ಡಿ ಕೆ ಶಿವಕುಮಾರ್ ಅವರಿಗೆ ಬಂಪರ್ ಆಫರ್ ಇಲ್ಲಿದೆ ಮಾಹಿತಿ

0
658

ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಅವರನ್ನು ಮಾಸ್ಟರ್ ಮೈಂಡ್ ಎಂದೆ ಜನರು ಕರೆಯುತ್ತಾರೆ. ಇವರ ಕ್ಷೇತ್ರ ಕನಕಪುರವಾಗಿದ್ದು, ಗ್ರಾನೈಟ್ ವ್ಯವಹಾರದಲ್ಲಿ ಸಾಕಷ್ಟು ದುಡ್ಡು ಮಾಡಿದ್ದರು. ಯಾವುದೆ ಕಾರಣಕ್ಕು ಕಾಂಗ್ರೆಸ್ ಪಕ್ಷವನ್ನು ಬಹಳ ಸುಲಭವಾಗಿ ಬೇರೆ ಪಕ್ಷಕ್ಕೆ ಬಿಟ್ಟು ಕೊಡುತ್ತಿರಲಿಲ್ಲ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ರಚನೆಯಾಗಲು ಡಿ ಕೆ ಶಿವಕುಮಾರ್ ಅವರ ಕೈಚಳಕ ಇತ್ತು. ಬಿಜೆಪಿ ಕಡೆಗೆ ವಾಲುತ್ತಿದ್ದ ಶಾಸಕರನ್ನು ತಮ್ಮ ಪಕ್ಷಕ್ಕೆ ಎಳೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತಂದಿದ್ದರು. ರಾಜಕೀಯದ ತಂತ್ರ ಕುತಂತ್ರಗಳ ಬಗ್ಗೆ ಬಹಳ ಚೆನ್ನಾಗಿ ಇವರು ತಿಳಿದುಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಅವರಿಗೆ ಸಿಕ್ತು ಬಂಪರ್ ಆಫರ್

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕಿಯಾದ ಸೋನಿಯಾ ಗಾಂಧಿ ಅವರು ಈಗ ಡಿ ಕೆ ಶಿವಕುಮಾರ್ ಅವರಿಗೆ ಮಹತ್ವವಾದ ಹುದ್ದೆಯನ್ನು ನೀಡಲು ತೀರ್ಮಾನಿಸಿದ್ದಾರಂತೆ. ನಿನ್ನೆ ಸೋನಿಯಾ ಗಾಂಧಿ ಡಿಕೆ ಅವರಿಗೆ ಕರೆ ನೀಡಿದ್ದು, ಸೋನಿಯಾ ಗಾಂಧಿಯವರ ಜೊತೆ ಚರ್ಚಿಸಲು ಡಿಕೆ ಡೆಲ್ಲಿ ಗೆ ತೆರಳಿದ್ದರು. ಈ ಸಮಯದಲ್ಲಿ, ಡಿಕೆ ಶಿವಕುಮಾರ್ ಅವರನ್ನು ಕರ್ನಾಟಕದ ಮುಂದಿನ ಕಾಂಗ್ರೆಸ್ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಹೇಳಿದ್ದರಂತೆ ಎನ್ನಲಾಗಿದೆ. ಶಿವಕುಮಾರ್ ಅವರು ಕನಕಪುರ ಕ್ಷೇತ್ರದಲ್ಲಿ ಅನೇಕ ಸಾರಿ ಶಾಸಕರಾಗಿ ಆಯ್ಕೆ ಆಗಿದ್ದು, ರಾಜ್ಯದ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಮುಂಬರುವ ಚುನಾವಣೆಗೆ ಈಗಲೆ ಪ್ಲಾನ್

ಇನ್ನು ಕಾಂಗ್ರೆಸ್ ಪಕ್ಷ ಆಪತ್ತಲಿದ್ದಾಗ ಇವರು ಪಾರು ಮಾಡಿದ್ದರು. ಇವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವ ಲೆಕ್ಕಾಚಾರದಲ್ಲಿದ್ದಾರೆ ಸೋನಿಯಾ ಗಾಂಧಿ.

ಪ್ರತಿ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಮುಂದುವರೆಸಿಕೊಂಡು ಹೋಗಿ ಎಂದು ಹೇಳಲಾಗುತ್ತಿದೆ. ಮುಂದಿನ ವಾರ ಕಾಂಗ್ರೆಸ್ ಪಕ್ಷ ರಾಜ್ಯದ್ಯಕ್ಷರನ್ನಾಗಿ ಘೋಷಿಸುವುದೊಂದೆ ಬಾಕಿ ಇದೆ.

LEAVE A REPLY

Please enter your comment!
Please enter your name here