ಕಾನ್ಸರ್ ಇದ್ದರು ಎದೆಗುಂದದೆ ಆಟೋಟಗಳಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದ ಎಂಟರ ಪೋರ

0
490
cancer boy

ಈಗಿನ ಕಾಲದಲ್ಲಿ ಹೇಗೆ ಅಂದ್ರೆ ಚಿಕ್ಕ ಜ್ವರ ಬಂದ್ರೆ ಸಾಕು ಮನೆಯಲ್ಲೇ ಉಳಿದುಬಿಡುತ್ತಾರೆ. ಯಾಕಂದ್ರೆ ಜ್ವರ ಎಂದರು ಜಾಸ್ತಿಯಾಗಿ, ಏನಾದ್ರು ತೊಂದರೆಯಾಗುತ್ತೆ ಅಂತ ಯೋಚನೆ ಮಾಡ್ತಾರೆ. ಜೊತೆಗೆ ಮನೆಯಲ್ಲೇ ಒಂದು ಚಿಕ್ಕ ಆಸ್ಪತ್ರೆ ಹಾಗು ಮೆಡಿಕಲ್ ಶಾಪ್ ಓಪನ್ ಮಾಡಿರುತ್ತಾರೆ. ಆದ್ರೆ ಇನ್ನೂ ಕೆಲವರು ಹೇಗೆ ಅಂದ್ರೆ ಜ್ವರ ಅಲ್ಲ, ಬೇರೆ ಏನೇ ಬಂದ್ರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಹೌದು. ಜ್ವರ ತಾನೇ ಅಷ್ಟೇ ಬಿಡು ಎಂದು ಸುಮ್ಮನಾಗುತ್ತಾರೆ. ಆಸ್ಪತ್ರೆಯ ಕಡೆ ಮುಖ ಮಾಡುವುದೇ ಇಲ್ಲ. ಮಾತ್ರೆ ಅನ್ನೋದನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಅದೇ ರೀತಿ ಇಲ್ಲೊಬ್ಬ ಬಾಲಕ ಕೂಡ ಇದ್ದಾನೆ. ಹೌದು. ಈಗಿನ ಕಾಲದಲ್ಲಿ ಮಕ್ಕಳಿಗೆ ಜ್ವರ ಬಂದ್ರೆ ಸಾಕು ಏನೋ ಆಯಿತು ಅನ್ನೋ ಜನರ ಮಧ್ಯೆ, ತನಗೆ ಕಾನ್ಸರ್ ಇದೆ ಅಂತ ಗೊತ್ತಿದ್ದರೂ, ಅದನ್ನು ಯೋಚಿಸದೆ, ಹಲವು ಆಟೋಟಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾನೆ.

ಕಾನ್ಸರ್ ಇದ್ದರು ಎದೆಗುಂದದ ಎಂಟರ ಪೋರ

ಇವನ ಹೆಸರು ಅರೋನ್‌ ಯತೇಶ್ ಗಂಗೂಲಿ ಎಂದು. ಈತನಿಗೆ ೮ ವರ್ಷ. ಆದ್ರೆ ಈ 8 ವರ್ಷದ ಪೋರ ಕ್ಯಾನ್ಸರ್ ಅನ್ನೋ ರೋಗಕ್ಕೆ ತುತ್ತಾಗಿದ್ದಾನೆ. ಹೌದು. ಪಶ್ಚಿಮ ಬಂಗಾಳದ ಸೆರಾಂಪುರದ ಈ ಬಾಲಕ ಚಿಕ್ಕ ವಯಸ್ಸಿನಲ್ಲೇ ಕಾನ್ಸರ್ ರೋಗಕ್ಕೆ ತುತ್ತಾಗಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಆದ್ರೆ ಇವನಿಗೆ ಮಾತ್ರ ಅದು ನೋವಿನ ಸಂಗತಿಯಲ್ಲವಂತೆ. ಹೌದು. ಅರೋನ್‌ ಗೆ ಕಾನ್ಸರ್ ಅನ್ನೋದು ದೂಡ ವಿಷಯವಲ್ಲವಂತೆ. ಹಾಗಾಗಿ ಅದರ ಬಗ್ಗೆ ಇಂದಿಗೂ ಆತ ಚಿಂತಿಸಿಲ್ಲವಂತೆ. ಬದಲಿಗೆ ಎಲ್ಲ ಮಕ್ಕಳಂತೆ ಆಟ ಆಡಿಕೊಂಡು ಕಾಲ ಕಳೆಯುತ್ತಿದ್ದಾನೆ. ಅದೇ ರೀತಿ ಈಗ ಮಾಸ್ಕೊದಲ್ಲಿ ನಡೆದ ವಿಶ್ವ ಮಕ್ಕಳ ವಿನ್ನರ್ಸ್‌ ಗೇಮ್-2019ರ ಟೇಬಲ್ ಟೆನಿಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ಹೆಮ್ಮೆ ತಂದಿದ್ದಾನೆ.

ವಿಶ್ವ ಮಕ್ಕಳ ವಿನ್ನರ್ಸ್‌ ಗೇಮ್ ನಲ್ಲಿ ಸಾಧನೆ ಮಾಡಿದ ಬಾಲಕ

ಜು. 4 ರಿಂದ 7ರವರೆಗೆ ಕ್ಯಾನ್ಸರ್‌ ವಿಜೇತ ಮಕ್ಕಳಿಗಾಗಿ ಅಂತರ್ ರಾಷ್ಟ್ರೀಯ ಕೂಟವನ್ನು ಏರ್ಪಡಿಸಲಾಗಿತ್ತು. ಆ ಕೂಟದಲ್ಲಿ ಅರೋನ್‌ ಯತೇಶ್ ಕೂಡ ಭಾಗವಹಿಸಿದ್ದ. ಹೌದು. ತನಗಿರುವ ಕ್ಯಾನ್ಸರ್‌ನ ಎಲ್ಲ ನೋವುಗಳನ್ನು ಮರೆತು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ. ಟ್ರ್ಯಾಕ್, ಚೆಸ್, ಫುಟ್‌ಬಾಲ್, ಟೇಬಲ್ ಟೆನಿಸ್, ಈಜು ಹಾಗೂ ಶೂಟಿಂಗ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈತ ಅತ್ಯದ್ಭುತ ಪ್ರತಿಭೆ ಹಾಗು ಕ್ರೀಡಾ ಕೌಶಗಳಿರುವ ಇವನು, ಎಲ್ಲ ಆರು ವಿಭಾಗಳಲ್ಲೂ ಸ್ಪರ್ಧಿಸಿದ್ದಾನೆ. ಅವೆಲ್ಲವುಗಳಲ್ಲೂ ಭಾಗವಹಿಸಿದ ಅರೋನ್ ಗೆದ್ದು ಅದ್ಭುತ ಸಾಧನೆ ಮಾಡಿದ್ದಾನೆ. ಹೌದು. ಇಂಥ ಆಟಗಳನ್ನು ಕ್ಯಾನ್ಸರ್‌ ವಿಜೇತ ಮಕ್ಕಳಿಗಾಗಿ ನಡೆಸಲಾಗುತ್ತಿದೆ. ಇದರಲ್ಲಿ ವಿಶ್ವದ ಹಲವೆಡೆಯಿಂದ ಮಕ್ಕಳು ಭಾಗವಹಿಸಿದ್ದರು. ಜೊತೆಗೆ ಈ ಕೂಟದಲ್ಲಿ ಭಾರತದ 10 ಪೋರರು ಭಾಗವಹಿಸಿದ್ದು, ಪಶ್ಚಿಮ ಬಂಗಾಳದಿಂದ ಭಾಗವಹಿಸಿದ ಏಕೈಕ ಬಾಲಕ ಇವನಾಗಿದ್ದನು.

ಚಿನ್ನದ ಪದಕ ಗೆದ್ದ ಅರೋನ್

ಇನ್ನೂ ಇಷ್ಟು ಆಟಗಳಲ್ಲಿ ಭಾಗವಹಿಸಿ ಗೆದ್ದ ಅರೋನ್ ಚಿನ್ನದ ಪದಕ ಪಡೆದಿದ್ದಾನೆ. ಹೌದು. ಟೇಬಲ್ ಟೆನಿಸ್‌ನಲ್ಲಿ ಚಿನ್ನದ ಪದಕ ಪಡೆದಿದ್ದು, ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾನೆ. ಅರೋನ್ 2016ರ ಏಪ್ರಿಲ್‌ನಲ್ಲಿ ಲ್ಯುಕೋಮಿಯಾದಿಂದ ಈತ ಬಳಲುತ್ತಿರುವುದು ಪತ್ತೆಯಾಗಿತ್ತು. ಹಾಗಾಗಿ 11 ತಿಂಗಳು ಚಿಕಿತ್ಸೆಗಾಗಿ ಮುಂಬೈನಲ್ಲಿ ಉಳಿದಿದ್ದ. ಅಲ್ಲಿಂದ ಆತನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಅವಧಿಯಲ್ಲಿ ವೈದ್ಯರು ಹಾಗೂ ಕಾರ್ಯಕರ್ತರು ಈತನ ಕ್ರೀಡಾ ಪ್ರೇಮವನ್ನು ಪತ್ತೆ ಮಾಡಿದ್ದರು. ಹೌದು. ಚಿಕಿತ್ಸೆಯ ಸಮಯದಲ್ಲಿ ಬೆಳಿಗ್ಗೆ 5.30ಕ್ಕೆ ಎದ್ದು, 6ರಿಂದ 7.30ರ ತನಕ ಟ್ರ್ಯಾಕ್ ಮತ್ತು ಫುಟ್‌ಬಾಲ್ ಅಭ್ಯಾಸಕ್ಕೆ ತೆರಳುತ್ತಿದ್ದ. ಬಳಿಕ ಈಜು, ಚೆಸ್ ಹಾಗೂ ಟೆನಿಸ್ ಅಭ್ಯಸಿಸುತ್ತಿದ್ದ. ಸಂಜೆ ಶೂಟಿಂಗ್ ತರಬೇತಿಗೆ ಹೋಗುತ್ತಿದ್ದ. ಇದನ್ನೆಲ್ಲಾ ನೋಡಿದಾಗ ಇವನಿಗೆ ಅದ್ಭುತ ಪ್ರತಿಭೆ ಇದೆ. ಆದ್ರೆ ಅದು ಯಾವುದೇ ಕಾರಣಕ್ಕೂ ಮಾಸಬಾರದು ಎಂದು ಎಲ್ಲರೂ ಶ್ರಮವಹಿಸಿ, ಇವನಿಗೆ ವಿಶ್ವ ಮಕ್ಕಳ ವಿನ್ನರ್ಸ್‌ ಗೇಮ್ ನಲ್ಲಿ ಭಾಗವಹಿಸಲು ಸಹಾಯ ಮಾಡಿದ್ದಾರೆ.

ನಿಜಕ್ಕೂ ಇಂತಹ ಮಕ್ಕಳನ್ನು ನೋಡಿದಾಗ ಖುಷಿಯಾಗುತ್ತದೆ. ಯಾಕಂದ್ರೆ ಎಷ್ಟೇ ದೊಡ್ಡವರಾದವರು ಸಹ ಚಿಕ್ಕ ಜ್ವರ ಬಂದ್ರೆ ಮನೆಯಲ್ಲೇ ಉಳಿಯೋ ಈ ಕಾಲದಲ್ಲಿ, ಈತ ಕಾನ್ಸರ್ ಇದ್ದರು ಯಾವುದಕ್ಕೂ ಎದೆಗುಂದದೆ ಆಟೋಟಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆಯುವುದರ ಮೂಲಕ ಎಲ್ಲರಿಗು ಮಾದರಿಯಾಗಿದ್ದಾನೆ.

LEAVE A REPLY

Please enter your comment!
Please enter your name here