ಸರ್ಕಾರಿ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಮಾಡಿರುವ ಕೆಲಸಕ್ಕೆ ಕೆಂಡಕಾರುತ್ತಿರುವ ಜನರು

0
462

ತಮ್ಮ ಹಾಡಿನ ಮೂಲಕ ಗಾಯಕ ಚಂದನ್ ಶೆಟ್ಟಿ ಎಲ್ಲರ ನಿದ್ದೆ ಕೆಡಿಸಿದ್ದಾರೆ. ಅದರಲ್ಲೂ ಪಡ್ಡೆ ಹುಡುಗರು ಹಾಗು ಹುಡುಗಿಯರಿಗೆ ಚಂದನ್ ಶೆಟ್ಟಿ ಅಂದ್ರೆ ಬಹಳ ಇಷ್ಟ. ಎಷ್ಟೋ ಜನ ಹುಡುಗಿಯರು ಚಂದನ್ ಶೆಟ್ಟಿಯ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಆದ್ರೆ ಚಂದನ್ ಶೆಟ್ಟಿ ಯಾರನ್ನು ಪ್ರೀತಿಸಲಿಲ್ಲ. ಆದ್ರೆ ಈಗ ಅವರಿಷ್ಟ ಪಟ್ಟ ಹುಡುಗಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾರೆ. ಜೊತೆಗೆ ಎಲ್ಲರ ಸುಮ್ಮುಖದಲ್ಲಿ ಪ್ರೀತಿಸಿದ ಹುಡುಗಿಯ ಬೆರಳಿಗೆ ಉಂಗುರವನ್ನು ತೊಡಿಸಿದ್ದಾರೆ. ಹೌದು. ಬಿಗ್ ಬಾಸ್ ಸ್ಪರ್ಧಿಯಾದ ನಿವೇದಿತಾ ಗೌಡ ಅವರನ್ನು ಚಂದನ್ ಶೆಟ್ಟಿ ಪ್ರೀತಿಸುತ್ತಿದ್ದಾರೆ ಎನ್ನುವ ಊಹಾಪೋಹಗಳು ಕೆಲವು ಹಿಂದಿನ ದಿನಗಳಿಂದಲೂ ಕೇಳಿಬರುತ್ತಿತ್ತು. ಅಲ್ಲದೆ ಇವರು ಸಹ ಇದರ ಬಗ್ಗೆ ಖಚಿತ ಮಾಹಿತಿಯನ್ನು ನೀಡಿರಲಿಲ್ಲ. ಆದ್ರೆ ಈಗ ದಸರಾ ಕಾರ್ಯಕ್ರಮದಲ್ಲಿ, ಎಲ್ಲರ ಸಮ್ಮುಖದಲ್ಲಿ ಚಂದನ್ ತಮ್ಮ ಪ್ರೇಮ ನಿವೇದನೆಯನ್ನು ವ್ಯಕ್ತಪಡಿಸಿದ್ದಾರೆ.

ಗೊಂಬೆಗೆ ಪ್ರೇಮ ನಿವೇದನೆ ವ್ಯಕ್ತಪಡಿಸಿದ ಚಂದನ್ ಶೆಟ್ಟಿ

ಬಿಗ್ ಬಾಸ್ ಶುರುವಾದಾಗಿನಿಂದಲೂ ಇವರಿಬ್ಬರು ಬಹಳಷ್ಟು ಆತ್ಮೀಯರಾಗಿದ್ದರು. ಹಾಗಾಗಿ ನೋಡಿದವರು, ಇವರಿಬ್ಬರ ನಡುವೆ ಪ್ರೀತಿ ಇರಬಹುದು ಎನ್ನುವ ಮಾತುಗಳನ್ನು ಹೇಳುತ್ತಿದ್ದರು. ಆದ್ರೆ ಇವರಿಬ್ಬರು ಮಾತ್ರ, ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ಈಗ ದೊಡ್ಡ ಕಾರ್ಯಕ್ರಮದಲ್ಲಿ ಚಂದನ್ ತಮ್ಮ ಪ್ರೇಮ ನಿವೇದನೆಯನ್ನು ಹಂಚಿಕೊಂಡಿದ್ದಾರೆ. ಹೌದು. ದಸರಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಚಂದನ್ ಶೆಟ್ಟಿ ಅವರನ್ನು ಕರೆಸಿದ್ದರು. ಆಗ ಕಾರ್ಯಕ್ರಮದಲ್ಲಿ ಚಂದನ್ ಹಾಡು ಹಾಗು ಡಾನ್ಸ್ ನಿಂದ ಜನರಿಗೆ ಮನೋರಂಜನೆ ನೀಡಿ, ನಂತರ ತನ್ನ ಗೆಳತಿಯಾದ ನಿವೇದಿತಾ ಗೌಡ ಅವರನ್ನು ವೇದಿಕೆ ಮೇಲೆ ಕರೆದು, ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಗರಂ ಆಗಿದ್ದಾರೆ.

ಗರಂ ಆಗಿರುವ ನೆಟ್ಟಿಗರು

ಇನ್ನು ಚಂದನ್ ಶೆಟ್ಟಿ ಸರ್ಕಾರಿ ಕಾರ್ಯಕ್ರಮದಲ್ಲಿ, ತಮ್ಮ ಖಾಸಗಿ ವಿಚಾರವನ್ನು ಹಂಚಿಕೊಂಡಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಗರಂ ಆಗಿದ್ದಾರೆ. ಹೌದು. ಇದೇನು ಸರ್ಕಾರಿ ಕಾರ್ಯಕ್ರಮವಾ? ಅಥವಾ ಗೊಂಬೆ ಮದುವೆನಾ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಹಬ್ಬವನ್ನು ನೋಡೋಕೆ ಅಂತ ಜನರು ಬಂದಿರೋದು, ಈ ಮಧ್ಯೆ ಇವರ ದೊಂಬರಾಟ ಬೇಕಿತ್ತಾ? ಇದೇನು ಹಬ್ಬಕ್ಕಾಗಿ ಮಾಡಿದ ಕಾರ್ಯಕ್ರಮ ಆಗಿತ್ತಾ? ಅಥವಾ ಇವರ ಎಂಗೇಜ್ಮೆಂಟ್ ಗಾಗಿ ಮಾಡಿದ್ದ ಕಾರ್ಯಕ್ರಮ ಆಗಿತ್ತಾ? ಇವರ ಎಂಗೆಂಜ್ಮೆಂಟ್ ಅಂತ ಹೇಳಿದ್ರೆ, ಯಾರು ಬರ್ತಾನೆ ಇರ್ಲಿಲ್ಲ. ಅಲ್ಲದೆ ಸರ್ಕಾರಿ ಕಾರ್ಯಕ್ರಮದ ಅತಿಥಿಯಾಗಿ ಕೇವಲ ಚಂದನ್ ಶೆಟ್ಟಿ ಅವರನ್ನು ಮಾತ್ರ ಆಹ್ವಾನಿಸಲಾಗಿತ್ತು. ಆದ್ರೆ ವೇದಿಕೆ ಮೇಲೆ ನಿವೇದಿತಾಗೆ ಬರಲು ಅವಕಾಶ ನಿದಿದ್ದಾದ್ರೂ ಯಾರು? ನಿಮ್ಮ ಈ ಹೆಚ್ಚಾಟಗಳನ್ನೆಲ್ಲಾ ಬೇರೆ ಕಡೆ ಇಟ್ಟುಕೊಳ್ಳಿ. ನಾವೆಲ್ಲಾ ಬಂದಿರೋದು ಹಬ್ಬ ನೋಡೋಕೆ, ನಿಮ್ಮ ಲವ್ ಸ್ಟೋರಿ ನೋಡೋಕೆ ಅಲ್ಲ ಎಂದು ಹೇಳಿದ್ದಾರೆ.

ತಪ್ಪಾಗಿದ್ದರೆ ಕ್ಷಮೆ ಇರಲಿ ಎಂದ ಚಂದನ್ ಶೆಟ್ಟಿ

ಚಂದನ್, ನಿವೇದಿತಾಗೆ ಉಂಗುರ ತೊಡಿಸಿದ ವಿಡಿಯೋವನ್ನು ನೋಡಿದ ಜನರು ಸಾಮಾಜಿಕ ಜಾಲತಾಣದಲ್ಲಿ ಗರಂ ಆಗಿದ್ದರಿಂದ, ಅವರಿಗೆ ಚಂದನ್ ಶೆಟ್ಟಿ ಇರುವ ವಿಚಾರವನ್ನು ತಿಳಿಸಿದ್ದಾರೆ. ಹೌದು. ನಾನು ನಿವಿಯನ್ನು ಬಹಳ ದಿನಗಳಿಂದಲೂ ಪ್ರೀತಿಸುತ್ತಿದ್ದೆ. ಆದ್ರೆ ತಿಳಿಸಿರಲಿಲ್ಲ. ಈಗ ಇಲ್ಲಿ ತಿಳಿಸಲು ಕಾರಣವೂ ಇದೆ. ಯಾಕಂದ್ರೆ ನಾನು ಮೈಸೂರಿನಲ್ಲೇ ಓದಿದ್ದರಿಂದ, ನನಗೆ ಹೆಚ್ಚಿನ ಆತ್ಮೀಯರು ಇಲ್ಲಿಯವರೇ ಆಗಿದ್ದಾರೆ. ಜೊತೆಗೆ ನಿವೇದಿತಾ ಮನೆಯವರು ಹಾಗು ನಮ್ಮ ಮನೆಯರು ಸಹ ಇದ್ದಾರೆ. ಹಾಗಾಗಿ ಈ ವಿಚಾರವನ್ನು ಇಲ್ಲಿಯೇ ತಿಳಿಸುವುದು ನನಗೆ ಸರಿ ಎನಿಸಿತು. ಹಾಗಾಗಿ ನನ್ನ ಪ್ರೀತಿಯ ವಿಚಾರವನ್ನು ತಿಳಿಸಿದ್ದೇನೆ. ಒಂದು ವೇಳೆ ನನ್ನಿಂದ ತಪ್ಪಾಗಿದ್ದರೆ, ನನ್ನನ್ನು ಕ್ಷಮಿಸಿ ಎಂದು ಹೇಳಿದ್ದಾರೆ. ಅಲ್ಲದೆ ಅವರ ಮದುವೆಯ ಬಗ್ಗೆಯೂ ಸಹ ತಿಳಿಸಿದ್ದಾರೆ. ಈಗಾಗಲೇ ಪ್ರಪೋಸ್ ಮಾಡಿಯಾಗಿದೆ. ಹೆಚ್ಚು ಕಾಯಿಸಲು ನನಗೆ ಇಷ್ಟ ಇಲ್ಲ. ಹೀಗಾಗಿ 2020ರೊಳಗೆ ಮದುವೆಯಾಗುವ ಕುರಿತು ಯೋಜನೆ ರೂಪಿಸಿದ್ದೇವೆ ಎಂದು ಚಂದನ್ ಹೇಳಿದ್ದಾರೆ.

ಒಟ್ಟಿನಲ್ಲಿ ಎಲ್ಲರ ಸಮ್ಮುಖದಲ್ಲಿ ತಮ್ಮ ಪ್ರೇಮ ನಿವೇದನೆಯನ್ನು ಹಂಚಿಕೊಳ್ಳಬೇಕೆಂದು ಚಂದನ್ ಶೆಟ್ಟಿ ನಿರ್ಧರಿಸಿ, ತಮ್ಮ ಪ್ರೇಮ ನಿವೇದನೆಯನ್ನು ವ್ಯಕ್ತಪಡಿಸಿದ್ದಾರೆ. ಆದ್ರೆ ಈಗ ಅದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here