ನಾನೇಕೆ ಹಿಂದೆ ಸರಿಯಲಿ ಎಂದು ದರ್ಶನ್ ಗೆ ಟಾಂಗ್ ನೀಡಿದ ಸುದೀಪ್. ಯಾವ ವಿಷಯಕ್ಕೆ?

0
602
darshan and sudeep

ಕನ್ನಡ ಚಿತ್ರರಂಗದಲ್ಲಿ ದಿಗ್ಗಜರು ಅಂದ್ರೆ ವಿಷ್ಣು ಹಾಗು ಅಂಬಿ. ನಂತರ ಅವರ ಸಾಲಿಗೆ ಬಂದವರು ಅಂದ್ರೆ ದರ್ಶನ್ ಹಾಗು ಸುದೀಪ್. ಹೌದು. ವಿಷ್ಣು, ಅಂಬಿಯನ್ನು ಬಿಟ್ಟರೆ ಸ್ಯಾಂಡಲ್ ವುಡ್ ನಲ್ಲಿ ದಿಗ್ಗಜರು ಎಂಬ ಹೆಸರು ಪಡೆದಿದ್ದು ದಚ್ಚು ಹಾಗು ಕಿಚ್ಚ. ಆದ್ರೆ ಇದ್ದಕ್ಕಿದ್ದಂತೆ ಅವರ ಸ್ನೇಹದಲ್ಲಿ ಬಿರುಕು ಉಂಟಾಗುತ್ತದೆ. ಹೌದು. ಕುಚ್ಚಿಕುಗಳಂತೆ ಇದ್ದ ಇವರಿಬ್ಬರ ಮಧ್ಯೆ ವೈಮನಸ್ಸು ಉಂಟಾಗಿ ದೂರಾಗುತ್ತಾರೆ. ಆಗಿಂದ ಒಬ್ಬರ ವಿಚಾರ ಇನ್ನೊಬ್ಬರು ಮಾತನಾಡುವುದಿಲ್ಲ. ಆದ್ರೆ ಪರೋಕ್ಷವಾಗಿ ಮಾತ್ರ ಟಾಂಗ್ ನೀಡುತ್ತಾರೆ. ಅದೇ ರೀತಿ ಕೆಲವು ದಿನಗಳ ಹಿಂದೆ ದರ್ಶನ್, ಸುದೀಪ್ ಗೆ ಟಾಂಗ್ ನೀಡಿದ್ದರು. ಆದ್ರೆ ಆ ಮಾತು ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಸುದೀಪ್, ದರ್ಶನ್ ಗೆ ಟಾಂಗ್ ನೀಡಿದ್ದಾರೆ.

ದಚ್ಚುಗೆ ಪರೋಕ್ಷವಾಗಿ ಟಾಂಗ್ ನೀಡಿದ ಕಿಚ್ಚ

ಗಾಂಧಿ ನಗರದಲ್ಲಿ ಒಬ್ಬ ನಟನಿಗೆ ಮತ್ತೊಬ್ಬ ನಟ ಟಾಂಗ್ ನೀಡುವುದು ಮಾಮೂಲು. ಆದ್ರೆ ದರ್ಶನ್ ಹಾಗು ಸುದೀಪ್ ನಡುವಿನ ವಿಚಾರ ಎಲ್ಲರಿಗೂ ಹೆಚ್ಚಿನ ಕುತೂಹಲವಾಗಿರುತ್ತದೆ. ಅದೇ ರೀತಿ ಇವರಿಬ್ಬರು ಆಗಾಗ ಟಾಂಗ್ ನೀಡುತ್ತಲೇ ಇರುತ್ತಾರೆ. ಈಗ ಸುದೀಪ್ ದರ್ಶನ್ ಗೆ ಟಾಂಗ್ ನೀಡಿದ್ದಾರೆ. ಹೌದು. ಸುದೀಪ್ ತಮ್ಮ ಮುಂದಿನ ಸಿನಿಮಾ ‘ರಾಜ ಮದಕರಿ’ ಅಥವಾ ‘ದುರ್ಗದ ಹುಲಿ’ ಮಾಡಬೇಕು ಎಂದುಕೊಂಡಿದ್ದರು. ಅದರಂತೆ ಅದರ ಬಗ್ಗೆ ಮಾತುಕತೆ ಕೂಡ ನಡೆಯುತ್ತಿತ್ತು. ಆದ್ರೆ ಇದ್ದಕ್ಕಿದ್ದಂತೆ ಆ ಸಿನಿಮಾದಿಂದ ಹಿಂದೆ ಸರಿದಿದ್ದಾರೆ. ಯಾಕಂದ್ರೆ ದರ್ಶನ್ ಕೂಡ ಮದಕರಿ ಹೆಸರಿನಲ್ಲಿ ಸಿನಿಮಾ ಮಾಡಲು ನಿರ್ಧರಿಸಿದ್ದಾರಂತೆ. ಹೌದು. ದರ್ಶನ್ ‘ಗಂಡುಗಲಿ ವೀರ ಮದಕರಿ’ ಸಿನಿಮಾ ಮಾಡಲು ಯೋಚಿಸಿರೋದ್ರಿಂದ, ಕಿಚ್ಚ ತಮ್ಮ ಸಿನಿಮಾದಿಂದ ಹಿಂದೆ ಸರಿದಿದ್ದಾರಂತೆ.

ನಾನು ಯಾರಿಗಾಗಿಯೂ ಸಿನಿಮಾದಿಂದ ಹಿಂದೆ ಸರಿದಿಲ್ಲ

ಇನ್ನು ಸುದೀಪ್ ತಮ್ಮ ಸಿನಿಮಾದಿಂದ ಹಿಂದೆ ಸರಿದಿರುವುದರಿಂದ ಎಲ್ಲರು ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ದರ್ಶನ್ ಅವರಿಗೋಸ್ಕರ ನೀವು ಸಿನಿಮಾದಿಂದ ಹಿಂದೆ ಸರಿದಿದ್ದೀರಾ? ಎಂದು ಕೇಳಿದ್ದಾರೆ. ಆದರೆ ಅದಕ್ಕೆ ಸುದೀಪ್ ತಮ್ಮ ಉತ್ತರದ ಮೂಲಕ ದರ್ಶನ್ ಗೆ ಟಾಂಗ್ ನೀಡಿದ್ದಾರೆ. ನಾನು ಯಾರಿಗಾಗಿಯೂ ಸಿನಿಮಾದಿಂದ ಹಿಂದೆ ಸರಿದಿಲ್ಲ. ಬದಲಿಗೆ ಚಿತ್ರದ ನಿರ್ಮಾಪಕರಿಗಾಗಿ ಹಿಂದೆ ಸರಿದಿದ್ದೇನೆ ಅಷ್ಟೆ. ಯಾಕಂದ್ರೆ ಒಂದೇ ಹೆಸರಿನಲ್ಲಿ ಎರಡೆರಡು ಸಿನಿಮಾಗಳು ಬಂದ್ರೆ ಚೆನ್ನಾಗಿರಲ್ಲ. ಹಾಗಾಗಿ ಇದರ ಬಗ್ಗೆ ನಾನು, ಹಾಗು ನನ್ನ ಟೀಮ್ ಮಾತಾಡಿ, ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅದನ್ನು ಬಿಟ್ಟು, ಯಾರೋ ಸಿನಿಮಾ ಮಾಡುತ್ತಿದ್ದಾರೆ ಎಂದು ನಾನು ಹಿಂದೆ ಸರಿದಿಲ್ಲ. ಜೊತೆಗೆ ಯಾರಿಗೋಸ್ಕರವೂ ನಾನು ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ನಾಡಿನ ವೀರನ ಕಥೆ ಗೆಲ್ಲಬೇಕೆ ಹೊರತು ಮತ್ಯಾರು ಅಲ್ಲ

ದರ್ಶನ್ ಗೆ ಪರೋಕ್ಷವಾಗಿ ಟಾಂಗ್ ನೀಡಿದ ಸುದೀಪ್, ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಹೌದು. ನಾನು ಸಿನಿಮಾ ಬಿಡಲು ಕಾರಣ ಒಂದೇ. ಅದು ನಮ್ಮ ನಾಡಿನ ವೀರನಿಗಾಗಿ. ಯಾಕಂದ್ರೆ ಒಂದೇ ಹೆಸರಲ್ಲಿ ಎರಡು ಸಿನಿಮಾ ಮಾಡೋದ್ರಿಂದ ಯಾರಿಗೂ ಉಪಯೋಗವಿಲ್ಲ. ಆಗಂತ ಬೇರೆ ಯಾರಿಗಾಗಿಯೂ ನಾನು ಹಿಂದೆ ಸರಿದಿಲ್ಲ. ಇಲ್ಲಿ ಯಾರು ಗೆಲ್ಲಬೇಕು ಅನ್ನೋದು ಮುಖ್ಯವಲ್ಲ. ನನಗೆ ನಮ್ಮ ನಾಡಿನ ವೀರನ ಕಥೆ ಗೆಲ್ಲಬೇಕು ಅಷ್ಟೆ. ಅದು ಯಾರಿಂದ ಆದರೂ ಸರಿ. ನನಗೇನು ಬೇಸರವಿಲ್ಲ. ಒಟ್ಟಿನಲ್ಲಿ ನಮ್ಮ ವೀರನ ಕಥೆ ಗೆಲ್ಲಬೇಕೆ ಹೊರತು, ಬೇರೆ ಯಾರು ಅಲ್ಲ ಎಂದು ತಿಳಿಸಿದ್ದಾರೆ.

darshan and sudeep

ಒಟ್ಟಿನಲ್ಲಿ ದಿಗ್ಗಜರ ರೀತಿ ಇದ್ದ ಸ್ನೇಹಿತರು ಈಗ ಒಬ್ಬರಿಗೊಬ್ಬರು ಟಾಂಗ್ ನೀಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ದರ್ಶನ್, ಸುದೀಪ್ ಗೆ ಟಾಂಗ್ ನೀಡಿದ್ದರು. ಈಗ ಸುದೀಪ್, ದರ್ಶನ್ ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

LEAVE A REPLY

Please enter your comment!
Please enter your name here