ಪ್ರವಾಹದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದಿಂದ ಫಂಡ್ ರಿಲೀಸ್, ಕರ್ನಾಟಕಕ್ಕೆ ಸಿಕ್ಕ ಮೊತ್ತವೆಷ್ಟು?

0
413

ಕರ್ನಾಟಕದಲ್ಲಿ ಧಾರಾಕಾರವಾದ ಮಳೆ ಸುರಿದ ಕಾರಣದಿಂದಾಗಿ ಜನರು ಪರದಾಡುತ್ತಿದ್ದಾರೆ. ಇನ್ನು ಪ್ರವಾಹ ಪೀಡಿತ ಪ್ರದೇಶದ ಜನರ ಕಷ್ಟ ಊಹಿಸಿಕೊಳ್ಳುವುದಕ್ಕು ಸಾಧ್ಯವಿಲ್ಲ. ಮಲೆನಾಡು ಮತ್ತು ಇನ್ನಿತರ ರಾಜ್ಯಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಮಳೆಯಿಂದಾಗಿ ಜನರು ಸರಿಯಾಗಿ ರಸ್ತೆಯಲ್ಲಿ ಹೋಗಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳಲ್ಲಿ ನೀರು ನುಗ್ಗಿದ್ದು, ಜನರು ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ. ಬೆಳಗಾವಿ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಹಾವೇರಿ, ಕೊಡಗು, ಬಾಗಲಕೋಟೆ, ಹಾಸನ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನದಿಗಳು ತುಂಬಿ ಹರಿಯುತ್ತಿತ್ತು.

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಸಿಕ್ಕಿದ್ದು 102 .39 ಕೋಟಿ

ಕರ್ನಾಟಕದಲ್ಲಿ ಅನೇಕ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಪ್ರವಾಹ ಪೀಡಿತ ಜನರಿಗೆ 102 .39 ಕೋಟಿ ಹಣದ ಫಂಡ್ ಅನ್ನು ಬಿಡುಗಡೆ ಮಾಡಿದ್ದಾರೆ. ಗೃಹ ಸಚಿವರಾದ ಅಮಿತ್ ಶಾ ಅವರು ಒಡಿಶಾ ಮತ್ತು ಹಿಮಾಚಲ ಪ್ರದೇಶದಲ್ಲಿ ಉಂಟಾದ ಪ್ರಕೃತಿಯ ವಿಪೋಕಕ್ಕೆ ಒಟ್ಟಾರೆ 4 ,432 ಹಣವನ್ನು ಪರಿಹಾರಕ್ಕಾಗಿ ನೀಡಿದ್ದಾರೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣದಲ್ಲಿ ಒಡಿಶಾ ಗೆ ಹೆಚ್ಚು ಪಾಲು ದೊರಕಿದೆ. ಒಡಿಶಾ ರಾಜ್ಯಕ್ಕೆ 3333 ,8 .22 ಕೋಟಿ ಮೊತ್ತದಷ್ಟು ಹಣವು ಪರಿಹಾರಕ್ಕೆಂದು ನೀಡಿದ್ದಾರೆ. ಇದೆ ರೀತಿಯ ಹಿಮಪಾತದ ತೊಂದರೆಯಿಂದ ತತ್ತರಿಸಿದ ಹಿಮಾಚಲ ಪ್ರದೇಶಕ್ಕೆ 64 .49 ಹಣವು ಘೋಷಿಸಲಾಗಿದೆ.

ಪರಿಹಾರಕ್ಕಾಗಿ ಹೆಚ್ಚು ಹಣ ನೀಡಬೇಕೆಂದು ಸಿಎಂ ಮನವಿ ಮಾಡಿದ್ದರು

ಇನ್ನು ಆಗಸ್ಟ್ ಮೊದಲ ವಾರದಲ್ಲಿ ಭಾರಿ ಮಳೆಯಿಂದಾಗಿ, ಉತ್ತರ ಕರ್ನಾಟಕ ಮತ್ತು ಮಲೆನಾಡಿನ ಪ್ರದೇಶಗಳು ಆಪತ್ತಿನಲ್ಲಿ ಇದ್ದವು. ಸಂಕಷ್ಟದಲ್ಲಿ ರಾಜ್ಯದ ಜನತೆ ಸಿಲುಕಿಕೊಂಡಿದ್ದರು. ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು, ಇನ್ನು ವ್ಯಾಪಕವಾದ ಹಣವನ್ನು ಕರ್ನಾಟಕಕ್ಕೆ ನೀಡಬೇಕೆಂದು ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದರು. ಒಟ್ಟಿನಲ್ಲಿ ಕರ್ನಾಟಕಕ್ಕು ಕೇಂದ್ರ ಸರ್ಕಾರದಿಂದ ಪರಿಹಾರ ಲಭ್ಯವಾಗಿದೆ. ಸರ್ಕಾರವಲ್ಲದೆ ನಾಡಿನ ಜನತೆ, ನಟರು, ಅನೇಕ ಸಂಘ ಸಂಸ್ಥೆಗಳು ಕರುನಾಡ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಉಪೇಂದ್ರ, ಪುನೀತ್ ರಾಜ್ ಕುಮಾರ್ ಇನ್ನು ಮುಂತಾದವರು ಆರ್ಥಿಕ ಸಹಾಯವನ್ನು ಮಾಡಿದ್ದಾರೆ.

ಜನರು ಅಪಾಯದಲ್ಲಿ ಸಿಲುಕಿಕೊಂಡಿದ್ದರು

ಮಳೆಯಿಂದಾಗಿ ಜನರು ಸರಿಯಾಗಿ ರಸ್ತೆಯಲ್ಲಿ ಹೋಗಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳಲ್ಲಿ ನೀರು ನುಗ್ಗಿದ್ದು, ಜನರು ಅಪಾಯದಲ್ಲಿ ಸಿಲುಕಿಕೊಂಡಿದ್ದರು. ಬೆಳಗಾವಿ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಹಾವೇರಿ, ಕೊಡಗು, ಬಾಗಲಕೋಟೆ, ಹಾಸನ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನದಿಗಳು ತುಂಬಿ ಹರಿಯುತ್ತಿದೆ.

ಅನೇಕ ಸ್ಟಾರ್ ನಟರು ಮತ್ತು ರಾಜ್ಯದ ಗಣ್ಯ ವ್ಯಕ್ತಿಗಳು ನೆರವಿಗೆ ನಿಂತಿದ್ದು, ಆರ್ಥಿಕ ಸಹಾಯವನ್ನು ಮಾಡಿದ್ದರು. ಅನೇಕ ಸಂಘ ಸಂಸ್ಥೆಗಳು ಪರಿಹಾರ ನಿಧಿಗೆ ಹಣವನ್ನು ತಲುಪಿಸಿದ್ದು, ಇದರಿಂದ ಜನರಿಗೆ ಬಹಳ ಉಪಯೋಗವಾಗಿದೆ.

LEAVE A REPLY

Please enter your comment!
Please enter your name here