ದೇಶದ ಮೊದಲ ದೃಷ್ಟಿ ವಿಕಲಚೇತನ ಐಎಎಸ್ ಅಧಿಕಾರಿಯಾಗಿ ರಾಷ್ಟ್ರಕ್ಕೆ ಕೀರ್ತಿ ತಂದ ಯುವತಿ

0
749
blind ias officer

ಈಗಿನ ಕಾಲದ ಕೆಲವು ವಿದ್ಯಾರ್ಥಿಗಳಿಗೆ ಓದು ಅಂದ್ರೆ ಒಂದು ರೀತಿ ಬೇಸರವಾಗಿದೆ. ಹೌದು. ಮನೆಯಲ್ಲಿ ಹೆಚ್ಚಿನ ಮುದ್ದು ಹಾಗು ಕೈ ತುಂಬಾ ನೀಡುವ ಹಣ ಅವರನ್ನು ವಿದ್ಯಾಭ್ಯಾಸದಿಂದ ದುರಾಗುವಂತೆ ಮಾಡುತ್ತಿದೆ. ಆದ್ರೆ ಬಡವರ ಮನೆಯಲ್ಲಿ ಹುಟ್ಟಿದ ಮಕ್ಕಳಿಗೆ ಓದಬೇಕು ಅನ್ನೋ ಆಸೆ ಬಹಳಷ್ಟಿರುತ್ತದೆ. ಆದ್ರೆ ಅವರಿಗೆ ಅಷ್ಟರ ಮಟ್ಟಿಗೆ ಅನುಕೂಲವಿರುವುದಿಲ್ಲ. ಹಾಗಾಗಿ ಸುಮ್ಮನಾಗುತ್ತಾರೆ. ಈ ರೀತಿ ಕೈ ಕಾಲು ಎಲ್ಲ ಚೆನ್ನಾಗಿದ್ದು, ಬುದ್ದಿ ಇದ್ದರೂ ಸಹ ನಾವು ಓದುವುದಕ್ಕೆ ಯೋಚನೆ ಮಾಡುತ್ತೀವಿ. ಜೊತೆಗೆ ಕೆಲಸ ಅಂದ್ರೆ ಇನ್ನು ದೂರದ ಮಾತು. ಆದ್ರೆ ಇಲ್ಲೊಬ್ಬರು ಕಣ್ಣು ಕಾಣಿಸದಿದ್ದರೂ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ, ಡಿಸಿ ಆಗಿದ್ದಾರೆ. ಅಲ್ಲದೆ ದೇಶದ ಮೊದಲ ದೃಷ್ಟಿ ವಿಕಲಚೇತನ ಐಎಎಸ್ ಅಧಿಕಾರಿ ಎಂಬ ಪಾತ್ರಕ್ಕೆ ಒಳಗಾಗಿದ್ದಾರೆ.

ದೇಶದ ಮೊದಲ ದೃಷ್ಟಿ ವಿಕಲಚೇತನ ಐಎಎಸ್ ಅಧಿಕಾರಿ

ಇವರ ಹೆಸರು ಪ್ರಾಂಜಲ್ ಪಾಟೀಲ್. ಇವರು ಮೂಲತಃ ಮಹಾರಾಷ್ಟ್ರದ ಉಲ್ಲಾಸ್ ನಗರದವರು. ಚಿಕ್ಕಂದಿನಲ್ಲೇ ದೃಷ್ಟಿ ದೋಷಕ್ಕೆ ಒಳಗಾಗಿದ್ದ ಇವರು ಎಷ್ಟೇ ಪ್ರಯತ್ನ ಪಟ್ಟರು, ದೃಷ್ಟಿಯನ್ನು ಪಡೆಯಲು ಆಗಲಿಲ್ಲ. ಆಗಂತ ಅವರು ಆ ಕಾಲಕ್ಕೆ ಸ್ವಲ್ಪ ಬೇಸರವಾದರೂ, ನಾನು ಏನನ್ನಾದರೂ ಸಾಧಿಸಬೇಕೆಂಬ ಛಲ ಹೊಂದುತ್ತಾರೆ. ಅದಕ್ಕಾಗಿ ಕಷ್ಟಪಟ್ಟು ಓದಿ, ಅವರ ಶಾಲೆಗೆ ಅವರೇ ಪ್ರಥಮ ಸ್ಥಾನ ಘಳಿಸುತ್ತಿರುತ್ತಾರೆ. ಅದೇ ರೀತಿ ಬಹಳ ಶ್ರದ್ಧೆಯಿಂದ ಓದಿ, ಐಎಎಸ್ ಪರೀಕ್ಷೆ ಬರೆಯುತ್ತಾರೆ. ಇನ್ನು 2016ರಲ್ಲಿ ಇವರು ಮೊದಲಬಾರಿಗೆ ಪರೀಕ್ಷೆ ಬರೆದಿದ್ದು, ಅದರಲ್ಲಿ 773ನೇ ರ್ಯಾಂಕ್ ಘಳಿಸುತ್ತಾರೆ. ಆದ್ರೆ ಅದರಿಂದ ಅವರಿಗೆ ಸ್ವಲ್ಪ ಬೇಸರವಾಗುತ್ತದೆ. ನಂತರ 2017ರಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆದಿದ್ದು, ಅದರಲ್ಲಿ 124ನೇ ರ್ಯಾಂಕ್ ಘಳಿಸಿ, ಈಗ ಐಎಎಸ್ ಅಧಿಕಾರಿಯಾಗಿದ್ದಾರೆ.

ಸ್ಫೂರ್ತಿಯ ಚಿಲುಮೆಯಾಗಿರುವ ಪ್ರಾಂಜಲ್ ಪಾಟೀಲ್

ಇನ್ನು ಇವರು ರ್ಯಾಂಕ್ ಗಳಿಸುತ್ತಿದ್ದಂತೆ, ಮೊದಲು ಎರ್ನಾಕುಲಂ ನ ಸಹಾಯಕ ಕಲೆಕ್ಟರ್ ಆಗಿ ನೇಮಕ ಮಾಡಲಾಗಿತ್ತು. ಯಾಕಂದ್ರೆ ಸಹಾಯಕರಾಗಿದ್ದು, ಕೆಲವು ಸಮಯ ಕೆಲಸದ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದರು. ಆದ್ರೆ ಈಗ ಪ್ರಾಂಜಲ್ ಕೆಲಸದಲ್ಲಿ ಎಲ್ಲ ರೀತಿ ಅನುಭವವನ್ನು ಪಡೆದಿದ್ದು, ತಿರುವನಂತಪುರಂ ನಲ್ಲಿ ಸಬ್ ಕಲೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಜೊತೆಗೆ ತಮಗನಿಸಿದ ಕೆಲವು ಅನಿಸಿಕೆಯನ್ನು ಸಹ ಹಂಚಿಕೊಡಿದ್ದಾರೆ. ಹೌದು. ಮನುಶ್ಯತ ಯಾವುದೇ ಕಾರಣಕ್ಕೂ ಯಾವ ವಿಷಯದಲ್ಲೂ ಹಿಂಜರಿದು, ಹಿಂದೆ ಸರಿಯಬಾರದು. ನಮ್ಮಿಂದ ಸಾಧ್ಯ ಎಂದು ಸದಾಕಾಲ ಮುನ್ನುಗ್ಗಬೇಕು. ಆಗ ಮಾತ್ರ ನಾವು ಅಂದುಕೊಂಡಂತಹ ಕೆಲಸ ಆಗುತ್ತದೆ ಎಂದು ಇತರರಿಗೆ ತಮ್ಮ ಮಾತುಗಳನ್ನು ತಿಳಿಸಿದ್ದಾರೆ.

ನಿಜಕ್ಕೂ ಪ್ರಾಂಜಲ್ ಪಾಟೀಲ್ ಅವರನ್ನು ನೋಡಿದಾಗ ಬಹಳಷ್ಟು ಸಂತೋಷವಾಗುತ್ತದೆ. ಯಾಕಂದ್ರೆ ಈಗಿನ ಕಾಲದಲ್ಲಿ ಎಲ್ಲ ವ್ಯವಸ್ಥೆಯಿದ್ದು, ಓದುವುದಕ್ಕೆ ವಿದ್ಯಾರ್ಥಿಗಳು ಕಷ್ಟಪಡುತ್ತಾರೆ. ಆದ್ರೆ ಇವರು ದೃಷ್ಟಿ ಇಲ್ಲದಿದ್ದರೂ, ಯಾವುದಕ್ಕೂ ಎದೆಗುಂದದೆ ಮುನ್ನುಗ್ಗಿ, ಈಗ ಐಎಎಸ್ ಅಧಿಕಾರಿಯಾಗಿ, ಇತರರಿಗೆ ಮಾದರಿಯಾಗಿದ್ದಾರೆ.

LEAVE A REPLY

Please enter your comment!
Please enter your name here