ಕೊಹ್ಲಿಗೆ ದಂಡ. ಪಂದ್ಯದ ನಂತರ ಪ್ರತಿಕ್ರಿಯಿಸಿದ ಲೆಜೆಂಡ್ ಆಟಗಾರ ಸಚಿನ್ ತೆಂಡುಲ್ಕರ್

0
637

ವಿಶ್ವಕಪ್ ಪಂದ್ಯಾವಳಿಗಳು ಆರಂಭವಾಗಿದ್ದು ಭಾರತ ತಂಡ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡುತ್ತಿದೆ. ಸತತ 3 ಪಂದ್ಯಗಳಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿದೆ. ಮೊದಲನೆ ಮ್ಯಾಚ್ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಿದ್ದು, ಎರಡನೇ ಮ್ಯಾಚ್ ಆಸ್ಟ್ರೇಲಿಯ ವಿರುದ್ದ ಗೆದ್ದು, ಮೂರನೇ ಪಂದ್ಯ ಬದ್ದ ವೈರಿಯ ಪಾಕಿಸ್ತಾನದ ಜೊತೆಗೆ ಗೆಲ್ಲುತ್ತಾರೆ. ವಿರಾಟ್ ಕೊಹ್ಲಿ ಅವರು ಸಹ ಅದ್ಬುತವಾಗಿ ನಾಯಕತ್ವವನ್ನು ಮಾಡುತ್ತಿದ್ದಾರೆ. ತಂಡದ ಆಟಗಾರರು ಸಹ ಉತ್ತಮವಾದ ಪ್ರದರ್ಶನವನ್ನು ನೀಡುತ್ತಿದ್ದಾರೆ. ಆಸ್ಟ್ರೇಲಿಯ ವಿರುದ್ದ ಪಂದ್ಯದಲ್ಲಿ ಶಿಖರ್ ಧವಾನ್ ಗೆ ಏಟಾದ ಕಾರಣದಿಂದಾಗಿ ಪಂದ್ಯದಿಂದ ಹೊರಗೆ ನಡೆದಿದ್ದಾರೆ. ಪಾಕಿಸ್ತಾನದ ವಿರುದ್ದ ಶಿಖರ್ ಧವಾನ್ ಅವರ ಜಾಗವನ್ನು ವಿಜಯ್ ಶಂಕರ್  ತುಂಬಿದ್ದರು.

ಲೆಜೆಂಡ್ ಆಟಗಾರ ಸಚಿನ್ ತೆಂಡುಲ್ಕರ್ ಪ್ರತಿಕ್ರಯಿಸಿದ್ದಾರೆ

ಭಾರತ ತಂಡದ ಆಟಗಾರರು ಆಫ್ಘಾನಿಸ್ತಾನ್ ವಿರುದ್ಧ ಉತ್ತಮವಾದ ಪ್ರದರ್ಶನ ನೀಡಿರಲಿಲ್ಲ. ತುಂಬಾ ನಿಧಾನಗತಿಯಲ್ಲಿ ಬ್ಯಾಟ್ಸ್ ಮೆನ್ ಗಳು ಗಳು ಆಡುತ್ತಿದ್ದರು. ಆಫ್ಘಾನಿಸ್ತಾನ್ ಬೌಲಿಂಗ್ ಗೆ ಆಟಗಾರರು ರನ್ಸ್ ಮಾಡಲು ತತ್ತರಿಸಿ ಹೋಗಿದ್ದರು. ಆಫ್ಗಾನಿಸ್ತಾನ್ ಬೌಲಿಂಗ್ ದಾಳಿಗೆ ಭಾರತ ತಂಡದ ಬ್ಯಾಟ್ಸ್ ಮೆನ್ ಗಳು ಬಹಳ ಬೇಗ ಔಟ್ ಆಗಿ ಬಿಟ್ಟಿದ್ದರು. ಈ ವಿಷಯದ ಕುರಿತು ಲೆಜೆಂಡ್ ಆಟಗಾರ ಸಚಿನ್ ತೆಂಡುಲ್ಕರ್ ಪ್ರತಿಕ್ರಯಿಸಿದ್ದಾರೆ. ಸ್ಪಿನ್ನರ್ಸ್ ಗಳ ವಿರುದ್ಧ ರನ್ ಗಳಿಸಲು ವಿಫಲರಾದ ಹಿರಿಯ ಆಟಗಾರ ಧೋನಿ ಹಾಗು ಕೇದಾರ್ ಜಾಧವ್ ಆಟದಿಂದಲೇ ಭಾರತ ಬೃಹತ್ ಮೊತ್ತವನ್ನು ಕಲೆಹಾಕಲು ಸಾಧ್ಯವಾಗಲಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಟೀಮ್ ಇಂಡಿಯಾ 50 ನೇ ಗೆಲುವು ತಮ್ಮದಾಗಿಸಿಕೊಂಡಿದೆ

ಭಾರತ ಕೊನೆಗೂ ರೋಚಕವಾದ ಗೆಲುವು ಸಾಧಿಸುವ ಮೂಲಕ ವಿಶ್ವ ಕಪ್ ಸರಣಿಯಲ್ಲಿ 50 ನೇ ಗೆಲುವು ಸಾಧಿಸಿದೆ. 1975 ರ ಮೊದಲ ವಿಶ್ವ ಕಪ್ ನಿಂದಲೂ ಭಾರತ ತಂಡ ವಿಶ್ವ ಕಪ್ ನಲ್ಲಿ ಆಡುತ್ತಾ ಬಂದಿದೆ. ಪ್ರಚಲಿತ ವಿಶ್ವ ಕಪ್ ಶುರುವಾಗುವ ಮುನ್ನ 75 ಪಂದ್ಯಗಳಲ್ಲಿ 46 ಗೆಲುವು ಪಡೆದುಕೊಂಡಿತ್ತು. ಪ್ರಸಕ್ತ ವಿಶ್ವ ಕಪ್ ನಲ್ಲಿ 4 ಸತತ ಗೆಲುವಿನಿಂದಾಗಿ ಟೀಮ್ ಇಂಡಿಯಾ 50 ನೇ ಗೆಲುವು ತಮ್ಮದಾಗಿಸಿಕೊಂಡಿದೆ. ಐದು ಬಾರಿ ವಿಶ್ವ ಚಾಂಪಿಯನ್ಸ್ ಆಗಿರುವ ಆಸ್ಟ್ರೇಲಿಯ ತಂಡವು 90 ಪಂದ್ಯಗಳಲ್ಲಿ 67 ಗೆಲುವು ಪಡೆದುಕೊಂಡಿದೆ. ಇನ್ನು ನ್ಯೂಜಿಲ್ಯಾಂಡ್ ತಂಡ 84 ಪಂದ್ಯಗಳಲ್ಲಿ 53 ಗೆಲುವು ಸಾಧಿಸಿದೆ. ಅಂಕ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್ ಅಗ್ರ ಸ್ಥಾನದಲ್ಲಿದೆ.

ಪಂದ್ಯದ ಶ್ರೇಷ್ಠ 25 ರಷ್ಟು ದಂಡ ವಿಧಿಸಲಾಗಿದೆ

ಮೊಹಮ್ಮದ್ ಶಮಿ ಓವರ್ ನಲ್ಲಿ ಎಲ್ಬಿಡಬ್ಲೂ ಗಾಗಿ ಭಾರತ ತಂಡ ಅಪೀಲ್ ಮಾಡಿತ್ತು. ಆದರೆ ಅಂಪೈರ್ ಔಟ್ ಕೊಟ್ಟಿರಲಿಲ್ಲ. ಆದ್ದರಿಂದ ನಾಯಕ ವಿರಾಟ್ ಕೊಹ್ಲಿ ಡಿಆರ್ ಸ್ ಸಹಾಯದಿಂದ ಮೇಲ್ಮನವಿ ಸಲ್ಲಿಸಿದರು. ಆರಂಭದ ಹಂತದಲ್ಲಿಯೇ ಡಿ ಆರ್ ಸ್ ಚಾನ್ಸ್ ಕಳೆದುಕೊಂಡ ಭಾರತ ತಂಡ, ಅಂಪೈರ್ ಜೊತೆ ವಿರಾಟ್ ಕೊಹ್ಲಿ ಸರಿಯಾದ ರೀತಿಯಲ್ಲಿ ನಡೆದುಕೊಂಡಿರಲಿಲ್ಲ. ಐ ಸಿ ಸಿ ನೀತಿಯನ್ನು ವಿರಾಟ್ ಮೀರಿದ್ದ ಕಾರಣದಿಂದಾಗಿ ಪಂದ್ಯದ ಶ್ರೇಷ್ಠ 25 ರಷ್ಟು ದಂಡ ವಿಧಿಸಲಾಗಿತ್ತು.

ಯಾವ ತಂಡವನ್ನು ನಾವು ಕಡಗೆಣಿಸಿಬಾರದೆಂದು

ಕೊನೆ ಹಂತದವರೆಗೂ ಮ್ಯಾಚ್ ಬಹಳ ಕುತೂಹಲಕಾರಿಯಾಗಿ ಇತ್ತು. ಈ ಬಾರಿ ವಿಶ್ವ ಕಪ್ ಪಂದ್ಯಗಳಲ್ಲಿ ಹೈ ಟೆನ್ಶನ್ ಮ್ಯಾಚ್ ಎಂದರೆ ಇದೆ ಎಂದು ಹೇಳಬಹುದಾಗಿದೆ. ಭಾರತ ತಂಡ ಇದರಿಂದ ಒಳ್ಳೆಯ ಪಾಠವನ್ನು ಕಲಿತಿದೆ. ಯಾವ ತಂಡವನ್ನು ನಾವು ಕಡಗೆಣಿಸಿಬಾರದೆಂದು ಈಗ ಟೀಮ್ ಇಂಡಿಯಾ ಅರಿತಿದೆ. ಮುಂದೆ ಆಡಲಿರುವ ಪಂದ್ಯಗಳಲ್ಲಿ ಬಹಳ ಜಾಗ್ರತೆಯಿಂದ ಭಾರತ ಆಡಬೇಕಾಗಿದೆ.

LEAVE A REPLY

Please enter your comment!
Please enter your name here