ಪ್ರಚಾರದ ಸಮಯದಲ್ಲಿ ಯಾರಿಗೂ ಜಗ್ಗದ ಹಸು ಡಿ ಬಾಸ್ ಗೆ ಶರಣಾಯ್ತು, ಪ್ರಕೃತಿಯ ಬಗ್ಗೆ ಜಾಗ್ರತೆ ಮೂಡಿಸಿ, ವಿರೋಧ ಪಕ್ಷದವರಿಗೆ ಟಾಂಗ್ ಕೊಟ್ಟ ಚಾಲೆಂಜಿಂಗ್ ಸ್ಟಾರ್

0
798
challenging star

ಮಂಡ್ಯ ಕ್ಷೇತ್ರದಲ್ಲಿ ಸ್ಪರ್ದಿಸುತ್ತಿರುವ ಸುಮಲತಾ ಅವರ ಪರ ಡಿ ಬಾಸ್ ಭರ್ಜರಿ ಆಗಿ ಪ್ರಚಾರ ಮಾಡುತ್ತಿದ್ದಾರೆ, ಊರಿನ ಜನತೆ ಸಹ ದರ್ಶನ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಸ್ವಲ್ಪ ದಿನಗಳ ಬ್ರೇಕ್ ನಂತರ ಮತ್ತೆ ದರ್ಶನ್ ಅವರು ಪ್ರಚಾರಕ್ಕೆಂದು ಕಮ್ ಬ್ಯಾಕ್ ಮಾಡಿದ್ದಾರೆ. ಕೆ‌ಆರ್ ನಗರದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಪ್ರಚಾರದ ವಾಹನಕ್ಕೆ  ಹಸು ಅಡ್ಡ ಗೋಡೆಯಂತೆ ಆಗಮಿಸಿತ್ತು, ದರ್ಶನ್ ಅವರು ಬಂದ ತಕ್ಷಣ ಸುಮ್ಮನೆ ಹೋಗಿ ಬಿಟ್ಟಿತ್ತು, ಇದನ್ನು ವೀಕ್ಷಿಸಿದ ಗ್ರಾಮದ ಜನತೆ ಮೂಖ ವಿಸ್ಮಿತರಾಗಿ ನಿಂತು ಬಿಟ್ಟಿದ್ದಾರೆ. ಆನಂತರ ಯಾರೋ ಓರ್ವ ವ್ಯಕ್ತಿ ಬಸವನ ವೀಡಿಯೋ ಮಾಡಿ ಜಾಲ ತಾಣಗಳಲ್ಲಿ ಹಾಕಿದ್ದಾರೆ. ಇದನ್ನು ನೋಡಿ ದರ್ಶನ್ ಅಭಿಮಾನಿಗಳು ಸಂತೋಷ ಪಟ್ಟಿದ್ದಾರೆ.

ಹಸುವಿನ ಮೈ ಸವರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಊರಿನ ಜನರು, ಹಾಗೂ ಚುನಾವಣೆಯ ಕಾರ್ಯಕರ್ತರು, ದರ್ಶನ್ ಅವರ ಅಭಿಮಾನಿಗಳು ಹಸುವನ್ನು ಅಲ್ಲಿಂದ ಓಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಹಸು ಹೋಗಲೇ ಇಲ್ಲ. ಇದರಿಂದ ಪ್ರಚಾರಕ್ಕೆ ಸ್ವಲ್ಪ ಅಡೆ-ತಡೆ ಉಂಟಾಯಿತು, ಜನರು ಏನು ಮಾಡಬೇಕೆಂದು ತಿಳಿಯದೆ ಕಂಗಾಲಗಿದ್ದರು. ಪ್ರಾಣಿಗಳೆಂದರೆ ದಾಸನಿಗೆ ಬಹಳ ಇಷ್ಟ, ಪರಿಸ್ಥಿತಿ ಅನ್ನು ಅರ್ಥ ಮಾಡಿಕೊಂಡ ಚಾಲೆಂಜಿಂಗ್ ಸ್ಟಾರ್ ವಾಹನದಿಂದ ಕೆಳಗೆ ಇಳಿದು ಬಂದು ಹಸುವಿನ ಮೈ ಅನ್ನು ಪ್ರೀತಿ ಇಂದ ಸವರುತ್ತಾರೆ. ಬಹಳ ಜನರು ಹಾಸುವನ್ನು ಓಡಿಸಲು ಪ್ರಯತ್ನ ಪಟ್ಟರು, ಆದರೆ ಯಜಮಾನ ಮೈ ಸವರಿದ ನಂತರ ತಕರಾರು ಮಾಡದೆ ವಾಹನ ಸಾಗಲು ದಾರಿ ಮಾಡಿ ಕೊಟ್ಟಿತ್ತು. ಇದೂ ನಿಜಕ್ಕೂ ಅಚ್ಚರಿಯ ಸಂಗತಿ ಆಗಿದೆ, ಊರಿನ ಜನರು ಸನ್ನಿವೇಶವನ್ನು ನೋಡಿದ ನಂತರ ಆಶ್ಚರ್ಯ ಚಕಿತರಾಗಿದ್ದಾರೆ.

darshan

 

ಯಾವ ಕಾರಣಕ್ಕೂ ಪಟಾಕಿ ಹೊಡೆಯಬೇಡಿ ಅಂತಾ ಹೇಳುವುದರ ಮೂಲಕ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ

ಕೆ‌ಆರ್ ನಗರ ತಾಲೂಕಿನ ಹಲವಾರು ಪ್ರದೇಶಗಳಲ್ಲಿ ದರ್ಶನ್ ಅವರು ಪ್ರಚಾರ ಮಾಡಿ, ಸುಮಲತಾ ಅಮ್ಮನಿಗೆ ನಿಮ್ಮ ಅಮೂಲ್ಯವಾದ ಮಾತವನ್ನು ನೀಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪ್ರಚಾರಕ್ಕೆಂದು ದರ್ಶನ್ ಅವರು ಆಗಮಿಸಿದ ವೇಳೆಯಲ್ಲಿ ಅಭಿಮಾನಿಗಳು ಪಟಾಕಿ ಹೊಡೆಯಲು ಮುಂದಾಗಿದ್ದರು, ದಯವಿಟ್ಟು ಯಾವುದೇ ಕಾರಣಕ್ಕೂ ಪಟಾಕಿ ಹೊಡೆಯಬೇಡಿ ಎಂದು ದಾಸ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪರಿಸರದ ಬಗ್ಗೆ ಯಜಮಾನನಿಗೆ ಇರುವ ಕಾಳಜಿ ಎಷ್ಟರ ಮಟ್ಟಿಗೆ ಇದೇ ಅಂತಾ ಇದರಿಂದ ನಮ್ಮಗೆ ಗೊತ್ತಾಗುತ್ತದೆ. ಸ್ವಾಭಿಮಾನದ ವಿಷಯ ಬಂದರೆ ಬೆಕ್ಕು ಸಹ ಹುಲಿ ಆಗುತ್ತದೆ, ಪುಡಿಹಣ, ಕಾಸಿಗೋಸ್ಕರ ನಿಮ್ಮ ಅಮೂಲ್ಯವಾದ ಮತಗಳನ್ನು ಮಾರಿಕೊಳ್ಳಬೇಡಿ ಅಂತಾ ಅವರು ಮಾತನಾಡಿದ್ದಾರೆ.

darshan

ಸ್ವಾಭಿಮಾನಕ್ಕಾಗಿ ಹಣದ ಅಸ್ತ್ರದ ವಿರುದ್ಧ ನಮ್ಮ ಹೋರಾಟ ಅಂತಾ ಮಾತನಾಡಿದ್ದಾರೆ ದಾಸ

ದರ್ಶನ್ ಅವರ ಮಾತು ಇಷ್ಟಕ್ಕೆ ಕೊನೆ ಆಗಲಿಲ್ಲ, ಪುಡಿ ಹಣ ಕಾಸಿಗೋಸ್ಕರ ನಿಮ್ಮ ಅಮೂಲ್ಯವಾದ ಮತಗಳನ್ನು ಮಾರಿಕೊಳ್ಳಬೇಡಿ, ಸುಮಲತಾ ಅಮ್ಮನಿಗೆ ಒಂದು ಬಾರಿ ಅವಕಾಶ ನೀಡಿ ಪ್ರೋತ್ಸಾಹಿಸಿ, ಗೆಲ್ಲಿಸಿ ಅಂತಾ ಹೇಳಿ ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ. ಒಂದು ಜೋಡೆತ್ತು ಖರೀದಿಸಲು 1 ಲಕ್ಷ ದುಡ್ಡು ಬೇಕಾಗುತ್ತದೆ, ಹಾಲು ಕೊಡುವ ಹಸುವನ್ನು ಖರೀದಿಸಲು 80 ಸಾವಿರ ದುಡ್ಡು ಹೊಂದಿಸಬೇಕಾಗುತ್ತದೆ, ಒಂದು ನಾಯಿ ತೆಗೆದುಕೊಳ್ಳಲು 5 ಸಾವಿರ ರುಪಾಯಿ ಆಗುತ್ತದೆ. ಕೇವಲ 500-2000 ದುಡ್ಡಿನ ಆಸೆಗೆ ಬಲೆ ಆಗಬೇಡಿ, ಸ್ವಾಭಿಮಾನಕ್ಕಾಗಿ ದುಡ್ಡಿನ ಅಸ್ತ್ರದ ವಿರುದ್ಧ ನಮ್ಮ ಹೋರಾಟ ಎಂದು ದರ್ಶನ್ ಅವರು ಪ್ರಚಾರದ ಸಮಯದಲ್ಲಿ ಹೇಳಿದ್ದಾರೆ.

di boss

LEAVE A REPLY

Please enter your comment!
Please enter your name here