ಶೂಟಿಂಗ್ ಸಮಯದಲ್ಲಿ ಎರಡು ಬಾರಿ ನಟಿಸಬೇಕಿತ್ತಂತೆ ಎಂದು ಹೇಳಿದ ಡಿ ಬಾಸ್

0
637

ಹಲವಾರು ಚಿತ್ರಗಳ ಪ್ರಾಜೆಕ್ಟ್ ಡಿ ಬಾಸ್ ಒಪ್ಪಿಕೊಂಡಿದ್ದರು, ಒಂದು ಸಿನಿಮಾ ಬಿಡುಗಡೆ ಆಗುವವರೆಗು ಮತ್ತೊಂದು ಸಿನಿಮಾದ ಕುರಿತು ಮಾತನಾಡುವುದಿಲ್ಲ. ತಮ್ಮ ಚಿತ್ರಗಳ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ. ಚಿತ್ರದ ಚಿತ್ರೀಕರಣ, ಡಬ್ಬಿಂಗ್ ಹೇಳಿದ ಸಮಯಕ್ಕೆ ಮುಗಿಸಿ ಕೊಡುತ್ತಾರೆ. ಚಿತ್ರ ಬಿಡುಗಡೆಯ ವಿಷಯವನ್ನು ನಿರ್ಮಾಪಕರಿಗೆ ಬಿಟ್ಟು ಬಿಡುತ್ತಾರೆ. ಕುರುಕ್ಷೇತ್ರ ಚಿತ್ರದ ಶೂಟಿಂಗ್ ಮತ್ತು ಡಬ್ಬಿಂಗ್ ಮುಗಿದಿದ್ದರು ಬಿಡುಗಡೆಯ ಭಾಗ್ಯ ಒದಗಿ ಬಂದಿರಲಿಲ್ಲ. ಮುನಿರತ್ನ ತಮಗೆ ಇಷ್ಟ ಆಗುವವರೆಗೆ ಸಿನಿಮಾವನ್ನು ಪ್ರೇಕ್ಷಕರಿಗೆ ತೋರಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಶೂಟಿಂಗ್ ಸಮಯದಲ್ಲಿ ಎರಡು ಬಾರಿ ನಟಿಸಬೇಕಿತ್ತಂತೆ

ಇದರ ಮಧ್ಯೆ ಡಿ ಬಾಸ್ ಮುನಿರತ್ನ ಅವರ ಮೇಲೆ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಕುರುಕ್ಷೇತ್ರ ಕಲಾವಿದರಿಗೆ ಕೇವಲ ಒಂದು ಚಿತ್ರದ ಸಂಭಾವನೆಯನ್ನು ಕೊಟ್ಟು, ಎರಡು ಚಿತ್ರಗಳ ಕೆಲಸವನ್ನು ಮಾಡಿಸುತ್ತಿದ್ದಾರೆ, ಎಂದು ನಿರ್ಮಾಪಕರ ಬಗ್ಗೆ ಅಸಮಾಧಾನ ಮಾತುಗಳನ್ನು ಆಡಿದ್ದಾರೆ. ಕುರುಕ್ಷೇತ್ರ ಸಿನಿಮಾ 2d ಮತ್ತು 3d ಯಲ್ಲಿ ತಯರಾಗಿದೆ. ಆದ್ದರಿಂದ ಕಲಾವಿದರು ಶೂಟಿಂಗ್ ಸಮಯದಲ್ಲಿ ಎರಡು ಬಾರಿ ನಟಿಸಬೇಕಿತ್ತಂತೆ. ಡಬ್ಬಿಂಗ್ ಮಾಡುವ ಸಮಯದಲ್ಲು ಎರಡು ಸಾರಿ ಡಬ್ಬಿಂಗ್ ಮಾಡಬೇಕಿತ್ತಂತೆ, 2d ಗೆ ಒಂದು ಸಾರಿ ಮತ್ತು 3d ಗೆ ಇನ್ನೊಂದು ಸಾರಿ ಡಬ್ ಮಾಡಿಸಿದ್ದರಂತೆ. ಅಂದ ಹಾಗೆ ದರ್ಶನ್ ಹೀಗೆ ಚಿತ್ರದ ಬಗ್ಗೆ ಮಾತನಾಡುವಾಗ ಹೇಳಿದ್ದಾರೆ, ಮುನಿರತ್ನ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿಲ್ಲ. ಹಂಗೆ ಸುಮ್ಮನೆ ಹಾಸ್ಯಮಯವಾಗಿ ಮುನಿರತ್ನ ಅವರ ಕಾಲೆಳೆದಿದ್ದಾರೆ ಎಂದು ಹೇಳಬಹುದಾಗಿದೆ.

ಗಣ್ಯರ ತಾರಾ ಬಳಗವೇ ಇದೆ

ಇನ್ನು ಕುರುಕ್ಷೇತ್ರ ಸಿನಿಮಾವು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಕುರುಕ್ಷೇತ್ರ ಚಿತ್ರದಲ್ಲಿ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ನಾಗಣ್ಣ ಈ ಚಿತ್ರವನ್ನು ನಿರ್ದೇಶಿಸಿದರೆ, ಮುನಿರತ್ನ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಚಿತ್ರಕ್ಕಿದೆ. ದರ್ಶನ್, ಅರ್ಜುನ್ ಸರ್ಜಾ, ರವಿಚಂದ್ರನ್, ಸೋನು ಸೂದ್, ಶಶಿ ಕುಮಾರ್, ನಿಖಿಲ್ ಕುಮಾರ್, ಸ್ನೇಹಾ, ಮೇಘನಾ ರಾಜ್, ಶ್ರೀನಿವಾಸ ಮೂರ್ತಿ, ಅಂಬರೀಶ್, ಶ್ರೀನಾಥ್ ಸೇರಿದಂತೆ ಇನ್ನು ಹಲವಾರು ಕಲಾವಿದರು ಅಭಿನಯಿಸಿದ್ದಾರೆ.ಕುರುಕ್ಷೇತ್ರ ಚಿತ್ರದ ಬಗ್ಗೆ ದರ್ಶನ್ ಮಾತನಾಡಿದ್ದು ಈ ಹಿಂದೆ ದುರ್ಯೋಧನ ಮೇಲೆ ಯಾವ ಕಥೆಯು ಮಾಡಿರಲಿಲ್ಲ. ಆದ್ದರಿಂದ ದುರ್ಯೋಧನ ಪಾತ್ರ ಹೊಸ ಅನುಭವ ಎಂದು ಆಡಿಯೊ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡಿದ್ದಾರೆ.

ಮುನಿರತ್ನ ಅವರ ಮೇಲೆ ಬೇಸರವನ್ನು ವ್ಯಕ್ತಪಡಿಸಿದ್ದರು

ಸ್ವಲ್ಪ ದಿನಗಳ ಕೆಳಗೆ ಕುರುಕ್ಷೇತ್ರ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಚಿತ್ರದ ಗ್ರಾಫಿಕ್ಸ್ ಮತ್ತು ಮೇಕಿಂಗ್ ಚೆನ್ನಾಗಿಲ್ಲ ಎನ್ನುವ ಕಾರಣದಿಂದಾಗಿ ಡಿ ಬಾಸ್ ಅಭಿಮಾನಿಗಳು ಮುನಿರತ್ನ ಅವರ ಮೇಲೆ ಬೇಸರವನ್ನು ವ್ಯಕ್ತಪಡಿಸಿದ್ದರು. ಚಿತ್ರದ ಕುರಿತು ಅಭಿಮಾನಿಗಳು ಹೆಚ್ಚಿನ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾಗುವವರೆಗು ನಾವು ಕಾಯಲೆಬೇಕಾಗಿದೆ.

LEAVE A REPLY

Please enter your comment!
Please enter your name here