ಜೋಡೆತ್ತುಗಳ ಫೋನ್ ಟ್ಯಾಪಿಂಗ್. ಇದರ ಹಿಂದಿನ ಮರ್ಮವೇನು?

0
819

ರಾಜಕೀಯ ಅನ್ನೋದು ಒಂದು ಕ್ಷೇತ್ರ, ಸಿನಿಮಾ ರಂಗ ಅನ್ನೋದು ಇನ್ನೊಂದು ಕ್ಷೇತ್ರ. ಆದ್ರೆ ಇತ್ತೀಚಿಗೆ ಏನಾಗ್ತಿದೆ ಅಂದ್ರೆ ರಾಜಕೀಯ ಯಾವುದು? ಸಿನಿಮಾ ರಂಗ ಯಾವುದು ಅಂತಾನೆ ತಿಳಿಯುತ್ತಿಲ್ಲ. ಯಾಕಂದ್ರೆ ರಾಜಕೀಯದಲ್ಲಿ ಏನೇ ಸುದ್ದಿ ಹೊರಬಿದ್ದರು ಅದರಲ್ಲಿ ಸಿನಿಮಾ ರಂಗದವರು ಸೇರಿರುತ್ತಾರೆ. ಇನ್ನು ಸಿನಿಮಾ ವಿಚಾರದಲ್ಲಿ ಏನೇ ವಿಷಯ ಇದ್ದರು ಅದರಲ್ಲಿ ರಾಜಕೀಯ ನಾಯಕರು ಸೇರಿರುತ್ತಾರೆ. ಅದೇ ರೀತಿ ಈಗ ಫೋನ್ ಕದ್ದಾಲಿಕೆ ವಿಷಯದಲ್ಲೂ ದರ್ಶನ್ ಹಾಗು ಯಶ್ ಹೆಸರು ಕೇಳಿ ಬರುತ್ತಿದೆ. ಹೌದು. ರಾಜ್ಯ ರಾಜಕಾರಣದಲ್ಲಿ ಇತ್ತೀಚಿಗೆ ಸದ್ದು ಮಾಡುತ್ತಿರುವ ವಿಷಯ ಅಂದ್ರೆ ಅದು ಫೋನ್ ಕದ್ದಾಲಿಕೆ. ಹೌದು. ಮೈತ್ರಿ ಸರ್ಕಾರದ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೇರಿದಂತೆ ಇನ್ನು ಹಲವು ಶಾಸಕರು, ಇತರ ನಾಯಕರ ಹಾಗು ಇನ್ನುಳಿದವರ ಫೋನ್ ಟ್ಯಾಪಿಂಗ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈಗ ಆ ಸಾಲಿನಲ್ಲಿ ಯಶ್ ಹಾಗು ದರ್ಶನ್ ಅವರ ಹೆಸರು ಸಹ ಕೇಳಿಬಂದಿದೆಯಂತೆ.

ಜೋಡೆತ್ತುಗಳ ಫೋನ್ ಕದ್ದಾಲಿಕೆ ಆಗಿದೆಯಾ?

ರಾಜ್ಯ ರಾಜಕಾರಣದಲ್ಲಿ ಎತ್ತ ನೋಡಿದರು ಫೋನ್ ಕದ್ದಾಲಿಕೆ ವಿಚಾರ ಕೇಳಿಬರುತ್ತಿದೆ. ಅದರಲ್ಲಿ ಇಷ್ಟು ದಿನ ಕೇವಲ ರಾಜಕೀಯ ನಾಯಕರುಗಳ ಹೆಸರು ಮಾತ್ರ ಕೇಳಿಬರುತ್ತಿತ್ತು. ಆದ್ರೆ ಈಗ ಜೋಡೆತ್ತುಗಳು ಎಂದೇ ಖ್ಯಾತಿ ಪಡೆದಿರುವ ದರ್ಶನ್ ಹಾಗು ಯಶ್ ಅವರ ಹೆಸರು ಕೇಳಿಬರುತ್ತಿದೆ. ಹೌದು. ಮಂಡ್ಯ ಚುನಾವಣೆಯ ಸಮಯದಲ್ಲಿ ದರ್ಶನ್ ಹಗು ಯಶ್ ಸುಮಲತಾ ಅವರ ಪರ ಪ್ರಚಾರಕ್ಕೆ ನಿಂತಿದ್ದರು. ಆ ಸಮಯದಲ್ಲಿ ಅವರ ಫೋನ್ ಅನ್ನು ಟ್ಯಾಪಿಂಗ್ ಮಾಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಹೌದು. ಅವರು ಯಾರ ಜೊತೆ ಮಾತನಾಡುತ್ತಾರೆ, ಏನು ಹೇಳುತ್ತಾರೆ ಎಂಬುದನ್ನು ತಿಳಿಯಲು ಅವರ ಫೋನ್ ಕದ್ದಾಲಿಕೆ ಮಾಡಲಾಗಿತ್ತಂತೆ.

 

ಸುಮಾರು 900 ನಂಬರ್ ಗಳ ಕಾಲ್ ಕದ್ದಾಲಿಸಲಾಗೆದೆಯಾ?

ಈ ಬಾರಿಯ ಲೋಕಸಭಾ ಚುನಾವಣೆಯ ಸಮಯದಲ್ಲಿ ದರ್ಶನ್ ಹಾಗು ಯಶ್ ಸುಮಲತಾ ಅವರ ಪರ ಪ್ರಚಾರಕ್ಕೆ ನಿಂತಿದ್ದರಿಂದ ಹಲವರ ಬಳಿ ಸಂಭಾಷಣೆ ನಡೆಸಿದ್ದಾರೆ. ಆ ಸಮಯದಲ್ಲಿ ಇವರಿಬ್ಬರು ಸುಮಾರು ನಂಬರ್ ಗಳಿಗೆ ಕಾಲ್ ಮಾಡಿದ್ದಾರಂತೆ. ಅದರಲ್ಲಿ ಸುಮಾರು 900 ನಂಬರ್ ಗಳ ಕಾಲ್ ಕದ್ದಾಲಿಕೆಯಾಗಿದೆಯಂತೆ. ಹೌದು. ಈ ಬಗ್ಗೆ ಈಗ ರಾಜಕೀಯದಲ್ಲಿ ಬಹಳಷ್ಟು ಗೊಂದಲ ಸೃಷ್ಠಿಯಾಗಿದೆ. ಜೊತೆಗೆ ಎಲ್ಲರು ದೋಸ್ತಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರು ಹೆಚ್ಚು ಕೇಳಿಬರುತ್ತಿದೆಯಂತೆ. ಆದರೆ ಕುಮಾರಸ್ವಾಮಿ ಅವರು ಮಾತ್ರ ಇದರಲ್ಲಿ ನನ್ನದು ಯಾವ ಕೈವಾಡವೂ ಇಲ್ಲ ಎಂದು ಹೇಳುತ್ತಿದ್ದಾರೆ.

ಖಚಿತ ಮಾಹಿತಿ ಹೊರ ಬೀಳುತ್ತಿಲ್ಲ

ಇನ್ನು ಈ ಫೋನ್ ಕದ್ದಾಲಿಕೆಯ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರ ಬಿಳುತ್ತಿಲ್ಲವಂತೆ. ಬದಲಿಗೆ ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಮಾಡುತ್ತಿದ್ದಾರೆ. ಆದ್ರೆ ಫೋನ್ ಕದ್ದಾಲಿಕೆ ಆಗಿರೋದು ಮಾತ್ರ ಖಚಿತವಾಗಿದೆಯಂತೆ. ಆದರೆ ಇದರ ಹಿಂದೆ ಇರುವ ಮುಖ್ಯ ವ್ಯಕ್ತಿ ಯಾರೆಂದು ಮಾತ್ರ ತಿಳಿಯುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಜೊತೆಗೆ ಎಲ್ಲ ನಾಯಕರು ಸಹ ಒಂದೇ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿ ಯಾರು ಮಾಡಿದ್ದಾರೆ, ಅವರಿಗೆ ತಕ್ಕ ಶಿಕ್ಷೆ ನೀಡಿ ಎಂದು ಹೇಳುತ್ತಿದ್ದಾರೆ. ಇದರಿಂದ ಆರೋಪಿ ಯಾರೆಂಬುದು ಮಾತ್ರ ತಿಳಿಯುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದ್ರೆ ಇದು ರಾಜಕೀಯ ನಾಯಕರ ಮಧ್ಯೆ ಮಾತ್ರ ನಡೆಯುತ್ತಿತ್ತು. ಆದ್ರೆ ಈಗ ಸಿನಿಮಾ ರಂಗದವರೆಗೂ ಲಗ್ಗೆ ಇಡಲು ಮುಂದಾಗುತ್ತಿದೆ. ಮುಂದಿನ ದಿನದಲ್ಲಿ ಈ ವಿಚಾರ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಕಾದು ನೋಡಬೇಕಿದೆ.

ಒಟ್ಟಿನಲ್ಲಿ ಫೋನ್ ಕದ್ದಾಲಿಕೆ ವಿಚಾರ ಎಲ್ಲಿಂದೆಲ್ಲಿಗೋ ಹೋಗಿ ಮುಟ್ಟುತ್ತಿದೆ. ಆದರೆ ಇದಕ್ಕೆ ಕಾರಣ ಯಾರು ಎಂಬುದು ಮಾತ್ರ ತಿಳಿಯುತ್ತಿಲ್ಲ. ಸದ್ಯಕ್ಕೆ ಈಗ ಜೋಡೆತ್ತುಗಳ ಫೋನ್ ಟ್ಯಾಪಿಂಗ್ ವಿಚಾರ ಕೇಳಿಬಂದಿದೆ. ಆದರೆ ಈ ಬಗ್ಗೆ ದರ್ಶನ್ ಹಾಗು ಯಶ್ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲವಂತೆ.

LEAVE A REPLY

Please enter your comment!
Please enter your name here