ಡಿ ಬಾಸ್ ಮನೆಗೆ ಮತ್ತೊಂದು ಕಾಸ್ಟ್ಲಿ ಕಾರ್ ಎಂಟ್ರಿ. ನೋಡಿದವರು ಫುಲ್ ಫಿದಾ

0
1309
darshan car

ನಮ್ಮ ಸ್ಯಾಂಡಲ್ ವುಡ್ ನಟರಿಗೆ ಹಾಗೂ ನಟಿಯರಿಗೆ ಅದ್ಯಾವ್ಯಾವ ಆಸೆಗಳಿರುತ್ತವೋ ಗೊತ್ತಿಲ್ಲ. ವಿಶೇಷ ಸ್ಥಳಗಳಿಗೆ ಹೋಗೋದು, ವಿಶೇಷ ವಸ್ತುಗಳನ್ನ ಕೊಳ್ಳೋದು, ಈ ರೀತಿ ಅನೇಕ ಆಸೆಗಳನ್ನ ಹೊತ್ತಿರುತ್ತಾರೆ. ಬಜಾರ್ ಗೆ ಏನಾದ್ರು ಹೊಸದು ಬಂದಿದೆ ಅಂದ್ರೆ, ಅದನ್ನ ಕೊಂಡುಕೊಳ್ಳೋ ವರೆಗೂ ಕೆಲವರಿಗಂತೂ ಸಮಾಧಾನ ಇರಲ್ಲ. ಯಾಕಂದ್ರೆ ಅವರಿಗೆ ಆ ವಸ್ತುಗಳು ಅವರ ಮನಸ್ಸನ್ನ ತುಂಬಾ ಕೆಡಿಸಿರುತ್ತವೆ. ಹಾಗಾಗಿ ತಟ್ಟನೆ ಹೋಗಿ, ಅದನ್ನ ತಮ್ಮ ಮನೆಗೆ ತರುತ್ತಾರೆ.

ಈಗ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ, ಇದೇ ಸಾಲಿನಲ್ಲಿದ್ದಾರೆ. ಹೌದು. ನಮ್ಮ ಯಜಮಾನನಿಗೆ ಕಾರುಗಳು ಅಂದ್ರೆ ತುಂಬಾ ಇಷ್ಟ. ಮಾರ್ಕೆಟ್ ಗೆ ಯಾವುದಾದ್ರೂ ಹೊಸ ಕಾರ್ ಬಂದಿದೆ ಅಂತ ಗೊತ್ತಾದ್ರೆ ಸಾಕು, ಅದನ್ನ ಮನೆಗೆ ತರೋವರೆಗೂ, ಅವರಿಗೆ ಸಮಾಧಾನ ಇರಲ್ಲ. ಹಾಗಾಗಿ ಈಗ ಮಾರ್ಕೆಟ್ ಗೆ ಬಂದಿರುವ ಹೊಸ ವಸ್ತುವನ್ನ, ಮನೆಗೆ ಅತಿಥಿಯಾಗಿ ಕರೆತಂದಿದ್ದಾರೆ.

ದರ್ಶನ್ ಮನೆ ಅಂಗಳದಲ್ಲಿ ಮತ್ತೊಂದು ಕಾರ್

ದರ್ಶನ್ ಗೆ ಕಾರ್ ಗಳ ಮೇಲಿನ ಕ್ರೇಜ್ ತುಂಬಾ ಇದೆ. ಹಾಗಾಗಿ ಹೊಸ ಕಾರ್ ಬಂದಿದೆ ಅಂದ್ರೆ ಸಾಕು, ಅದು ಎಷ್ಟಾದರೂ ಆಗಿರ್ಲಿ, ಅದನ್ನ ಕೊಂಡ್ಕೋತಾರೆ. ಅದರಂತೆ, ಈಗ ಮಾರ್ಕೆಟ್ ಗೆ ಬಂದಿರೋ ಹೊಸ ಕಾರನ್ನ ಖರೀದಿ ಮಾಡಿದ್ದಾರೆ. ಇದೇ ತರದ ಕಾರು ಅವರ ಮನೆಯಲ್ಲಿ ಇತ್ತು. ಆದ್ರೆ ಮತ್ತೆ ಈಗ ಅದೇ ತರದ ಕಾರನ್ನ ತಂದಿದ್ದಾರೆ. ಅವರು ಮೊದಲು ತಂದಿದ್ದ, ಕಾರಿಗಿಂತ ಇದು ಅವರಿಗೆ ತುಂಬಾ ಇಷ್ಟವಾಗಿದೆಯಂತೆ.

ಡಿ ಬಾಸ್ ಮನೆಗೆ ಬಂತು ಲಂಬೋರ್ಗಿನಿ ಕಾರು

ಈಗ ನಮ್ಮ ದಚ್ಚು ತಂದಿರೋ ಕಾರಿನ ಹೆಸರು ಲಂಬೋರ್ಗಿನಿ ಅಂತ. ಈಗಾಗಲೇ ಅವರ ಮನೆಯಲ್ಲಿ ಲಂಬೋರ್ಗಿನಿ ಕಾರು ಇದೆ. ಆದ್ರೆ ಈಗ ಮತ್ತೆ ಅದೇ ಕಾರನ್ನ ತಂದಿದ್ದಾರೆ. ಆದ್ರೆ ಆ ಕಾರಿಗೂ, ಈ ಕಾರಿಗೂ ಕೊಂಚ ವ್ಯತ್ಯಾಸವಿದೆ. ಅವರ ಬಳಿ ಮೊದಲು ಇದ್ದ ಕಾರು ಬಿಳಿ ಬಣ್ಣದ ಲಂಬೋರ್ಗಿನಿ ಅವೆಂಟೆಡರ್. ಆದ್ರೆ ಈಗ ಅವರು ಕೊಂಡಿರೋ ಕಾರ್, ಹಳದಿ ಬಣ್ಣದ ಲಂಬೋರ್ಗಿನಿ ಉರುಸ್. ಈ ಕಾರುಗಳು ಹೆಸರುಗಳಲ್ಲಿ ಮಾತ್ರ ವ್ಯತ್ಯಾಸವಿಲ್ಲ. ಅದರ ರೇಟ್ ನಲ್ಲಿಯೂ ವ್ಯತ್ಯಾಸವಿದೆ.

ಹೊಸ ಕಾರಿನಲ್ಲಿ ಮೈಸೂರು ರೌಂಡ್ ಹಾಕಿದ ದಾಸ

ಈಗ ಅವರು ಹೊಸದಾಗಿ ಕೊಂಡಿರೋ ಕಾರಿನ ಬೆಲೆ ಸುಮಾರು 3 ಕೋಟಿ. ಆದ್ರೆ ಮೊದಲಿಗೆ ಅವರ ಬಳಿ ಇದ್ದ ಕಾರಿನ ಬೆಲೆ 5 ಕೋಟಿ. ಆದ್ರೆ ಈ ಕಾರು ಅವರಿಗೆ ತುಂಬಾ ಇಷ್ಟ ಆದ್ದರಿಂದ, ಅವರು ಈ ಕಾರನ್ನ ಕೊಂಡುಕೊಂಡಿದ್ದಾರೆ. ದರ್ಶನ್ ಅವರ ಮನೆಗೆ ಯಾವುದೇ ಹೊಸ ಗಾಡಿ ಬಂದರೆ, ಅವರು ಮೊದಲು ಚಾಮುಂಡಿ ಬೆಟ್ಟಕ್ಕೆ ಹೋಗಿ, ಗಾಡಿಗೆ ಪೂಜೆ ಮಾಡಿಸುತ್ತಾರೆ. ಅದರಂತೆ ಈಗ ಈ ಕಾರಿಗೂ ಸಹ ಪೂಜೆ ಮಾಡಿಸಿ, ಮೈಸೂರಿನ ಸುತ್ತಮುತ್ತ ರೌಂಡ್ ಹಾಕಿದ್ದಾರೆ. ಇದರಿಂದ ಅವ್ರು ಹೊಸ ಕಾರು ಖರೀದಿ ಮಾಡಿರೋ ವಿಷಯ ಮೈಸೂರಿನ ಜನತೆಗೆ ಬೇಗನೆ ತಿಳಿದಿದೆ.

ಡಿ ಬಾಸ್ ಕಾರಿನ ಜೊತೆ ಧನ್ವೀರ್

ದರ್ಶನ್ ಹೊಸದಾಗಿ ಏನೇ ಕೊಂಡುಕೊಂಡ್ರು, ಆತ್ಮೀಯರು ಹಾಗೂ ಸ್ನೇಹಿತರು ಅವರ ಮನೆಗೆ ಬರೋದು ಸಾಮಾನ್ಯ. ಯಾಕಂದ್ರೆ ದರ್ಶನ್ ಆ ರೀತಿಯ ಸ್ನೇಹಿತರನ್ನ ಹೊಂದಿದ್ದಾರೆ. ಹಾಗಾಗಿ ಈಗ ಈ ಹೊಸ ಕಾರನ್ನ ತಂದಿರುವ ಖುಷಿಗೆ, ಅವರ ಮನೆಗೆ ಅತಿಥಿಯಾಗಿ ಬಜಾರ್ ಚಿತ್ರದ ನಾಯಕ ಧನ್ವೀರ್ ಬಂದಿದ್ದಾರೆ. ಕಾರಿನ ಜೊತೆಗೆ ನಿಂತು, ಫೋಟೋ ತೆಗೆಸಿಕೊಂಡಿದ್ದಾರೆ. ಈಗ ಈ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

ಸ್ಯಾಂಡಲ್ ವುಡ್ ನಲ್ಲಿ ಮತ್ತೊಬ್ಬ ನಟನ ಬಳಿ ಇರುವ ಕಾರು

ಸ್ಯಾಂಡಲ್ ವುಡ್ ನಲ್ಲಿ ಇದೇ ಕಾರು ಮತ್ತೊಬ್ಬ ನಟನ ಬಳಿ ಇದೆ. ಹೌದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ, ಈ ಕಾರನ್ನ ಖರೀದಿ ಮಾಡಿದ್ದಾರೆ. ಇದೇ ತಿಂಗಳ ಮಾರ್ಚ್ ನಲ್ಲಿ ನೀಲಿ ಬಣ್ಣದ ಕಾರನ್ನ ಖರೀದಿ ಮಾಡಿದ್ದರು. ಆದ್ರೆ ಅದು ಅಷ್ಟಾಗಿ ಯಾರಿಗೂ ತಿಳಿಯಲಿಲ್ಲ. ಆದ್ರೆ ಈಗ ಅದೇ ತರಹದ ಹಳದಿ ಬಣ್ಣದ ಕಾರನ್ನ ದಚ್ಚು ಖರೀದಿ ಮಾಡಿದ್ದಾರೆ.

ಒಟ್ಟಿನಲ್ಲಿ ನಮ್ಮ ದಚ್ಚು ಗೆ ಕಾರ್ ಗಳ ಮೇಲೆ ಎಷ್ಟು ಕ್ರೇಜ್ ಇದೇ ಅನ್ನೋದು, ಇದನ್ನ ನೋಡಿದ ಮೇಲೆ ಗೊತ್ತಾಗುತ್ತಿದೆ. ಯಾಕಂದ್ರೆ ಈಗಾಗಲೇ ಅವರ ಮನೆಯಲ್ಲಿ ಹಲವು ಕಾರ್ ಗಳಿವೆ. ಆದ್ರೂ, ಹೊಸದಾಗಿ ಬಂದಿರುವ ಈ ಕಾರ್ ಕೊಂಡುಕೊಂಡಿರೋದು, ಕಾರ್ ಗಳ ಮೇಲೆ ಅವರಿಗಿರುವ ಕ್ರೇಜ್ ಎಂಥದ್ದು ಅಂತ ತೋರಿಸುತ್ತೆ.

LEAVE A REPLY

Please enter your comment!
Please enter your name here