ಕಿರುತೆರೆಯಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳಲಿರುವ ದಚ್ಚು. ಯಾವ ಕಾರ್ಯಕ್ರಮ?

0
497
darshan anchor

ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಅಂದ್ರೆ ಅದೇನೋ ಒಂಥರಾ ಕ್ರೇಜ್. ಹೌದು. ಒಂದೆಡೆ ತಮ್ಮ ನಟನೆ ಮೂಲಕ ಗಳಿಸಿರುವ ಅಭಿಮಾನಿಗಳು ಒಂದೆಡೆಯಾದರೆ, ತಮ್ಮ ಸಹಾಯದ ಮೂಲಕ ಪಡೆದಿರುವ ಅಭಿಮಾನಿಗಳು ಮತ್ತೊಂದು ಕಡೆ ಇದ್ದಾರೆ. ಇನ್ನು ಅವರ ಸಿನಿಮಾ ವಿಚಾರಕ್ಕೆ ಬಂದ್ರೆ, ಅವರು ಅಭಿನಯಿಸುವ ಪ್ರತಿಯೊಂದು ಸಿನಿಮಾಗಳು ಅತ್ಯದ್ಭುತ. ಸದ್ಯಕ್ಕೆ ಅವರ ಕುರುಕ್ಷೇತ್ರ ಸಿನಿಮಾ ಶತದಿನೋತ್ಸವ ದಾಟಿದೆ. ಇತ್ತ ದರ್ಶನ್ ರಾಬರ್ಟ್, ಒಡೆಯ ಹಾಗು ಗಂಡುಗಲಿ ವೀರ ಮದಕರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ಮಧ್ಯೆ ದರ್ಶನ್ ಅವರ ಮತ್ತೊಂದು ಹೊಸ ಸುದ್ದಿ ಹೊರ ಬಿದ್ದಿದೆ. ದರ್ಶನ್ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೌದು. ಸಿನಿಮಾದಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಂಡಿದ್ದ ದಚ್ಚು ಈಗ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

ಕಿರುತೆರೆಗೆ ಲಗ್ಗೆ ಇಡುತ್ತಿರುವ ದಚ್ಚು

ಇತ್ತೀಚಿಗೆ ಸಾಮಾನ್ಯವಾಗಿ ಸ್ಯಾಂಡಲ್ ವುಡ್ ನಟರು ಜಾಹಿರಾತು ಹಾಗು ಕಿರುತೆರೆಗಳಲ್ಲಿ ಕಾಣಿಸುವುದು ಸಾಮಾನ್ಯವಾಗಿದೆ. ಹೌದು. ಈಗಾಗಲೇ ಶಿವಣ್ಣ, ಪುನೀತ್, ರಮೇಶ್, ಗಣೇಶ್, ರವಿಚಂದ್ರನ್, ಸುದೀಪ್ ಹೀಗೆ ಅನೇಕರು ಕಿರುತೆರೆಗಳಲ್ಲಿ ಕಾಣಿಸಿದ್ದಾರೆ. ಆದ್ರೆ ದಚ್ಚು ಮಾತ್ರ ಸಿನಿಮಾ ಬಿಟ್ರೆ ಬೇರೆ ಯಾವುದರ ಬಗ್ಗೆಯೂ ಗಮನ ನೀಡಿರಲಿಲ್ಲ. ಆದ್ರೆ ಈಗ ಕಿರುತೆರೆಯಲ್ಲಿ ಕಾಣಿಸುವುದಾಗಿ ಸುದ್ದಿ ಹೊರ ಬಿದ್ದಿದೆ. ಹೌದು. ದರ್ಶನ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡಲಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ದರ್ಶನ್ ಅವರೇ ತಿಳಿಸಿದ್ದಾರೆ.

ಕಾರ್ಯಕ್ರಮದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ

ಗಂಡುಗಲಿ ಮದಕರಿ ನಾಯಕ ಸಿನಿಮಾದಲ್ಲಿ ದಚ್ಚು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಸದ್ಯಕ್ಕೆ ಆ ಸಿನಿಮಾ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದಾರೆ. ಆದ್ರೆ ಮಧ್ಯೆ ಕಿರುತೆರೆ ಬಗ್ಗೆ ಹೇಳಿಕೆ ನೀಡಿರುವ ದಚ್ಚು, ನಾನು ನಿರೂಪಣೆ ಮಾಡುವುದು ಪಕ್ಕಾ. ಆದ್ರೆ ಯಾವ ಕಾರ್ಯಕ್ರಮಕ್ಕೆ ಎಂದು ಇನ್ನೊಮ್ಮೆ ಹೇಳುತ್ತೇನೆ ಎಂದು ಹೇಳಿದ್ದಾರಂತೆ. ಹಾಗಾಗಿ ದರ್ಶನ್ ಅಭಿಮಾನಿಗಳಿಗೆ ಇದೊಂದು ಸಂತಸದ ಸುದ್ದಿಯಾಗಿದೆ. ಯಾಕಂದ್ರೆ ತಮ್ಮ ನೆಚ್ಚಿನ ನಾಯಕನನ್ನು ಇಲ್ಲಿಯವರೆಗೂ ಸಿನಿಮಾದಲ್ಲಿ ಮಾತ್ರ ನೋಡಿದ್ದರು. ಆದ್ರೆ ಈಗ ನಿರೂಪಣೆ ಮಾಡುವುದನ್ನು ನೋಡುವ ಭಾಗ್ಯ ಅವರ ಅಭಿಮಾನಿಗಳಿಗೆ ಸಿಕ್ಕಿದೆ.

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಸರ್ದಾರ ಅಂತೂ ಇಂತೂ ನಿರೂಪಣೆಗೆ ಲಗ್ಗೆ ಇಡಲು ಸಜ್ಜಾಗಿದ್ದಾರೆ. ಆದರೆ ಯಾವ ಕಾರ್ಯಕ್ರಮ ಎಂಬುದರ ಬಗ್ಗೆ ಮಾಹಿತಿ ತಿಳಿಸಿಲ್ಲ. ಆದ್ರೆ ನಿರೂಪಣೆ ಮಾಡುವುದಂತೂ ಪಕ್ಕಾ ಎಂಬ ವಿಚಾರ ತಿಳಿದುಬಂದಿದೆ.

LEAVE A REPLY

Please enter your comment!
Please enter your name here