ಬೆಂಗಳೂರನ್ನು ಟ್ರಾಫಿಕ್ ಮುಕ್ತ ಸಿಟಿಯನ್ನಾಗಿ ಮಾಡಲು ಲಗ್ಗೆ ಇಡಲಿವೆ ಎಲೆಕ್ಟ್ರಿಕ್ ಬಿಎಂಟಿಸಿ ಬಸ್‍ಗಳು

0
413
electrit bus

ಒಂದು ಕಾಲದಲ್ಲಿ ಬೆಂಗಳೂರು ಸಿಲಿಕಾನ್ ಸಿಟಿ ಹಾಗು ಗಾರ್ಡನ್ ಸಿಟಿ. ಆದ್ರೆ ಈಗ ಟ್ರಾಫಿಕ್ ಸಿಟಿ. ಹೌದು. ಬೆಂಗಳೂರಿನಲ್ಲಿ ಎಲ್ಲಿ ನೋಡಿದರು ಬಾರಿ ವಾಹನಗಳೇ ಕಾಣುತ್ತವೆ. ಯಾಕಂದ್ರೆ ಈಗ ಬಂಗಾರದಲ್ಲಿ ಒಬ್ಬೊಬ್ಬರ ಮನೆಯಲ್ಲೂ ಎರಡು, ಮೂರೂ ಗಾಡಿಗಳಿರುತ್ತವೆ. ಹೀಗಿರುವಾಗ, ಒಂದು ಮನೆಯಲ್ಲಿ ಎರಡು, ಮೂರು ಗಾಡಿಗಳು ಅಂದ್ರೆ ನಗರದಲ್ಲಿರುವ ಅಷ್ಟು ಮನೆಗಳಿಂದ ಎಷ್ಟು ಗಾಡಿಗಳಾಗಬಹದು. ಇದರಿಂದ ನಗರದಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ದಟ್ಟಣೆಯಾಗುತ್ತಿದೆ. ಹಾಗಾಗಿ ಸರ್ಕಾರ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಈ ಸಮಸ್ಯೆ ನಿಂತಿಲ್ಲ. ಹೌದು. ಟ್ರಾಫಿಕ್ ಸಮಸ್ಯೆ ನಿಲ್ಲಿಸಲು ಮೆಟ್ರೋ ಜಾರಿಗೆ ತಂದರು. ಆದರೂ ಟ್ರಾಫಿಕ್ ಕಡಿಮೆ ಆಗಿಲ್ಲ. ಆದ್ರೆ ಈಗ ಮತ್ತೊಂದು ಹೊಸ ಹೋಜನೆಯನ್ನು ತರಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಹೌದು. ನಗರಕ್ಕೆ ಎಲೆಕ್ಟ್ರಿಕ್ ಬಿಎಂಟಿಸಿ ಬಸ್‍ಗಳು ಲಗ್ಗೆ ಇಡಲಿವೆಯಂತೆ. ಎಲ್ಲರು ಅದನ್ನೇ ಉಪಯೋಗಿಸುವಂತೆ ಯೋಜನೆಯನ್ನು ಜಾರಿಗೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ನಗರಕ್ಕೆ ಲಗ್ಗೆ ಇಡಲಿವೆ 500 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‍ಗಳು

ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೂ ಕೆಲವು ವಿಷಯಗಳಲ್ಲಿ ಯಾವ ಪ್ರಯೋಜನವೂ ಆಗುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ಟ್ರಾಫಿಕ್ ವಿಚಾರ. ಹೌದು. ಟ್ರಾಫಿಕ್ ವಿಚಾರವಾಗಿ ಸಕಷ್ಟು ಯೋಜನೆಗಳನ್ನು ಹಾಗು ನಿಯಮಗಳನ್ನು ಜಾರಿಗೆ ತಂದಿದ್ದರು, ಯಾವುದೇ ಪ್ರಯೋಜನವಾಗಿಲ್ಲ. ಆದ್ರೆ ಈಗ ಹೊಸ ನಿಯಮವನ್ನು ಜಾರಿಗೆ ತರಲಿದ್ದಾರೆ. ಹೌದು. ಇನ್ನು ಕೆಲವೇ ವರ್ಷಗಳಲ್ಲಿ ಬಹುತೇಕವಾಗಿ ಎಲೆಕ್ಟ್ರಿಕ್ ವಾಹನಗಳೇ ಸಂಚರಿಸಬೇಕೆಂಬ ಯೋಜನೆಯನ್ನುಮಾಡುತ್ತಿದೆ. ಮತ್ತೊಂದು ಕಡೆ ಹಲವಾರು ರಾಜ್ಯಗಳ ಸಾರಿಗೆ ಇಲಾಖೆಯು ಕೂಡಾ ತಮ್ಮಲ್ಲಿರುವ ಇಂಧನ ಆಧಾರಿತ ಪಬ್ಲಿಕ್ ಟ್ರಾನ್ಸ್ ಪೋರ್ಟ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸಬೇಕು ಎಂದು ತೀರ್ಮಾನ ಮಾಡಲಾಗಿದೆ. ಯಾಕಂದ್ರೆ ಈ ರೀತಿಯಿಂದ ಟ್ರಾಫಿಕ್ ಕಡಿಮೆ ಮಾಡಬಹುದು ಅನ್ನೋದು ಇವರ ಉದ್ದೇಶವಾಗಿದೆಯಂತೆ. ಜೊತೆಗೆ ಈ ಇಂಧನ ಕೂಡ ಉಳಿತಾಯವಾಗುತ್ತದೆಯಂತೆ.

ಟ್ರಾಫಿಕ್ ಕಿರಿಕಿರಿ ಜೊತೆಗೆ ಇಂಧನ ಕೂಡ ಉಳಿತಾಯವಾಗುತ್ತದೆ

ಈಗ ಈ ರೀತಿಯ ಹೊಸ ಯೋಜನೆಯನ್ನು ಜಾರಿಗೆ ತರುವುದು ದೇಶದ ಅಭಿವೃದ್ಧಿಗೆ ಒಳ್ಳೆಯದಾಗಿ, ಸಮಸ್ಯೆಗೆ ಕಡಿವಾಣ ಹಾಕಲು ಸಹಾಯವಾಗುತ್ತದೆ. ಯಾಕಂದ್ರೆ ಪ್ರೈವೇಟ್ ವಾಹನಗಳು ಅಧಿಕವಾಗುತ್ತಾ ಹೋದರೆ, ಟ್ರಾಫಿಕ್ ಸಮಸ್ಯೆಯಂತು ಕಡಿಮೆಯಾಗುವುದಿಲ್ಲ. ಇನ್ನು ಹಲವಾರು ನಗರಗಳಲ್ಲಿ ಮೆಟ್ರೋ ಸಂಚಾರವು ಪ್ರಾರಂಭವಾಗುವುದರ ಜೊತೆಗೆ ಟ್ರಾಫಿಕ್ ಸಮಸ್ಯೆಗಳು ಕಡಿಮೆಯಾಗುತ್ತಿದೆ. ಇನ್ನು ಇಂಧನ ಆಧಾರಿತ ವಾಹನಗಳಿಂದ ಉಂಟಾಗುತ್ತಿರುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಎಲೆಕ್ಟ್ರಿಕ್ ವಾಹನಗಳನ್ನು ಬಳಸಬೇಕಿದೆ. ಹೀಗಾಗಿ ನಮ್ಮ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕೂಡಾ ತಮ್ಮಲ್ಲಿರುವ ಇಂಧನ ಆಧಾರಿತ ಬಿಎಂಟಿಸಿ ಬಸ್‍ಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧಾರ ಮಾಡಿದೆ. ಅಲ್ಲದೆ 2030ರೊಳಗೆ ಎಲೆಕ್ಟ್ರಿಕ್ ಮಾದರಿಯ ಬಿಎಂಟಿಸಿ ಬಸ್ಸುಗಳ ಸಂಚಾರವನ್ನು ಪ್ರಾರಂಭಿಸಲಿದೆ ಎಂದು ತಿಳಿಸಿದ್ದಾರೆ.

ಹಲವು ಸೌಲಭ್ಯ ಹೊಂದಿರುವ ಬಸ್ ಗಳೇ ಬರಲಿವೆ

ಇನ್ನು ಸಿಟಿಗೆ ಲಗ್ಗೆ ಇಡುತ್ತಿರುವ ಎಲೆಕ್ಟ್ರಿಕ್ ಬಸ್ ಗಳು ಸಾಮಾನ್ಯವಾಗಿಲ್ಲ. ಬದಲಿಗೆ ಆ ಬಸ್ ಗಳು ಎಲ್ಲ ರೀತಿಯ ಸೌಲಭ್ಯವನ್ನು ಹೊಂದಿರಲಿವೆಯಂತೆ. ಹೌದು. ಈಗ ರಸ್ತೆಗಳಿಯಲಿರುವ 1500 ಹೊಸ ಎಲೆಕ್ಟ್ರಿಕ್ ಬಸ್ಸುಗಳಲ್ಲಿ 100 ಎಸಿ ಬಸ್ ಹಾಗು 400 ಎಸಿ ರಹಿತ ಎಲೆಕ್ಟ್ರಿಕ್ ಬಸ್ಸುಗಳನ್ನು ಮೊದಲ ಒಂದು ವರ್ಷದಲ್ಲಿ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಜೊತೆಗೆ ಈಗಿರುವ ಡೀಸೆಲ್ ಆಧಾರಿತ ಬಸ್ಸುಗಳನ್ನು ಸ್ಥಗಿತಗೊಳಿಸಲು ಕೊಂಚ ಸಮಯ ಬೇಕಾಗಬಹುದು. ಹಾಗಾಗಿ ಮೊದಲಿಗೆ ಯಾರೆಲ್ಲಾ ಇದರ ಸೌಲಭ್ಯವನ್ನು ಪಡೆಯಲಿದ್ದಾರೋ, ಆವರೆಲ್ಲಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಹೌದು. ಮೊದಲಿಗೆ ನಿರ್ವಾಹಕರು ಯಾವ ರೀತಿಯ ಬಸ್ ಗಳು ಬೇಕು ಎಂಬುದರ ಬ್ಗಗೆ ಮೊದಲಿಗೆ ನೋಂದಾಯಿಸಿಕೊಳ್ಳಬೇಕು. ನಂತರ ಅದೇ ಮಾಡೆಲ್ ನ ಬಸ್ ಅನ್ನು ಅವರು ಪಡೆಯಬಹುದಂತೆ.

ಒಟ್ಟಿನಲ್ಲಿ ಬೆಂಗಳೂರನ್ನು ಟ್ರಾಫಿಕ್ ಮುಕ್ತ ಸಿಟಿ ಮಾಡಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಆದ್ರೆ ಇಷ್ಟು ದಿನ ಏನೇ ಯೋಜನೆ ತಂದರೂ, ಅದು ಪ್ರಯೋಜನವಾಗಿರಲಿಲ್ಲ. ಆದ್ರೆ ಈಗ ತರುತ್ತಿರುವ ಯೋಜನೆ ಎಷ್ಟರ ಮಟ್ಟಿಗೆ ಉಪಯೋಗವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

 

LEAVE A REPLY

Please enter your comment!
Please enter your name here