ಕನ್ನಡ ಚಿತ್ರರಂಗದಲ್ಲಿ ಖ್ಯಾತ ಹಾಸ್ಯ ನಟರೆಂದು ಕೋಮಲ್ ಅವರು ಗುರುತಿಸಿಕೊಂಡಿದ್ದರು. ಇತ್ತೀಚಿಗಷ್ಟೆ ಕೋಮಲ್ ಅಭಿನಯದ ಕೆಂಪೆಗೌಡ 2 ಚಿತ್ರ ತೆರೆ ಕಂಡಿತ್ತು. ಕುರುಕ್ಷೇತ್ರ ಚಿತ್ರ ಬಿಡುಗಡೆಯಾದ ದಿನದಂದೆ ಕೆಂಪೇಗೌಡ 2 ಚಿತ್ರ ಸಹ ರಿಲೀಸ್ ಆಗಿತ್ತು. ಕೆಂಪೇಗೌಡ 2 ಚಿತ್ರದ ಸುದ್ದಿ ಗೋಷ್ಠಿಯಲ್ಲಿ ದೊಡ್ಡ ಚಿತ್ರಗಳಿಂದ ಸಣ್ಣ ಚಿತ್ರಕ್ಕೆ ಪೆಟ್ಟು ಬೀಳುತ್ತಿದೆ ಎಂದು ಹೇಳಿದ್ದರು. ಕೋಮಲ್ ಅವರ ಮೇಲೆ ಹಾಡು ಹಗಳೆ ಅಪರಚಿತ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ವರದಿಗಳ ಪ್ರಕಾರ ಮಂತ್ರಿ ಮಾಲ್ ಮುಂಭಾಗದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಟ್ರಾಫಿಕ್ ನಲ್ಲಿ ಗಲಾಟೆ
ಮಾಲ್ ಮುಂದೇನೆ ಕೋಮಲ್ ಅವರ ಮೇಲೆ ಹಲ್ಲೆ ನಡೆದಿದೆ. ವಾಹನ ಅಪಘಾತದ ವಿಷಯದಲ್ಲಿ ಒಂದು ಸಣ್ಣ ಗಲಾಟೆ ನಡೆದಿದೆ. ಗಲಾಟೆಯ ವೇಳೆ ಕೋಮಲ್ ಅವರಿಗೆ ಹೊಡೆದಿದ್ದು, ಇವರ ಮೂಗಿನಿಂದ ರಕ್ತ ಸೋರುತ್ತಿತ್ತು. ಸದ್ಯಕ್ಕೆ ಈ ವಿಚಾರವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಮಲ್ಲೇಶ್ವರಂ ಪೊಲೀಸ್ ಠಾಣೆಯವರು ತಿಳಿಸಿದ್ದಾರೆ. ಮಲ್ಲೇಶ್ವರಂ ನಗರದಲ್ಲಿ ಕಾರ್ ನಲ್ಲಿ ಕೋಮಲ್ ಅವರು ಹೋಗುತ್ತಿದ್ದರು. ಟ್ರಾಫಿಕ್ ನಲ್ಲಿ ಮತ್ತೊಂದು ಗಾಡಿ ಬಂದು ಇವರ ವಾಹನಕ್ಕೆ ತಾಗಿದೆ. ನಂತರ ಕೋಮಲ್ ಕಾರಿನಿಂದ ಇಳಿದು ಆ ವಾಹನ ಚಾಲಕನ ಜೊತೆ ವಾಗ್ವಾದ ನಡೆಸಿದ್ದು, ನಂತರ ಬೇರೆಯೆ ಆಯಾಮ ಪಡೆದುಕೊಂಡಿದೆ.
ಕೋಮಲ್ ಅವರನ್ನು ಹಿಗ್ಗಾ ಮುಗ್ಗ ಹೊಡೆದಿದ್ದಾರೆ
ಹೀಗೆ ಮಾತಿಗೆ ಮಾತು ಬೆಳೆದು ಜಗಳವಾಡುವ ಹಂತಕ್ಕೆ ಸನ್ನಿವೇಶ ತಲುಪಿತ್ತು. ಕೊನೆಗೆ ತಾಳ್ಮೆಯನ್ನು ಕಳೆದುಕೊಂಡ ಕೋಮಲ್ ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಎದುರಾಳಿ ಕೋಮಲ್ ಮೇಲೆ ಅಟ್ಯಾಕ್ ಮಾಡಿದ್ದಾನೆ. ಅಪರಿಚಿತ ವ್ಯಕ್ತಿಯ ಜೊತೆ ಅವರ ಸ್ನೇಹಿತರು ಸಹ ಜೊತೆಗೆ ಇದ್ದರು. ಎಲ್ಲರು ಗುಂಪಾಗಿ ಕೋಮಲ್ ಗೆ ಹಿಗ್ಗಾ ಮುಗ್ಗ ಬಾರಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸಹ ಸ್ಥಳದಲ್ಲೆ ಇದ್ದರು. ಪೊಲೀಸ್ ಇರುವಾಗಲೆ ಕೋಮಲ್ ಅವರನ್ನು ಹೊಡೆಯುತ್ತಿದ್ದನ್ನು ನೋಡಿದ ಜನರು ಆತಂಕರಾಗಿದ್ದಾರೆ. ಹೊಡೆತಕ್ಕೆ ಕುಸಿದು ಬಿದ್ದ ಹಾಸ್ಯ ನಟನನ್ನು ಸ್ಥಳೀಯರು ಕಾಪಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ನವರಸ ನಾಯಕ ಸ್ಟೇಷನ್ ಗೆ ಹಾಜರ್
ಇದರ ಕುರಿತಾಗಿ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಆದ್ದರಿಂದ ತನಿಖೆಗಾಗಿ ಮಲ್ಲೇಶ್ವರಂ ಠಾಣೆಯ ಪೊಲೀಸರು ಕೋಮಲ್ ಮತ್ತು ಆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಕೋಮಲ್ ಅವರ ಅಣ್ಣ ನವರಸ ನಾಯಕ ಪೊಲೀಸ್ ಸ್ಟೇಷನ್ ಗೆ ಆಗಮಿಸಿದ್ದಾರೆ. ಜಗಳ ಯಾಕೆ ಆಯಿತು ಇನ್ನು ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ಪೊಲೀಸರು ವಿಚಾರಣೆಯನ್ನು ನಡೆಸಿದ್ದಾರೆ. ವಿಚಾರಣೆಯ ಬಳಿಕ ದೂರು ದಾಖಲಾಗಬಹುದು. ಹೊಡೆತದಿಂದ ನರಳುತ್ತಿದ್ದ ಕೋಮಲ್ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ.
ಚಿತ್ರರಂಗದವರ ಕೈವಾಡ ಇದ್ದಾರೆ ಅವರನ್ನು ಸುಮ್ಮನೆ ಬಿಡುವುದಿಲ್ಲ
ನಟ ಕೋಮಲ್ ಮೇಲೆ ಹಲ್ಲೆ ಪ್ರಕರಣವಾಗಿದೆ, ಇದರ ಸಂಭಂದವಾಗಿ ನಟ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ. ನನಗೆ ಗೊತ್ತಾಗುತ್ತೆ ಯಾರು ಏನು ಮಾಡಿದ್ದಾರೆ ಅಂತ ಚಿತ್ರರಂಗದವರು ಮಾಡಿದ್ದಾರಾ ಅಥವಾ ಬೇರೆಯವರು ಮಾಡಿದ್ದಾರಾ. ಇಂಡಸ್ಟ್ರಿ ಅವರು ಮಾಡಿದ್ದರೆ ಖಂಡಿತವಾಗಿ ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ನಾನು 30 ವರ್ಷದಿಂದ ಚಿತ್ರರಂಗದಲ್ಲೆ ಇದ್ದೀನಿ, ನನಗು ಕೆಟ್ಟ ಬೈಗುಳ ಬರುತ್ತೆ. ಕೋಮಲ್ ಪಾಪದವನು ಅವನಿಗೆ ಇವೆಲ್ಲಾ ಗೊತ್ತಾಗಲ್ಲ. ಕೋಮಲ್ ತನ್ನ ಮಗನನ್ನು ಟ್ಯೂಷನ್ ಬಿಡಲು ಹೋಗುತ್ತಿದ್ದ ಸಮಯದಲ್ಲಿ ನಾಲಕ್ಕು ಜನ ಬೈಕ್ ಸವಾರರು ದಾರಿ ಬಿಟ್ಟಿಲ್ಲ ಎನ್ನುವ ವಿಚಾರಕ್ಕೆ ಕೋಮಲ್ ಮೇಲೆ ಹಲ್ಲೆ ಮಾಡಿದ್ದಾರೆ.
ಕುಡಿದು, ಗಾಂಜಾ ಹೊಡೆದು ಈ ರೀತಿ ಬೆಂಗಳೂರಿನಲ್ಲಿ ಆದರೆ ಏನು ಅರ್ಥ
ಮೂರು ಜನ ಕೋಮಲ್ ಅನ್ನು ಹಿಡಿದುಕೊಂಡಿದ್ದು, ಇನ್ನೊಬ್ಬ ವ್ಯಕ್ತಿ ಕೋಮಲ್ ಗೆ ಹೊಡೆದಿದ್ದಾನೆ. ಡ್ರಗ್ಸ್ ತೆಗೆದುಕೊಂಡಿರುವ ನಶೆಯಲ್ಲಿ ಆರೋಪಿ ಈ ರೀತಿ ಮಾಡಿದ್ದಾನೆ. ಒಬ್ಬ ಹುಡುಗಿಯನ್ನು ಬೈಕ್ ಮೇಲೆ ಕೂಡಿಸಿಕೊಂಡು ಆಕೆಯ ಮುಂದೆ ತನ್ನ ಲೆವೆಲ್ ತೋರಿಸುವ ಸಲುವಾಗಿ ವೇಗವಾಗಿ ಬಂದಿದ್ದಾನೆ. ಇವನ ಜೊತೆ ಇನ್ನು ಕೆಲ ಯುವಕರು ಇದ್ದರಂತೆ.
ಇವರನ್ನು ಸುಮ್ಮನೆ ಬಿಡಬಾರದು ಸರಿಯಾದ ಕ್ರಮ ತೆಗೆದುಕೊಳ್ಳಬೇಕು. ಈ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆಯಬಾರದು. ನನ್ನ ತಮ್ಮನ ಮೇಲೆ ಇರುವ ಕರುಣೆಯಿಂದ ನಾನು ಈ ಮಾತನ್ನು ಹೇಳುತ್ತಿಲ್ಲ. ಕುಡಿದು, ಗಾಂಜಾ ಹೊಡೆದು ಈ ರೀತಿ ಬೆಂಗಳೂರಿನಲ್ಲಿ ಆದರೆ ಏನು ಅರ್ಥ ಎಂದು ಜಗ್ಗೇಶ್ ಹೇಳಿದ್ದಾರೆ.