ಸಾಮಾಜಿಕ ಜಾಲ ತಾಣದಲ್ಲಿ ಹೊಸ ದಾಖಲೆಯನ್ನು ಬರೆದ ಡಿ ಬಾಸ್ ಅಭಿಮಾನಿಗಳ ಪುಟ

0
329

ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೈಟ್ ಬಾಯ್ ಯಾಗಿ ಕೆಲಸ ಮಾಡಿದ್ದು, ಈಗ ಸ್ಯಾಂಡಲ್ ವುಡ್ ನಲ್ಲಿ ಡಿ ಬಾಸ್ ಅನ್ನೋ ಪಟ್ಟವನ್ನು ಪಡೆದುಕೊಂಡಿದ್ದಾರೆ. ಚಂದನವನದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ದರ್ಶನ್ ಸಂಪಾದಿಸಿದ್ದಾರೆ. ಬಹಳ ಕಷ್ಟ ಪಟ್ಟು ಇವರು ಉನ್ನತವಾದ ಸ್ಥಾನಕ್ಕೆ ಬಂದಿದ್ದಾರೆ. ಸ್ಟಾರ್ ನಟರ ಲಿಸ್ಟ್ ನಲ್ಲಿ ಇವರ ಹೆಸರು ಯಾವಾಗಲು ಇದ್ದೆ ಇರುತ್ತದೆ. ಮೆಜೆಸ್ಟಿಕ್ ಚಿತ್ರದ ಮೂಲಕ ಡಿ ಬಾಸ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಇವರ ತಂದೆ ತೂಗುದೀಪ ಶ್ರೀನಿವಾಸ್ ಖಳ ನಟನಾಗಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದರು. ಖ್ಯಾತ ಖಳ ನಾಯಕನ ಮಗನಾಗಿದ್ದರು, ಪ್ರಾರಂಭದ ದಿನಗಳಲ್ಲಿ ಇವರಿಗೆ ಹೆಚ್ಚು ಅವಕಾಶಗಳು ಸಿಕ್ಕಿರಲಿಲ್ಲ.

ಹೊಸ ದಾಖಲೆ ನಿರ್ಮಿಸಿದ ಡಿ ಕಂಪನಿ ಪೇಜ್

ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ನಟರ ಪೇಜ್ ಅನ್ನು ಮಾಡಿಕೊಂಡಿದ್ದಾರೆ. ಪೇಜ್ ನಲ್ಲಿ ಸ್ಟಾರ್ ನಟರ ಕುರಿತು ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಫೋಟೋ ಮತ್ತು ವಿಡಿಯೋಗಳು ಸಹ ಪೇಜ್ ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗ ಡಿ ಬಾಸ್ ಅಭಿಮಾನಿಗಳು ಮಾಡಿದ ಪೇಜ್ ಹೊಸ ದಾಖಲೆಯನ್ನು ನಿರ್ಮಿಸಿದೆ. ಟ್ವಿಟ್ಟರ್ ನಲ್ಲಿ ಡಿ ಬಾಸ್ ಅವರ ಡಿ ಕಂಪನಿ ಎನ್ನುವ ಪೇಜ್ ಗೆ ಈಗ ಒಂದು ಲಕ್ಷಕ್ಕು ಹೆಚ್ಚು ಫಾಲೋವರ್ಸ್ ಗಳನ್ನು ಪಡೆದುಕೊಂಡಿದೆ. ಮುಂದೆ ಓದಿ

ಅಭಿನಂದೆಯನ್ನು ಸಲ್ಲಿಸಿದ ಡಿ ಬಾಸ್

ಟ್ವಿಟ್ಟರ್ ನಲ್ಲಿ ಇದೆ ಮೊದಲನೆ ಬಾರಿಗೆ ಒಬ್ಬ ಸ್ಟಾರ್ ನಟನ ಇಷ್ಟು ಜನ ಫಾಲೋವರ್ಸ್ ಇರುವುದು. ಸಾಕಷ್ಟು ಜನರ ಹಿಂಬಾಲಕರಿಗೆ ಈ ಪೇಜ್ ಸಾಕ್ಷಿಯಾಗಿದೆ. ಸುಮಾರು 9 ವರ್ಷಗಳಿಂದಾನು ಪ್ರತಿ ದಿನವೂ ಡಿ ಕಂಪನಿ ಪುಟದಲ್ಲಿ ದರ್ಶನ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಡಿ ಕಂಪನಿ ಪುಟಕ್ಕೆ ದರ್ಶನ ಅವರು ಸಹ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು ತಿಳಿಸಿದ್ದಾರೆ. ದರ್ಶನ್ ಅವರ ಮುಂದಿನ ಚಿತ್ರವಾದ ರಾಬರ್ಟ್ ಅನ್ನು ನಿರ್ದೇಶಿಸುತ್ತಿರುವ ತರುಣ್ ಸುಧೀರ್ ಸಹ ಶುಭಾಶಯಗಳನ್ನು ತಿಳಿಸಿದ್ದಾರೆ.

ದರ್ಶನ್ ಕುರಿತು ಮಾತ್ರ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು

ಸಾಮಾಜಿಕ ಜಾಲ ತಾಣಗಳಲ್ಲಿ ಅನೇಕ ಸ್ಟಾರ್ ನಟರ ಪೇಜ್ ಗಳನ್ನು ನೀವು ನೋಡಬಹುದಾಗಿದೆ. ಆದರೆ ಆ ಪೇಜ್ ಗಳಲ್ಲಿ ನಟರ ಕುರಿತು ಹೆಚ್ಚಾಗಿ ಮಾಹಿತಿಗಳನ್ನು ಹಂಚಿಕೊಳ್ಳುವುದಿಲ್ಲ. ಸ್ಟಾರ್ ವಾರ್ ಸಂಭಂದಿಸಿದ ಹಾಗೆ ಪೋಸ್ಟ್ ಅನ್ನು ಹಾಕುವುದು, ಬೇಡದೆ ಇರುವ ವಿಷಯಗಳನ್ನು ಹಾಕುವುದು ಹೀಗೆ ನಡೆಯುತ್ತಿದೆ.

ಆದರೆ ಡಿ ಕಂಪನಿಯ ಪುಟ ಮಾತ್ರ ಇಂತಹ ಯಾವ ವಿಷಯಕ್ಕು ಕೈ ಹಾಕಿರಲಿಲ್ಲ. ದರ್ಶನ್ ಸಿನಿಮಾದ ಬಗ್ಗೆ ಮತ್ತು ಅವರ ವಯುಕ್ತಿಕ ವಿಚಾರಗಳನ್ನು ಮಾತ್ರ ಹಂಚಿಕೊಳ್ಳುತ್ತಿದ್ದರು. ಆದ್ದರಿಂದ ಈ ಪೇಜ್ ಗೆ ಇಷ್ಟೊಂದು ಫಾಲ್ಲೋವರ್ಸ್ ಪಡೆದುಕೊಂಡಿದೆ ಅಂತಾನೆ ಹೇಳಬಹುದಾಗಿದೆ.

LEAVE A REPLY

Please enter your comment!
Please enter your name here