ಓದು ಬರಹ ಇಲ್ಲ ಅಂದ್ರು, ಈ ವ್ಯಕ್ತಿ ಸಾಧನೆಯನ್ನ ಇಡೀ ದೇಶವೇ ಮೆಚ್ಚಿ, ನರೇಂದ್ರ ಮೋದಿಯವರೇ ಪ್ರಶಸ್ತಿ ನೀಡಿದ್ದಾರೆ.

0
966

ಸಾಧನೆ ಎಂಬ ಶಿಖರವನ್ನು ಏರಬೇಕಾದರೆ ಮನುಷ್ಯನಲ್ಲಿ ಛಲ ಇರಬೇಕು. ಎಷ್ಟೇ ಕಷ್ಟ ಬಂದರು ಎದುರಿಸಿ ನಮ್ಮ ಗುರಿಯ ಕಡೆ ಗಮನ ಹರಿಸಬೇಕು. ನಿಮಗೆ ಒಬ್ಬ ಸಾಧಕನ ಕಥೆಯೊಂದನ್ನು ನಾವು ಹೇಳಲು ಹೊರಟಿದ್ದೇವೆ. ಸಾಧಕರ ಸಾಲಿನಲ್ಲಿ ನಿಂತ ವ್ಯಕ್ತಿಯ ಹೆಸರು ಚಿಂತಕಿಂದಿ ಮಲ್ಲೇಶ್ವರಂ, ಇವರು ಜನಿಸಿದ್ದು ತೆಲಂಗಾಣದ ಸಾರಡಿಪೇಟೆ ಅನ್ನೋ ಒಂದು ಗ್ರಾಮದಲ್ಲಿ. ನೇಕಾರಿಯೇ ಈ ಕುಟುಂಬದ ಕುಲಕಸುಬು, ಇವರ ಕುಟುಂಬದಲ್ಲಿ ಆರು ಏಳು ತರಗತಿ ನಂತರ ಶಿಕ್ಷಣ ಪಡೆದವರು ಇಲ್ಲ. ಹೆಣ್ಣು ಮಕ್ಕಳು ಅಷ್ಟೇ ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಮನೆಯಲ್ಲೇ ರೇಷ್ಮೆ ನೂಲಿನಿಂದ ನೇಕಾರಿಯ ಕೆಲಸ ಮಾಡಬೇಕು. ಒಟ್ಟಿನಲ್ಲಿ ಹೆಚ್ಚಿನ ತರಗತಿಯ ಅಧ್ಯಯನ ಮಾಡಲು ಕಡಿವಾಣ ಹಾಕಲಾಗಿದೆ ಅಂತಾ ಹೇಳಬಹುದು.

ಮಲ್ಲೇಶ್ವರಂ ಅವರು ಯಂತ್ರಗಳಂತೆ ರೇಶ್ಮೆ ಸೀರೆಯ ಆಸುವನ್ನು ತೆಗೆಯುತ್ತಿದ್ದರು

ಹುಡುಗರು ಅಷ್ಟೇ ಏಳನೇ ತರಗತಿ ಮುಗಿದ ನಂತರ ಮಾಡಿಟ್ಟ ನೂಲನ್ನು ಸೀರೆಯನ್ನಾಗಿ ನೇಯಬೇಕು. ಈ ಗ್ರಾಮದ ಎಲ್ಲಾ ಸದಸ್ಯರು ಇದೇ ಕಾರ್ಯವನ್ನು ಮಾಡಬೇಕು. ಯಂತ್ರದಂತೆ ಇವರು ಕೆಲಸ ಮಾಡುತ್ತಿದ್ದರು, ಟಕಾ ಟಕಾ ಅನ್ನೋ ಶಬ್ದವನ್ನು ನೀವು 5 ನಿಮಿಷ ಕೂಡ ಕೇಳಲು ಆಗುವುದಿಲ್ಲ. ಅಂತಹದ್ರಲ್ಲಿ ಈ ಜನತೆ ದಿನಕ್ಕೆ ಏನಿಲ್ಲ ಅಂದರು ಕನಿಷ್ಠ 12 ತಾಸು ಶಬ್ದದ ಜೊತೆಗೆ ಜೀವಿಸಬೇಕಾಗುತ್ತದೆ. ಮಲ್ಲೇಶ್ವರಂ ಅವರು ಏಳನೇ ತರಗತಿ ಮುಗಿದ ನಂತರ ಮನೆಯಲ್ಲೇ ಠಿಕಾಣಿ ಹೊಡೆದು ಬಿಟ್ಟಿದರು. ಇವರ ಅಮ್ಮ ಆಸು ತೆಗೆದು ಕೊಟ್ಟ ನೂಲನ್ನು ಮಲ್ಲೇಶ್ವರಂ ಹಾಗೂ ಅವರ ತಂದೆ ಯಂತ್ರಗಳಂತೆ ನೇಯುತಿದ್ದರು. ಮಲ್ಲೇಶ್ವರಂ ಅವರು ಹೇಗೆ ಈ ಕೆಲಸದ ಮೂಲಕ ಮುಂದೆ ಬಂದಿದ್ದಾರೆ ಎನ್ನುವುದರ ಬಗ್ಗೆ ತಮ್ಮ ಮಾತುಗಳ ಮೂಲಕ ಹಂಚಿಕೊಂಡಿದ್ದಾರೆ.

ಪೊಪಂಚಲ್ಲಿ ಸೀರೆಯನ್ನು ಬೇರೆ ಯಾವ ಫ್ಯಾಕ್ಟರೀ ಕೂಡ ತಯಾರುಮಾಡುವುದಿಲ್ಲ

ನಮ್ಮ ಗ್ರಾಮದಲ್ಲಿ ಪೊಪಂಚಲ್ಲಿ ಎಂಬ ಹೆಸರಿನ ರೇಶ್ಮೆ ಸೀರೆಯನ್ನು ತಯಾರಿಸುತ್ತೇವ., ಇಂತಹ ಒಂದು ಸೀರೆಗಳು ಬೇರೆ ಕಡೆ ತಯಾರಾಗುವುದಿಲ್ಲ. ಊರಿನ ಮನೆ ಮನೆಯಲ್ಲೂ ರೇಶ್ಮೆ ಉಂಡೆಯ ನೂಲಿನಲ್ಲಿ ಆಸುವನ್ನು ತೆಗೆದು ಆನಂತರ ಮಗ್ಗದಲ್ಲಿ ಹಾಕಿ ನೇಯುವ ಒಂದು ಕಾರ್ಯವನ್ನು ಮಾಡುತ್ತಾರೆ. ಇವರ ಈ ಪೊಪಂಚಲ್ಲಿ ಸೀರೆಯನ್ನು ಬೇರೆ ಯಾವ ಫ್ಯಾಕ್ಟರೀ ಯಾಕೆ ತಯಾರು ಮಾಡುವುದಿಲ್ಲ. ಏಕೆಂದರೆ ಇಲ್ಲಿ ಆಸುವೆ ಮುಖ್ಯ ಕಾರಣವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ದೊಡ್ಡದಾದ ಮಣೆಯ ಮೇಲೆ ಸಣ್ಣ ಜಾಗದಲ್ಲಿ ಮೊಳೆ ಹೊಡೆಯುತ್ತಾರೆ, ಮೊಳೆ ಹೊಡೆದ ಸ್ಥಳದಿಂದ 40m ದೂರದಲ್ಲಿ ಒಂದು ಗೆರೆ ಎಳೆದು ಅದರ ಆಧರಿತವಾದ ಮೇಲೆ 40 ಮೊಳೆಗಳನ್ನು ಹೊಡೆಯುತ್ತಾರೆ.

ಕಾರ್ಮಿಕರ ಕೈಗಳು ದಿನಕ್ಕೆ 18000 ಸಾರಿ ಬೀಸಾಡಬೇಕಾಗುತ್ತದೆ

ಇದಾದ ನಂತರ ರೇಶ್ಮೆ ದಾರವನ್ನು ಮೊದಲು ಹೊಡೆದ ಮೂಲೆಯನ್ನು ಹಾಗೂ ಅದರಿಂದ ದೂರವಿರುವ ಇನ್ನೊಂದು ಮೂಲೆಯನ್ನು ಸುತ್ತಿಕೊಂಡು ಸಾಗಬೇಕು, ಆನಂತರ ಪ್ರತಿಸಾರಿಯಾ ಸುತ್ತಾಟಕ್ಕು ಅಲ್ಲಿ ಕೂತವರ ವ್ಯಕ್ತಿಯ ಕೈ ದಾರದ ಉಂಡೆಯ ಜೊತೆಗೆ ಒಂದು ಮೀಟರ್ ಆ ಕಡೆ ಒಂದು ಮೀಟರ್ ಈ ಕಡೆ ಬೀಸಾಡಬೇಕು. ಹೀಗೆ ಒಂದೇ ನೂಲನ್ನು ನಲವತ್ತು ಮೂಲೆಗಳ ಜೊತೆ ಸುತ್ತಾಡಬೇಕಾದರೆ ಕೂತವರ ಮನುಷ್ಯನ ಕೈ 9000 ಸಾರಿ ಬೀಸಾಡಬೇಕಾಗುತ್ತದೆ. ಒಂದು ಸೀರೆ ತಯಾರು ಮಾಡಲು ಸುಮಾರು ಐದು ವರೆ ತಾಸು ಬೇಕಾಗುತ್ತದೆ. ಹಾಗಾದರೆ ಎರಡು ಸೀರೆಗಳನ್ನು ಮಾಡಬೇಕಾದರೆ ಕಾರ್ಮಿಕರ ಕೈಗಳು ದಿನಕ್ಕೆ 18000 ಸಾರಿ ಬೀಸಾಡಬೇಕಾಗುತ್ತದೆ, ಇದು ತಮಾಷೆಯ ಮಾತಲ್ಲ.

ಆಸು ತೆಗೆಯುವ ವಿಷಯದಲ್ಲಿ ನಾನು ಏನಾದರೂ ಸುಲಭ ಉಪಾಯವನ್ನು ಕಂಡು ಹಿಡಿಯಬೇಕೆಂದು ತೀರ್ಮಾನಿಸಿದೆ

ನಾನು ಅಪ್ಪನ ಜೊತೆ ನೇಕಾರಿಯ ಕೆಲಸ ಶುರು ಮಾಡಿದಾಗ ಅಮ್ಮ ನಮ್ಮಿಬ್ಬರಿಗೂ ಆಸು ತೆಗೆಯುವ ಕೆಲಸವನ್ನು ವಹಿಸಿದ್ದಳು. ಬೀಸುವಾಗ ನನ್ನ ಅಮ್ಮನ ತೊಳಲ್ಲಿ ಕೂಡ ಆಗಾಗ ನೋವು ಕಾಣಿಸಿಕೊಳ್ಳುತಿತ್ತು. ಮಗನೆ ನಿನಗೆ ಹೀಗೆ ದಿನಕ್ಕೆ 12 ತಾಸು ಸತತವಾಗಿ ಆಸು ತೆಗೆಯಲು ಸಾಧ್ಯವಾಗುತಿಲ್ಲ. ಆದ್ದರಿಂದ ನೀನು ಸಿಟಿ ಅಲ್ಲಿ ಎಲ್ಲಾದರು ಒಂದು ಕೆಲಸ ನೋಡಿಕೊ ಅಂತಾ ಹೇಳಿದಳು. ನನ್ನ ಓದಿಗೆ ಯಾರು ತಾನೆ ನನಗೆ ಕೆಲಸ ಕೊಡುತ್ತಾರೆ ಅಂತಾ ಆಲೋಚಿಸಿದೆ. ನಾನು ಕೆಲಸಕ್ಕೆ ಸೇರಿಬಿಟ್ಟರೆ ನೇಕಾರಿಯನ್ನು ಮುಂದುವರೆಸುವವರು ಯಾರು ಎಂದು ನನ್ನಲೆ ನಾನು ಪ್ರಶ್ನಿಸಿಕೊಂಡೆ? ಸಮಸ್ಯೆ ಇರೋದು ನೇಕಾರಿಯ ಉದ್ಯೋಗದಲ್ಲ, ಆಸು ತೆಗೆಯುವ ವಿಷಯದಲ್ಲಿ ನಾನು ಏನಾದರೂ ಸುಲಭ ಉಪಾಯವನ್ನು ಕಂಡು ಹಿಡಿಯಬೇಕೆಂದು ನಿರ್ಧರಿಸಿದೆ.

ಒಂದು ದಿನ ನಾನು ಅಮ್ಮನ ರೆಟ್ಟೆಯ ಚಲನ ವಲನೆಯನ್ನು ಗಮನಿಸುತ್ತ ಕೂತು ಬಿಟ್ಟಿದೆ

ಒಂದು ದಿನ ಮನೆಯಲ್ಲಿ ಆಸು ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು, ನಾನು ಅಮ್ಮನ ರೆಟ್ಟೆಯ ಚಲನ-ವಲನೆಯನ್ನು ಗಮನಿಸುತ್ತಾ ಕೂತು ಬಿಟ್ಟಿದೆ. ಈ ತರಹ ನೀನು ನನ್ನನೆ ನೋಡುತ್ತಾ ಕೂತು ಬಿಟ್ಟರೆ ಹಸಿವನ್ನು ನೀಗಿಸುವವರು ಯಾರು ಎಂದು ಅಮ್ಮ ಜೋರು ಮಾಡಿದಳು. ಇಲ್ಲ ಅಮ್ಮ ನಾನು ಒಂದು ಹೊಸ ಯಂತ್ರ ಕಂಡು ಹಿಡಿಯುತ್ತೇನೆ, ಆ ಯಂತ್ರವೆ ಆಸು ತೆಗೆಯುವ ಕೆಲಸ ಮಾಡುತ್ತದೆ, ನೀನು ಕಷ್ಟ ಪಡುವ ಅಗತ್ಯ ಇರುವುದಿಲ್ಲ ಅಂತಾ ನಾನು ಅಮ್ಮನಿಗೆ ಹೇಳಿದೆ. ಯಂತ್ರ ಸಿದ್ದ ಪಡಿಸಲು ನಾನು ಮುಂದಾದೆ, ಸಿಕ್ಕ ಸಿಕ್ಕ ವಸ್ತುಗಳನೆಲ್ಲ ಸಂಗ್ರಹಣ ಮಾಡಿದ್ದೆ, ಆದರೆ ಯಾವ ರೀತಿ ಅವುಗಳನ್ನು ಬಳಸಿಕೊಳ್ಳಬೇಕೆಂಬ ಜ್ಞಾನ ನನಗೆ ಇರಲಿಲ್ಲ. ಹೀಗೆ ಏನಾದರೂ ಹೊಸ ಪ್ರಯತ್ನ ನಾನು ಮಾಡುತ್ತಲೆ ಇದ್ದೆ.

ಯಂತ್ರ ಸಿದ್ದ ಪಡಿಸಲು ಮುಂದಾದೆ

ಇದನ್ನು ಕಂಡ ನೆರೆಹೊರೆಯವವರು ನಿಮ್ಮ ಮಗನಿಗೇನು ಹುಚ್ಚೆ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಗೇಲಿ ಮಾಡಿದರು. ಮದುವೆ ಮಾಡಿಸಿದರೆ ಆಗಲಾದರೂ ಇವರ ಹುಚ್ಚು ಕಡಿಮೆ ಆಗುವುದು ಎಂದು ಎಲ್ಲರೂ ಅಭಿಪ್ರಾಯ ಪಟ್ಟರು, ನಮ್ಮ ತಂದೆ ತಾಯಿಯರ ನಿರ್ಧಾರ ಕೂಡ ಅದೇ ಆಗಿತ್ತು. ಯಂತ್ರ ನಿರ್ಮಾಣ ಮಾಡಲು ನಾನು ಸಾಕಷ್ಟು ಅಲೆದಾಡಿದೆ, ಪರದಾಡಿದೆ. ಬಹಳ ಹಣ ಕೂಡ ಕರ್ಚಾಯಿತು ಪರಿಹಾರ ಮಾತ್ರ ಸಿಗಲೇ ಇಲ್ಲ. ನಮ್ಮ ತಂದೆ ತಾಯಿಯ ಆಸೆಯಂತೆ ನಾನು ವಿವಾಹ ಆದೆ, ಹೆತ್ತವರಿಗೆ ಖುಷಿ ಆಯಿತು. ಮದುವೆ ಆದ ಮೇಲೆ ನಾನು ಹೆಂಡತಿ, ಮನೆ ಅಂತಾ ನನ್ನ ಪಾಡಿಗೆ ನಾನು ಇದ್ದು ಬಿಟ್ಟೆ. ಯಂತ್ರದ ತಂಟೆಗೆ ನಾನು ಹೋಗಲಿಲ್ಲ.

ಸಂಜೆ ಕೆಲಸದಿಂದ ಬಂದ ನಂತರ ಯಂತ್ರದ ಬಗ್ಗೆ ಸಂಶೋಧನೆ ಮಾಡಬೇಕೆಂದು ದೃಡ ಸಂಕಲ್ಪ ಮಾಡಿದೆ

ಸ್ವಲ್ಪ ದಿನಗಳಾದ ನಂತರ ಮತ್ತೆ ಯಂತ್ರದ ಬಗ್ಗೆ ನನಗೆ ಆಸಕ್ತಿ ಮೂಡಿತು. ಯಂತ್ರದ ಮೊದಲ ಎರಡು ಮುಖ್ಯವಾದ ಘಟ್ಟ ತಲುಪುವಲ್ಲಿ ಯಶಸ್ವಿ ಆದೆ. ಇನ್ನೂ ಮೂರು ಹಂತವನ್ನು ನಾನು ತಲುಪಬೇಕಿತ್ತು ಅದೂ ಅಷ್ಟೊಂದು ಸುಲಭವಾದ ಮಾತಲ್ಲ. ಯಂತ್ರಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಳ್ಳಲು ಹಣ ನೀರಿನಂತೆ ಕೈ ಜಾರಿತು. ನಮ್ಮ ಕುಟುಂಬದವರು ನನ್ನನ್ನು ತುಂಬಾ ನಿಂದಿಸಿದರು, ಆದ್ದರಿಂದ ನಾನು ಪಟ್ಟಣಕ್ಕೆ ಹೋಗಿ ಎಲೆಕ್ಟ್ರಿಕಲ್ ವೈರಿಂಗ್ ಕೆಲಸಕ್ಕೆ ಸೇರಿಕೊಂಡೆ. ಊರಲ್ಲಿ ಇದ್ದ ಯಂತ್ರವನ್ನು ನಾನು ಮತ್ತೆ ಹೈದರಾಬಾದ್ ಗೆ ತಂದು ನನ್ನ ರೂಂ ನಲ್ಲಿ ಇಟ್ಟುಕೊಂಡೆ. ಸಂಜೆ ಡ್ಯೂಟಿ ಮುಗಿದಾದ ಮೇಲೆ ನಾನು ಯಂತ್ರದ ಸಂಶೋಧನೆ ಮಾಡಬೇಕೆಂದು ದೃಡ ಸಂಕಲ್ಪ ಮಾಡಿಕೊಂಡಿದ್ದೆ.

ನನ್ನ ಯಂತ್ರಕ್ಕೆ ಸಹಾಯ ಆಗುವ ವಿದೆಯಯನ್ನು ಆ ಮೆಷಿನ್ಗಳ ಮೂಲಕ ತಿಳಿದುಕೊಂಡೆ

ಹೇಗೋ ಮೂರನೆಯ ಹಂತವನ್ನು ನಾನು ಮುಗಿಸಿದೆ, ಹಲವು ದಿನಗಳಾದ ಮೇಲೆ ಮತ್ತೊಂದು ಘಟ್ಟ ನಾನು ತಲುಪಿದೆ. ಒಂದು ದಿನ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕೆಲವೊಂದು ಮೆಷಿನ್ಗಳನ್ನು ಹಾಗೆ ನೋಡುತ್ತಾ ಇದ್ದೆ, ನನ್ನ ಯಂತ್ರಕ್ಕೆ ಸಹಾಯ ಆಗುವ ವಿದ್ಯೆಯನ್ನು ಆ ಮೆಷಿನ್ಗಳ ಮೂಲಕ ನಾನು ತಿಳಿದುಕೊಂಡು ಕೊನೆಯ ಹಂತವನ್ನು ರೀಚ್ ಆಗಿ ಆಸು ತೆಗೆಯುವ ನನ್ನ ಕನಸಿನ ಯಂತ್ರವು ತಯಾರಾಯಿತು. ಸಂತಸದಿಂದ ವಾಹನದಲ್ಲಿ ಯಂತ್ರವನ್ನು ಮನೆಗೆ ತಂದು ನೂಲಿನ ಪ್ರಯೋಗ ಮಾಡಿದೆನು. ಬಹಳ ವೇಗವಾಗಿ ಆಸು ತೆಗೆಯುವ ಕಾರ್ಯವನ್ನು ಈ ಯಂತ್ರ ಪೂರ್ಣಗೊಳಿಸಿತು. ಇದನ್ನು ಕಂಡ ನನ್ನ ತಂದೆ-ತಾಯಿಗೆ ಬಹಳ ಖುಷಿ ಆಯಿತು. ನಿನ್ನನ್ನು ನಾವು ಏನೋ ಅಂತಾ ತಿಳಿದುಕೊಂಡಿದ್ದೆವು, ನಿನ್ನಲ್ಲಿ ಇಂತಹಾ ಒಂದು ಸಾಮ್ಯರ್ಥತೆ ಇದೆ ಎಂದು ನಮ್ಮಗೆ ಗೊತ್ತಿರಲ್ಲಿಲ್ಲ ಎಂದು ಹೇಳಿದರು.

ಎಲೆಕ್ಟ್ರಿಕಲ್ ರೂಪದಲ್ಲಿ ನನ್ನ ಯಂತ್ರವನ್ನು ಬದಲಾಯಿಸಿದೆ

2000-20005ರ ವರೆಗೂ ನಾನು ನೂರು ಯಂತ್ರಗಳನ್ನು ತಯಾರು ಮಾಡಿ ಇಡೀ ಹಳ್ಳಿಗೆ ಹಂಚಿದೆ. ಮಾದ್ಯಮದವರು ನೇರ ನಮ್ಮ ಮನೆಗೆ ಬಂದಿದ್ದರು. ಆದರೆ ಯಂತ್ರದ ಬೆಲೆ 13000 ದಿಂದ 25000 ವರೆಗೂ ಹೋಗುತ್ತದೆ. ಬಡ ಕುಟುಂಬದ ಜನರು ಇಷ್ಟೊಂದು ಹಣವನ್ನು ಕೊಟ್ಟು ತೆಗೆದುಕೊಳ್ಳಲು ಹಿಂದು-ಮುಂದು ನೋಡಿದರು. ಇದೇನಪ್ಪ ನಾನು ಪಟ್ಟ ಕಷ್ಟ ಎಲ್ಲಾ ವ್ಯರ್ಥ ಆಗಿ ಹೊಯಿತಲ್ಲ ಎಂದು ಕುಳಿತುಕೊಂಡಾಗ ನನ್ನ ಒಬ್ಬ ಸ್ನೇಹಿತ ಬಂದು ಯಂತ್ರವನ್ನು ಎಲೆಕ್ಟ್ರಿಕಲ್ ರೂಪದಲ್ಲಿ ಬದಲಾಯಿಸು ಎಂದು ಸಲಹೆ ನೀಡಿದರು. ನಾನು ಸಹ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪುಸ್ತಕವನ್ನು ಓದಿ ಅದರ ಕುರಿತು ತಿಳಿದುಕೊಂಡು ಯಂತ್ರವನ್ನು ಬದಲಾಯಿಸಿದೆ. 13000 ಬೆಳೆಗೆ ಯಂತ್ರ ಮಾರಾಟಕ್ಕೆ ಇಟ್ಟೆನು.

ಯಂತ್ರದ ಸಂಪರ್ಕದಿಂದ ನಮಗೆ ಬೇಕಾದ ವ್ಯವಸ್ಥೆಯನ್ನು ಕಂಪ್ಯೂಟರ್ ಅಲ್ಲಿ ಸೆಟ್ ಮಾಡುವ ವಿಧಾನ ಜಾರಿಗೆ ತಂದೆ

2009 ರಲ್ಲಿ ಗಣಕಯಂತ್ರದ ಬಗ್ಗೆ ತಿಳಿದುಕೊಂಡು ಮೆಷಿನ್ ಲೆವೆಲ್ ಭಾಷೆಯನ್ನು ಬರೆಯಲು ಕಲಿತು. ಯಂತ್ರದ ಸಂಪರ್ಕದಿಂದ ನಮಗೆ ಬೇಕಾದ ವ್ಯವಸ್ಥೆಯನ್ನು ಕಂಪ್ಯೂಟರ್ ಅಲ್ಲಿ ಸೆಟ್ ಮಾಡುವ ವಿಧಾನ ಜಾರಿಗೆ ತಂದೆ. ನ್ಯಾಷನಲ್ ಫೌಂಡೇಷನ್ ಇನ್ನೊವೇಷನ್ ಹೆಸರಿನ ಒಂದು ಸಂಸ್ಥೆಯವರು ನನ್ನ ಕೆಲಸವನ್ನು ಮೆಚ್ಚಿ ಪೇಟೆಂಟ್ ಮಾಡಿಸಿಕೊಡುತ್ತಾರೆ. ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರ ಜೊತೆಗೆ ಹತ್ತು ನಿಮಿಷಗಳ ಕಾಲ ಕಾಫಿ ಕುಡಿಯುತ್ತಾ ಮಾತನಾಡುವ ಸೌಭಾಗ್ಯ ನನ್ನದಾಗಿತ್ತು. 2016 ರಂದು ಜನವರಿಯಲ್ಲಿ ಟೈಮ್ಸ್ ವಾಹಿನಿಯವರು ನನ್ನ ಸಾಧನೆಯನ್ನು ಗುರುತಿಸಿ  ಅಮೇಜಿಂಗ್ ಇಂಡಿಯನ್ಸ್ ಎಂಬ ಸಾಲಿನಲ್ಲಿ ನನ್ನ ಹೆಸರು ಕೂಡ ಸೇರ್ಪಡೆ ಆಗುತ್ತದೆ. ಇದೂ ನನಗೆ ಹೆಮ್ಮೆ ತರುವ ವಿಷಯ.

ಅಮೇಜಿಂಗ್ ಇಂಡಿಯನ್ಸ್ ಪ್ರಶಸ್ತಿಯು ಪ್ರಧಾನ ಮಂತ್ರಿ ಮೋದಿ ಅವರು ನೀಡಿ ಸನ್ಮಾನಿಸುತ್ತಾರೆ

ಇಂತಹ ಒಂದು ಸಂದರ್ಭದಲ್ಲಿ ನನಗೆ ಪ್ರಶಸ್ತಿ ಕೊಟ್ಟಿದ್ದು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು. ಭಾರತ ಸರ್ಕಾರ ಪದ್ಮ ಪ್ರಶಸ್ತಿ ಕೂಡ ನನಗೆ ನೀಡಿ ಗೌರವಿಸಿ ಸನ್ಮಾನಿಸಿದ್ದಾರೆ. ಇದೆಲ್ಲಾ ನಿಜವಾಗಿಯೂ ನನ್ನ ಜೀವನದಲ್ಲಿ ನಡೆದಿದೆಯಾ ಎನ್ನುವುದೇ ಆಶ್ಚರ್ಯದ ಸಂಗತಿ ಆಗಿದೆ. ಕೇವಲ ಏಳನೇ ತರಗತಿ ಓದಿ ಇಂತಹ ಒಂದು ಉನ್ನತವಾದ ಪ್ರಶಸ್ತಿಗಳಿಗೆ ನಾನು ಭಾಜನರಾಗುತ್ತೇನೆ ಅಂತಾ ನಾನು ಕನಸಲ್ಲಿ ಕೂಡ ಊಹಿಸಿರಲಿಲ್ಲ. ಪುರಸ್ಕ್ಕರ ಇರಲಿ ನಾನು ನೆಟ್ಟಗೆ ಉದ್ಯೋಗ ಹುಡುಕಿಕೊಂಡು ನಾಲಕ್ಕು ಕಾಸು ಸಂಪಾದನೆ ಮಾಡುತ್ತಿನೊ ಇಲ್ಲವೋ ಎನ್ನುವುದರ ಬಗ್ಗೆ ನನಗೆ ನಂಬಿಕೆ ಇರಲಿಲ್ಲ. ಈಗ ನನಗೆ 45 ವರ್ಷ.

ನನ್ನ ಈ ಸಾಧನೆಗೆ ನನ್ನ ತಾಯಿಯ ಪಾತ್ರ ಬಹಳ ದೊಡ್ಡದು

ಮೊದಲು ಆಸು ತೆಗೆಯಬೇಕಾದರೆ 5 6 ಗಂಟೆಗಳ ಕಾಲ ಬೇಕಾಗಿತ್ತು, ಆದರೆ ಇಂದು ಒಂದು ಸೀರೆ ತಯಾರಿಕೆಗೆ ತೆಗೆದುಕೊಳ್ಳುವ ಸಮಯ ಕೇವಲ 90 ನಿಮಿಷ. ದಿನಕ್ಕೆ ಒಂದೆರಡು ಸೀರೆ ನೇಯುತಿದ್ದ ಜನರು ಈಗ ಯಂತ್ರದ ಸಹಾಯದಿಂದ 6-7 ಸೀರೆಗಳು ನೇಯುತ್ತಿದ್ದಾರೆ. ಹೆಚ್ಚು ಶ್ರಮ ಪಡುವ ಅಗತ್ಯ ಈಗ ಇವರಿಗಿಲ್ಲ, ರೆಟ್ಟೆಯ ನೋವಿಗೂ ಮುಕ್ತಾಯ ಹೇಳಿದ್ದಾರೆ. ನನ್ನ ಸಾಧನೆಗೆ ವಿಶ್ವವೆ ಹಾಡಿ ಹೊಗಳುತ್ತಿದ್ದಾರೆ. ಎನ್ ಐ ಎಫ್ ಸಂಸ್ಥೆಯವರು ನನ್ನ ಯಂತ್ರಕ್ಕೆ ಲಕ್ಷ್ಮಿ ಆಸು ಯಂತ್ರ ಅಂತಾ ಪೇಟೆಂಟ್ ಒದಗಿಸಿ ಕೊಟ್ಟಿದ್ದಾರೆ. ಲಕ್ಸ್ಮಿ ನನ್ನ ತಾಯಿಯ ಹೆಸರು, ನನ್ನ ಈ ಸಾಧನೆಗೆ ನನ್ನ ತಾಯಿಯ ಪಾತ್ರ ಬಹಳ ದೊಡ್ಡದು, ಅವರಿಂದಲೇ ನಾನು ಈ ಮಟ್ಟದ ವರೆಗೂ ಬಂದು ನಿಂತಿದ್ದೇನೆ.

LEAVE A REPLY

Please enter your comment!
Please enter your name here