ಥಟ್ ಅಂತ ಹೇಳಿ ಖ್ಯಾತಿಯ ಡಾ.ನಾ.ಸೋಮೇಶ್ವರ್ ಅವರ ಕುರಿತು ನೀವು ತಿಳಿಯಬೇಕಾದಂತಹ 10 ವಿಷಯಗಳು.

0
1393
Dr.Na.Someshwar , that anta heli
Dr.Na.Someshwar , that anta heli

“ಥಟ್ ಅಂತ ಹೇಳಿ” ಕಾರ್ಯಕ್ರಮ ಯಾರಿಗೆ ಗೊತ್ತಿಲ್ಲ ಹೇಳಿ, ಕರ್ನಾಟಕದ ಮನೆಮನಗಳಲ್ಲಿ ಎಂದೆಂದಿಗೂ ಅಜರಾಮರವಾಗಿ ಉಳಿದುಬಿಟ್ಟಿರುವ ಎಲ್ಲರ ನೆಚ್ಚಿನ ರಸಪ್ರಶ್ನೆ ಕಾರ್ಯಕ್ರಮ ಯಾವುದು ಎಂದು ಕೇಳಿದರೆ ಒಂದು ಕ್ಷಣವನ್ನು ವ್ಯರ್ಥ ಮಾಡದೆ ಕನ್ನಡಿಗರು “ಥಟ್ ಅಂತ ಹೇಳಿ” ಅಂತಾನೆ ಹೇಳೋದು. 4 ಜನವರಿ 2002 ರಂದು ದೂರದರ್ಶನ ಬೆಂಗಳೂರಿನಲ್ಲಿ ಅದರ ಮೊದಲ ಸಂಚಿಕೆ ಪ್ರಸಾರವಾಗಿತ್ತು.ಥಟ್ ಅಂತ ಹೇಳಿ ಅತೀ ಹೆಚ್ಚು ಸಂಚಿಗಳು ಪ್ರಸಾರವಾದ ಭಾರತದ ಏಕೈಕ ರಸಪ್ರಶ್ನೆ ಕಾರ್ಯಕ್ರಮ ಎಂಬ ಹೆಗ್ಗಳಿಕೆಯಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ 2012 ರಂದು ದಾಖಲೆ ನಿರ್ಮಿಸಿತು( 1,756 ಸಂಚಿಕೆಗಳ ಗಣತಿ),
Limca Book of Records in 2012 signing up a record for the longest-running television Quiz show in India (1,756 episodes and counting) ಮತ್ತೊಂದು ಆಸಕ್ತಿದಾಯಕ ವಿಚಾರವೇನೆಂದರೆ ಈ ಕಾರ್ಯಕ್ರಮವು ತನ್ನ 3000 ಕ್ಕುಹೆಚ್ಚಿನ ಸಂಚಿಕೆಗಳನ್ನು ಯಾವುದೇ ಪ್ರಾಯೋಜಕತ್ವ ಇಲ್ಲದೆ ಪೂರೈಸಿ ಮುಂದುವರೆಸಿಕೊಂಡು ಬರುತ್ತಿದೆ. ಅದ್ಭುತ ಅಲ್ಲದೆ ಮತ್ತಿನ್ನೇನು.

Dr.Na.Someshwar , THAT ANTHA HEL
Dr.Na.Someshwar , THAT ANTHA HELI

“ಥಟ್ ಅಂತ ಹೇಳಿ” ಅಂದಕೂಡಲೇ ನಮ್ಮ ಮನಸಿಗೆ ಬರುವ ಮೊದಲ ಹೆಸರು ಡಾ.ನಾ.ಸೋಮೇಶ್ವರ್. ಬನ್ನಿ ಈ ಅಂಕಣದಲ್ಲಿ ಅವರ ಬದುಕಿನ ಪಯಣದ ಕುರಿತ ಕೆಲವು ಆಸಕ್ತಕರ ವಿಚಾರಗಳನ್ನು ತಿಳಿದುಕೊಳ್ಳೋಣ.

ಇಲ್ಲಿವೆ ನೋಡಿ ಡಾ.ನಾ.ಸೋಮೇಶ್ವರ್ ಅವರ ಕುರಿತ ಆಸಕ್ತಕರ ವಿಷಯಗಳು.

೧) ನಾರಪ್ಪ ಸೋಮೇಶ್ವರ್ ಅವರು ಕೇವಲ ಥಟ್ ಅಂತ ಹೇಳಿ ನಿರೂಪಕರಷ್ಟೆ ಅಲ್ಲದೆ ಪ್ರಸಿದ್ಧ ಬರಹಗಾರರು ಕೂಡ ಆಗಿದ್ದಾರೆ. ಕನ್ನಡ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ವಿಜ್ಞಾನ,ಔಷಧ ಮತ್ತು ವೈದ್ಯಕೀಯ ವಿಚಾರಗಳನ್ನು ಮುಖ್ಯವಾಹಿನಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ.

೨) “ಜೀವನದಿ” ಹೆಸರಿನ ವೈದ್ಯಕೀಯ ಸಾಹಿತ್ಯಿಕ ಪುರವಾಣಿಯ ಸಂಪಾದಕರಾಗಿ ಕೂಡ ಕಾರ್ಯನಿರ್ವಹಿಸಿರುವ ಇವರು ಔಷಧ ಮತ್ತು ವೈದ್ಯಕೀಯಕ್ಕೆ ಸಂಭಂದಿಸಿದಂತೆ 41 ಪುಸ್ತಕಗಳನ್ನು ಹಾಗು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಲೇಖನಗಳನ್ನು ಬರೆದಿರುತ್ತಾರೆ.

Dr.Na.shomeshwar
Dr.Na.shomeshwar

೩) ನಾರಪ್ಪ ಮತ್ತು ಅಂಜನಾ ಅವರ ಸುಪುತ್ರರಾಗಿ 14 ಮೇ 1955 ರಲ್ಲಿ ಬೆಂಗಳೂರಿನ ಮಲ್ಲೇಶ್ವರ ದಲ್ಲಿ ಜನಿಸಿದ ಇವರು ಔಷಧ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.(1986 ).

೪) ಔಷಧ ಮತ್ತು ವಿಜ್ಞಾನವನ್ನು ಜನಸಾಮಾನ್ಯರಿಗೂ ತಲುಪಿಸುವಲ್ಲಿ ಇವರ ಕೊಡುಗೆ ಸಾಕಷ್ಟಿದೆ. ಬೆಂಗಳೂರು ದೂರದರ್ಶನದಲ್ಲಿ ಆರೋಗ್ಯ ಜಾಗೃತಿ ಹಾಗು ವಿಜ್ಞಾನಕ್ಕೆ ಸಂಬಂಧಿಸಿದಂತೆ 1200 ಕ್ಕು ಹೆಚ್ಚಿನ ಕಾರ್ಯಕ್ರಮಗಳನ್ನು, ಆಕಾಶವಾಣಿಯಲ್ಲಿ 75 ಕ್ಕು ಹೆಚ್ಚಿನ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ.

೫) ಕ್ವಿಸ್ ಮಾಸ್ಟರ್ ಮತ್ತು ನಿರೂಪಕರಾಗಿ ಥಟ್ ಅಂತ ಹೇಳಿ ಕಾರ್ಯಕ್ರಮದ ದಾಖಲೆಯ 3150 ಸಂಚಿಕೆಗಳನ್ನು ಯಾವುದೇ ಪ್ರಾಯೋಜಕತ್ವವಿಲ್ಲದೆ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

that antha heli
that antha heli

ಪ್ರಶಸ್ತಿಗಳು ಮತ್ತು ಮನ್ನಣೆ

೬) ತಮ್ಮ “ಏಳು ಸುತ್ತಿನ ಕೋಟೆಯ ಎಂಟು ಕೋಟಿ ಭಂಟರು” ಎಂಬ ಕೃತಿಗೆ (2003 ) 2014 ರ ಡಾ.ಪಿ.ಎಸ್. ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಈ ಕೃತಿಯು ಏಡ್ಸ್ ಹಾಗು ಇತರ ಸ್ವಯಂ ನಿರೋಧಕ ಅಸ್ವಸ್ಥತೆಗಳ ರೋಗನಿರೋಧಕ ಶಕ್ತಿಗಳನ್ನು ಕುರಿತು ತಿಳಿಸುತ್ತವೆ.

೭) ವೈಜ್ಞಾನಿಕ ಸಾಹಿತ್ಯದಲ್ಲಿ ಸೋಮೇಶ್ವರ್ ಅವರು ಸತತ (2001 ಮತ್ತು 2014 ) ಎರೆಡು ಬಾರಿ ಅಕಾಡಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

೮) 2013 ರಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ “ಕನ್ನಡದ ಉತ್ತಮ ವಿಜ್ಞಾನ ಬರಹಗಾರ” ಎಂಬ ಪ್ರಶಸ್ತಿಯನ್ನು ತಮ್ಮ “ಜ್ಞಾನೇಂದ್ರಿಯಗಳು ಮತ್ತು ನಮ್ಮ ಮೊದಲ ವಿಸರ್ಜನಾಂಗಗಳು” ಕೃತಿಗೆ ಪಡೆದುಕೊಂಡಿದ್ದಾರೆ.

ಲಿಮ್ಕಾ ಬುಕ್ ಆಫ್ ರೆಕಾರ್ಡ್

೯) ಜೂನ್ 30 , 2015 ರಂದು ತಮ್ಮ ನಿರೂಪಣೆಯ ಥಟ್ ಅಂತ ಹೇಳಿ ಕಾರ್ಯಕ್ರಮವು 2,757 ಸಂಚಿಕೆಗಳನ್ನು ಪೂರೈಸುವ ಮೂಲಕ ದಾಖಲೆಯನ್ನು ಸೃಷ್ಟಿಸಿತು.

೧೦) ಆಶ್ಚರ್ಯಕರ ಸಂಗತಿಯೇನೆಂದರೆ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ 8127 ಕ್ಕು ಹೆಚ್ಚಿನ ಮಂದಿ ಸ್ಪರ್ದಿಗಳಾಗಿ ಬಾಗವಹಿಸಿದ್ದೂ 37084 ಪ್ರಶ್ನೆಗಳನ್ನು ಎದುರಿಸಿದ್ದಾರೆ. ಈ ಕಾರ್ಯಕ್ರಮದ ಮತ್ತೊಂದು ವಿಶೇಷವೇನೆಂದರೆ ಸರಿಯಾದ ಉತ್ತರ ಕೊಟ್ಟ ಸ್ಪರ್ದಿಗಳಿಗೆ ಪ್ರಶಂಸನಾತ್ಮಕವಾಗಿ ಹೊಸ ಪುಸ್ತಕಗಳನ್ನು ನೀಡುತ್ತಾ ಬಂದಿರುವುದು, ಇಲ್ಲಿಯ ವರೆಗೂ ಗಣತಿಗೆ ಸಿಕ್ಕಂತೆ 49000 ಕ್ಕು ಹೆಚ್ಚಿನ ಪುಸ್ತಕಗಳು ಹಂಚಿಕೆಯಾಗಿವೆಯಂತೆ.

ಇವು ಡಾ.ನಾ. ಸೋಮೇಶ್ವರ್ ಮತ್ತು ಥಟ್ ಅಂತ ಹೇಳಿಗೆ ಸಂಬಂದಿಸಿದ ಕೆಲವು ಆಸಕ್ತಿದಾಯಕ ವಿಚಾರಗಳಾಗಿವೆ. ನಿಮಗೂ ಈ ಸಂಬಂಧ ಏನಾದರೂ ವಿಚಾರಗಳು ತಿಳಿದಿದ್ದಲ್ಲಿ ಕಾಮೆಂಟ್ ನಲ್ಲಿ ತಿಳಿಸಿ.

Like and follow MetroSaga on Facebook | Instagram |

You can also Subscribe to MetroSaga for newsletters

LEAVE A REPLY

Please enter your comment!
Please enter your name here