ನಮಗೂ ಹೆಲ್ಪ್ ಮಾಡಿ ಎಂದು ದರ್ಶನ್ ಗೆ ಮನವಿ ಮಾಡಿರುವ ಖ್ಯಾತ ಥ್ರೋ ಬಾಲ್ ಆಟಗಾರ್ತಿ

0
742
darshan fan krupa

ನಮ್ಮ ಜನರು ಮಾತುಕತೆಗೆ ಅಂದ್ರೆ ಮುಂದೆ ಬರ್ತಾರೆ. ಆದ್ರೆ ಸಹಾಯಕ್ಕೆ ಅಂದ್ರೆ ಯಾರು ಮುಂದೆ ಬರಲ್ಲ. ಯಾಕಂದ್ರೆ ಸಹಾಯ ಮಾಡಿದ್ರೆ ಎಲ್ಲಿ, ನಮ್ಮಲ್ಲಿರುವ ವಸ್ತುವೇನಾದರೂ ಕಳೆದು ಹೋಗುತ್ತದೆ ಅನ್ನೋದು ಅವರಿಗಿರುತ್ತದೆ. ಹಾಗಾಗಿ ಕೆಲವೊಬ್ಬರು ಸಹಾಯ ಅಂದ್ರೆ ದೂರ ಸರಿಯುತ್ತಾರೆ. ಆದರೆ ನಮ್ಮ ಚಂದನವನದಲ್ಲಿ ಸಹಾಯ ಅಂದ್ರೆ ಓಡಿ ಬರುವ ವ್ಯಕ್ತಿ ಅಂದ್ರೆ ಅದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್. ಹೌದು. ಸ್ಯಾಂಡಲ್ ವುಡ್ ನಲ್ಲಿ ಸಹಾಯಸ್ತ ಕೈ ಯಾರದ್ದು ಅಂದ್ರೆ ಅದು ನಮ್ಮ ಡಿ ಬಾಸ್ ಅಂತ ಎಲ್ಲರೂ ಹೇಳ್ತಾರೆ. ಈಗ ಅವರ ಸಹಾಯಸ್ತವನ್ನ ಮತ್ತೊಬ್ಬರು ಕೋರಿದ್ದಾರೆ. ಹೌದು. ನಿಮ್ಮ ಸಹಾಯ ನಮಗೆ ಬೇಕು ಎಂದು ದರ್ಶನ್ ಅಭಿಮಾನಿಯೊಬ್ಬರು, ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಖ್ಯಾತ ಥ್ರೋ ಬಾಲ್ ಆಟಗಾರ್ತಿಯಿಂದ ದರ್ಶನ್ ಗೆ ಮನವಿ

ದಚ್ಚು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾರೆ ಅನ್ನೋ ವಿಷಯ ಎಲ್ಲರಿಗೂ ಗೊತ್ತು. ಹಾಗಾಗಿ ಅವರ ಬಳಿ ನೂರಾರವು ಜನ ಸಹಾಯ ಕೇಳಿಕೊಂಡು ಮನೆ ಬಳಿ ಬರುತ್ತಾರೆ. ಜೊತೆಗೆ ಪಾತ್ರದ ಮೂಲಕ ತಿಳಿಸುತ್ತಾರೆ. ಆ ರೀತಿಯಲ್ಲಿ ಸಹಾಯ ಬೇಡಿ ಬಂದವರನ್ನ ಅವರು ಎಂದಿಗೂ ಕಾಳಿ ಕೈಯಲ್ಲಿ ಕಲಿಸಿಲ್ಲ. ಬದಲಿಗೆ ತಮ್ಮಿಂದಾಗುವ ಸಹಾಯವನ್ನ ಮಾಡುತ್ತಾರೆ. ಹಾಗಾಗಿ ಈಗ ಖ್ಯಾತ ಥ್ರೋ ಬಾಲ್ ಆಟಗಾರ್ತಿಯೊಬ್ಬರು ದರ್ಶನ್ ಅವರನ್ನ ಸಹಾಯ ಮಾಡುವಂತೆ ಕೇಳಿದ್ದಾರೆ. ಹೌದು. ಭಾರತ ಥ್ರೋ ಬಾಲ್ ತಂಡದ ನಾಯಕಿಯಾಗಿರುವ ಕೃಪಾ ಜೆಪಿ ದರ್ಶನ್ ಅಭಿಮಾನಿಯೂ ಆಗಿದ್ದು ಇದೀಗ ನಟನ ಬಳಿ ಮನವಿ ಮಾಡಿಕೊಂಡಿದ್ದಾರೆ.

ಅಭಿಮಾನಿ ಕೃಪಾ ಜೆಪಿ ಇಂದ ಮನವಿ

ದರ್ಶನ್ ಅವರು ಸಹಾಯ ಮಾಡುತ್ತಾರೆ ಅನ್ನೋ ನಂಬಿಕೆಯಿಂದ, ಕೃಪಾ ಜೆಪಿ ಅವರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಹಾಗಾದ್ರೆ ವಿಡಿಯೋ ನಲ್ಲಿ ಇರೋದಾದ್ರೂ ಏನು? ರಾಜ್ಯದಲ್ಲಿ ಸಾಕಷ್ಟು ಉದಯೋನ್ಮುಖ ಆಟಗಾರರಿದ್ದಾರೆ. ಅವರು ಥ್ರೋ ಬಾಲ್ ಕ್ರೀಡೆಯಲ್ಲಿ ಮುಂದೆ ಬರಲು ಇಚ್ಚಿಸುತ್ತಿದ್ದಾರೆ.ಆದರೆ ಅನೇಕ ಕಾರಣಗಳಿಂದ ಅದು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ನೀವು ಕ್ರೀಡೆ, ಕ್ರೀಡಾಪಟುಗಳಿಗೆ ಬೆಂಬಲವಾಗಿ ನಿಲ್ಲಬೇಕು. ನಮ್ಮ ರಾಜ್ಯದಲ್ಲಿ ಉತ್ತಮ ಆಟಗಾರರಿದ್ದೂ ಥ್ರೋ ಬಾಲ್ ಅಷ್ಟೊಂದು ಜನಪ್ರಿಯವಾಗಿಲ್ಲ.ಹಾಗಾಗಿ ನೀವು ಥ್ರೋ ಬಾಲ್ ಮಹಿಳಾ ತಂಡಕ್ಕೆ ಪ್ರೋತ್ಸಾಹ ನೀಡಬೇಕು. ಇದರಿಂದ ಅನೇಕ ಕ್ರೀಡಾಪಟುಗಳಿಗೆ ಸಹಾಯವಾಗಲಿದೆ. ಸಹಾಯ ಮಾಡಿ, ನಮ್ಮನ್ನು ಬೆಂಬಲಿಸಿ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ನಟನಿಗೆ ವಿಡಿಯೋ ತಲುಪುವಂತೆ ಮಾಡುತ್ತಿರುವ ಅಭಿಮಾನಿಗಳು

ಕೃಪಾ ಅವರು ದರ್ಶನ್ ಗೆ ಮಾಡಿರುವ ಮನವಿ, ದರ್ಶನ್ ಗೆ ನೇರವಾಗಿ ತಲುಪುವಂತೆ ಮಾಡಿಲ್ಲ. ಯಾಕಂದ್ರೆ ಅದರ ವಿವರ ಕೃಪಾ ಅವರಿಗೆ ತಿಳಿದಿಲ್ಲ. ಹಾಗಾಗಿ ಒಂದು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದರು. ಈಗ ಆ ವಿಡಿಯೋ ದರ್ಶನ್ ಅವರ ಅಭಿಮಾನಿಗಳಿಗೆ ಸಿಕ್ಕಿದೆ. ಹಾಗಾಗಿ ಅವರ ಅಭಿಮಾನಿಗಳು ದರ್ಶನ್ ಅವರಿಗೆ ತಲುಪಿಸಲು ನೋಡುತ್ತಿದ್ದರು. ಹೌದು. ಕೃಪಾ ಅವರು ದರ್ಶನ್ ಅವರಿಗೆ ಮಾಡಿರುವ ಮನವಿ ಹಾಗೂ ಇದನ್ನ ಹೇಗಾದರೂ ದರ್ಶನ್ ಅವರಿಗೆ ತಲುಪಿಸಿ ಎಂದು ಹೇಳಿರುವುದನ್ನ ನೋಡಿರುವ ದಚ್ಚು ಅಭಿಮಾನಿಗಳು, ಅದನ್ನ ದರ್ಶನ್ ಗೆ ತಲುಪಿಸುಲು ಪ್ರಯತ್ನಿಸುತ್ತಿದ್ದಾರೆ.

ಒಟ್ಟಿನಲ್ಲಿ ದರ್ಶನ್ ಅವರು ಕಷ್ಟ ಎನ್ನುವವರಿಗೆ ಸಹಾಯ ಮಾಡುತ್ತಿರೋದು ಎಲ್ಲರ ಸಂತಸಕ್ಕೆ ಕಾರಣವಾಗಿದೆ. ಜೊತೆಗೆ ಅವರನ್ನ ಈಗಲೂ ಹಲವು ಮಂದಿ ಸದಾ ಕಾಲ ನೆನೆಯುತ್ತೇವೆ ಎಂದು ತಿಳಿಸುತ್ತಾರೆ. ಒಟ್ಟಿನಲ್ಲಿ ದರ್ಶನ್ ಅವರ ಸಹಾಯ ಇದೇ ರೀತಿ ಮುಂದುವರೆಯಬೇಕು ಅನ್ನೋದು ಎಲ್ಲರ ಆಸೆಯಾಗಿದೆ.

LEAVE A REPLY

Please enter your comment!
Please enter your name here