ಬಾಯಲ್ಲಿ ನೀರುರಿಸುವ ಬೆಂಗಳೂರಿನ 10 ದೊನ್ನೆ ಬಿರಿಯಾನಿ ಜಾಗಗಳು

0
2891
biriyani hotels

ಯಾವುದನ್ನೇ ಆಗಲಿ ಯಾವತ್ತೂ ಕೇವಲ ಮಾತಿಂದ ಹೇಳಬಾರದು. ಯಾಕಂದ್ರೆ ಕೆಲವೊಂದು ವಿಷಯಗಳು ಮಾತಿನಲ್ಲಿ ಪೂರ್ಣವಾಗುವುದಿಲ್ಲ. ಹೌದು. ಕೆಲವೊಂದನ್ನ ಅನುಭವಿಸಿ ತಿಳಿಯಬೇಕು. ಅದು ಮುಖ್ಯವಾಗಿ ತಿನ್ನುವುದರ ವಿಷಯದಲ್ಲಿ. ನಮ್ಮ ಜನರಿಗೆ ಆಸೆ ಜಾಸ್ತಿ . ಹಾಗಾಗಿ ಬೆಂಗಳೂರಿನಲ್ಲಿ ಗಲ್ಲಿಗೊಂದು ಹೋಟೆಲ್ ಗಳು ಹುಟ್ಟಿಕೊಂಡಿವೆ. ಪ್ರತಿದಿನವೂ ಹೋಟೆಲ್ ಗೆ ಹೋಗಿ ಊಟ ಮಾಡೋದು ಅಂದ್ರೆ ಇನ್ನು ಕೆಲವರಿಗೆ ತುಂಬಾ ಇಷ್ಟ. ಯಾಕಂದ್ರೆ ಆ ಹೋಟೆಲ್ ಗಳಲ್ಲಿರೋ ಸ್ಪೆಷಾಲಿಟಿ ಆ ರೀತಿ ಇರುತ್ತೆ.

ಹೌದು. ಕೆಲವೊಂದು ಹೋಟೆಲ್ ಗಳಲ್ಲಿ ಮಾಡೋ ಅಡಿಗೆ ರುಚಿ, ತಮ್ಮ ಮನೆ ಅಡಿಗೆಯನ್ನ ಮರೆಸುತ್ತೆ. ಅಂತ ಹೋಟೆಲ್ ಗಳು ಎಷ್ಟೇ ದೂರ ಇದ್ದರು ಹುಡುಕಿಕೊಂಡು ಹೋಗ್ತಾರೆ. ಅದ್ರಲ್ಲೂ ಮಾಂಸದ ಹೋಟೆಲ್ ಗಳು ಅಂದ್ರೆ ಕೇಳ್ಬೇಕಾ? ಎಷ್ಟು ದೂರ ಆದ್ರೂ ಇರ್ಲಿ, ಹೋಗಿ ತಿಂದೇ ಬರಬೇಕು ಅಂತಾರೆ ನಮ್ಮ ಜನ. ಹಾಗಾದ್ರೆ ನಗರದಲ್ಲಿ ಅತಿ ಹೆಚ್ಚು ಫೇಮಸ್ ಆಗಿರೋ ಕೆಲವು ದೊನ್ನೆ ಬಿರಿಯಾನಿ ಹೋಟೆಲ್ ಗಳ ಬಗ್ಗೆ ಒಂದು ಸಣ್ಣ ಝಲಕ್ ಇಲ್ಲಿದೆ.

ಕಬ್ಬನ್ ಪೇಟೆ ದೊನ್ನೆ ಬಿರಿಯಾನಿ

ಯಾವುದನ್ನೇ ಆಗಲಿ ನೋಡಿ ನಿರ್ಧಾರ ಮಾಡಬಾರದು ಅಂತ ಕೆಲವೊಂದು ವಿಷಯಗಳಲ್ಲಿ ಹೇಳ್ತಾರೆ. ಯಾಕಂದ್ರೆ ರುಚಿಯನ್ನ ಎಂದಿಗೂ ನಾವು ನೋಡಿ ಸವಿಯೋಕ್ಕಾಗಲ್ಲ ಹಾಗಾಗಿ. ನಗರದ ಈ ಕಬ್ಬನ್ ಪೇಟೆ ಹೋಟೆಲ್ ನಲ್ಲಿ ದೊನ್ನೆ ಬಿರಿಯಾನಿ ನಿಜಕ್ಕೂ ಬಹಳ ಫೇಮಸ್. ಇಲ್ಲಿ ಅನೇಕ ರೀತಿಯ ಅಡಿಗೆ ತಯಾರಿಸುತ್ತಾರೆ. ಎಲ್ಲ ಅಡಿಗೆಯ ರುಚಿಯು ಅದ್ಬುತ. ಈ ಹೋಟೆಲ್ ನಲ್ಲಿ ದೊನ್ನೆ ಬಿರಿಯಾನಿ, ಚಿಕನ್ ಕಬಾಬ್, ಹಾಗೂ ಚಿಕನ್ ಚುಕ್ಕಾ ತುಂಬಾ ಫೇಮಸ್. ಇನ್ನು ಭಾನುವಾರದಂದು ಬೆಳಗ್ಗಿನ ಸಮಯದಲ್ಲಿ ಕಾಲು ಸೂಪ್, ಇಡ್ಲಿ, ಹಾಗೂ ದೋಸೆಯನ್ನ ನೀಡ್ತಾರೆ.

ಸ್ಥಳ :- 2704/, 14ನೇ ಮುಖ್ಯ ರಸ್ತೆ, ಈ ಬ್ಲಾಕ್, ಶಂಕರ್ ನಗರ್

ಸಮಯ :- ಮಧ್ಯಾಹ್ನ 12ರಿಂದ 3 :30 ರ ವರೆಗೆ ಹಾಗೂ ರಾತ್ರಿ 7ರಿಂದ 10 ರ ವರೆಗೆ

ಎಸ್ ಜಿ ಎಸ್ ದೊನ್ನೆ ಬಿರಿಯಾನಿ

ಈ ಹೋಟೆಲ್ ಬಳಿ ಹೋದರೆ ಎಂಥವರಿಗೂ ಗೊತ್ತಾಗುತ್ತೆ. ಇಲ್ಲಿನ ಅಡಿಗೆ ಎಷ್ಟು ಚೆನ್ನಾಗಿರುತ್ತೆ ಅಂತ. ಯಾಕಂದ್ರೆ ಇಲ್ಲಿನ ಅಡಿಗೆ ರುಚಿ ಸವಿಯಲು ಜನರು ಸಾಲುಗಟ್ಟಿ ನಿಂತಿರುತ್ತಾರೆ. ಇಲ್ಲಿ ಬೆಲೆಗೆ ತಕ್ಕಂತೆ ರುಚಿಯು ಸಿಗುತ್ತದೆ. ಇಲ್ಲಿ ಪಾರ್ಸಲ್ ತೆಗೆದುಕೊಂಡು ಹೋಗೋರು ಮುಂಚೆಯೇ ಬಂದು ಕಾಯುತ್ತಾರೆ. ಇಲ್ಲಿ ಬಿರಿಯಾನಿ ಜೊತೆ, ಪಾಯ ಸೂಪ್ ಹಾಗೂ ಕಬಾಬ್ ತುಂಬಾ ಚೆನ್ನಾಗಿರುತ್ತೆ.

ಸ್ಥಳ :- ಕೆ.ವಿ ಕುವೆಂಪು ಬೀದಿ, 2ನೇ ಕ್ರಾಸ್, ಚಿಕ್ಕಪೇಟೆ ಪೊಲೀಸ್ ಸ್ಟೇಷನ್ ಹತ್ತಿರ, ಸಿಟಿ ಮಾರ್ಕೆಟ್

ಸಮಯ :- ಬೆಳಗ್ಗೆ 10ರಿಂದ ಮಧ್ಯಾಹ್ನ 2:30ರ ವರೆಗೆ ಹಾಗೂ ಸಂಜೆ 6ರಿಂದ ರಾತ್ರಿ 9:30ರ ವರೆಗೆ (ಭಾನುವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 2ರ ವರೆಗೆ )

ಗುಂಡಪ್ಪ ದೊನ್ನೆ ಬಿರಿಯಾನಿ ಹೋಟೆಲ್

ಗುಂಡಪ್ಪ ದೊನ್ನೆ ಬಿರಿಯಾನಿ ಹೋಟೆಲ್ ಅಂದ್ರೆ ಇಂಥವರಿಗೆ ಗೊತ್ತಿಲ್ಲ ಅನ್ನೋ ಹಾಗಿಲ್ಲ. ಯಾಕಂದ್ರೆ ಎಲ್ಲರ ಬಾಯಲ್ಲೂ ಇರೋದೇ ಗುಂಡಪ್ಪ ಬಿರಿಯಾನಿ ಹೋಟೆಲ್. ಇಲ್ಲಿ ದೊನ್ನೆ ಬಿರಿಯಾನಿ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಯಾಕಂದ್ರೆ ಅಷ್ಟು ರುಚಿಯಾಗಿ ಮಾಡ್ತಾರೆ.

ಸ್ಥಳ :- 120, 1ನೇ ಮುಖ್ಯ ರಸ್ತೆ, ಗುಟ್ಟಹಳ್ಳಿ ಸರ್ಕಲ್, ಶೇಷಾದ್ರಿಪುರಂ / ಕೋರಮಂಗಲ 7ನೆ ಬ್ಲಾಕ್ / ಇಂದಿರಾ ನಗರ ಹಾಗೂ ಯಶವಂತಪುರ

ಸಮಯ :- ಬೆಳಗ್ಗೆ 8ರಿಂದ ರಾತ್ರಿ 11 ಗಂಟೆ ವರೆಗೆ

ಶಿವಾಜಿ ಮಿಲ್ಟ್ರಿ ಹೋಟೆಲ್

ಈ ಹೋಟೆಲ್ ಬೆಂಗಳೂರಿಗೆ ಫೇಮಸ್. ಯಾಕಂದ್ರೆ ಇಲ್ಲಿ ಮಾಡೋ ತರ ಅಡಿಗೆ ಎಲ್ಲೂ ಸಿಗಲ್ಲ ಅನ್ನೋದು ಜನರ ಫೀಲ್. ಹೌದು. ಇಲ್ಲಿ ಸಿಗೋ ತಲೆಮಾಂಸ ಹಾಗೂ ಬಿರಿಯಾನಿ ತುಂಬಾ ರುಚಿಯಾಗಿರುತ್ತೆ. ಇಲ್ಲಿ ಊಟ ತಗೋಬೇಕು ಅಂದ್ರೆ, ಗ್ರಾಹಕರು ಬೆಳಗ್ಗೆನೇ ಬಂದು ಕಾಯ್ತಿರ್ತಾರೆ. ಜೊತೆಗೆ ಇಲ್ಲಿ ಪಾರ್ಸಲ್ ತೆಗೆದುಕೊಂಡು ಹೋಗೋರು, 25-30 ಈ ರೀತಿ ತೆಗೆದುಕೊಂಡು ಹೋಗುತ್ತಾರೆ.

ಸ್ಥಳ :- 718, 1ನೇ ಮಹಡಿ, ಸಿ ಮುಖ್ಯ ರಸ್ತೆ, ೪೫ನೇ ಅಡ್ಡ ರಸ್ತೆ, 8ನೇ ಬ್ಲಾಕ್ ಜಯನಗರ.

ಸಮಯ :- ಮಧ್ಯಾಹ್ನ 12:30ರಿಂದ 2:30ರ ವರೆಗೆ

ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೌಸ್

ಈ ಹೋಟೆಲ್ ನಲ್ಲೂ ಬಿರಿಯಾನಿ ತುಂಬಾ ರುಚಿಯಾಗಿರುತ್ತೆ. ಜೊತೆಗೆ ಮಟನ್ ಬಿರಿಯಾನಿ, ಕ್ಷತ್ರಿಯ ಕಬಾಬ್, ಚಿಲ್ಲಿ ಚಿಕನ್ ಹಾಗೂ ಎಗ್ ಬಿರಿಯಾನಿ ಸವಿಯೋಕೆ ಬಲು ರುಚಿಯಾಗಿದೆ.

ಸ್ಥಳ :- ಕಮ್ಮನಹಳ್ಳಿ ಮುಖ್ಯ ರಸ್ತೆ, ಜಲ್ ವಾಯುವಿಹಾರ ವೃತ್ತ, ಕಮ್ಮನಹಳ್ಳಿ / ಯಶವಂತಪುರ / ಹನುಮಂತ ನಗರ್ / ಬನಶಂಕರಿ

ಸಮಯ :- ಮಧ್ಯಾಹ್ನ 12ರಿಂದ ಸಂಜೆ 4ರ ವರೆಗೆ ಹಾಗೂ ಸಂಜೆ 6ರಿಂದ ರಾತ್ರಿ 11ರ ವರೆಗೆ (ಭಾನುವಾರ ರಜೆ )

ಹುಲಿಯಪ್ಪಾಸ್ದೊನ್ನೆ ಬಿರಿಯಾನಿ

ಇದು ಸಹ ಬೆಂಗಳೂರಿನಲ್ಲಿ ಬಾಯಿಂದ ಬಾಯಿಗೆ ಹರಡಿರುವ ಹೋಟೆಲ್. ಇಲ್ಲೂ ಸಹ ಬಿರಿಯಾನಿ ಸೂಪರ್. ಇಲ್ಲಿ ಸಿಗುವ ಅಬಿರಿಯಾನಿ ತಿನ್ನೋಕೆ ಗ್ರಾಹಕರು ಎಲ್ಲೆಲ್ಲಿಂದಲೋ ಬರುತ್ತಾರೆ. ಈ ಹೋಟೆಲ್ ನಲ್ಲಿ ಬಿರಿಯಾನಿ ಜೊತೆಗೆ, ಗುಂಟೂರು ಚಿಕನ್, ಕಬಾಬ್, ಮಟನ್ ಬಿರಿಯಾನಿ ಹಾಗೂ ಚಿಲ್ಲಿ ಚಿಕನ್ ತುಂಬಾ ಫೇಮಸ್ ಆಗಿದೆ.

ಸ್ಥಳ :- ಎಂ ಕೆ ಅಹ್ಮದ್ ಸ್ಟೋರ್ ಎದುರು, 1ನೇ ಅಡ್ಡ ರಸ್ತೆ, ಎಚ್ ಎಂ ಟಿ ಲೇಔಟ್, ಸಿಬಿಐ ಮುಖ್ಯ ರಸ್ತೆ, ಆರ್ ಟಿ ನಗರ್ / ಬ್ಯಾಟರಾಯನ ಪುರ / ಶೇಷಾದ್ರಿಪುರಂ / ಯಲಹಂಕ

ಸಮಯ :- ಮಧ್ಯಾಹ್ನ 12ರಿಂದ ಸಂಜೆ 4ರ ವರೆಗೆ ಹಾಗೂ ರಾತ್ರಿ 7ರಿಂದ ರಾತ್ರಿ 9:30ರ ವರೆಗೆ

ದೊನ್ನೆ ಬಿರಿಯಾನಿ ಮನೆ

ದೊನ್ನೆ ಬಿರಿಯಾನಿ ಎಂದು ಹೆಸರಿಟ್ಟಿರುವ ಈ ಹೋಟೆಲ್ ನಲ್ಲೂ ಬಿರಿಯಾನಿ ಅತ್ಯಂತ ರುಚಿಯಾಗಿರುತ್ತದೆ.

ಸ್ಥಳ :- 1ನೇ ಬ್ಲಾಕ್, ಎಚ್ ಆರ್ ಬಿ ಆರ್ ಲೇಔಟ್, ಹೊರಮಾವು, ಬಾಣಸವಾಡಿ

ಸಮಯ :- ಮಧ್ಯಾಹ್ನ 11:30ರಿಂದ ಸಂಜೆ 4:30 ರ ವರೆಗೆ ಹಾಗೂ ಸಂಜೆ 6:30ರಿಂದ ರಾತ್ರಿ 10:30ರ ವರೆಗೆ

ದೊನ್ನೆ ಬಿರಿಯಾನಿ ಹೌಸ್ ಕೋರಮಂಗಲ

ಸ್ಥಳ :- 1ನೇ ಮುಖ್ಯ ರಸ್ತೆ ಕೋರಮಂಗಲ

ಸಮಯ :- 11ರಿಂದ ಸಂಜೆ 4ರ ವರೆಗೆ ಹಾಗೂ ಸಂಜೆ 6ರಿಂದ ರಾತ್ರಿ 10:30ರ ವರೆಗೆ

ಮಾಲ್ಗುಡಿಸ್ ದೊನ್ನೆ ಬಿರಿಯಾನಿ

ಸ್ಥಳ :- ಕೋರಮಂಗಲ ೫ನೇ ಬ್ಲಾಕ್

ಸಮಯ :- ಮಧ್ಯಾಹ್ನ 12:30ರಿಂದ ರಾತ್ರಿ 10:30 ರ ವರೆಗೆ

ದೊನ್ನೆ ಬಿರಿಯಾನಿ ಹೌಸ್ ಮಲ್ಲೇಶ್ವರಂ

ಸ್ಥಳ :- ಸಂಪಿಗೆ ರಸ್ತೆ, ಮಲ್ಲೇಶ್ವರಂ ಬೆಂಗಳೂರು

ಸಮಯ :- ಬೆಳಗ್ಗೆ 10:30ರಿಂದ ಸಂಜೆ 4:30 ರ ವರೆಗೆ ಹಾಗೂ ಸಂಜೆ 6:30ರಿಂದ ರಾತ್ರಿ 10:30ರ ವರೆಗೆ

ಬನಶಂಕರಿ ದೊನ್ನೆ ಬಿರಿಯಾನಿ

ಸ್ಥಳ :- 15ನೇ ಮುಖ್ಯ ರಸ್ತೆ ಹನುಮಂತ್ ನಗರ್ ಬೆಂಗಳೂರು

ಸಮಯ :- ಮಧ್ಯಾಹ್ನ 12ರಿಂದ ರಾತ್ರಿ 10ರ ವರೆಗೆ

ಅಕ್ಕಿಪೇಟೆ ಧಮ್ ಬಿರಿಯಾನಿ

ಈ ಹೋಟೆಲ್ ನಲ್ಲೂ ಬಿರಿಯಾನಿ ಬಲು ರುಚಿಯಾಗಿರುತ್ತದೆ. ಪ್ರತಿದಿನ ಇಲ್ಲಿಗೆ ನೂರಾರು ಜನ ಗ್ರಾಹಕರು ಬರುತ್ತಾರೆ.

ಫೋನ್ ನಂಬರ್ :- 919341246466

LEAVE A REPLY

Please enter your comment!
Please enter your name here