ಕನ್ವರ್ ಲಾಲ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಡಿ ಬಾಸ್

0
315
dachhu kanvar lal

ನಟ ದರ್ಶನ್ ಒಬ್ಬ ಪ್ರಾಣಿಪ್ರಿಯ ಅನ್ನೋದು ಎಲ್ಲರಿಗು ಗೊತ್ತು. ಹೌದು. ದರ್ಶನ್ ಸಿನಿಮಾ ಮಾಡುವುದರ ಜೊತೆಗೆ, ಪ್ರಾಣಿಗಳನ್ನು ಸಾಕುವುದರ ಬಗ್ಗೆಯೂ ಹೆಚ್ಚು ಗಮನ ನೀಡುತ್ತಾರೆ. ಯಾಕಂದ್ರೆ ಅವರು ಮನುಷ್ಯರನ್ನು ನಂಬುವುದಕ್ಕಿಂತ ಹೆಚ್ಚು, ಮೂಖ ಪ್ರಾಣಿಗಳನ್ನು ನಂಬುತ್ತಾರೆ. ಹಾಗಾಗಿ ಪ್ರಾಣಿಗಳಿಗಾಗಿ ತಮ್ಮದೇ ಆದ ಸ್ವಂತ ಫಾರ್ಮ್ ಹೌಸ್ ಕಟ್ಟಿದ್ದಾರೆ. ಇನ್ನು ಅಲ್ಲಿ ದರ್ಶನ್ ಅನೇಕ ಪ್ರಾಣಿ ಹಾಗು ಪಕ್ಷಿಗಳನ್ನು ಸಾಕಿದ್ದಾರೆ. ಸಮಯ ಸಿಕ್ಕಿದಾಗ ಅಲ್ಲಿಗೆ ಭೇಟಿ ನೀಡಿ, ತಮ್ಮ ನೆಚ್ಚಿನ ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾರೆ. ಅದೇ ರೀತಿ ಈಗ ಮತ್ತೊಂದು ನೆಚ್ಚಿನ ಪ್ರಾಣಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಹೌದು. ಕನ್ವರ್ ಲಾಲ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ಅಂಬಿಯ ಪ್ರೀತಿಯ ಶ್ವಾನ ಕನ್ವರ್ ಲಾಲ್

ಇಂದು ದರ್ಶನ್, ಅಂಬಿಯ ಮನೆಗೆ ಭೇಟಿ ನೀಡಿದ್ದರು. ಹೌದು. ಕೆಲವು ದಿನಗಳ ಬಳಿಕ ಅಂಬಿ ಮನೆಗೆ ಭೇಟಿ ನೀಡಿ, ಮನೆಯವರ ಕ್ಷೇಮ ವಿಚಾರಿಸಿಕೊಂಡಿದ್ದಾರೆ. ಇನ್ನು ಆ ಸಮಯದಲ್ಲಿ ಮನೆಯಲ್ಲಿದ್ದ ಮತ್ತೊಬ್ಬ ಸದ್ಯಸನಾದ ಕನ್ವರ್ ಲಾಲ್ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಇನ್ನು ಈ ಕನ್ವರ್ ಲಾಲ್ ಶ್ವಾನ ಅಂದ್ರೆ ಅಂಬಿಗೆ ಬಹಳ ಅಚ್ಚುಮೆಚ್ಚಾಗಿತ್ತು. ಹೌದು. ಅಂಬಿ ತಮ್ಮ ಮನೆಯಲ್ಲಿ ಎರಡು ನಾಯಿಗಳನ್ನು ಸಾಕಿಕೊಂಡಿದ್ದಾರೆ. ಅದರಲ್ಲಿ ಒಂದಕ್ಕೆ ಕನ್ವರ್ ಲಾಲ್ ಎಂಬ ಹೆಸರಿಟ್ಟರೆ, ಇನ್ನೊಂದಕ್ಕೆ ಬುಲ್ ಬುಲ್ ಎನ್ನುವ ಹೆಸರಿಟ್ಟಿದ್ದಾರೆ.

ಸಿನಿಮಾ ಡೈಲಾಗ್ ಗಳನ್ನು ನೆನಪಿಸಿಕೊಳ್ಳುತ್ತಿದ್ದ ಅಂಬಿ

ಇನ್ನು ತಮ್ಮ ಪ್ರೀತಿಯ ಶ್ವಾನಗಳಿಗೆ ಅಂಬಿ ಈ ಹೆಸರನ್ನು ಇಡಲು ಕಾರಣವಿದೆಯಂತೆ. ಹೌದು. ಅಂಬಿಗೆ ಕನ್ವರ್ ಲಾಲ್ ಪಾತ್ರ, ಹಾಗು ಬುಲ್ ಬುಲ್ ಸಿನಿಮಾ ಬಹಳ ಇಷ್ಟವಂತೆ. ಹಾಗಾಗಿ ತಮ್ಮ ಪ್ರೀತಿಯ ಶ್ವಾನಗಳಿಗೆ ಈ ಹೆಸರುಗಳನ್ನು ಇಟ್ಟಿದ್ದಾರೆ. ಇನ್ನು ಮೊದಲೇ ಪ್ರಾಣಿಪ್ರಿಯನಾಗಿರುವ ದಚ್ಚು ಇಂದು ಅಂಬಿಗೆ ಮನೆಗೆ ಹೋದಾಗ ಪ್ರೀತಿಯ ಕನ್ವರ್ ಲಾಲ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಇನ್ನು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಂತೂ ಇಂತೂ ದರ್ಶನ್ ಇಂದು ಕನ್ವರ್ ಲಾಲ್ ಜೊತೆ ತೆಗೆದುಕೊಂಡಿರುವ ಸೆಲ್ಫಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಅವರ ಅಭಿಮಾನಿಗಳು ಜೈ ರೆಬಲ್ ಸ್ಟಾರ್, ಜೈ ಡಿ ಬಾಸ್, ಎಂದು ಜೈಕಾರ ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here