ವೈರಲ್ ಆಗುತ್ತಿದೆ ದೊಡ್ಮನೆಯಲ್ಲಿ ನಡೆಯುತ್ತಿರುವ ಹಸಿ ಬಿಸಿ ಘಟನೆಗಳು

0
301

ಬಿಗ್ ಬಾಸ್ ಕನ್ನಡ ಸೀಸನ್ ೭ ಶುರುವಾದ ದಿನದಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು. ವಿವಿಧ ರೀತಿಯ ಟಾಸ್ಕ್ ಗಳು, ಆ ಟಾಸ್ಕ್ ಗಳನ್ನೂ ಪೂರ್ಣಗೊಳಿಸಲು ಸ್ಪರ್ಧಿಗಳು ಮಾಡುವ ಪ್ಲಾನ್ ಗಳು ಎಲ್ಲರು ವಿಭಿನ್ನವಾಗಿದೆ. ಹಾಗಾಗಿ ಎಲ್ಲರು ಬಿಗ್ ಬಾಸ್ ಕಾರ್ಯಕ್ರಮವನ್ನು ತಪ್ಪದೆ ನೋಡುತ್ತಿದ್ದಾರೆ. ಇನ್ನು ಕೆಲವರು ಚಿಕ್ಕ ಚಿಕ್ಕ ವಿಷಯಗಳಿಂದ ಮನೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅವರೇ ಕಿಶನ್. ಹೌದು. ಕಿಶನ್ ಮನೆಯಲ್ಲಿ ಏನೇ ಮಾಡಿದರು ಅದು ಹೆಚ್ಚು ಸದ್ದು ಮಾಡುತ್ತದೆ. ಅದೇ ರೀತಿ ಮುತ್ತಿನ ವಿಚಾರವಾಗಿ ಕೂಡ ಇದೇ ರೀತಿ ಆಗುತ್ತಿದೆ. ಹೌದು. ಕಿಶನ್ ಮನೆಯಲ್ಲಿರುವ ಎಲ್ಲ ಮಹಿಳಾ ಸ್ಪರ್ಧಿಗಳಿಗೆ ಮುತ್ತು ಕೊಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಎಲ್ಲ ಮಹಿಳಾ ಸ್ಪರ್ಧಿಗಳಿಗೂ ಮುತ್ತು ಕೊಡುತ್ತಿರುವ ಕಿಶನ್

ಬಿಗ್ ಬಾಸ್ ಮನೆಯಲ್ಲಿ ಚಿಕ್ಕ ಹುಡಗನ ರೀತಿ ವರ್ತಿಸೋದು ಅಂದ್ರೆ ಕಿಶನ್. ಹಾಗಾಗಿ ಕಿಶನ್ ಎಲ್ಲರೊಂದಿಗೂ ಬಹಳ ಸಲಿಗೆಯಿಂದ ನಡೆದುಕೊಳ್ಳುತ್ತಾರೆ. ಆದ್ರೆ ಇತ್ತೀಚಿಗೆ ಅವರ ಸಲಿಗೆ ಮುತ್ತು ಕೊಡುವ ವರೆಗೂ ತಲುಪಿದೆ ಎಂದು ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ಚರ್ಚೆ ನಡೆಯುತ್ತಲೇ ಇದೇ. ಹೌದು. ಈ ಬಗ್ಗೆ ಮನೆಯ ಕೆಲವು ಸದಸ್ಯರು ಕಿಶನ್ ನನ್ನ ಎದುರು ಕೂರಿಸಿಕೊಂಡು, ನೀನು ಇಲ್ಲಿಯವರೆಗೂ ಈ ಮನೆಯಲ್ಲಿ ಯಾರ್ಯಾರಿಗೆ ಮುತ್ತು ಕೊಟ್ಟಿದ್ದೀಯ ಎಂದು ಕೇಳುತ್ತಾರೆ. ಅದಕ್ಕೆ ಕಿಶನ್, ಈಗಾಗಲೇ ಮನೆಯಲ್ಲಿ ಇರುವವರಿಗೆಲ್ಲಾ ಮುತ್ತು ಕೊಟ್ಟಿದ್ದೇನೆ. ಸುಜಾತ, ಚಂದನ, ದೀಪಿಕಾ ಎಲ್ಲರು ಇದ್ದಾರೆ. ಆದ್ರೆ ದೀಪಿಕಾ ಗೆ ಮುತ್ತು ಕೊಡುವಾಗ ಬಹಳಷ್ಟು ಭಯವಾಗಿತ್ತು ಎಂದು ಹೇಳುತ್ತಾರೆ.

ಗ್ಯಾಪ್ ನಲ್ಲೇ ಭೂಮಿ ಶೆಟ್ಟಿಗೆ ಕಿಸ್ ಮಾಡಿದ ಕಿಶನ್

ಇನ್ನು ಮುತ್ತಿನ ವಿಚಾರ ಮಾತನಾಡುವಾಗ ಪಕ್ಕದಲ್ಲಿ ಪ್ರಿಯಾಂಕಾ ಹಾಗು ಭೂಮಿ ಇದ್ದರು. ಇನ್ನು ಆ ಮನೆಯಲ್ಲಿ ಕಿಶನ್ ಮುತ್ತು ಕೊಡದೆ ಇದ್ದದ್ದು ಅಂದ್ರೆ ಅದು ಭೂಮಿ ಹಾಗು ಪ್ರಿಯಾಂಕಾಗೆ. ಹಾಗಾಗಿ ಇದೇ ವಿಚಾರವಾಗಿ ಮಾತನಾಡುವಾಗ ಭೂಮಿ ಜೋರಾಗಿ ನಗುತ್ತಾರೆ. ಆಗ ತಕ್ಷಣವೇ ಕಿಶನ್, ಭೂಮಿಗೆ ಮುತ್ತು ಕೊಡುತ್ತಾರೆ. ಅದನ್ನು ನೋಡಿದ ಕೂಡಲೇ ಅಲ್ಲಿದ್ದವರೆಲ್ಲಾ ಒಂದು ಕ್ಷಣ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇನ್ನು ಭೂಮಿ ಅಂತೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಬದಲಿಗೆ ನಕ್ಕು ಸುಮ್ಮನಾಗುತ್ತಾರೆ. ಇನ್ನು ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ಹಸಿ ಬಿಸಿ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಕಿಶನ್ ದೊಡ್ಮನೆಯಲ್ಲಿ ಕೃಷ್ಣ ಎಂಬ ಹೆಸರನ್ನು ಸಹ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here