ಮುಖ್ಯಮಂತ್ರಿಗಳ ಗಮನ ಗ್ರಾಮವಾಸ್ತವ್ಯದ ಕಡೆಗೆ

0
490

ಇತ್ತೀಚಿಗಷ್ಟೆ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಕುಮಾರಸ್ವಾಮಿ ಅವರು ಸರ್ಕಾರದ ಬಗ್ಗೆ ಮಾತನಾಡಿದರು. ಯಾರೇ ಬಂದರು, ಏನೇ ಆದರೂ ಈ ಸರ್ಕಾರ ಬೀಳುವುದಿಲ್ಲ. ಇನ್ನೂ 4 ವರ್ಷ ಈ ಸರ್ಕಾರ ಸುಧೀರ್ಘವಾಗಿ ನಡೆಯುತ್ತದೆ. ಅದರ ಸಂಪೂರ್ಣ ಜವಾಬ್ದಾರಿಯನ್ನ ನಾನು ಹೊತ್ತಿದ್ದೇನೆ. ಜೊತೆಗೆ ಮುಂದಿನ 4 ವರ್ಷ ಸರ್ಕಾರವನ್ನ ಹೇಗೆ ನಡೆಸಬೇಕು ಅನ್ನೋದು ನನಗೆ ಗೊತ್ತಿದೆ. ಇದರ ಬಗ್ಗೆ ಯಾರು, ಏನು ಚಿಂತಿಸುವ ಅವಶ್ಯಕತೆ ಇಲ್ಲ. ನನ್ನ ಅಧಿಕಾರವನ್ನ ನಾನು, ಚೆನ್ನಾಗಿ ನಡೆಸಿಕೊಂಡು ಹೋಗುತ್ತೇನೆ. ಜೊತೆಗೆ ಮೋಸದ ಕಾರ್ಯಕ್ಕೆ ಎಂದಿಗೂ ನಾನು ಕೈ ಹಾಕುವುದಿಲ್ಲ ಎಂದು ಮನನೊಂದು ಮಾತಾಡಿದ್ದರು. ಮೈತ್ರಿ ಸರ್ಕಾರ ರಾಜ್ಯದಲ್ಲಿ ರಚನೆ ಆದ ಮೇಲೆ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದ್ದರು.

ಅಭಿವೃದ್ಧಿ ಕೆಲಸವನ್ನ ಮಾಡುತ್ತಲೇ ಇರುತ್ತೇವೆ

ಮಾತನಾಡುವಾಗ ಕುಮಾರಸ್ವಾಮಿಯವರು ಇನ್ನೂ ಒಂದು ಮಾತನ್ನ ಹೇಳಿದರು. ಹೌದು. ನಾನು ಮಂಡ್ಯ, ಮೈಸೂರು ಹಾಗೂ ತುಮಕೂರು ಜನತೆಗೆ ಎಷ್ಟು ಪ್ರೀತಿ ನೀಡಿದ್ದೇನೆ. ಆದರೆ ಅವರು ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ನಾನು ಅವರಿಗೇನೋ ಮೋಸ ಮಾಡಿದ್ದೇನೆ ಅನ್ನೋ ರೀತಿಯಲ್ಲಿ ಭಾವಿಸುತ್ತಾರೆ. ಆದರೆ ನನಗೆ ಅವರ ಮೇಲೆ ಅಪಾರ ಪ್ರೀತಿಯಿದೆ. ನಾನು ಕೂಡ, ಅಷ್ಟೇ ಪ್ರೀತಿ ನೀಡಿದ್ದೇನೆ. ಆದ್ರೆ, ಅವರು ನಮ್ಮನ್ನ ಕೈ ಹಿಡಿದಿಲ್ಲ. ಆದರೂ ನಮಗೆ ಬೇಸರವಿಲ್ಲ. ನಾವು ಸೋತರು, ಇಲ್ಲಿ ಅಭಿವೃದ್ಧಿ ಕೆಲಸವನ್ನ ಮಾಡುತ್ತಲೇ ಇರುತ್ತೇವೆ ಎಂದು ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದರು.

ಗುರುಮಿಠಾಕಲ್ ತಾಲೂಕಿನ ಚಂಡರಕಿ ಗ್ರಾಮದಿಂದ ಶುಭಾರಂಭವಾಗಲಿದೆ

ಗ್ರಾಮ ವಾಸ್ತವ್ಯ ಎನ್ನುವ ಯೋಜನೆಗೆ ಸಿಎಂ ಚಾಲನೆ ನೀಡಿದ್ದರು. ವಿರುದ್ದ ಪಕ್ಷದ ನಾಯಕರು ಇದರ ಬಗ್ಗೆ ಮಾತನಾಡಿದ್ದು, ಗ್ರಾಮ ವಾಸ್ತವ್ಯ ಎಲ್ಲ ನಾಟಕ ಎಂದು ಹೇಳಿಕೆಗಳನ್ನು ನೀಡಿದ್ದರು. ಸುಮಲತಾ ಅಂಬರೀಷ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಕೆಲಸವನ್ನು ತಾವು ಮಾಡುತ್ತಿದ್ದರೆ, ನಾವು ನಮ್ಮ ಕೆಲಸವನ್ನು ಮಾಡೋಣ ಎಂದು ಪ್ರತಿಕ್ರಿಯಿಸಿದ್ದರು. ಆದರೆ ಈಗ ಗ್ರಾಮ ವಾಸ್ತವ್ಯದ ಯೋಜನೆಯು ಹೊಸದಾದ ರೂಪವನ್ನು ಪಡೆದುಕೊಂಡಿದೆ. ಇಂದಿನಿಂದ ಗ್ರಾಮ ವಾಸ್ತವ್ಯ ಶುರುವಾಗಲಿದೆ. ಯಾದಗಿರಿ ಜಿಲ್ಲೆಯ ಗುರುಮಿಠಾಕಲ್ ತಾಲೂಕಿನ ಚಂಡರಕಿ ಗ್ರಾಮದಿಂದ ಶುಭಾರಂಭವಾಗಲಿದೆ. 13 ವರ್ಷಗಳ ನಂತರ ಮತ್ತೆ ಗ್ರಾಮ ವಾಸ್ತವ್ಯ ಪ್ರಾರಂಭವಾಗಿದ್ದು, ಜೆ‌ಡಿ‌ಎಸ್ ಬಿ‌ಜೆ‌ಪಿ ದೋಸ್ತಿ ಸರ್ಕಾರ ಇದ್ದಾಗ ಚಾಲನೆ ನೀಡಿದ ಗ್ರಾಮವಾಸ್ತವ್ಯಕ್ಕು, ಮೈತ್ರಿ ಸರ್ಕಾರದ ಗ್ರಾಮ ವಾಸ್ತವ್ಯಕ್ಕು ಬಹಳ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.

ರೈಲು ನಿಲ್ದಾಣದಲ್ಲಿ ಸಿ‌ಎಮ್ ಗೆ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ

ಮುಖ್ಯಮಂತ್ರಿ ಗುರುವಾರ ರಾತ್ರಿ, ಬೆಂಗಳೂರು-ಡೆಲ್ಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಯಾದಗಿರಿಗೆ ಪ್ರಯಾಣ ಮಾಡಿದ್ದಾರೆ. ಇಂದು ಬೆಳಿಗ್ಗೆ 5:30 ಕ್ಕೆ ಯಾದಗಿರಿಯ ರೈಲು ನಿಲ್ದಾಣದಲ್ಲಿ ಸಿಎಂ ಗೆ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ನಂತರ ಇವರು ಸರ್ಕೀಟ್ ಮನೆಗೆ ತೆರಳಿದ್ದು, ಅಲ್ಲಿಂದ ಬಸ್ ಮುಖಾಂತರ ಗ್ರಾಮವಾಸ್ತವ್ಯದ ಯೋಜನೆ ಹಮ್ಮಿಕೊಂಡಿದ್ದ ಚಂಡರಕಿ ಗ್ರಾಮಕ್ಕೆ ಹೋಗಲಿದ್ದಾರೆ. ಗ್ರಾಮ ವಾಸ್ತವ್ಯದ ಬಗ್ಗೆ ಈ ಹಿಂದೆಯೇ ನಾನು ಆಲೋಚಿಸಿದ್ದೆ, ಆದರೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿರುವುದಿಲ್ಲ.

ಕಾರಣಾಂತರಗಳಿಂದ ಅದು ತಡವಾಯಿತು ಎಂದು ಹೇಳಿದ್ದಾರೆ. ಸಿಎಂ ಗ್ರಾಮಕ್ಕೆ ಬರುವ ವಿಚಾರ ಗ್ರಾಮಸ್ಥರಿಗೆ ಮೊದಲೆ ತಿಳಿದಿರುವುದರಿಂದ ಗ್ರಾಮವನ್ನು ಅಲಂಕರಿಸಿದ್ದಾರೆ. ಗ್ರಾಮ ವಾಸ್ತವ್ಯದ ಅಂಗವಾಗಿ ಅನೇಕ ಕಾರ್ಯಕ್ರಮಗಳು ಹಾಗೂ ಜನತಾದರ್ಶನ ಕಾರ್ಯಕ್ರಮಗಳಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here