ಊಹಾ ಪೋಹಗಳಿಗೆ ಸ್ಪಂದಿಸಿದ ಡಿ ಬಾಸ್

0
504

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ದಿನದಿಂದ ದಿನ ಹೆಚ್ಚಾಗುತ್ತಿದೆ. ಹೌದು ಸುದೀಪ್ ಹಾಗು ದರ್ಶನ್ ಅಭಿಮಾನಿಗಳ ನಡುವೆ ವೈಮನಸ್ಸು ವ್ಯಾಪಕವಾಗುತ್ತಲೆ ಹೋಗುತ್ತಿದೆ. ಕಿಚ್ಚ ಹಾಗು ದಚ್ಚು ನಡುವೆ ಈ ಹಿಂದೆ ಮನಸ್ತಾಪ ಉಂಟಾಗಿದ್ದು, ಪೈಲ್ವಾನ್ ಚಿತ್ರ ಬಿಡುಗಡೆ ಆದ ನಂತರ ಇದು ಬೇರೆಯೆ ಒಂದು ಹಂತಕ್ಕೆ ಬಂದು ನಿಂತಿದೆ ಅಂತಾನೆ ಹೇಳಬಹುದಾಗಿದೆ. ಸುದೀಪ್ ಹಾಗು ದರ್ಶನ್ ಇಬ್ಬರು ತಮ್ಮ ನಟನೆಯ ಮೂಲಕ ಅಭಿಮಾನಿಗರನ್ನು ಸಂಪಾದಿಸಿದ್ದಾರೆ. ಪೈಲ್ವಾನ್ ಚಿತ್ರದ ಕುರಿತು ಅಪಪ್ರಚಾರ ಮಾಡುತ್ತಿರುವುದು ದರ್ಶನ್ ಅವರ ಅಭಿಮಾನಿಗಳು ಎಂದು ಆರೋಪಿಸಿದ್ದರು. ಈ ವಿಷಯದ ಕುರಿತು ಕಿಚ್ಚ ಸ್ಪಂದಿಸಿದ್ದು, ಡಿ ಬಾಸ್ ಇಲ್ಲಿಯವರೆಗು ಯಾವ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಆದರೆ ಈಗ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ

ಊಹಪೊಹಗಳಿಗೆ ಪ್ರತಿಕ್ರಿಯಿಸಿದ ಡಿ ಬಾಸ್

ಡಿ ಬಾಸ್ ಫ್ಯಾನ್ಸ್ ಪತ್ರ ಬರೆಯುವ ಮೂಲಕ ಕಿಚ್ಚನ ಅಭಿಮಾನಿಗಳಿಗೆ ಸಂದೇಶವನ್ನು ನೀಡಿದ್ದರು. ಫ್ಯಾನ್ಸ್ ನಡುವೆ ಕಾಳಗ ಅಧಿಕವಾಗುತ್ತಿದ್ದು, ಈ ರೀತಿ ಮಾಡಿರುವುದು ಯಾರೆಂದು ಇಲ್ಲಿಯವರೆಗೂ ತಿಳಿದು ಬಂದಿಲ್ಲ. ಇನ್ನು ಪೈಲ್ವಾನ್ ಚಿತ್ರ ಪೈರಸಿ ಆಗಿದ್ದು, ಇದರಿಂದ ಕಿಚ್ಚನಿಗೆ ಬಹಳ ಬೇಸರವಾಗಿತ್ತು. ಈಗ ಟ್ವಿಟ್ಟರ್ ನಲ್ಲಿ ಡಿ ಬಾಸ್ ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿ ಮಾತು ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು, ಪ್ರಚೋದಿಸಲು ಬರದಿರಿ ಎಂದು ಟ್ವೀಟ್ ಮಾಡಿದ್ದಾರೆ.

ಪೈರಸಿ ಕಾಟವೂ ಚಿತ್ರಕ್ಕೆ ಕಾಡುತ್ತಿದೆ

ಪೈಲ್ವಾನ್ ಚಿತ್ರ ಬಿಡುಗಡೆಯಾಗಿದ್ದು, ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಪೈಲ್ವಾನ್ ಚಿತ್ರಕ್ಕೆ ನಾನಾ ತೊಂದರೆಯಾಗುತ್ತಿರುವುದು ಕಂಡು ಬರುತ್ತಿದೆ. ಒಂದು ಕಡೆ ಚಿತ್ರದ ಕುರಿತು ಕೆಲವರು ಅಪಪ್ರಚಾರವನ್ನು ಮಾಡುತ್ತಿದ್ದರೆ, ಮತ್ತೊಂದು ಕಡೆ ಪೈರಸಿ ಕಾಟವೂ ಚಿತ್ರಕ್ಕೆ ಕಾಡುತ್ತಿದೆ. ಇನ್ನು ಈ ವಿಷಯದ ಅಂಗವಾಗಿ ಕಿಚ್ಚ ಯಾರಾದರು ಒಳ್ಳೆಯ ಕೆಲಸವನ್ನು ಮಾಡಿದರೆ ಮಾತ್ರ ಇಂತಹ ಘಟನೆಗಳು ನಡೆಯುತ್ತದೆ. ತಮ್ಮ ಸಮಯವನ್ನು ಪೈಲ್ವಾನ್ ಗಾಗಿ ಮೀಸಲಿಟ್ಟಿದ್ದಾರೆ. ನಾವು ಈ ಕ್ಷಣವನ್ನು ಖುಷಿಯಿಂದ ಸ್ವಾಗತಿಸೋಣ ಎಂದು ಟ್ವೀಟ್ ಮಾಡುವ ಮೂಲಕ ವೈರಿಗಳಿಗೆ ಟಾಂಗ್ ನೀಡಿದ್ದರು.

ಪೈರಸಿ ಆಗಲಾರದಂತೆ ಎಚ್ಚರಿಕೆಯ ಕ್ರಮವನ್ನು ವಹಿಸಬೇಕಾಗಿದೆ

ಸ್ಟಾರ್ ನಟರ ನಡುವೆ ಈ ರೀತಿಯಾದ ಬಿರುಕು ಉಂಟಾಗಬಾರದಿತ್ತು. ಚಿತ್ರರಂಗವನ್ನು ನಾವು ಒಂದೆ ದೃಷ್ಟಿಕೋನದಲ್ಲಿ ನೋಡಬೇಕಾಗಿದೆ. ಕನ್ನಡ ಚಿತ್ರರಂಗ ಉನ್ನತ ಸ್ಥಾನಕ್ಕೆ ಏರಬೇಕಾಗಿದೆ. ಮೊದಲು ಚಿತ್ರರಂಗದ ವಾಣಿಜ್ಯ ಮಂಡಳಿಯವರು ಯಾವುದೆ ಕನ್ನಡ ಚಿತ್ರಗಳಿಗೆ ಪೈರಸಿ ಆಗಲಾರದಂತೆ ಎಚ್ಚರಿಕೆಯ ಕ್ರಮವನ್ನು ವಹಿಸಬೇಕಾಗಿದೆ.

ಒಂದು ಚಿತ್ರವನ್ನು ಮಾಡಬೇಕಾದರೆ ಇಡೀ ಚಿತ್ರತಂಡದವರು ಸಾಕಷ್ಟು ಶ್ರಮ ಪಟ್ಟಿರುತ್ತಾರೆ. ಪೈರಸಿ ಆಗುವುದರಿಂದ ಸಿನಿಮಾಗಳಿಗೆ ಬಹಳ ದೊಡ್ಡ ಹೊಡೆತ ಬೀಳುತ್ತಿದೆ. ಚಿತ್ರಮಂದಿರಗಳಲ್ಲಿ ಕದ್ದು ಶೂಟ್ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕದ್ದು ಶೂಟ್ ಮಾಡಿ ಆ ವಿಡಿಯೋ ಗಳನ್ನೂ ಹಾಕುವ ವೆಬ್ ಸೈಟ್ ಗಳನ್ನೂ ಸಹ ರದ್ದು ಪಡಿಸಬೇಕಾಗಿದೆ.

LEAVE A REPLY

Please enter your comment!
Please enter your name here