ಅತ್ಯಾಚಾರದ ಎನ್ಕೌಂಟರ್ ವಿರೋಧಿಸಿ ಮಾತನಾಡಿದವರ ವಿರುದ್ಧ ಗುಡುಗಿದ ಡಿ ಬಾಸ್

0
868
darshannnnnnnnnnnnnnn

ಪ್ರಿಯಾಂಕಾ ರೆಡ್ಡಿಯ ಅತ್ಯಾಚಾರ ಹಾಗು ಹತ್ಯೆ ದೇಶದೆಲ್ಲೆಡೆ ತೀವ್ರ ಸದ್ದು ಮಾಡಿತ್ತು. ಜೊತೆಗೆ ಅನೇಕರು ಅವರಿಗೆ ಶಿಕ್ಷೆ ನೀಡಲೇಬೇಕೆಂದು ಅನೇಕ್ ಅಹೋರಾಟಗಳನ್ನು ಮಾಡಿದ್ದರು. ಹಾಗಾಗಿ ಪೊಲೀಸರು ದೃಢವಾದ ನಿರ್ಧಾರ ತೆಗೆದುಕೊಂಡು ಅವರನ್ನು ಎನ್ಕೌಂಟರ್ ಮಾಡಿದರು. ಆದರೆ ಅವರು ಮಾಡಿದ ಎನ್ಕೌಂಟರ್ ಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಗೌರವಿಸಿದರು. ಆದರೆ ಇನ್ನು ಕೆಲವರು ಈ ಎನ್ಕೌಂಟರ್ ಗೆ ವಿರೋಧ ವ್ಯಕ್ತಪಡಿಸಿದರು. ಯಾಕಂದ್ರೆ ಯಾವುದೇ ಸೂಚನೆ ಇಲ್ಲದೆ, ಜೊತೆಗೆ ಮನುಷ್ಯನನ್ನು ಈ ರೀತಿ ಕೊಲ್ಲುವುದು ಸರಿಯಲ್ಲ ಎಂದು ಕೆಲವರು ಕೂಗಾಡಿದರು. ಆದರೆ ಈ ರೀತಿ ಕೂಗಾಡಿ ವಿರೋಧ ವ್ಯಕ್ತಪಡಿಸಿದ ಕೆಲವರ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುಡುಗಿದ್ದಾರೆ.

ವಿರೋಧಿಗಳ ವಿರುದ್ಧ ಗುಡುಗಿದ ಡಿ ಬಾಸ್

ಪ್ರಿಯಾಂಕಾ ರೆಡ್ಡಿಯನ್ನು ಹತ್ಯೆ ಮಾಡಿದವರನ್ನು ಪೊಲೀಸರು ಗುಂಡಿಟ್ಟ ಮೇಲೆ ಎಲ್ಲರು ಸಂತಸ ವ್ಯಕ್ತಪಡಿಸುತ್ತಿದ್ದರೆ, ಇತ್ತ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದರು. ಅಂಥವರಿಗೆ ದರ್ಶನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಹೌದು. ಹತ್ಯೆ ಖಂಡಿಸಿ ಕೆಲವ್ರು ವಿರೋಧ ವ್ಯಕ್ತಪಡಿಸುತ್ತಿದ್ದಾರಲ್ಲಾ? ಆ ಹೆಣ್ಣು ಇವರಿಗೇನು ಅನ್ಯಾಯ ಮಾಡಿದ್ದಳು. ಇದೇ ಘಟನೆ ಅವರ ಮನೆಯ ಹೆಣ್ಣು ಮಕ್ಕಳಿಗೆ ಆಗಿದಿದ್ದರೆ ಬಿಡುತ್ತಿದ್ರಾ.?” ಎಂದು ಸಂದರ್ಶನವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಶ್ನಿಸಿದ್ದಾರೆ.

darshan anchor

ನಡು ರಸ್ತೆಯಲ್ಲಿ ಅವರನ್ನು ಎನ್ಕೌಂಟರ್ ಮಾಡಬೇಕು

ಇನ್ನು ಎನ್ಕೌಂಟರ್ ಬಗ್ಗೆ ಮಾತನಾಡಿದ ದರ್ಶನ್, ಪೋಲೀಸರ ಕಾರ್ಯಕ್ಕೆ ಮೆಚ್ಚುಗೆ ತಿಳಿಸಿದ್ದಾರೆ. ಜೊತೆಗೆ ಇನ್ನು ಕೆಲವು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹೌದು. ಇಂತಹ ಪಾಪಿಗಳನ್ನು ನಡುರೋಡಿನಲ್ಲಿ ಎನ್ಕೌಂಟರ್ ಮಾಡಬೇಕು. ಯಾವುದೊ ನಿರ್ಜನ ಪ್ರದೇಶದಲ್ಲಿ ಮಾಡಿದರೆ ಯಾವ ಉಪಯೋಗ ಇಲ್ಲ. ಯಾಕಂದ್ರೆ ನಡುರಸ್ತೆಯಲ್ಲಿ ಮಾಡುವುದರಿಂದ, ಇತರರು ಅದನ್ನು ನೋಡಿ ಬುದ್ದಿ ಕಲಿಯುತ್ತಾರೆ. ಆದ್ರೆ ಯಾವುದೋ ಪ್ರದೇಶದಲ್ಲಿ ಮಾಡುವುದರಿಂದ ಯಾರಿಗೂ ಭಯ ಹುಟ್ಟುವುದಿಲ್ಲ. ಹಾಗಾಗಿ ನಡುರಸ್ತೆಯಲ್ಲಿ ಎನ್ಕೌಂಟರ್ ಮಾಡಬೇಕು.

priyanka reddi

ದುಬೈ ರಾಷ್ಟ್ರಗಳ ಕೆಲವು ನಿಯಮ ಅನುಸರಿಸಬೇಕಾಗಿದೆ

ಇನ್ನು ದರ್ಶನ್ ಸಂದರ್ಶನದಲ್ಲಿ ಮಾತನಾಡುವಾಗ ದುಬೈ ರಾಷ್ಟ್ರದ ಬಗ್ಗೆ ಮಾತನಾಡಿದ್ದಾರೆ. ಹೌದು. ದುಬೈ ರಾಷ್ಟ್ರದಲ್ಲಿ ಅನುಸರಿಸುವ ಕೆಲವು ನಿಯಮಗಳನ್ನು ನಾವು ಅನುಸರಿಸಬೇಕಾಗಿದೆ. ಯಾಕಂದ್ರೆ ಅಲ್ಲಿ ತಪ್ಪು ಮಾಡಿದವರಿಗೆ ಎಲ್ಲರ ಮುಂದೆ ಶಿಕ್ಷೆ ಕೊಡುತ್ತಾರೆ. ಅದೇ ರೀತಿ ಶಿಕ್ಷೆಯನ್ನು ನಮ್ಮಲ್ಲೂ ಕೊಟ್ಟರೆ, ಅಂತಹ ತಪ್ಪು ನಡೆಯುವುದಿಲ್ಲ. ಆ ರಾಷ್ತ್ರದಲ್ಲಿ ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡಿದರೇ, ಅತ್ಯಂತ ಕಠಿಣ ಶಿಕ್ಷೆ ನೀಡುತ್ತಾರೆ. ಹಾಗಾಗಿ ಅಲ್ಲಿನ ಹೆಣ್ಣು ಮಕ್ಕಳು ಯಾವುದೇ ಭಯವಿಲ್ಲದೆ ಮಧ್ಯರಾತ್ರಿ ಕೂಡ ಓಡಾಡುತ್ತಾರೆ. ಆದರೆ ನಮ್ಮಲ್ಲಿ ರಾತ್ರಿ 9 ಗಂಟೆಯಾದರೆ ಸಾಕು ಹೆಣ್ಣು ಮಕ್ಕಳು ಭಯದಲ್ಲಿ ಓಡಾಡಯುವ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಪ್ರಿಯಾಂಕ್ ರೆಡ್ಡಿಯ ಹತ್ಯೆ ಎನ್ಕೌಂಟರ್ ಅನ್ನು ವಿರೋಧಿಸುತ್ತಿದ್ದ ಕೆಲವರಿಗೆ ದರ್ಶನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ನಮ್ಮ ದೇಶದ ಶಿಕ್ಷೆ ಕಠಿಣವಾಗಬೇಕು. ಆಗ ಮಾತ್ರ ಅಪರಾಧ ಕಡಿಮೆಯಾಗುತ್ತದೆ ಎಂದು ದರ್ಶನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here