ಈ ವಾರದ ವೀಕೆಂಡ್ ಟೆಂಟ್ ನ ಸಾಧಕರ ಸೀಟಲ್ಲಿ ಹಾಸ್ಯ ನಟ ಚಿಕ್ಕಣ್ಣ

0
1155

ನಮ್ಮ ಚಂದನವನದಲ್ಲಿ ಸಿನಿಮಾಗಳಿಗಿಂತ ಜನರು ಹೆಚ್ಚಾಗಿ ಕಿರುತೆರೆ ಕಾರ್ಯಕ್ರಮಗಳನ್ನ ಇಷ್ಟ ಪಡುತ್ತಾರೆ. ಯಾಕಂದ್ರೆ ನಮ್ಮಲ್ಲಿ ಅಂತಹ ವಿಭಿನ್ನ ರೀತಿಯ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಅದರಲ್ಲೂ ಸ್ತ್ರೀಯರಂತೂ ಧಾರಾವಾಹಿಗಳಲ್ಲಿ ಮುಳುಗಿ ಬಿಡುತ್ತಾರೆ. ಇನ್ನೂ ಮನೆ ಮಂದಿ ಎಲ್ಲಾ ಕೂತು ನೋಡುವಂತಹ ಕಾರ್ಯಕ್ರಮಗಳು ನಮ್ಮಲ್ಲಿವೆ. ಅವುಗಳೇ ಕನ್ನಡದ ಕೋಟ್ಯಾಧಿಪತಿ, ವೀಕೆಂಡ್ ವಿತ್ ರಮೇಶ್, ಡ್ಯಾನ್ಸಿಂಗ್ ಸ್ಟಾರ್ ಈ ರೀತಿಯ ಹತ್ತು ಹಲವು ಕಾರ್ಯಕ್ರಮಗಳು ಪ್ರಸಾರವಾಗುತ್ತವೆ, ಇವುಗಳನ್ನ ನೋಡಲು ಜನರು, ವಾರದ ಕೊನೆಯ 2 ದಿನಗಳನ್ನ ಮುಡಿಪಾಗಿಟ್ಟಿರುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಎಲ್ಲರ ಮನೆ ಮಾತಾಗಿದೆ. ಪ್ರತಿಯೊಬ್ಬರೂ ಸಹ ಆ ಕಾರ್ಯಕ್ರಮಕ್ಕಾಗಿ ಕಾದು ಕುಳಿತಿರುತ್ತಾರೆ. ಯಾಕಂದ್ರೆ, ಒಬ್ಬ ಮನುಷ್ಯ ಉನ್ನತ ಮಟ್ಟ ಏರಲು, ಎಷ್ಟು ಕಷ್ಟ ಪಟ್ಟಿರುತ್ತಾನೆ ಅನ್ನೋದನ್ನ ನಾವು ಇಲ್ಲಿ ತಿಳಿಯಬಹುದಾಗಿದೆ. ಹಾಗಾಗಿ ಎಲ್ಲರೂ ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.

ಈ ವಾರ ಸಾಧಕರ ಸೀಟಲ್ಲಿ ಕೂರಲಿದ್ದಾರೆ ಹಾಸ್ಯ ನಟ ಚಿಕ್ಕಣ್ಣ

ಇತ್ತೀಚಿಗೆ ಕನ್ನಡದಲ್ಲಿ ನೆಚ್ಚಿನ ಕಿರುತೆರೆ ಕಾರ್ಯಕ್ರಮ ಅಂದ್ರೆ ಅದು ವೀಕೆಂಡ್ ವಿತ್ ರಮೇಶ್. ಹಾಗಾಗಿ ಶನಿವಾರ ಹಾಗೂ ಭಾನುವಾರ ಬಂತು ಅಂದ್ರೆ ಸಾಕು ಜನರು ಈ ಕಾರ್ಯಕ್ರಮ ನೋಡಲು, ಟಿವಿ ಮುಂದೆ ಹಾಜರಾಗಿರುತ್ತಾರೆ. ಯಾಕಂದ್ರೆ ಜೀವನದಲ್ಲಿ ಏನಾದ್ರು ಸಾಧನೆ ಮಾಡಿರುವ ವ್ಯಕ್ತಿಗಳನ್ನ ಇವರು ಕಾರ್ಯಕ್ರಮಕ್ಕೆ ಕರೆಸುತ್ತಾರೆ. ಹಾಗಾಗಿ ಅವರು ತಮ್ಮ ಜೀವನದ ಕಷ್ಟ, ನೋವು ಎಲ್ಲವನ್ನು ಹಂಚಿಕೊಳ್ಳುತ್ತಾರೆ. ಹಾಗಾಗಿ ಎಲ್ಲರೂ ಈ ಕಾರ್ಯಕ್ರಮವನ್ನ ಬಹಳ ಇಷ್ಟ ಪಡುತ್ತಾರೆ. ಇನ್ನೂ ಈ ವಾರದ ವೀಕೆಂಡ್ ಟೆಂಟ್ ಗೆ ಹಾಸ್ಯ ನಟ ಚಿಕ್ಕಣ್ಣ ಬರಲಿದ್ದಾರೆ. ಹೌದು. ಈ ವಾರದ ಸಾಧಕರ ಸೀಟಲ್ಲಿ ಚಿಕ್ಕಣ್ಣ ಕೂರಲಿದ್ದಾರೆ.

ತಮ್ಮ ಜೀವನದ ನೋವು, ನಲಿವುಗಳನ್ನ ಹಂಚಿಕೊಳ್ಳಲಿರುವ ಚಿಕ್ಕಣ್ಣ

ಇನ್ನೂ ಈ ವಾರ ಸಾಧಕರ ಸೀಟಲ್ಲಿ ಹಾಸ್ಯ ನಟ ಚಿಕ್ಕಣ್ಣ ಕೂರಲಿದ್ದು, ಕಾರ್ಯಕ್ರಮದಲ್ಲಿ ತಮ್ಮ ಜೀವನದ ಕಷ್ಟ ಹಾಗೂ ನೋವುಗಳನ್ನ ಎಲ್ಲರ ಮುಂದೆ ಹಂಚಿಕೊಳ್ಳಲಿದ್ದಾರೆ. ಹೌದು. ಕಿರಾತಕ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಚಿಕ್ಕಣ್ಣ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಸಹ ನಟಿಸುತ್ತಿದ್ದಾರೆ. ಅಲ್ಲದೆ ಹಳೆ ನಾಯಕರಿರಬಹುದು, ಅಥವಾ ಈಗಿನ ಹೊಸ ನಾಯಕರಿರಬಹುದು ಪ್ರತಿಯೊಬ್ಬರೂ ತಮ್ಮ ಸಿನಿಮಾಗೆ ಚಿಕ್ಕಣ್ಣ ನೇ ಹಾಸ್ಯ ನಟನಾಗಿರಬೇಕು ಎಂದು ಬಯಸುತ್ತಾರೆ. ಅಷ್ಟರ ಮಟ್ಟಿಗೆ ತಮ್ಮ ನಟನೆ ಮೂಲಕ, ಎಲ್ಲರನ್ನ ತಮ್ಮತ್ತ ಸೆಳೆದುಕೊಂಡಿದ್ದಾರೆ.

ಈಗಾಗಲೇ ಅತಿಥಿಯ ಬಗ್ಗೆ ಸುಳಿವು ನೀಡಿರುವ ಜೀ ವಾಹಿನಿ

ಇನ್ನೂ ಪ್ರತಿಬಾರಿಯಂತೆ ಈ ಬಾರಿಯೂ ಸಹ, ಕಾರ್ಯಕ್ರಮಕ್ಕೆ ಯಾರು ಬರಲಿದ್ದಾರೆ ಅನ್ನೋದನ್ನ, ಕಾರ್ಯಕ್ರಮದವರು ಸಣ್ಣ ಸುಳಿವನ್ನ ನೀಡಿದ್ದಾರೆ. ಹೌದು. ಸಾಧಕರ ಸೀಟಲ್ಲಿ, ಚಿಕ್ಕಣ್ಣ ಇರುವ ಫೋಟೋವನ್ನ ಕ್ಲಿಕ್ಕಿಸಿ ಅದನ್ನ ಬ್ಲರ್ ಮಾಡಿ, ಸಾಮಾಜಿಕ ಜಾಲತಾಣಗಲ್ಲಿ ಹರಿಬಿಟ್ಟಿದ್ದಾರೆ. ಇನ್ನೂ ನೋಡಿದ ಜನರು ಚಿಕ್ಕಣ್ಣ ಎಂದು ಗುರುತಿಸಿದ್ದಾರೆ. ಜೊತೆಗೆ ಅವರಿಗೆ ಅನಿಸಿದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನ ಕಾಮೆಂಟ್ ಗಳ ಮೂಲಕ ತಿಳಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ವಾರದ ವೀಕೆಂಡ್ ಟೆಂಟ್ ನಲ್ಲಿ ಚಿಕ್ಕಣ್ಣ ಸಾಧಕರ ಸೀಟಲ್ಲಿ ಕೂರಲಿದ್ದಾರೆ.

ಸದಾ ಸಿನಿಮಾಗಳಲ್ಲಿ ಜನರನ್ನ ನಗಿಸುತ್ತಿದ್ದ ಹಾಸ್ಯ ನಟ ಚಿಕ್ಕಣ್ಣ, ಈ ವಾರ ವೀಕೆಂಡ್ ಟೆಂಟ್ ನಲ್ಲಿ ಬಂದು, ಎಲ್ಲರನ್ನ ನಗಿಸಲಿದ್ದಾರೆ. ಜೊತೆಗೆ ಅವರಿಗಿರುವ ನೋವು ಹಾಗೂ ಕಷ್ಟಗಳನ್ನ ಎಲ್ಲರ ಮುಂದೆ ಹಂಚಿಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here