ದಚ್ಚು ಕ್ಲಿಕ್ಕಿಸಿದ ಫೋಟೋವನ್ನ, ಚಿಕ್ಕಣ್ಣ ಭಾರಿ ಮೊತ್ತದಲ್ಲಿ ಖರೀದಿಸಿದ್ದಾದ್ರೂ ಏಕೆ?

0
567
darshan animal

ನಮ್ಮ ಸ್ಯಾಂಡಲ್ ವುಡ್ ನಟರು, ನಟನೆ ಮಾಡುವುದರ ಜೊತೆಗೆ, ಕೆಲವು ಉತ್ತಮ ಹವ್ಯಾಸಗಳನ್ನೂ ಸಹ ರೂಢಿಸಿಕೊಂಡಿರುತ್ತಾರೆ. ಹೌದು. ಒಬ್ಬೊಬ್ಬರು, ಒಂದೊಂದು ರೀತಿ ಕಲೆಯನ್ನ ಹೊಂದಿರುತ್ತಾರೆ. ಕೆಲವರು ಕ್ರೀಡೆ ವಿಷಯವನ್ನ ಅಳವಡಿಸಿಕೊಂಡಿರ್ತಾರೆ, ಇನ್ನೂ ಕೆಲವರು ಪ್ರಾಣಿ, ಪಕ್ಷಿಗಳನ್ನ ಸಾಕೋ ಅಂತ ಹವ್ಯಾಸ ಮಾಡಿಕೊಂಡಿರ್ತಾರೆ. ಈ ರೀತಿ ಪ್ರಾಣಿ, ಪಕ್ಷಿಗಳನ್ನ ಸಾಕುವ ಆಸಕ್ತಿಯನ್ನ ಹೆಚ್ಚಾಗಿ ಹೊಂದಿರುವವರು ಅಂದ್ರೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್.

ನಮ್ಮ ದಚ್ಚು ಗೆ ಪ್ರಾಣಿ, ಪಕ್ಷಿ ಸಾಕುವುದು, ಅವುಗಳ ಪೋಷಣೆ ಮಾಡುವುದು ಅಂದ್ರೆ, ತುಂಬಾ ಇಷ್ಟ. ಹಾಗಾಗಿ, ಪ್ರಾಣಿ ಪಕ್ಷಿಗಳನ್ನ ಸಾಕುವ ವಿಚಾರದಲ್ಲಿ ಇವರೇ ತುಂಬ ಮುಂದಿದ್ದಾರೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ. ಅಲ್ಲದೆ ಇವರು ತಮ್ಮ ಫಾರ್ಮ್ ಹೌಸ್ ನಲ್ಲಿ, ಒಂದು ಮೃಗಾಲಯವನ್ನೇ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಬಿಡುವು ಸಿಕ್ಕಾಗ, ಯಾವಾಗಲು ದಚ್ಚು ಇಲ್ಲೇ ಕಾಲ ಕಳೆಯುತ್ತಾರೆ. ಅಲ್ಲದೇ ದರ್ಶನ್ ಅವರಿಗೆ ಇನ್ನೊಂದು ಹವ್ಯಾಸವಿದೆ. ಪ್ರಾಣಿ, ಪಕ್ಷಿಗಳ ಫೋಟೋ ಸೆರೆ ಹಿಡಿಯೋದು ಅಂದ್ರೆ, ಅವರಿಗೆ ತುಂಬಾ ಇಷ್ಟ. ಹಾಗಾಗಿ ಯಾವಾಗಲು, ಪ್ರಾಣಿ, ಪಕ್ಷಿಗಳ ಫೋಟೋ ತೆಗೆಯುತ್ತಲೇ ಇರುತ್ತಾರೆ. ಅದೇ ರೀತಿ ಈಗ ನಮ್ಮ ದಾಸ ಕ್ಲಿಕ್ ಮಾಡಿರುವ ಫೋಟೋವೊಂದನ್ನ ನಮ್ಮ ಚಿಕ್ಕಣ್ಣ ಭಾರಿ ಮೊತ್ತದಲ್ಲಿ ಕೊಂಡುಕೊಂಡಿದ್ದಾರೆ.

ಪ್ರಾಣಿ, ಪಕ್ಷಿಗಳ ಫೋಟೋ ಸೆರೆ ಹಿಡಿಯುವ ದಾಸ

ಪ್ರಾಣಿ, ಪಕ್ಷಿಗಳ ಮೇಲೆ ವಿಶೇಷ ಮಮತೆ ಹೊಂದಿರುವ ದಾಸ, ತನ್ನದೇ ಆದ ಫಾರ್ಮ್ ಹೌಸ್ ಮಾಡಿಕೊಂಡಿದ್ದಾರೆ. ಅದರಲ್ಲಿ ವಿಭಿನ್ನ ಬಗೆಯ ಪ್ರಾಣಿ, ಪಕ್ಷಿಗಳನ್ನ ಸಾಕಿದ್ದಾರೆ. ಬಿಡುವಿನ ಸಮಯದಲ್ಲಿ ಹಾಗೂ ಬೇಸರವಾದಾಗ, ದರ್ಶನ್ ಯಾವಾಗಲು ಈ ಫಾರ್ಮ್ ಹೌಸ್ ಗೆ ಬಂದು ಕಾಲ ಕಳೆಯುತ್ತಾರೆ. ಜೊತೆಗೆ ದರ್ಶನ್ ತಮ್ಮ ಬಿಡುವಿನ ಸಮಯನ್ನ ಇನ್ನೂ ಹೆಚ್ಚಾಗಿ ಅರಣ್ಯಗಳಲ್ಲಿ ಕಳೆಯುತ್ತಾರೆ. ಯಾಕಂದ್ರೆ, ದರ್ಶನ್ ಅವರಿಗೆ ಪ್ರಾಣಿ, ಪಕ್ಷಿಗಳ ವಿಶೇಷವಾದ ಫೋಟೋ ತೆಗೆಯುವುದು ಅಂದ್ರೆ, ತುಂಬಾ ಇಷ್ಟ. ಹಾಗಾಗಿ ಅರಣ್ಯದ ಕಡೆಗೆ, ಅಥವಾ ಪ್ರಾಣಿಗಳಿರುವ ಜಾಗಗಳಿಗೆ ಹೋಗುತ್ತಲೇ ಇರುತ್ತಾರೆ. ಆ ಫೋಟೋಗಳನ್ನ ತೆಗೆದು, ಇತರರಿಗೆ ಮಾರಾಟ ಮಾಡುತ್ತಾರೆ.

ದರ್ಶನ್ ಕ್ಲಿಕ್ಕಿಸಿರುವ ಫೋಟೋವನ್ನ ಭಾರಿ ಮೊತ್ತದಲ್ಲಿ ಕೊಂಡುಕೊಂಡ ಚಿಕ್ಕಣ್ಣ

ದರ್ಶನ್ ಕಳೆದ ಕೆಲವು ದಿನಗಳ ಹಿಂದೆ, ಪ್ರಾಣಿಗಳ ಫೋಟೋ ತೆಗೆಯುವುದಕ್ಕಾಗಿ ಹೋಗಿದ್ದರು. ಆಗ ಅಲ್ಲಿದ್ದಂತಹ ಆನೆ ಫೋಟೋವನ್ನ ತೆಗೆದಿದ್ದರು. ನಿಜಕ್ಕೂ ಆ ಫೋಟೋ ಬಹಳ ಅದ್ಭುತವಾಗಿ ಬಂದಿತ್ತು. ಈಗ ಅದನ್ನ ನಮ್ಮ ಹಾಸ್ಯ ನಟ ಚಿಕ್ಕಣ್ಣ ಕೊಂಡುಕೊಂಡಿದ್ದಾರೆ. ಹೌದು. ಈ ಆನೆ ಫೋಟೋಗೆ ಚಿಕ್ಕಣ್ಣ ಸುಮಾರು 1 ಲಕ್ಷ ನೀಡಿ, ದರ್ಶನ್ ಅವರ ಕೈಯಿಂದಲೇ ಪಡೆದುಕೊಂಡಿದ್ದಾರೆ. ಈ ಹಿಂದೆಯೂ ಸಹ ನಿರ್ಮಾಪಕ ಉಮಾಪತಿ ಅವರು 10000 ರೂ. ನೀಡಿ ಫೋಟೋ ಒಂದನ್ನು ಖರೀದಿಸಿ ಅದನ್ನು ನಟ ಶ್ರೀಮುರಳಿ ಅವರಿಗೆ ಗಿಫ್ಟ್ ಆಗಿ ನೀಡಿದ್ದರು. ಈ ರೀತಿ ನಮ್ಮ ದಚ್ಚು ಕ್ಲಿಕ್ಕಿಸಿರುವ ಫೋಟೋಗಳನ್ನ ಇತರರು, ಖರೀದಿ ಮಾಡುತ್ತಲೇ ಇರುತ್ತಾರೆ.

ಬಂದ ಹಣವನ್ನ ಅರಣ್ಯ ಇಲಾಖೆಗೆ ನೀಡುವ ದರ್ಶನ್

ತಾನು ಸೆರೆ ಹಿಡಿಯುವಂತ ಫೋಟೋಗಳನ್ನ ದರ್ಶನ್ ಅವರು ಹರಾಜು ಹಾಕಿ, ಅದರಿಂದ ಬಂದ ಹಣವನ್ನ ಅರಣ್ಯ ಇಲಾಖೆಗೆ ನೀಡುತ್ತಾರೆ. ಹೌದು. ಯಾಕಂದ್ರೆ, ಇವರಿಗೆ ಪ್ರಾಣಿಗಳ ಮೇಲೆ ಹೆಚ್ಚಿನ ಮಮತೆ ಇರುವುದರಿಂದ, ಇಲಾಖೆಗೆ ಹಣವನ್ನ ನೀಡುವುದರ ಮೂಲಕ, ಪ್ರಾಣಿಗಳ ಪೋಷಣೆಯಲ್ಲಿ ತಮಗಿರುವ ಒಲವು ಎಂಥದ್ದು ಎಂದು ತಿಳಿಸುತ್ತಿದ್ದಾರೆ. ಅಲ್ಲದೇ ನಮ್ಮ ದಚ್ಚು ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದಾರೆ. ಹಾಗಾಗಿ ಇವರಿಗೆ ಮೃಗಾಲಯಗಳ ಬಗ್ಗೆ, ಹೆಚ್ಚಿನ ಆಸಕ್ತಿಯಿದೆ. ಆದ್ರೆ ಇವರು ತಮಗಿರುವ ಆಸಕ್ತಿಯನ್ನ ಜವಾಬ್ದಾರಿಯಾಗಿ ತೆಗೆದುಕೊಂಡಿದ್ದಾರೆ.

ನಿಜಕ್ಕೂ ನಮ್ಮ ದಚ್ಚು ಗೆ ಪ್ರಾಣಿಗಳ ಮೇಲೆ ಇರುವ ಮಮತೆ ನೋಡಿದರೆ ತುಂಬ ಖುಷಿಯಾಗುತ್ತೆ. ಯಾಕಂದ್ರೆ, ಅವರು ತಮಗಿರುವ ಆಸಕ್ತಿಯನ್ನ ಜವಾಬ್ದಾರಿಯಾಗಿ ರೂಪಿಸಿಕೊಂಡಿದ್ದಾರೆ. ಹಾಗಾಗಿ ಮೃಗಾಲಯಗಳ ಹಾಗೂ ಅರಣ್ಯ ಇಲಾಖೆಯ ಜವಾಬ್ದಾರಿ ಹೊತ್ತು, ಪ್ರಾಣಿಗಳ ಸಂರಕ್ಷಣೆಯಲ್ಲಿ ಮುಳುಗಿದ್ದಾರೆ.

LEAVE A REPLY

Please enter your comment!
Please enter your name here