ವಿದ್ಯಾರ್ಥಿಗಳಿಂದ ಪಡೆದ ಉಡುಗೊರೆ ನೋಡಿ, ಸಂತಸ ವ್ಯಕ್ತಪಡಿಸಿದ ಯಜಮಾನ. ಏನೀ ಉಡುಗೊರೆ ?

0
553
darshan colg

ನೋಡೋಕೆ ಆರಡಿ ಕಟೌಟ್. ನೋಡಿದರೆ ಎಂಥವರು ಬೆರಗಾಗುತ್ತಾರೆ. ಅದರಲ್ಲೂ ಈಗಿನ ಪಡ್ಡೆ ಹುಡುಗರಿಗೆ ಇವರು ಅಂದ್ರೆ ಬಹಳ ಇಷ್ಟ. ಇವರ ಹೆಸರಿನ ಮೊದಲ ಅಕ್ಷರದಿಂದ ಇವರನ್ನ ಬಾಸ್ ಅಂತ ಕರೀತಾರೆ. ಯಾಕಂದ್ರೆ ಇವರ ಗತ್ತು ಆ ರೀತಿ ಇದೆ. ಹೌದು. ಇಡೀ ಸ್ಯಾಂಡಲ್ ವುಡ್ ನಲ್ಲಿ ಇವರು ಮಿಂಚುತ್ತಿದ್ದಾರೆ. ಇವರು ತಮ್ಮ ಸಿನಿಮಾಗೆ ನಾಯಕನಾಗಬೇಕು ಅಂತ, ವಿಶೇಷ ರೀತಿಯ ಕಥೆಗಳನ್ನ ಅವರಿಗೋಸ್ಕರ ರೆಡಿ ಮಾಡುತ್ತಾರೆ ನಮ್ಮ ನಿರ್ದೇಶಕರು. ಅಂತ ನಟ ಇವರು.

ಹೌದು. ಇವರ ನಟನೆಯನ್ನ ಮೆಚ್ಚದವರೇ ಯಾರು ಇಲ್ಲ. ಯಾಕಂದ್ರೆ ಇವರ ನಟನೆ ಅಷ್ಟರ ಮಟ್ಟಿಗೆ ಎಲ್ಲರನ್ನ ಗೆದ್ದಿದೆ. ಅವರೇ ನಮ್ಮ ಡಿ ಬಾಸ್ ದರ್ಶನ್. ಹೌದು. ಯಾವ ಫೇಸ್ ಬುಕ್ ಅಥವಾ ಟಿಕ್ ಟಾಕ್ ನಲ್ಲಿ ನೋಡಿದ್ರು, ಬರೀ ಡಿ ಬಾಸ್ ಅಭಿಮಾನಿಗಳದ್ದೇ ಅಬ್ಬರ. ಪಡ್ಡೆ ಹುಡುಗರ ಹಾರ್ಟ್ ನಲ್ಲಿ ಅಷ್ಟು ಆಳಾವಾಗಿ ಇವರು ಇಳಿದಿದ್ದಾರೆ. ಹುಡುಗರು ಇವರನ್ನ ಎಷ್ಟು ಇಷ್ಟ ಪಡುತ್ತಾರೆ ಅನ್ನೋದಕ್ಕೆ ಇಲ್ಲೊಂದು ಸಾಕ್ಷಿಯಿದೆ. ಅದೇನು ಅಂತ ನೀವೇ ನೋಡಿ.

ಪಡ್ಡೆ ಹುಡುಗರನ್ನ ಗೆದ್ದಿರುವ ಡಿ ಬಾಸ್

ದರ್ಶನ್ ತಮ್ಮ ಖಡಕ್ ಡೈಲಾಗ್ ಗಳ ಮೂಲಕ ಹಾಗೂ ತಮ್ಮ ನಟನೆಯ ಮೂಲಕ ಇಡೀ ದೇಶದ ಜನರನ್ನ ಗೆದ್ದಿದ್ದಾರೆ. ಯಾವ ಊರಲ್ಲಿ ನೋಡಿದ್ರೂ, ನಾವು ಡಿ ಬಾಸ್ ಅಭಿಮಾನಿಗಳು ಅಂತಿರ್ತಾರೆ. ಅದರಲ್ಲೂ ಕಾಲೇಜ್ ಹುಡುಗರನ್ನಂತೂ ಕೇಳೋದೇ ಬೇಡ. ಹೆಚ್ಚು, ಕಮ್ಮಿ ಮಾತಾಡಿದ್ರೆ, ಏನು ಬೇಕಾದ್ರು ಮಾಡ್ತಾರೆ. ಆ ರೇಂಜ್ ಗೆ ದರ್ಶನ್ ಅವರನ್ನ ಇಷ್ಟ ಪಡ್ತಾರೆ. ಅದಕ್ಕೆ ಸಾಕ್ಷಿಯಾಗಿ ವಿದ್ಯಾರ್ಥಿಗಳಿಂದ, ದರ್ಶನ್ ಗೆ ಸಿಕ್ಕಿರುವ ಈ ಉಡುಗೊರೆ ನೋಡಿದ್ರೆ, ಎಂಥವರಿಗೂ ಗೊತ್ತಾಗುತ್ತೆ.

ವಿದ್ಯಾರ್ಥಿಗಳನ್ನ ರಂಜಿಸಿದ ಯಜಮಾನ

ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ, ತಮ್ಮ ಕಾಲೇಜು ಫೆಸ್ಟ್ ಗೆ ಬರಬೇಕು ಅಂತ, ಬೆಂಗಳೂರಿನ ಬಿಐಟಿ ಕಾಲೀಜಿನವರು ಆಹ್ವಾನಿಸಿದ್ದರು. ಆದ್ರೆ ಸಾಮಾನ್ಯವಾಗಿ ದರ್ಶನ್ ಅವರು ಕಾಲೇಜ್ ಫೆಸ್ಟ್ ಗಳಿಗೆ ಹೋಗುವುದಿಲ್ಲ. ಆದ್ರೆ, ವಿದ್ಯಾರ್ಥಿಗಳ ಅಭಿಮಾನಕ್ಕೆ ಮಣಿದೆ ದಾಸ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಹೋದ ಯಜಮಾನ, ಸಿನಿಮಾ ಡೈಲಾಗ್ ಹೇಳಿ ವಿದ್ಯಾರ್ಥಿಗಳನ್ನ ರಂಜಿಸಿದರು.

ಬೆಳ್ಳಿ ಗದೆಯನ್ನ ಉಡುಗೊರೆಯಾಗಿ ಪಡೆದ ಡಿ ಬಾಸ್

ತಮ್ಮ ನೆಚ್ಚಿನ ನಾಯಕನನ್ನೇ ಕಾಲೇಜ್ ಫೆಸ್ಟ್ ಗೆ ಅತಿಥಿಯಾಗಿ ಕರೆಸಬೇಕು ಅಂತ ವಿದ್ಯಾರ್ಥಿಗಳು, ಕಾಲೇಜಿನಲ್ಲಿ ತಿಳಿಸಿದ್ದರು. ಅದರಂತೆ, ಕಾಲೇಜು ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳ ಒತ್ತಾಯಕ್ಕೆ ದರ್ಶನ್ ಬಂದಿದ್ದರು. ಈ ವೇಳೆ ತಮ್ಮ ನೆಚ್ಚಿನ ನಟನನ್ನ ಅದ್ಧೂರಿಯಾಗಿ ಸ್ವಾಗತಿಸಿದ ವಿದ್ಯಾರ್ಥಿಗಳು, ಪ್ರೀತಿಯಂದ ಬೆಳ್ಳಿ ಗದೆಯನ್ನ ನೀಡಿ ಗೌರವಿಸಿದರು.

ಬೆಳ್ಳಿ ಗದೆ ಹಿಂದಿರುಗಿಸಿ, ನುಡಿ ಮಾತುಗಳನ್ನಾಡಿದರು

ವಿದ್ಯಾರ್ಥಿಗಳು ಪ್ರೀತಿಯಿಂದ ಕೊಟ್ಟಿದ್ದ ಗದೆಯನ್ನ ದರ್ಶನ್ ಅಷ್ಟೇ ಗೌರವದಿಂದ ಅವರಿಗೆ ವಾಪಾಸ್ ನೀಡಿದ್ದಾರೆ. ವಾಪಾಸ್ ನೀಡಿದ ದರ್ಶನ್, ಈ ಗದೆಯನ್ನ ಬಡವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಬಳಸಿ. ಅದರಿಂದ ಅವರಿಗೆ ಉಪಯೋಗವಾಗುತ್ತದೆ ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. ನಂತರ ವಿದ್ಯಾರ್ಥಿಗಳನ್ನ ಕುರಿತು ಮಾತನಾಡಿದ ದರ್ಶನ್, ನೋಡಿ ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್, ಅಂತಾರೆ. ಆದ್ರೆ ನನಗೆ ಆ ಅದೃಷ್ಟ ಇರಲಿಲ್ಲ. ಯಾಕಂದ್ರೆ ನಾನು, ವಿಸ್ಯಾಭ್ಯಾಸದಲ್ಲಿ ಹಿಂದಿದ್ದೇನೆ. ಆದರೆ ನೀವು ನಿಮ್ಮ ಕಾಲೇಜ್ ಲೈಫ್ ನ ಎಂಜಾಯ್ ಮಾಡಿ. ಚೆನ್ನಾಗಿ ಓದಿಎಂದು ಕಿವಿಮಾತು ಹೇಳಿದ್ರು.

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನಲ್ಲಿ ಹವಾ ಎಬ್ಬಿಸುತ್ತಿರೋ ಡಿ ಬಾಸ್ ನ ಅಬ್ಬರ ಹೊರಗೆ ಎಷ್ಟಿದೆ ಅಂತ ಗೊತ್ತಾಗುತ್ತಿದೆ, ಅವರನ್ನ ಅಭಿಮಾನಿಗಳು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದಾರೆ ಅನ್ನೋದು ತಿಳಿಯುತ್ತಿದೆ. ಇದೇ ರೀತಿ ಮುಂದೆಯೂ ಸಹ ಅವರನ್ನ ಇಷ್ಟ ಪಡುತ್ತಲೇ ಇರುತ್ತಾರೆ ನಮ್ಮ ಜನರು

LEAVE A REPLY

Please enter your comment!
Please enter your name here