ವಿಷಯವನ್ನು ಪತ್ರಕರ್ತರಾದ ಜನಾರ್ಧನ್ ರಾವ್ ಸಾಳಂಕೆ ಅವರು ಬಹಿರಂಗ ಪಡಿಸಿದ್ದಾರೆ. ಯಾವುದೆ ಒಂದು ಕಾರ್ಯಕ್ರಮದ ಉದ್ಗಾಟನೆಗಾಗಿ, ಕಾರ್ಯಕ್ರಮಗಳಿಗೆ, ಸಭೆ ಸಮಾರಂಭಗಳಲ್ಲಿ ತಮ್ಮ ಕುಟುಂಬದ ಜೊತೆ ಅಥವಾ ಸ್ನೇಹಿತರೊಂದಿಗೆ ಹೋಗಿ ಬಿಡುತ್ತಿದ್ದರು. ಹೋಗುವ ವೇಳೆಯಲ್ಲಿ ವಿಷ್ಣು ಕೆಲ ವಸ್ತುಗಳನ್ನು ಕಾರ್ ನಲ್ಲಿ ಇಡುತ್ತಿದ್ದರು.

ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದ ವಿಷ್ಣುವರ್ಧನ್

ಕಾರಿನಲ್ಲಿ ಬಣ್ಣ ಬಣ್ಣದ ಕವರ್ ಗಳು, ಹಣ್ಣುಗಳು, ಶಾಲುಗಳು ಮತ್ತು ಇನ್ನಿತರ ವಸ್ತುಗಳನ್ನು ಇಡುತ್ತಿದ್ದರಂತೆ. ಜನರಿಗೆ ಮಾತ್ರ ಇದರಲ್ಲಿ ಏನಿದೆ ಎನ್ನುವುದು ಗೊತ್ತಾಗುತ್ತಿರಲಿಲ್ಲವಂತೆ. ಬಡವರು, ಹೆಣ್ಣು ಮಕ್ಕಳು, ವೃದ್ದರು ಬಂದು ನಾವು ಕಷ್ಟದಲ್ಲಿದ್ದೀವಿ, ಶಾಲೆಗೆ ಮಕ್ಕಳ ಶುಲ್ಕವನ್ನು ಕಟ್ಟಲು ಆಗುತ್ತಿಲ್ಲ. ನಮ್ಮ ಮಕ್ಕಳು ನಮಗೆ ಮನೆಯಿಂದ ಹೊರ ಹಾಕಿದ್ದಾರೆ ಎಂದು ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದರು. ಆಗ ತಕ್ಷಣ ವಿಷ್ಣು ಒಂದು ಕ್ಷಣವು ಸಹ ಆಲೋಚಿಸದೆ ತಮ್ಮ ಆಪ್ತ ಸಹಾಯಕ ರಾಧಾ ಕೃಷ್ಣ ಅವರನ್ನು ಕರೆದು ಕಾರಿನಿಂದ ಕೆಂಪು, ಹಳದಿ ಅಥವಾ ಹಸಿರು ಯಾವುದಾದರು ಒಂದು ಬಣ್ಣದ ಕವರ್ ತೆಗೆದುಕೊಂಡು ಬಾ ಎಂದು ಹೇಳುತ್ತಿದ್ದರು. ಮುಂದೆ ಓದಿ

ಕಾಲನ್ನು ಮುಟ್ಟಿ ನಮಸ್ಕರಿಸಿ ಹಣ್ಣು ಮತ್ತು ಶಾಲನ್ನು ನೀಡುತ್ತಿದ್ದರು

ವಿಷ್ಣು ಕೈಗೆ ಕವರ್ ತಲುಪುತ್ತಿದ್ದಂತೆ ತಮ್ಮಲ್ಲಿ ಸಹಾಯ ಬೇಡಿ ಬಂದವರಿಗೆ ನಮಸ್ಕರಿಸಿ, ಇದನ್ನು ತೆಗೆದುಕೊಳ್ಳಿ ಬೇಡ ಎಂದು ಹೇಳಬೇಡಿ. ಇದು ನಿಮ್ಮ ಸಹಾಯಕ್ಕೆ ಬರುತ್ತದೆ ಎಂದು ಹೇಳುತ್ತಿದ್ದರಂತೆ. ವಯಸ್ಸಿನಲ್ಲಿ ತಮಗಿಂತ ದೊಡ್ಡವರಾದಲ್ಲಿ ಅವರ ಕಾಲನ್ನು ಮುಟ್ಟಿ ನಮಸ್ಕರಿಸಿ ಹಣ್ಣು ಮತ್ತು ಶಾಲನ್ನು ನೀಡುತ್ತಿದ್ದರು. ಇದನ್ನು ತೆಗೆದುಕೊಳ್ಳಲು ಒಪ್ಪದ ಜನರ ಕೈಗೆ ಹಣವಿರುವ ಕವರ್ ಅನ್ನು ಕೊಡುತ್ತಿದ್ದರು. ಇನ್ನು ವಿಷ್ಣು ಕಾರ್ ನಲ್ಲಿ ಪ್ರಯಾಣ ಮಾಡುವ ವೇಳೆಯಲ್ಲಿ ವೃದ್ದರು ಕಂಡರೆ ತಕ್ಷಣ ವಾಹನವನ್ನು ನಿಲ್ಲಿಸಿ ಕಾರಿನಲ್ಲಿದ್ದ ಹಣ್ಣು ಕವರ್ ಮತ್ತು ಶಾಲನ್ನು ಸಹ ನೀಡಿದ್ದಾರೆ.

ಸಾಹಸ ಸಿಂಹ ಎಂದಿಗೂ ಅಜರಾಮರ

ಬಲಗೈನಲ್ಲಿ ಮಾಡಿದ ದಾನ ಎಡಗೈಗೆ ಗೊತ್ತಾಗಬಾರದೆನ್ನುವ ಒಂದು ಗಾದೆ ಮಾತಿದೆ. ಸಹಾಯ ಮಾಡಿದ ನಂತರ ಇದನ್ನು ನಾನು ನಿಮಗೆ ಕೊಟ್ಟಿದ್ದೇನೆ ಎಂದು ಯಾರ ಹತ್ತಿರ ಹೇಳಬೇಡಿ ಎಂದು ಹೇಳುತ್ತಿದ್ದರು. ಇಲ್ಲಿಯವರೆಗೆ ವಿಷ್ಣು ಎಲ್ಲಿಯೂ ನಾನು ಸಮಾಜ ಸೇವೆಯನ್ನು ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿರಲಿಲ್ಲ.

ಕೇವಲ ಚಿತ್ರರಂಗದಲ್ಲಿ ಮಾತ್ರ ದಾದಾ ಸಾಹಸ ಸಿಂಹನಾಗಿ ಗುರುತಿಸಿಕೊಂಡಿರಲಿಲ್ಲ ನಿಜ ಜೀವನದಲ್ಲು ಜನರ ಪಾಲಿಗೆ ಸಾಹಸ ಸಿಂಹನಾಗಿದ್ದರು. ವಿಷ್ಣುವರ್ಧನ್ ಅವರನ್ನು ಇಂದಿಗೂ ನಾವು ಸ್ಮರಿಸಬೇಕಾಗಿದೆ. ಸಾಹಸ ಸಿಂಹ ಎಂದಿಗೂ ಅಜರಾಮರ.

LEAVE A REPLY

Please enter your comment!
Please enter your name here