ಕುಟುಂಬಸ್ಥರ ಸಮೇತ ಕುರುಕ್ಷೇತ್ರ ಚಿತ್ರವನ್ನು ವೀಕ್ಷಿಸಿದ ಚಾಲೆಂಜಿಂಗ್ ಸ್ಟಾರ್

0
812

ನಾನಿನ್ನು ಕುರುಕ್ಷೇತ್ರ ಸಿನಿಮಾವನ್ನು ನೋಡಿಲ್ಲ ಎಂದು ಡಿ ಬಾಸ್ ಇತ್ತೀಚಿಗಷ್ಟೆ ನಡೆದ ಚಿತ್ರದ ಪ್ರೆಸ್ ಮೀಟ್ ಕಾರ್ಯಕ್ರಮದಲ್ಲಿ ಹೇಳಿದ್ದರು. ಆದರೆ ಈಗ ಸಿನಿಮಾವನ್ನು ನೋಡುವ ಕಾಲ ಒದಗಿ ಬಂದಿದೆ ಅಂತಾ ಕಾಣಿಸುತ್ತದೆ. ಇದೆ ಶುಕ್ರವಾರ ಎಂದರೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಯಾಗುವ ಮುನ್ನವೆ ದರ್ಶನ್ ಪತ್ನಿ ವಿಜಯ್ ಲಕ್ಷ್ಮಿ ಮತ್ತು ಪುತ್ರ ವಿನೀಶ್ ಜೊತೆಗೆ ಕುರುಕ್ಷೇತ್ರ ಚಿತ್ರವನ್ನು ವೀಕ್ಷಿಸಿದ್ದಾರೆ. ಬೆಂಗಳೂರಿನಲ್ಲಿ ಕಾರ್ನಿವಾಲ್ ಸಿನಿಮಾಸ್ ಎನ್ನುವ ಸಂಸ್ಥೆಯವರು ವಿಶೇಷವಾಗಿ ದರ್ಶನ್ ಕುಟುಂಬಕ್ಕಾಗಿ ಪ್ರದರ್ಶನವನ್ನು ಏರ್ಪಡಿಸಿದ್ದರು. ಇದೆ ಸಮಯದಲ್ಲಿ ಚಿತ್ರ ನಿರ್ಮಾಪಕರಾದ ಮುನಿರತ್ನ  ಸಹ ಇದ್ದರು.

ಡಿ ಬಾಸ್ ಫುಲ್ ಖುಷ್

ಡಿ ಬಾಸ್ ಪೌರಾಣಿಕವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಚಿತ್ರದ ಇನ್ನೊಂದು ವಿಶೇಷತೆಗೆ ಕಾರಣವಾಗಿದೆ. ಚಿತ್ರದಲ್ಲಿ ದರ್ಶನ್ ದುರ್ಯೋಧನ ಪಾತ್ರವನ್ನು ನಿಭಾಯಿಸಿದ್ದಾರೆ. ದುರ್ಯೋಧನನ ಪಾತ್ರವನ್ನು ನೋಡಿದ ನಂತರ ದರ್ಶನ್ ಗೆ ಬಹಳ ಖುಷಿಯಾಗಿದೆ ಅಂತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗ ವಿನೀಶ್ ದುರ್ಯೋಧನನ ಪೋಸ್ಟರ್ ಮುಂದೆ ನಿಂತುಕೊಂಡು ಫೋಟೋ ತೆಗೆದುಕೊಂಡಿದ್ದಾನೆ. ಆಗಸ್ಟ್ 9 ರಂದು ದೇಶಾದ್ಯಂತ ಚಿತ್ರ ರಿಲೀಸ್ ಆಗುತ್ತಿದೆ. ಈಗಾಗಲೆ ಆನ್ಲೈನ್ ನಲ್ಲಿ ಬುಕಿಂಗ್ ಶುರುವಾಗಿದ್ದು, ಸಿನಿರಸಿಕರು ತಮ್ಮ ನೆಚ್ಚಿನ ನಟನ ಚಿತ್ರವನ್ನು ನೋಡಲು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಬಾಕ್ಸ್ ಆಫೀಸ್ ಸುಲ್ತಾನ್ ಎಂದು ದರ್ಶನ್ ಅವರನ್ನು ಅಭಿಮಾನಿಗಳು ಕರೆಯುತ್ತಾರೆ. ಕುರುಕ್ಷೇತ್ರ ಬಿಡುಗಡೆಯಾದ ನಂತರ ಗಲ್ಲಾಪೆಟ್ಟಿಗೆ ತುಂಬಿ ತುಳುಕುವುದರಲ್ಲಿ ಸಂಶಯವೆ ಇಲ್ಲ.

ಸದ್ಯಕ್ಕೆ ತೆಲುಗು ಮತ್ತು ಕನ್ನಡ ವರ್ಷನ್ ನ ಕುರುಕ್ಷೇತ್ರ ಬಿಡುಗಡೆಯಾಗುತ್ತಿದೆ

ಅಭಿಮಾನಿಗಳಲ್ಲಿ ನಿರೀಕ್ಷೆಯ ಮಟ್ಟ ಹೆಚ್ಚಾಗಿದ್ದು, ಇನ್ನೇನು ಸಿನಿಮಾ ನೋಡುವುದೊಂದೆ ಬಾಕಿ ಇದೆ. ಸದ್ಯಕ್ಕೆ ತೆಲುಗು ಮತ್ತು ಕನ್ನಡ ವರ್ಷನ್ ನ ಕುರುಕ್ಷೇತ್ರ ಏಕ ಕಾಲಕ್ಕೆ ಬಿಡುಗಡೆಯಾಗುತ್ತಿದೆ. ಇನ್ನಿತರ ಭಾಷೆಗಳಲ್ಲಿ ಒಂದು ವಾರದ ನಂತರ ಬಿಡುಗಡೆಯಾಗುತ್ತದೆ. ಹಿಂದಿ ಭಾಷೆಯ ಕುರುಕ್ಷೇತ್ರ ಕೊಂಚ ತಡವಾಗಿ ಬರಬಹುದೆಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ರಿಲೀಸ್ ಆಗುವ ಒಂದು ದಿನ ಮುಂಚೆ ವಿದೇಶದಲ್ಲಿ ಚಿತ್ರ ತೆರೆ ಕಾಣುತ್ತಿದೆ. ವಿದೇಶದಲ್ಲಿ ನೆಲಸಿರುವ ಭಾರತೀಯರಿಗೆ ಇದು ಒಂದು ಸಂತಸದ ಸುದ್ದಿಯಾಗಿದೆ ಅಂತಾನೆ ಹೇಳಬಹುದಾಗಿದೆ. ಕುರುಕ್ಷೇತ್ರ ಚಿತ್ರದಲ್ಲಿ ಕಲಾವಿದರ ಬಳಗ ವಿಸ್ತಾರವಾಗಿದ್ದು, ಎಲ್ಲಾ ಭಾಷೆಯ ಜನರು ಸಹ ಚಿತ್ರವನ್ನು ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಪಾತ್ರಧಾರಿಗಳ ವಿವರ

ಇಲ್ಲಿಯವರೆಗು ದುರ್ಯೋಧನನಾಗಿ ದರ್ಶನ್, ಅಭಿಮನ್ಯು ಆಗಿ ನಿಖಿಲ್ ಕುರುಕ್ಷೇತ್ರ ಚಿತ್ರದ ಟೀಸರ್ ನಲ್ಲಿ ಕಾಣಿಸಿಕೊಂಡಿದ್ದರು. ಈಗ ಮಿಕ್ಕ ಪಾತ್ರಗಳನ್ನು ಯಾರು ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಅರ್ಜುನನಾಗಿ ಸೋನು ಸೂದ್, ಕೃಷ್ಣನಾಗಿ ರವಿಚಂದ್ರನ್, ಕರ್ಣನಾಗಿ ಅರ್ಜುನ್ ಸರ್ಜಾ, ಶಕುನಿಯಾಗಿ ರವಿ ಶಂಕರ್, ಕುಂತಿಯಾಗಿ ಭಾರತಿ ವಿಷ್ಣುವರ್ಧನ್, ಧರ್ಮರಾಯನಾಗಿ ಶಶಿ ಕುಮಾರ್ ಸೇರಿದಂತೆ ಭೀಷ್ಮನ ಪಾತ್ರಕ್ಕೆ ರೆಬೆಲ್ ಸ್ಟಾರ್ ಅಂಬರೀಷ್ ಅವರು ಬಣ್ಣ ಹಚ್ಚಿದ್ದಾರೆ. ನಾಗಣ್ಣ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮುನಿರತ್ನ ಚಿತ್ರ ನಿರ್ಮಾಣ ಮಾಡಿದ್ದು, ಹರಿಕೃಷ್ಣ ಅವರ ಸಂಗೀತ ಈ ಚಿತ್ರಕ್ಕಿದೆ

LEAVE A REPLY

Please enter your comment!
Please enter your name here