ರೈತರು ಚೆನ್ನಾಗಿದ್ದರೆ ಮಾತ್ರ ನಮ್ಮ ಹೊಟ್ಟೆಗೆ ಕೂಳು ಸಿಗುವುದು – ಡಿ ಬಾಸ್

0
644
darshan and farmer

ಮನುಷ್ಯ ಇಂದು ಬದುಕಿದ್ದಾನೆ ಅಂದ್ರೆ ಅದು ಗಾಳಿ, ಬೆಳಕು, ನೀರು ಹಾಗು ಆಹಾರದಿಂದ. ಈ ಗಾಳಿ, ಬೆಳಕು ಹಾಗು ನೀರು ಯಾವುದೇ ವ್ಯಕಿಯಿಂದಲೂ ನಮಗೆ ಸಿಗುವುದಿಲ್ಲ. ಯಾಕಂದ್ರೆ ಇದು ಪ್ರಕೃತಿಯಿಂದ ನೇರವಾಗಿ ದೊರೆಯುತ್ತದೆ. ಆದ್ರೆ ಆಹಾರ ಅನ್ನೋದು ಮಾತ್ರ ರೈತನ ಭಿಕ್ಷೆ. ಹೌದು. ರೈತ ಹೊಲದಲ್ಲಿ ಕಷ್ಟಪಟ್ಟು ದುಡಿದರೆ ಮಾತ್ರ, ಎಲ್ಲರಿಗು ಆಹಾರ ಸಿಗುವುದು. ಇಲ್ಲವಾದ್ರೆ ಮನುಷ್ಯ ಒಂದು ದಿನವು ಬದುಕಿರಲಾರ. ಹಾಗಾಗಿ ನಾವು ಪ್ರತಿದಿನ ರೈತನನ್ನು ನೆನೆಯಲೇಬೇಕು. ಇಂದು ಅಂತಹ ರೈತರ ದಿನಾಚರಣೆಯನ್ನು ಎಲ್ಲೆಡೆ ಆಚರಿಸುತ್ತಿದ್ದಾರೆ. ಹೌದು. ಇಂದು ವಿಶ್ವ ರೈತ ದಿನಾಚರಣೆ. ಹಾಗಾಗಿ ಎಲ್ಲರು ರೈತರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಅದರಲ್ಲಿ ನಮ್ಮ ಸ್ಯಾಂಡಲ್ ವುಡ್ ನಟರೂ ಇದ್ದಾರೆ. ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ರೈತರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ರೈತರಿಗೆ ಶುಭಾಶಯ ತಿಳಿಸಿದ ಡಿ ಬಾಸ್

ಇಂದು ವಿಶ್ವ ರೈತ ದಿನಾಚರಣೆ ಆಗಿರುವುದರಿಂದ ಪ್ರತಿಯೊಬ್ಬರು ಇಂದು ರೈತರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಆದ್ರೆ ಈ ಶುಭಾಶಯ ಕೇವಲ ಇಂದಿಗೆ ಮಾತ್ರ ಸೀಮಿತವಾಗಿರಬಾರದು. ಹೌದು. ಪ್ರತಿ ಅನ್ನದ ತುತ್ತು ತಿನ್ನುವಾಗಲು ರೈತನಿಗೆ ನಾವು ಸ್ಮರಿಸಬೇಕು. ಇಂತಹ ದಿನವನ್ನು ಇಂದು ಬಹಳ ಹೆಮ್ಮೆಯಿಂದ ಎಲ್ಲರು ಆಚರಿಸುತ್ತಿದ್ದಾರೆ. ಹಾಗಾಗಿ ಇಂತಹ ಸಂದರ್ಭದಲ್ಲಿ ದರ್ಶನ್ ರೈತರಿಗೆ ಶುಭಾಶಯ ಸಲ್ಲಿಸಿದ್ದಾರೆ. ಹೌದು. ದೇಶದ ಬೆನ್ನೆಲುಬಾಗಿರುವ ರೈತ ನಮ್ಮ ಆಸ್ತಿ. ಆತನಿಂದಲೇ ನಾವು ಇರುವುದು. ಅವರಿಲ್ಲ ಎಂದರೆ, ನಾವು ಒಂದು ದಿನವೂ ಬದುಕಲು ಆಗುವುದಿಲ್ಲ ಎಂದಿದ್ದಾರೆ.

ರೈತರು ಚೆನ್ನಾಗಿದ್ದರೆ ಮಾತ್ರ ಹೊಟ್ಟೆಗೆ ಕೂಳು ಸಿಗುವುದು

ಇನ್ನು ದರ್ಶನ್ ರೈತರಿಗೆ ಶುಭಾಶಯ ತಿಳಿಸುವುದರ ಜೊತೆಗೆ ಅವರ ಮಹತ್ವವನ್ನು ತಿಳಿಸಿದ್ದಾರೆ. ಹೌದು. ರೈತರು ಚೆನ್ನಾಗಿದ್ದರೆ ಮಾತ್ರ ನಾವು ಬದುಕುವುದಕ್ಕೆ ಸಾಧ್ಯ. ಜೊತೆಗೆ ಅವರು ಕಷ್ಟಪಟ್ಟು ದುಡಿದರೆ ಮಾತ್ರ ನಮ್ಮ ಹೊಟ್ಟೆಗೆ ಕೂಳು ಬೀಳುವುದು. ಇಲ್ಲವಾದರೆ ನಾವೆಲ್ಲ ಉಪವಾಸ ಸಾಯಬೇಕಿತ್ತು ಎಂದಿದ್ದಾರೆ. ಹೌದು. ಬಲಿಷ್ಠ ರೈತರಿಂದ ಸದೃಢ ದೇಶ ನಿರ್ಮಾಣವಾಗುತ್ತದೆ. ರೈತರು ಚೆನ್ನಾಗಿದ್ದರೆ ಮಾತ್ರ ನಮ್ಮ ಹೊಟ್ಟೆಗೆ ಕೂಳು ಸಿಗುತ್ತದೆ. ದೇಶದ ಬೆನ್ನೆಲುಬಾಗಿ ನಿಂತಿರುವ ರೈತರಿಗೆ ಸದಾ ನನ್ನ ಸಲಾಂ ಎಂದು ಹೇಳಿದ್ದಾರೆ.

ನಿಜಕ್ಕೂ ರೈತನ ಬಗ್ಗೆ ಕೇವಲ ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ. ವರ್ಣಿಸಲಾಗದಂತ ಶಕ್ತಿಯೇ ರೈತ. ಹಾಗಾಗಿ ಪ್ರತಿಯೊಬ್ಬರು ಸಹ ವರ್ಷದ ಒಂದು ದಿನ ಮಾತ್ರ ಅವರನ್ನು ನೆನೆಯುವುದಲ್ಲ. ಬದಲಿಗೆ ಪ್ರತಿ ತುತ್ತು ತಿನ್ನುವಾಗಲು ಅವರನ್ನು ನೆನೆಯಬೇಕು.

LEAVE A REPLY

Please enter your comment!
Please enter your name here