ಭಾರತೀಯ ಸೈನ್ಯದ ಲಾಂಛನವಿರುವ ಗ್ಲೌಸ್ ಗಳನ್ನು ಧರಿಸಿದ ಮಾಜಿ ನಾಯಕ ಎಮ್‌ಎಸ್ ಧೋನಿ

0
791
dhoni

ಐ‌ಪಿ‌ಎಲ್ ಚುಟುಕು ಕ್ರೀಡೆ ಮುಗಿದಿದ್ದು, ಈಗ ಭಾರತೀಯರ ಗಮನ ವಿಶ್ವ ಕಪ್ ಮೇಲೆ ಇದೆ. ವಿಶ್ವ ಕಪ್ ಪಂದ್ಯಾವಳಿಗಳು ಈಗಾಗಲೇ ಆರಂಭವಾಗಿದ್ದು, ಅನೇಕ ದೇಶಗಳ ನಡುವೆ ಜಿದ್ದಾ ಜಿದ್ದಿಯ ಪೈಪೋಟಿಯ ಆಟವು ನಡೆಯುತ್ತಿದೆ. ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಭಾರತ ದೇಶದ ಆಟಗಾರರು ಆಡುತ್ತಿದ್ದಾರೆ. ಧೋನಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ ನಂತರ, ವಿರಾಟ್ ಕೊಹ್ಲಿ ಅವರು ನಾಯಕತ್ವದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಆದರು ನಾಯಕತ್ವದಲ್ಲಿ ಧೋನಿಗೆ ಬಹಳ ಅನುಭವ ಇರುವ ಕಾರಣದಿಂದಾಗಿ ಆಗಾಗ ಆಟದ ಮಧ್ಯದಲ್ಲಿ ವಿರಾಟ್ ಅವರು ಧೋನಿ ಕೊಡುವ ಸಲಹೆಯನ್ನು ಸ್ವೀಕರಿಸುತ್ತಾರೆ. ಒಮ್ಮೊಮ್ಮೆ ಧೋನಿಗೆ ಫೀಲ್ಡ್ ಸೆಟ್ ಮಾಡುವ ಸ್ವಾತಂತ್ರವನ್ನು ವಿರಾಟ್ ಅವರು ನೀಡಿದ್ದಾರೆ.

ನಿನ್ನೆ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಿತ್ತು

ಮಹೇಂದ್ರ ಸಿಂಗ್ ಧೋನಿ ಅವರು 2011 ರಲ್ಲಿ ಭಾರತಕ್ಕೆ ವಿಶ್ವ ಕಪ್ ಅನ್ನು ತಂದುಕೊಟ್ಟಿದ್ದಾರೆ. 2007 ರಲ್ಲಿ ನಡೆದ ಟ್ವೆಂಟಿ ಟ್ವೆಂಟಿ ವಿಶ್ವ ಕಪ್ ಕೂಡ ಧೋನಿ ನಾಯಕತ್ವದಲ್ಲಿ ಭಾರತದ ಪಾಲಾಗಿತ್ತು. ಹೀಗೆ ಧೋನಿ ನಾಯಕರಾದ ನಂತರ ಹತ್ತು ಹಲವಾರು ಕಪ್ ಗಳು ಭಾರತ ದೇಶ ಬಾಚಿಕೊಂಡಿತ್ತು. ನಿನ್ನೆ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಿತ್ತು. ಮೊದಲು ದಕ್ಷಿಣ ಆಫ್ರಿಕಾ ಬ್ಯಾಟ್ ಮಾಡುತ್ತಾರೆ, 218 ರನ್ಸ್ ಗಳನ್ನು ಹೊಡೆಯುವ ಮೂಲಕ 219 ರನ್ಸ್ ಗಳ ಟಾರ್ಗೆಟ್ ಭಾರತ ದೇಶಕ್ಕೆ ನೀಡುತ್ತಾರೆ.

dhoni

ಗ್ಲೌಸ್ ಗಳಲ್ಲಿ ಭಾರತೀಯ ಸೇನಾ ಲಾಂಛನವಿತ್ತು

219 ರನ್ಸ್ ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಮೊದಲನೆದಾಗಿ ಧವಾನ್ ಅವರ ವಿಕೆಟ್ ಕಳೆದುಕೊಳ್ಳುತ್ತಾರೆ. ರೋಹಿತ್ ಶರ್ಮ ಭರ್ಜರಿಯಾದ ಶತಕ ಸಿಡಿಸುವ ಮೂಲಕ ಭಾರತ ದೇಶಕ್ಕೆ ಆಪತ್ ಬಾಂಧವರಾಗಿದ್ದಾರೆ. ಕೊನೆಗೂ 219 ರನ್ಸ್ ಗಳನ್ನು ಹೊಡೆದು ವಿಶ್ವ ಕಪ್ ನ ಮೊದಲ ಪಂದ್ಯದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಅಂಕ ಪಟ್ಟಿಯಲ್ಲಿ 2 ಅಂಕಗಳನ್ನು ಪಡೆದುಕೊಂಡಿದ್ದಾರೆ. ಆದರೆ ಆಟ ಆಡುವ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಧರಿಸಿರುವ ಗ್ಲೌಸ್ ಗಳನ್ನು ನೀವು ಗಮನಿಸಿದ್ದೀರಾ. ಧೋನಿ ಅವರು ತೊಟ್ಟ ಗ್ಲೌಸ್ ಗಳಲ್ಲಿ ಭಾರತೀಯ ಸೇನಾ ಲಾಂಛನವಿತ್ತು. ಧೋನಿ ಅವರಿಗೆ ಸೈನಿಕರ ಮೇಲೆ ಅಪಾರವಾದ ಪ್ರೀತಿ, ಅಭಿಮಾನ.

ಸಾಮಾಜಿಕ ಜಾಲ ತಾಣಗಳಲ್ಲಿ ಇದು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ

ಧೋನಿ ಅವರು ಯಾವ ಬ್ಯಾಟ್ಸ್ಮಾನ್ ಗಳನ್ನು ಗೆರೆ ದಾಟುವುದಕ್ಕೆ ಸುಲಭವಾಗಿ ಬಿಡುವುದಿಲ್ಲ. ಮಿಂಚಿನ ವೇಗದಂತೆ ಧೋನಿ ಸ್ಟಂಪ್ ಔಟ್ ಅನ್ನು ಮಾಡುತ್ತಾರೆ. ಸ್ಟಂಪ್ ಮಾಡುವುದರಲ್ಲಿ ಮಹೇಂದ್ರ ಸಿಂಗ್ ಧೋನಿ ನಿಸ್ಸೀಮ ಎಂದು ಅನೇಕ ಬಾರಿ ನಿರೂಪಿಸಿದ್ದಾರೆ. ಧೋನಿ ಅವರು ಮಾಡುವ ಸ್ಟಂಪ್ ಔಟ್ ಇಂದ ಫೆಹ್ಲುಕ್ತವೋ ಅವರ ವಿಕೆಟ್ ಪತನವಾಗುತ್ತದೆ. ಸ್ಟಂಪ್ ಮಾಡುವ ಸಮಯದಲ್ಲಿ ಧೋನಿ ಅವರ ಗ್ಲೌಸ್ ಗಳು ಅಭಿಮಾನಿಗಳ ಕಣ್ಣಿಗೆ ಬೀಳುತ್ತದೆ. ಧೋನಿ ಅವರು ಧರಿಸಿರುವ ಗ್ಲೌಸ್ ಗಳಲ್ಲಿ ಸೈನ್ಯದ ಗುರುತು ಇರುವುದರಿಂದ, ಸಾಮಾಜಿಕ ಜಾಲ ತಾಣಗಳಲ್ಲಿ ಇದು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.

ಸೇನಾ ನೆಲೆಯಲ್ಲಿ ಸೈನಿಕರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ವಿಕೆಟ್ ಕೀಪಿಂಗ್ ಗ್ಲೌಸ್ ನಲ್ಲಿ ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟನ್ ಬಾಣದ ಗುರುತು ಇರುವ ಚಿತ್ರವನ್ನು ಕಂಡು, ಧೋನಿ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶಂಸೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಸೈನಿಕರ ಬಗ್ಗೆ ಧೋನಿ ಅವರಿಗೆ ಗೌರವ ಇದೆ. ಇವರು 2011 ರಲ್ಲಿ ಪ್ಯಾರಾಚೂಟ್ ಸಮವಸ್ತ್ರವನ್ನು ತೊಟ್ಟು, ಸೇನಾ ನೆಲೆಯಲ್ಲಿ ಸೈನಿಕರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2015 ರಲ್ಲು ಸಹ ಪ್ಯಾರಾ ಬಿಗ್ರೇಡ್ ನಲ್ಲಿ ತರಬೇತಿಯನ್ನು ಧೋನಿ ಅವರು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here