ಮತಯಾಚನೆಗೆ ಬರುತ್ತಿರುವುದರ ಬಗ್ಗೆ ರಹಸ್ಯ ಬಿಚ್ಚಿಟ್ಟ ನಟ ದರ್ಶನ್.

0
910
darshan matayachane

ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪಕ್ಷ ಪಕ್ಷಗಳ ನಡುವಿನ ತಿಕ್ಕಾಟ ಜೋರಾಗೇ ನಡೆಯುತ್ತಿದೆ. ಇದರ ಮಧ್ಯೆ ಅಲ್ಲಲ್ಲಿ ರಾಜಕಾರಣಿಗಳ ಪಂಚಿಂಗ್ ಡೈಲಾಗ್ ಗಳು ಹೊರ ಬರುತ್ತಿವೆ. ಕೆಲವ್ರು ಅದನ್ನ ಪಾಸಿಟಿವ್ ಆಗಿ ತಗೊಂಡು, ಮುಂದೆ ಹೋಗುತ್ತಿದ್ದಾರೆ. ಇನ್ನು ಕೆಲವ್ರು ಅದನ್ನೇ ಸೀರಿಯಸ್ ಆಗಿ ತಗೊಂಡು, ಮಾತಿಗೆ ಮಾತು ಕೊಡ್ತಿದ್ದಾರೆ.

ಈ ಮಧ್ಯೆ ನಮ್ಮ ಸ್ಯಾಂಡಲ್ ವುಡ್ ನಟರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ ಯಾಚನೆಯಲ್ಲಿ ತಮ್ಮನ ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಊರಿಂದ ಊರಿಗೆ, ಹಳ್ಳಿಯಿಂದ, ಹಳ್ಳಿಗೆ ರೋಡ್ ಶೋ ಮಾಡುತ್ತಿದ್ದಾರೆ.

ಮತಯಾಚನೆಗೆ ಬರಲು ಕಾರಣ ತಿಳಿಸಿದ ದರ್ಶನ್

ದರ್ಶನ್ ಅಭಿಮಾನಿಗಳಿಗೆ ಹಾಗೂ ಜನರಿಗೆ ನಿನ್ನೆಯಿಂದ ಒಂದು ಗೊಂದಲ ಕಾಡುತ್ತಿತ್ತು. ಯಾಕಂದ್ರೆ ಮೊನ್ನೆವರೆಗೂ ಮಂಡ್ಯದಲ್ಲಿ ಸುಮಲತಾ ಪರ ಮತಯಾಚನೆ ಮಾಡುತ್ತಿದ್ದ ದರ್ಶನ್ ಈಗ, ಪಿ.ಸಿ ಮೋಹನ್ ಪರ ನಿಂತು ಪ್ರಚಾರ ಮಾಡುತ್ತಿದ್ದಾರಲ್ಲಾ ಅಂತ. ಹಾಗಾಗಿ ನಿನ್ನೆ ಅಭಿಮಾನಿಗಳು ಹಾಗೂ ಜನರು ದರ್ಶನ್ ಅವರನ್ನ ಕೇಳಿಯೇ ಬಿಟ್ಟರು. ನೀವು ಯಾರ ಪರ ಬೇಕಾದ್ರು ಪ್ರಚಾರ ಮಾಡುತ್ತೀರಾ? ನಿನ್ನೆ ವರೆಗೂ ಸುಮಲತಾ ಪರ ಮತಯಾಚನೆ ಮಾಡಿದ್ರಿ, ಈಗ ಇಲ್ಲಿದ್ದೀರಾ, ಮುಂದೆ ಯಾರ ಪರ ಮತಯಾಚನೆ ಅಂತ. ಅದಕ್ಕೆ ದರ್ಶನ್ ನೀಡಿದ ಉತ್ತರ ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿತು.

ಒಂದು ಪತ್ರ ಬಯಸಿ ಪ್ರಚಾರಕ್ಕೆ ಬರುತ್ತಿರುವ ದರ್ಶನ್

ಹೌದು. ದರ್ಶನ್ ಇತ್ತೀಚಿಗೆ ಕೆಲವೊಂದು ಪಕ್ಷಗಳ ಮತಯಾಚನೆಯಲ್ಲಿ ಹೆಚ್ಚಾಗಿ ಗುರುತಿಸಕೊಳ್ಳುತ್ತಿದ್ದಾರೆ. ಇದನ್ನ ನೋಡಿದ ಜನರು ಆಶ್ಚರ್ಯಪಟ್ಟು ಅವರನ್ನ ಪ್ರಶ್ನೆ ಕೇಳಿದರು. ಅದಕ್ಕೆ ದರ್ಶನ್ ಸಹ ಸರಾಗವಾಗೇ ಉತ್ತರ ಕೊಟ್ಟರು. ಹೌದು. ನಾನು ಮತಯಾಚನೆಯಲ್ಲಿ ಭಾಗವಹಿಸುತ್ತಿರೋದು, ಹಾಗೆ ಮುಂದೆಯೂ ಭಾಗವಹಿಸುವುದು ನಿಜ. ಆದ್ರೆ ಅದು ನನ್ನ ಸ್ವಂತಕ್ಕಲ್ಲ ಹಾಗೂ ನ್ನನ ಸ್ವಾರ್ಥಕ್ಕಲ್ಲ. ಅದಕ್ಕೆ ಒಂದು ಮುಖ್ಯ ಕಾರಣವಿದೆ ಎಂದು ತಿಳಿಸಿದರು. ದಿನಬೆಳಗಾದ್ರೆ, ನಮ್ಮ ಮನೆ ಮನೆ ಬಳಿ, ಹತ್ತಾರು ಜನ ಬರುತ್ತಾರೆ. ಬಂದವರು ನನ್ನ ಮಗನಿಗೆ, ನನ್ನ ಗಂಡನಿಗೆ ಆಪರೇಷನ್ ಇದೆ ಧನ ಸಹಾಯ ಮಾಡಿ ಅಂತ ಕೇಳ್ತಾರೆ. ಆದರೆ ಅಂಥವರಿಗೆ ಸಹಾಯ ಮಾಡಬೇಕು ಅನ್ನೋದು ನನ್ನ ಆಸೆ. ಆದ್ರೆ ಅದಕ್ಕೆ ಇನ್ನೊಂದು ಕೈ ಜೋಡಣೆಯಾದರೆ, ಒಳ್ಳೆಯದು ಅನ್ನಿಸಿತು. ಹಾಗಾಗಿ ಪ್ರಚಾರಕ್ಕೆ ಬರುತ್ತಿದ್ದೇನೆ. ಅಂದರೆ ರಾಜಕಾರಣಿಗಳಿಂದ ಸಿಗೋ ಒಂದು ಪತ್ರ ನನಗೆ ಬಹಳ ಮುಖ್ಯ. ಅವರ ಸಹಿ ಇರುವ ಪತ್ರ ಸಿಕ್ಕಿದರೆ, ಆಸ್ಪತ್ರೆಯಲ್ಲಿ 30 ಸಾವಿರದ ವರೆಗೆ ರಿಯಾಯಿತಿ ಸಿಗುತ್ತೆ. ಇದರಿಂದ ಅವರಿಗೆ ಸ್ವಲ್ಪ ಸಹಾಯವಾಗುತ್ತೆ. ನಂತರ ಉಳಿದದ್ದನ್ನ ನನ್ನ ಕೈಯಿಂದ ನೀಡುತ್ತೇನೆ. ಹಾಗಾಗಿ ನಾನು ಬಡವರ ನೆರವಿಗೆ ಪ್ರಚಾರಕ್ಕೆ ಬರುತ್ತಿದ್ದೇನೆ ಎಂದು ತಿಳಿಸಿದರು.

ವ್ಯಕ್ತಿ ನೋಡಿ ಪ್ರಚಾರಕ್ಕೆ ಬರುತ್ತಿದ್ದೇನೆ ಹಣಕ್ಕಲ್ಲ

ಕೆಲವರು ದರ್ಶನ್ ಅವರನ್ನ ನೀವೇ ಅಲ್ಲಿ, ಇಲ್ಲಿ ಪ್ರಚಾರಕ್ಕೆ ಅಂತ ಬರುತ್ತಿರೋದಕ್ಕೆ ಕಾರಣ ತಿಳಿಸಿದ್ರೆ, ಆದ್ರೆ ಇದರಿಂದ ನಿಮಗೆ ಏನು ಲಾಭ, ಎಷ್ಟು ಹಣ ಸಿಗುತ್ತದೆ ಎಂದು ನೇರವಾಗೇ ಕೇಳಿದರು. ಆದರೆ ಅದಕ್ಕೆ ಉತ್ತರಿಸಿದ ದರ್ಶನ್, ನನ್ನ ಸ್ವಂತಕ್ಕೆ ಅಂತಾ ಯಾವ ಹಣದ ಅವಶ್ಯಕತೆಯೂ ಇಲ್ಲ. ನಾನು ವ್ಯಕ್ತಿಯನ್ನ ನೋಡಿ, ಮತಯಾಚನೆ ಮಾಡುತೀರೋದು, ಹಣ ನೋಡಿ ಅಥವಾ ಪಕ್ಷ ನೋಡಿ ಅಲ್ಲ ಅಂತ ಸ್ಪಷ್ಟ ಉತ್ತರ ನೀಡಿದ್ರು. ನಾನು ವ್ಯಕ್ತಿಯನ್ನ ನೋಡಿ ಬರುತ್ತಿರೋದು, ಯಾಕಂದ್ರೆ ನನ್ನ ಮನೆ ಬಳಿ ಬರುವ ಜನರಿಗೆ ಇವರು ಸಹಾಯ ಮಾಡುತ್ತಾರೆ ಅನ್ನೋ ನಂಬಿಕೆ ಇತ್ತು ಬರುತ್ತಿದ್ದೇನೆ ಅದನ್ನ ಬಿಟ್ಟು ಬೇರೆ ಯಾವ ಉದ್ದೇಶವೂ ಇಲ್ಲ ಅಂತ ಪ್ರಚಾರದ ವೇಳೆಯೇ ಎಲ್ಲರ ಮುಂದೆ ತಿಳಿಸಿದ್ದಾರೆ.

ಕಳೆದ ವಾರದ ವರೆಗೂ ದರ್ಶನ್ ಮಂಡ್ಯದಲ್ಲಿ ಸುಮಲತಾ ಪರ ಮತ ಯಾಚನೆ ಮಾಡಿದ್ರು. ಆದ್ರೆ ಅವರಿಗೆ ಕೈ ಪೆಟ್ಟಾಗಿದ್ದರಿಂದ ಬೆಂಗಳೂರಿಗೆ ಬಂದಿದ್ದರು. ನಂತರ ಅನಾರೋಗ್ಯ ಪೀಡಿತರಿಗೆ ಸಹಾಯವಾಗಲೆಂದು, ಪಿ.ಸಿ ಮೋಹನ್ ಅವರ ಪರ ನಿನ್ನೆ ಬೆಂಗಳೂರಿನ ಹಲವೆಡೆ ಪ್ರಚಾರ ಮಾಡಿದರು. ಈಗ ಮತ್ತೆ ದರ್ಶನ್ ಮಂಡ್ಯ ಗೆ ಹೋಗಲಿದ್ದಾರೆ. ಹೋಗಿ ಮತ್ತೆ ಸುಮಲತಾ ಪರ ಪ್ರಚಾರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here