ದೇಶದಲ್ಲೇ ಪ್ರಥಮವಾಗಿ ನಿರ್ಮಾಣವಾಗುತ್ತಿದೆ ತೃತೀಯ ಲಿಂಗಿಗಳಿಗಾಗಿ ವಿದ್ಯಾಲಯ. ಎಲ್ಲಿ?

0
889
cross genders

ಸಾಮಾನ್ಯವಾಗಿ ತೃತೀಯ ಲಿಂಗಿಗಳು ಅಂದ್ರೆ ಅವರನ್ನು ಬಹಳಷ್ಟು ಕಡೆಗಣಿಸುತ್ತಾರೆ. ಜೊತೆಗೆ ಕೆಲವರು ಅವರನ್ನು ಕೀಳಾಗಿ ಕಾಣುತ್ತಾರೆ. ಹಾಗಾಗಿ ಅವರಿಗೆ ಸಮಾಜದಲ್ಲಿ ಇಲ್ಲಿಯವರೆಗೂ ಯಾವುದೇ ಸ್ಥಾನ ದೊರೆತಿಲ್ಲ. ಹೌದು. ಅವರು ಎಲ್ಲರಂತೆ ಮನುಷ್ಯರಾಗಿದ್ದರೂ ಸಹ ಅವರಿಗೆ ಯಾರು ಬೆಲೆ ಕೊಡುವುದಿಲ್ಲ. ಹಾಗಾಗಿ ಅವರಿಗೆ ಯಾವುದೇ ಉದ್ಯೋಗವಾಗಲಿ ಅಥವಾ ಹಕ್ಕು ಈ ರೀತಿಯ ಅನೇಕ ವಿಚಾರಗಳಿಂದ ದೂರ ಉಳಿದಿದ್ದಾರೆ. ಇನ್ನು ವಿದ್ಯಾಭ್ಯಾಸದ ವಿಚಾರದಲ್ಲಂತೂ ಬಹಳ ಮೋಸಕ್ಕೆ ಒಳಗಾಗಿದ್ದಾರೆ. ಹೌದು. ಯಾವುದೇ ಶಾಲಾ ಕಾಲೇಜಿನಲ್ಲಿ ಅವರಿಗೆ ಸೀಟ್ ಸಿಗುವುದಿಲ್ಲ. ಹಾಗಾಗಿ ಮುಂದೊಂದು ದಿನ ಅವರು ಈ ರೀತಿಯ ಕಷ್ಟಕ್ಕೆ ಒಳಗಾಗಬಾರದೆಂದು ಅವರಿಗೆ ವಿದ್ಯಾಲಯ ತೆರೆಯಲು ನಿರ್ಧರಿಸಲಾಗಿದೆ.

ತೃತೀಯ ಲಿಂಗಿಗಳ ಶಾಲೆಗೆ ಬಿತ್ತು ಅಡಿಪಾಯ

ಮನುಷ್ಯನಾಗಿ ಹುಟ್ಟಿದ ಮೇಲೆ ಏನಾದರು ಸಾಧಿಸಬೇಕು ಎಂಬ ಛಲವಿರುತ್ತದೆ. ಆದರೆ ತೃತೀಯ ಲಿಂಗಿಗಳು ಸಾಧನೆಯಿಂದ ದೂರ ಉಳಿದಿದ್ದಾರೆ. ಯಾಕಂದ್ರೆ ಅವರಿಗೆ ವಿದ್ಯಾಭ್ಯಾಸ ಸಿಕ್ಕಿರುವುದು ಬಹಳ ಕಡಿಮೆ. ಎಲ್ಲೋ ಒಬ್ಬರು, ಇಬ್ಬರು ಮಾತ್ರ ವಿದ್ಯೆ ಪಡೆದಿದ್ದಾರೆ. ಹಾಗಾಗಿ ಅವರಿಗೂ ಸಹ ಭವಿಷ್ಯವಿದೆ. ಅವರಿಗೆ ಯಾವುದೇ ರೀತಿ ಮೋಸವಾಗಬಾರದೆಂದು ಅವರಿಗಾಗಿ ಶಾಲೆ ಕಟ್ಟಿಸಲು ತೀರ್ಮಾನಿಸಲಾಗಿದೆ. ಹೌದು. ಉತ್ತರ ಪ್ರದೇಶದ ಕೃಷಿ ನಗರದಲ್ಲಿ ತೃತೀಯ ಲಿಂಗಿಗಳಿಗಾಗಿ ಶಾಲೆ ಕಟ್ಟಿಸಲು ತೀರ್ಮಾನಿಸಲಾಗಿದ್ದು, ಅವರು ಎಲ್ಲಿಯವರೆಗೂ ಬೇಕಾದರೂ ವಿದ್ಯಾಭ್ಯಾಸ ಪಡೆಯಬಹುದಾಗಿದೆ.

ವಿದ್ಯಾಲಯದ ಜೊತೆಗೆ ವಿಶ್ಯವಿದ್ಯಾಲಯದ ಸ್ಥಾಪನೆ

ಇವರ ವಿದ್ಯಾಭ್ಯಾಸದ ಸಲುವಾಗಿ ಕೇವಲ ಶಾಲೆ ಮಾತ್ರ ಕಟ್ಟಿಸುತ್ತಿಲ್ಲ. ಬದಲಿಗೆ ಕಾಲೇಜ್ ಸಹ ನಿರ್ಮಿಸಲಾಗುತ್ತಿದೆ. ಇದರಿಂದ ಅವರು ಉನ್ನತ ಶಿಕ್ಷಣವನ್ನು ಸಹ ಪಡೆಯಬಹುದಾಗಿದೆ. ಇನ್ನು ಈ ವಿದ್ಯಾಲಯ ಕಟ್ಟಿಸುವ ಜವಾಬ್ದಾರಿಯನ್ನು ಬಿಜೆಪಿ ಸಂಸದ ರಾಮಪತಿ ರಾಮ್ ತ್ರಿಪಾಠಿ ವಹಿಸಿಕೊಂಡಿದ್ದು, ಅವರ ಸಮ್ಮುಖದಲ್ಲಿ ವಿದ್ಯಾಲಯದ ನಿರ್ಮಾಣ ಕಾರ್ಯ ನಡೆಯುತ್ತದೆ. ಅಲ್ಲದೆ ಅವರು ತೃತೀಯ ಲಿಂಗಿಗಳ ಭವಿಷ್ಯದ ಬಗ್ಗೆ ತಮ್ಮ ಅನಿಸಿಕೆಯನ್ನು ಸಹ ತಿಳಿಸಿದ್ದಾರೆ. ಹೌದು. ಅವರಿಗೆ ವಿದ್ಯಾಭ್ಯಾಸ ನೀಡುವುದರಿಂದ ಅವರು ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಜೊತೆಗೆ ಅವರನ್ನು ಸ್ವಾಲಂಭಿಗಳನ್ನಾಗಿ ಮಾಡುವುದಕ್ಕೆ ಇದೇ ಮುಖ್ಯ ದಾರಿಯಾಗಿದೆ. ಮುಂದೊಂದು ದಿನ ಅವರು ವಿದ್ಯಾಭ್ಯಾಸ ಪಡೆದು ಏನನ್ನಾದರೂ ಸಾಧನೆ ಮಾಡುತ್ತಾರೆ ಎನ್ನುವ ಭರವಸೆ ನನಗಿದೆ. ಹಾಗಾಗಿ ನಾನು ಈ ತೀರ್ಮಾನ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ನಿಜಕ್ಕೂ ತೃತೀಯ ಲಿಂಗಿಗಳಿಗೆ ಎಷ್ಟೇ ಕನಸಿದ್ದರೂ ಅದು ಇಷ್ಟುದಿನ ಮಣ್ಣು ಪಾಲಾಗುತ್ತಿತ್ತು. ಆದ್ರೆ ಈಗ ಅವರಿಗೆ ವಿದ್ಯಾಭ್ಯಾಸ ದೊರಕಿಸಿಕೊಡುವ ಪ್ರಯತ್ನ ನಡೆಯುತ್ತಿದೆ. ನಿಜಕ್ಕೂ ಈ ಪ್ರಯತ್ನಕ್ಕೆ ಎಲ್ಲರು ಸಹ ಬೆಂಬಲಿಸಿದರೆ, ಅವರು ಸಹ ಎಲ್ಲರಂತೆ ಸಮಾಜದಲ್ಲಿ ಬದುಕಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

LEAVE A REPLY

Please enter your comment!
Please enter your name here