ಐ‌ಎಮ್‌ಡಿ‌ಬಿ ಲಿಸ್ಟ್ ನಲ್ಲಿ ಕನ್ನಡ ಸಿನಿಮಾದೆ ಹವಾ

0
518
devaki

ಇತ್ತೀಚಿನ ದಿನಗಳಲ್ಲಿ ಕನ್ನಡ ಚಲನಚಿತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡಿ ಟ್ರೆಂಡ್ ಗೆ ಕಾರಣವಾಗುತ್ತಿವೆ. ವಿಭಿನ್ನವಾದ ಹಾಗು ಹೊಸತನದಿಂದ ಚಿತ್ರಗಳು ಮೂಡಿ ಬರುತ್ತಿವೆ. ಪ್ರಿಯಾಂಕ ಉಪೇಂದ್ರ ಅವರು ಮಮ್ಮಿ ಅನ್ನೋ ಹಾರರ್ ಚಿತ್ರವನ್ನು ಮಾಡಿದ್ದರು, ಈಗ ಮತ್ತೊಮ್ಮೆ ದೇವಕಿ ಆಗಿ ನಿಮ್ಮ ಮುಂದೆ ಬರಲಿದ್ದಾರೆ. ದೇವಕಿ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಈಗ ಚಿತ್ರ ಬಿಡುಗಡೆ ಆಗಲು ಸಿದ್ದವಾಗಿದೆ. ಈ ಸಿನಿಮಾದ ಇನ್ನೊಂದು ವಿಶೇಷತೆ ಏನೆಂದರೆ ಉಪೇಂದ್ರ ಅವರ ಮಗಳು ಸಹ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಒಂದು ಥ್ರಿಲ್ಲಿಂಗ್ ಸಿನಿಮವಾಗಿದ್ದು, ಮಮ್ಮಿ ಚಿತ್ರದ ನಿರ್ದೇಶಕ ಲೋಹಿತ್ ಪಿ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಬಿಡುಗಡೆ ಆಗುವ ಮುನ್ನವೆ ನಿರೂಪಿಸಿದೆ

ಟೀಸರ್ ಮೂಲಕವೇ ಸಿನಿರಸಿಕರಿಗೆ ಕುತೂಹಲ ಹುಟ್ಟು ಹಾಕಿದೆ. ಮಹಿಳಾ ಪ್ರಧಾನವಾದ ಚಿತ್ರ ಇದಾಗಿದ್ದರು, ಬೇರೆ ಯಾವ ಸಿನಿಮಾಗಿಂತಾನು ಕಡಿಮೆ ಇಲ್ಲ ಎಂದು ಬಿಡುಗಡೆ ಆಗುವ ಮುನ್ನವೆ ನಿರೂಪಿಸಿದೆ. ಸ್ಟಾರ್ಸ್ ಸ್ಪೋರ್ಟ್ಸ್ ವಾಹಿನಿ ಅಲ್ಲಿ ದೇವಕಿ ಸಿನಿಮಾದ ಮೇಕಿಂಗ್ ವೀಡಿಯೋ ಪ್ರಸಾರವಾಗಿತ್ತು. ಬೇರೆ ಯಾವ ಸಿನಿಮಾದ ಮೇಕಿಂಗ್ ವೀಡಿಯೋ ಸ್ಟಾರ್ ಸ್ಪೋರ್ಟ್ಸ್ ಅಲ್ಲಿ ಇಲ್ಲಿಯವರೆಗು ಪ್ರಸಾರವಾಗಿರಲಿಲ್ಲ, ಇದೆ ಮೊದಲ ಸಿನಿಮಾ. ಹೀಗೆ ಒಂದೊಂದು ಹಂತದಲ್ಲಿ ದೇವಕಿ ಸಿನಿಮಾ ಸದ್ದು ಮಾಡುತ್ತಲೇ ಬಂದಿದೆ.

devaki

ದೇವಕಿ ಚಿತ್ರ 2ನೇ ಸ್ಥಾನವನ್ನು ಪಡೆದುಕೊಂಡಿದೆ

ಘಟಾನುಘಟಿಗಳ ಸಿನಿಮಾಗಳ ಮುಂದೆ ದೇವಕಿ ಚಿತ್ರ 2ನೇ ಸ್ಥಾನವನ್ನು ಪಡೆದುಕೊಂಡಿದೆ. ಐ‌ಎಮ್‌ಡಿ‌ಬಿ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಅವರ ಚಿತ್ರ ಭಾರತ್ 4 ನೇ ಸ್ಥಾನದಲ್ಲಿದ್ದರೆ, ಪಿ‌ಎಮ್ ನರೇಂದ್ರ ಮೋದಿ 5 ನೇ ಸ್ಥಾನದಲ್ಲಿದೆ. ಇನ್ನು ಯೆ ಹೆ ಇಂಡಿಯಾ ಚಿತ್ರ ಅಗ್ರ ಸ್ಥಾನದಲ್ಲಿದೆ. ಹಿಂದಿ ಚಿತ್ರಗಳ ಲಿಸ್ಟ್ ಅಲ್ಲಿ ಕನ್ನಡ ಚಿತ್ರ ಎರಡನೆ ಸ್ಥಾನ ಪಡೆದುಕೊಂಡಿರುವುದನ್ನು ನೋಡುವುದೆ ಒಂದು ಖುಷಿ. ಕನ್ನಡ ಸಿನಿಪ್ರಿಯರಿಗೆ ಇದು  ಸಿಹಿ ಸುದ್ದಿ ಆಗಿದೆ. ಐ‌ಎಮ್‌ಡಿ‌ಬಿ ಅಲ್ಲಿ ಈಗ ಕನ್ನಡ ಚಿತ್ರದ್ದೆ ಹವಾ.

devaki imdb

ಕೊನೆ ಹಂತದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ

ದೇವಕಿ ಸಿನಿಮಾ ಜೂನ್ ತಿಂಗಳಿನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರ ತಂಡದವರು ಕೊನೆ ಹಂತದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕ ಉಪೇಂದ್ರ ಅವರದ್ದು ಮುಖ್ಯ ಪಾತ್ರವಾಗಿದ್ದು, ಇವರ ಮಗಳು ಐಶ್ವರ್ಯ ಉಪೇಂದ್ರ ಅವರು ಸಹ ಈ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ವೀಕ್ಷಕರ ಹೆಚ್ಚಿನ ಮಟ್ಟದ ನಿರೀಕ್ಷೆಗೆ ಈ ಸಿನಿಮಾ ಕಾರಣವಾಗಿದೆ.

LEAVE A REPLY

Please enter your comment!
Please enter your name here