ಮುನಿರತ್ನ ಮೇಲೆ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿರೋದಾದ್ರೂ ಏಕೆ?

0
602
darshan fans

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಪ್ರತಿಯೊಬ್ಬರೂ ದರ್ಶನ್ ಅಂದ್ರೆ ಇಷ್ಟ ಪಡ್ತಾರೆ. ಇನ್ನೂ ಅವರ ಸಿನಿಮಾಗಳನ್ನ ನೋಡದೆ ಇರುವ ಅಭಿಮಾನಿಗಳಿದ್ದಾರಾ ಖಂಡಿತ ಇಲ್ಲ. ದರ್ಶನ್ ಸಿಂಜಿಮಾ ಅಂದ್ರೆ, ಇರುವ ಕೆಲಸವನ್ನು ಬಿಟ್ಟು, ಹೋಗಿ ನೋಡುತ್ತಾರೆ. ಯಾಕಂದ್ರ ಅಂತ ಅಭಿಮಾನಿಗಳನ್ನ ದರ್ಶನ್ ಹೊಂದಿದ್ದಾರೆ. ಯಾವಾಗಲು ಸಹಾಯ ಮಾಡಲು ಅಂತ ಮುಂದಾಗುತ್ತಿದ್ದ ದರ್ಶನ್ ಈಗ ಅಭಿಮಾನಿಗಳಲ್ಲಿ ಮನವಿ ಮಾಡುವಂತಹ ಪರಿಸ್ಥಿತಿಗೆ ಬಂದಿದ್ದಾರೆ. ಹೌದು. ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಅಂದ್ರೆ ಅದು ಕುರುಕ್ಷೇತ್ರ. ದರ್ಶನ್ ಅಭಿಮಾನಿಗಳು ಕುರುಕ್ಷೇತ್ರ ಸಿನಿಮಗೋಸ್ಕರ ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ ಇದೇ ಸಮಯದಲ್ಲಿ ದರ್ಶನ್ ಅಭಿಮಾನಿಗಳು, ಮುನಿರತ್ನ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಅಭಿಮಾನಿಗಳ ಆಕ್ರೋಶಕ್ಕೆ ದರ್ಶನ್ ಮನವಿ ಮಾಡುವಂತಾಗಿದೆ.

ಮುನಿರತ್ನ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿರುವ ದಚ್ಚು ಫ್ಯಾನ್ಸ್

ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ಸಿನಿಮಾಗೋಸ್ಕರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಇನ್ನೇನು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗುತ್ತಿದೆ. ಆದ್ರೆ ಈ ಮಧ್ಯೆ ದಚ್ಚು ಫ್ಯಾನ್ಸ್ ಮುನಿರತ್ನ ಮೇಲೆ ಗುಡುಗಿದ್ದಾರೆ. ಹೌದು. ಇದೇ ತಿಂಗಳ 7ನೇ ತಾರೀಖಿನಂದು, ಕುರುಕ್ಷೇತ್ರ ಸಿನಿಮಾದ ಆಡಿಯೋವನ್ನು ಅದ್ದೂರಿಯಾಗಿ ಲಾಂಚ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಇನ್ನೂ ಲಾಂಚ್ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೂ ಸಹ ಅವಕಾಶ ಮಾಡಿಕೊಲಾಗಿದೆ. ಆದ್ರೆ ಈಗ ಇದೇ ವಿಚಾರವಾಗಿ ಅಭಿಮಾನಿಗಳು ಬೇಸರವಾಗಿದ್ದಾರೆ. ಯಾಕಂದ್ರೆ, ಕಾರ್ಯಕ್ರಮದ ಪಾಸ್ ಗಳ ಮೇಲೆ, ಯಾವ ನಟರ ಫೋಟೋಗಳು ಇಲ್ಲ. ಅದರಲ್ಲೂ ಮುಖ್ಯವಾಗಿ ಡಿ ಬಾಸ್ ಫೋಟೋ ಮುದ್ರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದರ್ಶನ್ ಫೋಟೋ ಇಲ್ಲದಿರುವುದಕ್ಕಾಗಿ ಗುಡುಗುತ್ತಿರುವ ಅಭಿಮಾನಿಗಳು

ಕುರುಕ್ಷೇತ್ರ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಜನರಿಗೂ ಅವಕಾಶ ಮಾಡಿಕೊಡಲಾಗಿದೆ. ಆದ್ರೆ ಅದರ ಪಾಸ್ ಗಳನ್ನೂ ನೋಡಿದ ಕೂಡಲೇ, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾರಣ, ಪಾಸ್ ಗಳ ಮೇಲೆ, ಯಾವ ನಟರು ಫೋಟೋ ಮುದ್ರಿಸಿಲ್ಲ. ಅದರಲ್ಲೂ ಮುಖ್ಯವಾಗಿ ಡಿ ಬಾಸ್ ಫೋಟೋ ಅಂಟಿಸಿಲ್ಲ ಎಂದು ಅಭಿಮಾನಿಗಳು ಕೂಗಾಡುತ್ತಿದ್ದಾರೆ. ಜೊತೆಗೆ ಮುನಿರತ್ನ ಅವರ ಮೇಲೆ, ಕೆಂಡಕಾರುತ್ತಿದ್ದಾರೆ. ಡಿ ಬಾಸ್ ಅವರ ಫೋಟೋವನ್ನು ಮುದ್ರಿಸಲೆ ಬೇಕು ಎಂದು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಮುನಿರತ್ನ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದ್ರೆ ದರ್ಶನ್ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಭಿಮಾನಿಗಳಲ್ಲಿ ಮನವಿ ಮಾಡಿದ ದಚ್ಚು

ಇನ್ನೂ ಅಭಿಮಾನಿಗಳ ಆಕ್ರೋಶಕ್ಕೆ ದರ್ಶನ್ ಮನವಿ ಮಾಡಿದ್ದಾರೆ. ಹೌದು. ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗೆ ಸಮಾಧಾನ ತಿಳಿಸಿದ್ದಾರೆ. ಹೌದು. ಯಾವುದೇ ಕಾರಣಕ್ಕೂ ಅಭಿಮಾನಿಗಳು ಆಕ್ರೋಶ ಹೊರ ಹಾಕಬಾರದು. ಯಾಕಂದ್ರೆ ಕುರುಕ್ಷೇತ್ರ ಅನ್ನೋದು ದೊಡ್ಡ ತಾರಾಬಳಗವಿರುವ ಸಿನಿಮಾ. ಹಾಗಾಗಿ ಎಲ್ಲರ ಫೋಟೋಗಳನ್ನು ಮುದ್ರಿಸಲು ಆಗುವುದಿಲ್ಲ. ಅಲ್ಲದೆ, ಒಬ್ಬರ ಫೋಟೋ ಹಾಕಿದರೆ, ಇನ್ನೊಬ್ಬರಿಗೆ ಬೇಸರವಾಗುತ್ತದೆ. ಹಾಗಾಗಿ ಎಲ್ಲರನ್ನು ಸಮಾನವಾಗಿ ಕಾಣಬೇಕು ಎನ್ನುವ ನಿಟ್ಟಿನಲ್ಲಿ ಯಾರ ಫೋಟೋಗಳನ್ನು ಮುದ್ರಿಸಿಲ್ಲ. ಹಾಗಾಗಿ ಅಭಿಮಾನಿಗಳು ಯಾವುದೇ ರೀತಿಯಲ್ಲಿ ಕೋಪ ತೋರಿಸದೆ, ಆಡಿಯೋ ಲಾಂಚ್ ಗೆ ಬರಬೇಕಾಗಿ ವಿನಂತಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ತೆರೆ ಮೇಲೆ ಬರಬೇಕಾಗಿರುವ ಕುರುಕ್ಷೇತ್ರ, ಇಲ್ಲಿಯೇ ಅಭಿಮಾನಿಗಳಲ್ಲಿ ನಡೆಯುತ್ತಿದೆ. ಹೌದು. ದರ್ಶನ್ ಅವರ ಫೋಟೋ ಇಲ್ಲ ಎಂಬ ಕಾರಣಕ್ಕಾಗಿ, ಅಭಿಮಾನಿಗಳು ಮುನಿರತ್ನ ಅವರ ಮೇಲೆಯೇ ಕುರುಕ್ಷೇತ್ರ ಯುದ್ಧ ಮಾಡಲು ಮುಂದಾಗಿದ್ದಾರೆ. ಆದ್ರೆ ದರ್ಶನ್ ಅವರು ಅಭಿಮಾನಿಗಳಲ್ಲಿ ಮನವಿ ಅಂದಿದ್ದರಿಂದ ಎಲ್ಲರೂ ಸಮಾಧಾನವಾಗಿದ್ದರೆ.

LEAVE A REPLY

Please enter your comment!
Please enter your name here