ರೇಖಾದಾಸ್ ಗೆ ಡಾಕ್ಟರೇಟ್ ನೀಡಿ ಗೌರವಿಸಿದ ತಮಿಳು ವಿಶ್ವವಿದ್ಯಾಲಯ

0
616

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕಲಾವಿದರು ಚಿಕ್ಕ ಹಾಗೂ ಚೊಕ್ಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪರದೆ ಮೇಲೆ ಸ್ವಲ್ಪ ಹೊತ್ತು ಕಾಣಿಸಿಕೊಂಡಿದ್ದರು, ಇವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಇಂತಹುದೇ ಒಂದು ಸಾಲಿನಲ್ಲಿ ರೇಖಾ ದಾಸ್ ಅವರ ಹೆಸರು ಸೇರ್ಪಡೆ ಆಗುತ್ತದೆ. ಇವರು ಆರು ನೂರಕ್ಕು ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯ ನಟನಾದ ಟೆನ್ನಿಸ್ ಕೃಷ್ಣ ಅವರ ಜೊತೆ ನೂರು ಸಿನೆಮಾಗಳಲ್ಲಿ ಅಭಿನಯುಸಿದ್ದಾರೆ. ಪೋಷಕ ನಟಿಯ ಪಾತ್ರ ಮತ್ತು ಹಾಸ್ಯಮಯವಾದ ಪಾತ್ರಗಳನ್ನು ಇವರು ಚಿತ್ರದಲ್ಲಿ ಮಾಡುತ್ತಿದ್ದರು. ಇವರು ಶ್ವೇತಾಗ್ನಿ, ಶಾಂತಿ ಕ್ರಾಂತಿ, ಹೂವು ಹಣ್ಣು ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಡಾಕ್ಟರೇಟ್ ನೀಡಿ ಗೌರವಿಸಿ ಸನ್ಮಾನಿಸಿದ್ದಾರೆ

ಈಗ ರೇಖಾ ದಾಸ್ ಅವರಿಗೆ ತಮಿಳು ವಿಶ್ವವಿದ್ಯಾಲಯದವರು ಡಾಕ್ಟರೇಟ್ ನೀಡಿ ಗೌರವಿಸಿ ಸನ್ಮಾನಿಸಿದ್ದಾರೆ. ಸತತ ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಇವರು ತೊಡಗಿಸಿಕೊಂಡಿದ್ದಾರೆ, ಇದನ್ನು ಗುರುತಿಸಿ ಈ ಗೌರವಾನ್ವಿತ ಬಿರುದನ್ನು ನೀಡಿದ್ದಾರೆ. ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರನ್ನು ರೇಖ ದಾಸ್ ಅವರು ವಿವಾಹವಾಗಿದ್ದು, ಕಾರಣಾಂತರಗಳಿಂದ ವಿಚ್ಛೇದನ ತೆಗೆದುಕೊಂಡು ಬೇರೆ ಬೇರೆ ಆಗಿದ್ದಾರೆ. ಶ್ರಾವ್ಯ ರಾವ್ ಇವರ ಮಗಳ ಹೆಸರು. ಇವರು ಸಹ ಧಾರವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕಷ್ಟ ಪಟ್ಟು ಕನ್ನಡ ಭಾಷೆಯನ್ನು ಕಲಿತು ಸಿನಿಮಾ, ನಾಟಕ, ಧಾರವಾಹಿಗಳಲ್ಲಿ ನಟಿಸಿದ್ದಾರೆ

ರೇಖಾ ದಾಸ್ ಅವರು ಮೂಲತಃ ನೇಪಾಳ ದೇಶದವರು,ಈಗ ಕರ್ನಾಟಕದಲ್ಲೆ ವಾಸವಾಗಿದ್ದಾರೆ. ಕನ್ನಡ ಭಾಷೆ ಮೊದಲು ಇವರಿಗೆ ಬರುತ್ತಿರಲಿಲ್ಲ. ಕಷ್ಟ ಪಟ್ಟು ಕನ್ನಡ ಭಾಷೆಯನ್ನು ಕಲಿತು ಸಿನಿಮಾ, ನಾಟಕ, ಧಾರವಾಹಿಗಳಲ್ಲಿ ನಟಿಸಿದ್ದಾರೆ. 14 ನೇ ವಯಸ್ಸಿನಲ್ಲೇ ಇವರು ನಟನೆ ಮಾಡಲು ಶುರು ಮಾಡುತ್ತಾರೆ. ಅನೇಕ ಚಿತ್ರಗಳಲ್ಲಿ ಬಾಲ ನಟಿಯಾಗಿಯು, ಬಣ್ಣ ಹಚ್ಚಿದ್ದಾರೆ. ಗೋಪಿ ಕೃಷ್ಣ, ಕರ್ಪೂರದ ಗೊಂಬೆ, ಅಮ್ಮವ್ರ ಗಂಡ, ಮಾಂಗಲ್ಯಮ್ ತಂತು ನಾನೇನಾ, ಫ್ರೆಂಡ್ಸ್, ಇನ್ನು ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ವರ್ಲ್ಡ್ ತಮಿಳು ಕ್ಲಾಸಿಕ್ ಯುನಿವರ್ಸಿಟಿ ಅವರು ಡಾಕ್ಟರೇಟ್ ಕೊಟ್ಟು ಗೌರವಿಸಿದ್ದಾರೆ.

LEAVE A REPLY

Please enter your comment!
Please enter your name here