ಬಂಧನ ಚಿತ್ರದ ಕುರಿತು ರಾಜೇಂದ್ರ ಸಿಂಗ್ ಬಾಬು ಮಾತನಾಡಿದ್ದಾದ್ರೂ ಏನು?

0
700

ಕನ್ನಡ ಸಿನಿ ಪ್ರೇಕ್ಷಕರು ಬಂಧನ ಚಿತ್ರ ಮರೆಯಲು ಸಾಧ್ಯವೇ ಇಲ್ಲ. ವಿಷ್ಣುವರ್ಧನ್ ಮತ್ತು ಸುಹಾಸಿನಿ ಮುಖ್ಯ ಭೂಮಿಕೆಯಲ್ಲಿ ಈ ಚಿತ್ರದಲ್ಲಿ ನಟಿಸಿದ್ದರು. ರಾಜೇಂದ್ರ ಸಿಂಗ್ ಬಾಬು ನಿದೇಶನದಲ್ಲಿ ಈ ಚಿತ್ರ ಮೂಡಿ ಬಂದಿತ್ತು. ಯಶಸ್ವಿ ಪ್ರೇಮ ಕಥೆಗಳ ಚಲನ ಚಿತ್ರಗಳಲ್ಲಿ ಈ ಚಿತ್ರವು ಕೂಡ ಸೇರ್ಪಡೆಯಾಗುತ್ತದೆ. ಡಾಕ್ಟರ್ ಪಾತ್ರದಲ್ಲಿ ವಿಷ್ಣು ನಟಿಸಿದ್ದು, ಬಹಳ ಸೊಗಸಾಗಿ, ನೈಜ್ಯವಾದ ಅಭಿನಯವನ್ನು ಮಾಡಿದ್ದರು. ಸಂಪೂರ್ಣವಾಗಿ ಪ್ರೇಮ ಕಥೆಯ ಚಿತ್ರ ಇದಾಗಿತ್ತು. ಕನ್ನಡ ಚಿತ್ರರಂಗಕ್ಕೆ ಹಲವಾರು ಅದ್ಭುತವಾದ ಸಿನಿಮಾಗಳನ್ನು ನಿರ್ದೇಶಿಸಿದ ರಾಜೇಂದ್ರ ಸಿಂಗ್ ಬಾಬು ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿದ್ದರು. ಕಾರ್ಯಕ್ರಮದಲ್ಲಿ ಬಂಧನ ಚಿತ್ರದ ಕುರಿತು ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಪ್ರೀತಿಯಿಂದ ತಾವು ಪಡೆದುಕೊಂಡಿದ್ದ ಹಕ್ಕನ್ನು ಬಾಬುಗೆ ಕೊಟ್ಟಿದ್ದರಂತೆ

ಸುಹಾಸಿನಿಯವರ ಅದೃಷ್ಟವನ್ನೇ ಈ ಚಿತ್ರ ಬದಲಾಯಿಸಿತ್ತು. ಚಿತ್ರ ಹೇಗೆ ತಯಾರಾಯಿತು, ಮೊದಲು ಚಿತ್ರಕ್ಕೆ ಯಾವ ನಾಯಕರು ಆಯ್ಕೆ ಆಗಿದ್ದರು, ಕೊನೆಗೆ ಹೇಗೆ ವಿಷ್ಣು ಪಾಲಾಯಿತು ಇಂತಹ ಹತ್ತು ಹಲವಾರು ಸಂಗತಿಗಳನ್ನು ರಾಜೇಂದ್ರ ಸಿಂಗ್ ಬಾಬು ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದಾರೆ. ಸುಹಾಸಿನಿ ವಿಷ್ಣು ಅವರ ಕಪಾಳಕ್ಕೆ ಹೊಡೆದಿರವುದನ್ನು ರಾಜೇಂದ್ರ ಸಿಂಗ್ ಬಾಬು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಒಂದು ಪುಸ್ತಕ ಆಧಾರಿತವಾದ ಕಥೆಯೆ ಬಂಧನ ಚಿತ್ರವಾಗಿದೆ. ಆ ಪುಸ್ತಕ ಕಥೆಯ ಹಕ್ಕನ್ನು ಮೊದಲು ಕಲ್ಪನಾ ಅವರು ಪಡೆದುಕೊಂಡಿದ್ದರು. ನಂತರ ಆ ಕಥೆಯನ್ನಿಟ್ಟುಕೊಂಡು ಬಾಬು ಸಿನಿಮಾ ಮಾಡುತ್ತೇನೆ ಎಂದು ಹೇಳಿದಾಗ, ಆಗ ಪ್ರೀತಿಯಿಂದ ತಾವು ಪಡೆದುಕೊಂಡಿದ್ದ ಹಕ್ಕನ್ನು ಬಾಬುಗೆ ಕೊಟ್ಟಿದ್ದರಂತೆ.

ಸುಹಾಸಿನಿ ಇದನ್ನು ನಿರಾಕರಿಸಿದರಂತೆ

ಅನಂತನಾಗ್ ಅವರನ್ನು ಹಾಕಿಕೊಂಡು ಬಂಧನ ಸಿನಿಮಾ ಮಾಡಬೇಕೆನ್ನುವ ಸಲಹೆಗಳು ರಾಜೇಂದ್ರ ಸಿಂಗ್ ಬಾಬು ಅವರಿಗೆ ಬಂದಿದ್ದವಂತೆ. ಆದರೆ ಇವರಿಗೆ ಅಂಬರೀಷ್ ಅಥವಾ ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಬೇಕೆನ್ನುವ ಮನಸ್ಸಿತ್ತು. ಸಿನಿಮಾ ಕಥೆ ಕೇಳಿದ ವಿಷ್ಣು ಈ ಪಾತ್ರವನ್ನು ನಾನು ಹೇಗೆ ಮಾಡಲಿ ಎಂದು ಹೇಳಿದ್ದರಂತೆ. ಇದೆ ಸಮಯದಲ್ಲಿ ಇವರ ಸಾಹಸ ಸಿಂಹ ಚಿತ್ರ ಬಿಡುಗಡೆ ಆಗಿತ್ತು. ಮೃದು ವ್ಯಕ್ತಿತ್ವವಿರುವ ಹುಡುಗನ ಪಾತ್ರ ಪ್ರೇಕ್ಷಕರು ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ ಎನ್ನುವ ಅನುಮಾನ ವಿಷ್ಣು ಅವರಿಗೆ ಇತ್ತು. ಚಿತ್ರದ ಮೊದಲ ಶಾಟ್ ಸುಹಾಸಿನಿ ವಿಷ್ಣು ಕಪಾಳಕ್ಕೆ ಹೊಡೆಯುವುದು. ಇದನ್ನು ಕ್ಲಾಪ್ ಮಾಡಿರುವವರು ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್. ಸುಹಾಸಿನಿ ಇದನ್ನು ನಿರಾಕರಿಸಿದರಂತೆ ಕೇವಲ ಇದು ಒಂದು ಚಿತ್ರದ ಸನ್ನಿವೇಶ ಎಂದು ಮನವೊಲಿಸಿದ ನಂತರ ಶಾಟ್ ಅನ್ನು ಒಪ್ಪಿಕೊಂಡಿದ್ದರು.

ಬಂಧನ ಇಲ್ಲದೆ ಸುಹಾಸಿನಿ ಇಲ್ಲ

ನಾಯಕಿಯ ಪಾತ್ರಕ್ಕೆ ಹುಡುಕಾಟದಲ್ಲಿದಾಗ, ವಿಜಯ್ ಲಕ್ಷ್ಮಿ ಸಿಂಗ್ ಜೊತೆಗೆ ಒಮ್ಮೆ ಸುಹಾಸಿನಿ ಅವರನ್ನು ಕಂಡು, ಈ ಹುಡುಗಿ ನಂದಿನಿ ಪಾತ್ರಕ್ಕೆ ತಕ್ಕನಾಗಿದ್ದಾಳೆ ಎಂದು ನಿರ್ಧರಿಸಿ ಸುಹಾಸಿನಿ ಅವರಿಗೆ ಚಿತ್ರದ ಕಥೆ ಹೇಳಿದ್ದರು. ಇದೆ ವೇಳೆಯಲ್ಲಿ ಸುಹಾಸಿನಿ ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾವನ್ನು ಮಾಡುತ್ತಿದ್ದರು. ಚಿತ್ರದ ಚಿತ್ರೀಕರಣ ಮುಗಿದಾಗ ಚಿತ್ರದ ರೀಲ್ 42 ಸಾವಿರ ಅಡಿ ಇತ್ತಂತೆ. ಕೊನೆಗೆ ರೀಲ್ 42 ಸಾವಿರದಿಂದ 14 ಸಾವಿರವರೆಗು ತರುವುದಕ್ಕೆ ಹರ ಸಾಹಸ ಪಟ್ಟಿದ್ದರಂತೆ.

ಬಂಧನ ಇಲ್ಲದೆ ಸುಹಾಸಿನಿ ಇಲ್ಲ, ರಾಜೇಂದ್ರ ಸಿಂಗ್ ಬಾಬು ಇಲ್ಲದಿದ್ದರೆ, ಸುಹಾಸಿನಿ ಇರುತ್ತಿರಲಿಲ್ಲ. ಬಂಧನ ನಂತರ ನಾನು ಅವರ ಜೊತೆಗೆ ಮುತ್ತಿನ ಹಾರ ಸಿನಿಮಾವನ್ನು ಮಾಡಿದೆ. ಎಂತಹ ಸುಂದರವಾದ ಸಿನಿಮಾ ಅದು, ಇಂತಹ ಪ್ರತಿಭಾವಂತ ನಿರ್ದೇಶಕರ ಜೊತೆಗೆ ಕೆಲಸ ಮಾಡಿರುವುದು ನನ್ನ ಅದೃಷ್ಟ ಎಂದು ಕಾರ್ಯಕ್ರಮದಲ್ಲಿ ಸುಹಾಸಿನಿ ಅವರು ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here