ದರ್ಶನ್ ಕುರಿತು, ಜಗ್ಗೇಶ್ ಅಂದು ಹೇಳಿದ್ದ ಭವಿಷ್ಯ ನಿಜವಾಯ್ತಾ? ಧನ್ಯವಾದ ತಿಳಿಸಿದ ದಚ್ಚು

0
798

ದರ್ಶನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ದರ್ಶನ್ ಅಂದ್ರೆ ಎಲ್ಲರಿಗು ಇಷ್ಟ. ಹೌದು. ಸ್ಯಾಂಡಲ್ ವುಡ್ ನಲ್ಲಿ ಡಿ ಬಾಸ್ ಎಂದೇ ಕರೆಸಿಕೊಳ್ಳುವ ದಚ್ಚು ಎಣಿಕೆ ಮಾಡಲಾಗದಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೆ ದರ್ಶನ್ ಗೆ ಭಾರತದಲ್ಲಿ ಮಾತ್ರವಲ್ಲ, ಹೊರ ದೇಶದಲ್ಲೂ ಅಭಿಮಾನಿಗಳಿದ್ದಾರೆ. ಯಾಕಂದ್ರೆ ಅವರ ನಟನೆ, ಹಾಗು ಅವರ ಸಹಾಯಕ್ಕೆ ಎಲ್ಲರು ಅವರನ್ನು ಬಹಳಷ್ಟು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಒಬ್ಬ ನಾಯಕನನ್ನ, ಅಭಿಮಾನಿಗಳು ಇಷ್ಟ ಪಡೋದು ಕಾಮನ್. ಆದ್ರೆ ಒಬ್ಬ ನಾಯಕನನ್ನ, ಮತ್ತೊಬ್ಬ ನಾಯಕ ಇಷ್ಟ ಪಡೋದು ಸ್ವಲ್ಪ ಕಡಿಮೆ. ಆದ್ರೆ ಈಗ ದರ್ಶನ್ ಅಂದ್ರೆ ನನಗೆ ತುಂಬಾ ಇಷ್ಟ ಎಂದು ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ. ಜೊತೆಗೆ ಆಗಾಗ ದರ್ಶನ್ ಬಗ್ಗೆ ಕೆಲವು ಹೇಳಿಕೆಗಳನ್ನು ನೀಡುತ್ತಿದ್ದರು. ಆದ್ರೆ ಅವರು ಹೇಳಿದ ಹೇಳಿಕೆಗಳಲ್ಲಿ ಒಂದು ಮಾತು ನಿಜವಾಗಿದೆಯಂತೆ. ಹಾಗಾಗಿ ಆ ಮಾತಿಗೆ ದಚ್ಚು, ಜಗ್ಗೇಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದರ್ಶನ್ ಬಗ್ಗೆ ಜಗ್ಗೇಶ್ ಹೇಳಿದ ಮಾತು ನಿಜವಾಯ್ತಾ?

ದರ್ಶನ್ ಸ್ಯಾಂಡಲ್ ವುಡ್ ನ ಸುಲ್ತಾನ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಯಾಕಂದ್ರೆ ತಮ್ಮ ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಹಾಗಾಗಿ ಇದೇ ವಿಚಾರವಾಗಿ ಕುರಿತು ದರ್ಶನ್ ಬಗ್ಗೆ ಒಂದೂವರೆ ವರ್ಷದ ಹಳೆಯ ಸಂದರ್ಶನದಲ್ಲಿ ಒಂದು ಮಾತು ಹೇಳಿದ್ದರಂತೆ. ಆದ್ರೆ ಆ ಮಾತು ಈಗ ನಿಜವಾಗಿದೆಯಂತೆ. ಹೌದು. ದರ್ಶನ್ 100 ಕೋಟಿ ಕ್ಲಬ್ ಗೆ ಒಡೆಯನಾಗುತ್ತಾನೆ ಎಂದು ಜಗ್ಗೇಶ್ ಹೇಳಿದ್ದರಂತೆ. ಹೌದು. ದರ್ಶನ್ ಹಾಕ್ಕೊಂಡು ಕರೆಕ್ಟ್ ಆಗಿ ಸಿನಿಮಾ ಮಾಡಿದ್ರೆ ಕನ್ನಡದಲ್ಲಿ ಸಲ್ಮಾನ್ ಖಾನ್ ರೇಂಜ್ ಗೆ 100 ಕೋಟಿ ಕ್ಲಬ್ ಗೆ ಹೋಗ್ತಾನೆ ಎಂದು ಭವಿಷ್ಯ ನುಡಿದಿದ್ದರು. ಈಗ ಅದೇ ರೀತಿ ಕುರುಕ್ಷೇತ್ರ ಸಿನಿಮಾದಿಂದ ದರ್ಶನ್ 100 ಕೋಟಿ ಕ್ಲಬ್ ಗೆ ಹೋಗುವಂತಾಗುತ್ತಿದೆ ಎಂದು ಹೇಳಿದ್ದಾರೆ. ಜೊತೆಗೆ ನನಗೆ ಅನ್ಯ ರಾಜ್ಯದವರ ಆರ್ಭಟವನ್ನು ನೋಡಿ ಬಹಳಷ್ಟು ಬೇಸರವಾಗುತ್ತಿತ್ತು. ನಮ್ಮ ಹುಡುಗರು ಯಾವಾಗ ಈ ರೀತಿ ಆಗುತ್ತಾರೆ ಎಂದು ಕಾಯುತ್ತಿದೆ. ಆದ್ರೆ ದರ್ಶನ್ ಅದನ್ನು ನಿರೂಪಿಸಿದ್ದಾರೆ. ಹಾಗಾಗಿ ನನಗೆ ದರ್ಶನ್ ಬಗ್ಗೆ ಬಹಳ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಧನ್ಯವಾದ ತಿಳಿಸಿದ ದರ್ಶನ್

ಇನ್ನು ಜಗ್ಗೇಶ್ ಅವರು ದರ್ಶನ್ ಬಗ್ಗೆ ಕುರಿತು ಮಾಡಿರುವ ಟ್ವೀಟ್ ಗೆ ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಹೌದು. ಈಗಾಗಲೇ ಕುರುಕ್ಷೇತ್ರ ಸಿನಿಮಾದ ಭರ್ಜರಿ ಯಶಸ್ಸು ಕಾಣುತ್ತಿರುವ ದರ್ಶನ್ ಗೆ ಎಲ್ಲ ಕಡೆಯಿಂದಲೂ ಮೆಚ್ಚುಗೆ ಮಾತುಗಳು ಹಾಗು ಶುಭಾಶಯಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ಈಗ ಜಗ್ಗೇಶ್ ಅವರು ಹೇಳಿರುವ ,ಮಾತು ಸಹ ನಿಜವಾಗಿರೋದ್ರಿಂದ ದರ್ಶನ್ ಬಹಳಷ್ಟು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಅವರ ಟ್ವೀಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿ, ‘ಧನ್ಯವಾದ ಅಣ್ಣ’ ಎಂದು ಥ್ಯಾಂಕ್ಸ್ ಹೇಳಿದ್ದಾರೆ.

darshan and bahubali

ನಿನ್ನ ಸಿನಿಮಾದಲ್ಲಿ ಹಿರಿಯ ಕಲಾವಿದರಿಗೆ ಅವಕಾಶ ನೀಡು

ದರ್ಶನ್, ಜಗ್ಗೇಶ್ ಅವರಿಗೆ ಧನ್ಯವಾದ ತಿಳಿಸಿದ ನಂತರ ಜಗ್ಗೇಶ್ ಮತ್ತಷ್ಟು ಸಂತಸ ಪಟ್ಟಿದ್ದಾರೆ. ಜೊತೆಗೆ ನೀನು ಸಿನಿಮಾ ರಂಗದಲ್ಲಿ ಇನ್ನು ಬೆಳೆಯುತ್ತೀಯ, ಆ ನಂಬಿಕೆ ನನಗಿದೆ. ಆ ರಾಯರ ದಯೆಯಿಂದ ನಿನಗೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ. ಹೌದು. ಕನ್ನಡಕ್ಕಾಗಿ ಎತ್ತಿದ ಗದೆ ರಾಯರ ದಯೆಯಿಂದ ನಿನ್ನ ಭುಜದಮೇಲೆ ಶಾಶ್ವತವಾಗಿ ಉಳಿಯಲಿ. ಸಾಧ್ಯವಾದಷ್ಟು ಕನ್ನಡದ ಹಳೆ ಕಲಾವಿದರಿಗೆ ನಿನ್ನ ಚಿತ್ರದಲ್ಲಿ ಅವಕಾಶ ಕೊಟ್ಟು ಅವರ ಉದರತುಂಬಿಸುವ ಕಾರ್ಯಮಾಡು. ಯಾಕಂದ್ರೆ ಅನೇಕ ಹಿರಿಯ ನಟರು, ಸಿನಿಮಾದಲ್ಲಿ ಅವಕಾಶ ವಂಚಿತರಾಗಿದ್ದಾರೆ. ಹಾಗಾಗಿ ಅವರಿಗೆ ನಿನ್ನ ಸಹಕಾರ ಬೇಕು ಎಂದು ವಿನಂತಿ ಮಾಡಿದ್ದಾರೆ. ಜೊತೆಗೆ ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು..love you..God bless u ಎಂದಿದ್ದಾರೆ.

ನಿಜಕ್ಕೂ ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಬಹಳ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಎಲ್ಲರು ಹೇಳುತ್ತಿದ್ದಾರೆ. ಅಲ್ಲದೆ ಅವರಿಂದ ಸಹಕಾರವನ್ನು ಸಹ ಕೇಳುತ್ತಿದ್ದಾರೆ. ಒಟ್ಟಿನಲ್ಲಿ ದರ್ಶನ್ ನಮ್ಮ ಕನ್ನಡದ ಹೆಮ್ಮೆಯನ್ನು ದೇಶದೆಲ್ಲೆಡೆ ಸಾರುತ್ತಿರುವುದಕ್ಕೆ ಎಲ್ಲರು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here