ಇದು ರಾಮಾಯಣ ಅಲ್ಲ ಸ್ವಾಮಿ ದಾಮಾಯಣ – ಟೀಸರ್ ಬರಲಿದೆ ಇದೇ ಸೆಪ್ಟೆಂಬರ್ 11ರಂದು

0
651
daamaayana movie

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸಿನಿಮಾಗಳು ತೆರೆ ಕಾಣುತ್ತಿವೆ. ಹೌದು. ಹಾರರ್, ಕಾಮಿಡಿ, ತುಂಬು ಕುಟುಂಬ ಈ ರೀತಿ ಹತ್ತು ಹಲವು ಸಿನಿಮಾಗಳು ತೆರೆ ಮೇಲೆ ರಾರಾಜಿಸುತ್ತಲೇ ಇವೆ. ಈ ಮಧ್ಯೆ ಅದರ ಸಾಲಿಗೆ ಮತ್ತೊಂದು ಹೊಸ ಸಿನಿಮಾ ಸೇರ್ಪಡೆಯಾಗಲಿದೆ. ಅದೇ ದಾಮಾಯಣ. ಹೌದು. ಗಾಂಧಿ ನಗರಕ್ಕೆ ಲಗ್ಗೆ ಇಡಲಿರುವ ಹೊಸ ಸಿನಿಮಾ ಇದಾಗಿದೆ. ಆದರೆ ಸಿನಿಮಾ ಸದ್ಯಕ್ಕೆ ತೆರೆ ಕಾಣುತ್ತಿಲ್ಲ. ಬದಲಿಗೆ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ. ಹೌದು. ಯಂಗ್ ಟೀಮ್ ಹೊಂದಿರುವ ಈ ಚಿತ್ರತಂಡ, ತಮ್ಮ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಓಣಂ ಗೆ ಬಿಡುಗಡೆಯಾಗಲಿರುವ ‘ದಾಮಾಯಣ’ ಟೀಸರ್

ಈ ಸಿನಿಮಾದ ಹೆಸರು ದಾಮಾಯಣ. ಇದೊಂದು ಹಾಸ್ಯಧಾರಿತವಾದ ಚಿತ್ರವಾಗಿದೆ. ಇನ್ನು ಈ ಸಿನಿಮಾ ಮಂಗಳೂರು ಜಿಲ್ಲೆಯ ಸಂಸ್ಕೃತಿ, ಸಂಪ್ರದಾಯ, ಆಚರಣೆ ಹಾಗು ವಿಚಾರದ ಬಗ್ಗೆ ಹೊಂದಿದೆ. ಸಿನಿಮಾದಲ್ಲಿ ಯಂಗ್ ಟೀಮ್ ಇರುವುದರಿಂದ ಸಿನಿಮಾವನ್ನು ಬಹಳಷ್ಟು ಕ್ರಿಯೇಟಿವ್ ಆಗಿ ತೆರೆ ಮೇಲೆ ತರಲು ಪ್ರಯತ್ನಿಸಿದ್ದಾರೆ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಹಾಸ್ಯಧಾರಿತವಾದ ಚಿತ್ರಗಳಿವೆ. ಆದರೆ ಈ ಸಿನಿಮಾ ಬಹಳ ವಿಶೇಷವಾಗಿದೆ. ಹಾಗಾಗಿ ಈ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದ್ದು, ಇದೇ ಸೆಪ್ಟೆಂಬರ್ 11ನೇ ತಾರೀಖಿನಂದು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಲಹರಿ ಮ್ಯೂಸಿಕ್ ಮಾಲೀಕತ್ವದಲ್ಲಿ ಬಿಡುಗಡೆಯಾಗಲಿರುವ ಟೀಸರ್

ಇನ್ನು ಈ ಸಿನಿಮಾದ ಟೀಸರ್ ನಾಳೆ ಬಿಡುಗಡೆಯಾಗಲಿದ್ದು, ಇದರ ಸಂಪೂರ್ಣ ಜವಾಬ್ದಾರಿ ಲಹರಿ ಮ್ಯೂಸಿಕ್ ಮಾಲೀಕತ್ವದಲ್ಲಿ ಇದೆ. ಹೌದು. ನಾಳೆ ಸಂಜೆ 6 ಗಂಟೆಗೆ ಲಹರಿ ಮ್ಯೂಸಿಕ್ ಯೂಟ್ಯೂಬ್ ನೇತೃತ್ವದಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ. ಇನ್ನು ಈ ಸಿನಿಮಾದ ನಿರ್ದೇಶಕರಾದ ಶ್ರೀಮುಖ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇದೊಂದು ಯಂಗ್ ಟೀಮ್ ಹೊಂದಿರುವ ಚಿತ್ರತಂಡ ಆಗಿದ್ದು, ಬಹಳಷ್ಟು ಕ್ರಿಯೇಟಿವ್ ಆಗಿ ಸಿನಿಮಾವನ್ನು ತೆರೆ ಮೇಲೆ ತರಲು ಪ್ರಯತ್ನಿಸಿದ್ದೇವೆ. ಈಗಾಗಲೇ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಯುವ ಹಂತಕ್ಕೆ ಬಂದಿದ್ದು, ಆದಷ್ಟು ಬೇಗ ಸಿನಿಮಾವನ್ನು ತೆರೆ ಮೇಲೆ ತರುತ್ತೇವೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಜನರನ್ನು ನಗಿಸೋಕೆ ಎಲ್ಲರಿಂದಲೂ ಆಗುವುದಿಲ್ಲ. ಆದರೆ ದಾಮಾಯಣ ಚಿತ್ರತಂಡ ಜನರನ್ನು ಹೊಟ್ಟೆ ನೋವು ಬರುವಷ್ಟು ನಗಿಸಲು ಮುಂದಾಗಿದ್ದಾರೆ. ಹಾಗಾಗಿ ಆದಷ್ಟು ಬೇಗ ತೆರೆ ಮೇಲೆ ಬರುತ್ತೇವೆ, ಸದ್ಯಕ್ಕೆ ಟೀಸರ್ ನಿಂದಲೇ ನಿಮ್ಮ ನಗು ಪ್ರಾರಂಭವಾಗಲಿ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here