ಕಿಚ್ಚನಿಗೆ ಮನಬಂದಂತೆ ನಿಂದಿಸಿದ ಬಿಗ್ ಬಾಸ್ ಸ್ಪರ್ಧಿ ಶಶಿ

0
378
sudeep and shashi

ಎಲ್ಲ ಭಾಷೆಗಳಲ್ಲೂ ಈಗ ಮತ್ತೆ ಬಿಗ್ ಬಾಸ್ ಹವಾ ಶುರುವಾಗುತ್ತಿದೆ. ಹೌದು. ಎಲ್ಲರ ನೆಚ್ಚಿನ ಕಾರ್ಯಕ್ರಮ ಬಿಗ್ ಬಾಸ್ ಈಗ ಮತ್ತೆ ಬರುತ್ತಿದೆ. ಕೆಲವು ಭಾಷೆಗಳಲ್ಲಿ ಈಗಾಗಲೇ ತೆರೆ ಕಾಣುತ್ತಿದೆ. ಇನ್ನು ಕೆಲವು ಭಾಷೆಗಳಲ್ಲಿ ತೆರೆ ಕಾಣಲು ಸಜ್ಜಾಗುತ್ತಿದೆ. ಆದ್ರೆ ಕನ್ನಡದಲ್ಲಿ ಮಾತ್ರ ಯಾವ ವಿಷಯವು ಬಹಿರಂಗವಾಗಿರಲಿಲ್ಲ. ಆದ್ರೆ ಈಗ ಕನ್ನಡ ಬಿಗ್ ಬಾಸ್ ಬಗ್ಗೆ ಒಂದು ಸುದ್ದಿ ಕೇಳಿ ಬಂದಿದೆ. ಹೌದು. ಅದು ಮುಂದಿನ ಸಂಚಿಕೆಯ ಬಗ್ಗೆ ಯಾವ ಸುದ್ದಿಯು ಹೊರಬಿದ್ದಿಲ್ಲ. ಬದಲಿಗೆ ಕಳೆದ ಸಂಚಿಕೆಯ ಬಗ್ಗೆ ಒಂದು ವಿಷಯ ಈಗ ಎಲ್ಲ ಕಡೆ ಹರಿದಾಡುತ್ತಿದೆ. ಹೌದು. ಕಳೆದ ಸೀಸನ್ ನಲ್ಲಿ ಇದ್ದಂತಹ ಒಬ್ಬ ಅಭ್ಯರ್ಥಿಯ ಬಗ್ಗೆ ಈಗ ಕೆಲವು ವಿಷಯಗಳು ತಿಳಿದುಬಂದಿದೆ. ಆ ಸ್ಪರ್ಧಿ, ಕಿಚ್ಚ ಸುದೀಪ್ ಅವರ ಬಗ್ಗೆಯೇ ಬಹಳ ಹಗುರವಾಗಿ ಮಾತನಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಂತೆ. ಆದ್ರೆ ಇಷ್ಟುದಿನ ಈ ಬಗ್ಗೆ ಯಾವುದೇ ಸುದ್ದಿ ಹೊರಬಿದ್ದಿರಲಿಲ್ಲ. ಆದ್ರೆ ಈಗ ಇದರ ಬಗ್ಗೆ ಮಾಹಿತಿ ಹೊರ ಬಿದ್ದಿದೆ.

ಕಿಚ್ಚನಿಗೆ ನಿಂದಿಸಿದ್ದ ಶಶಿ

ಕಳೆದ ಸೀಸನ್ ಬಿಗ್ ಬಾಸ್ ಅನ್ನು ಕಿಚ್ಚ ಸುದೀಪ್ ಬಹಳಷ್ಟು ಚೆನ್ನಾಗಿ ನಡೆಸಿಕೊಟ್ಟಿದ್ದರು. ಜೊತೆಗೆ ಸ್ಪರ್ಧಿಗಳು ಬಹಳ ಉತ್ತಮವಾಗಿ ಸ್ಪರ್ಧಿಸಿದ್ದರು. ಇನ್ನು ಆ ಸೀಸನ್ ನಲ್ಲಿ ಶಶಿ ಮೊದಲ ಸ್ಥಾನ ಪಡೆದರೆ, ನವೀನ್ ಸಜ್ಜು ಎರಡನೇ ಸ್ಥಾನ ಪಡೆದಿದ್ದರು. ಇನ್ನು ಈಗ ವಿಷಯ ಕೇಳಿಬಂದಿರುವುದು ಮೊದಲ ಸ್ಥಾನ ಪಡೆದ ಶಶಿಯ ಬಗ್ಗೆ. ಹೌದು. ಶಶಿ ಕಿಚ್ಚ ಸುದೀಪ್ ಬಗ್ಗೆ ಬಹಳಷ್ಟು ಹಗುರವಾಗಿ ಮಾತನಾಡಿ, ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಂತೆ. ಹೌದು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ರನ್ನು ನೀವೇ ನನ್ನ ಸ್ಫೂರ್ತಿ, ಸರ್ ನೀವು ಸೂಪರ್ ಎಂದೆಲ್ಲ ತರ ತರವಾಗಿ ಹೊಗಳಿದ್ದ ಶಶಿ ಈಗ ವರಸೆ ಬದಲಿಸಿದ್ದಾನೆ. ಕುಡಿತ ಮತ್ತಿನಲ್ಲಿ ಶಶಿ ನಟ ಸುದೀಪ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂಬುದು ಕೆಲವು ದಿನಗಳ ಹಿಂದೆ ತಿಳಿದುಬಂದಿತ್ತು. ಆದ್ರೆ ಆಗ ಸುದೀಪ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೆ ಈಗ ಅದರ ಬಗ್ಗೆ ಸಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿಕ್ರಿಯೆ ನೀಡಿದ್ದರೆ ಅನಾಹುತವಾಗುತ್ತಿತ್ತು

ಇನ್ನು ಶಶಿ ಅಷ್ಟೆಲ್ಲ ಮಾತುಗಳನ್ನಾಡಿದ್ದರು ಸುದೀಪ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಯಾಕಂದ್ರೆ ಆ ವಿಚಾರ ಅಭಿಮಾನಿಗಳಿಗೆ ಗೊತ್ತಾದರೆ, ಶಶಿಗೆ ಯಾವ ಪರಿಸ್ಥಿತಿ ಬರುತತದೆ ಅನ್ನೋದನ್ನು ಊಹೆ ಸಹ ಮಾಡಲು ಆಗುವುದಿಲ್ಲ. ಹಾಗಾಗಿ ಇಷ್ಟುದಿನ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಹೌದು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸುದೀಪ್ ಅವರ ಬಳಿ ಶಶಿಯ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ. ಅದಕ್ಕೆ ಅವರು, ಮೊದಲಿಗೆ ಏನು ಹೇಳಲಿಲ್ಲವಾದರೂ, ನಂತರ ತಿಳಿಸಿದ್ದಾರೆ. ಹೌದು. ಈ ವಿಷಯ ನಿಜ. ಆದರೆ ಅಷ್ಟೇನೂ ದೊಡ್ಡದು ಮಾಡಲು ನನಗೆ ಮನಸಾಗಿಲ್ಲ. ಯಾಕಂದ್ರೆ ಈ ವಿಷಯ ನನ್ನನ್ನು ಇಷ್ಟ ಪಡುವವರಿಗೆ ಗೊತ್ತಾದರೆ, ಶಶಿಯ ಪರಿಸ್ಥಿತಿ ಏನಾಗಬಹುದು ಎಂದು ಊಹೆಯನ್ನು ಸಹ ಮಾಡಲು ಆಗುವುದಿಲ್ಲ. ಹಾಗಾಗಿ ಈ ವಿಷಯದ ಬಗ್ಗೆ ಎಲ್ಲೂ ಮಾತಾಡಿಲ್ಲ ಎಂದು ತಿಳಿಸಿದ್ದಾರೆ.

ನಾಯಿ ತನ್ನ ಬುದ್ದಿ ತೋರಿಸುತ್ತದೆ

ಇನ್ನು ಶಶಿಯ ಬಗ್ಗೆ ಮಾತನಾಡಿದ ಸುದೀಪ್, ಅವನಿಗೆ ಯಾವುದೇ ರೀತಿಯಲ್ಲೂ ಬೈದಿಲ್ಲ. ಬದಲಿಗೆ ಅವನು ಇನ್ನು ಬೆಳೆಯಬೇಕಾಗಿರುವ ಯುವಕ. ಉತ್ತಮ ರೀತಿಯಲ್ಲಿ ಬದುಕಬೇಕು. ಅದನ್ನು ಬಿಟ್ಟು ಇಲ್ಲ ಸಲ್ಲದ ಮಾತುಗಳನ್ನು ಹೇಳಬಾರದು ಎಂದು ಹೇಳಿದ್ದಾರೆ. ಜೊತೆಗೆ ಆತನಿಗೆ ಒಂದು ಮಾತನ್ನು ಹೇಳಿದ್ದಾರೆ. ಹೌದು. ನಾಯಿ ಕಾಲೆತ್ತಿ ಕಲ್ಲಿನ ಮೇಲೆ ಉಚ್ಚೆ ಮಾಡಿದರೆ, ಕಲ್ಲಿನ ತೂಕ ಕಡಿಮೆ ಆಗುವುದಿಲ್ಲ. ನಾಯಿ ತನ್ನ ಬುದ್ದಿ ತೋರಿಸುತ್ತದೆ. ನಂತರ ಕಲ್ಲು ಒಣಗಿದ ಮೇಲೆ ತನ್ನ ವ್ಯಕ್ತಿತ್ವ ತೋರಿಸುತ್ತದೆ ಎಂದು ಶಶಿಗೆ ತಮ್ಮ ಕಟುವಾದ ಮಾತಿನ ಮೂಲಕವೇ ಪೆಟ್ಟು ಕೊಟ್ಟಿದ್ದಾರೆ ಸುದೀಪ್. ಅಲ್ಲದೆ ಡಬಲ್ ಗೇಮ್ ಮಾಡಿದ ಶಶಿಗೆ ಕಿಚ್ಚ ಈ ರೀತಿ ಮಂಗಳಾರತಿ ಮಾಡಿದ್ದಾರೆ.

ಇಷ್ಟೆಲ್ಲಾ ಆದ ನಂತರ ಶಶಿ, ಸುದೀಪ್ ಅವರನ್ನು ಕ್ಷಮೆ ಕೇಳಿದ್ದಾನೆ. ಆದ್ರೆ ಸುದೀಪ್ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಯಾಕಂದ್ರೆ ಸುದೀಪ್ ಗೆ ಏನೇ ಇದ್ದರು ಮುಂದೆ ಮಾತನಾಡಬೇಕಂತೆ. ಅದನ್ನು ಬಿಟ್ಟು, ಬೆನ್ನು ಹಿಂದೆ ಮಾತನಾಡಿದರೆ ಅವರಿಗೆ ಅದನ್ನು ಸಹಿಸಲು ಆಗುವುದಿಲ್ಲವಂತೆ. ಹಾಗಾಗಿ ಶಶಿಯ ಯಾವುದೇ ಮುಂದಿನ ಮಾತಿಗೆ ಸುದೀಪ್ ಪ್ರತಿಕ್ರಿಯೆ ನೀಡಿಲ್ಲ.

LEAVE A REPLY

Please enter your comment!
Please enter your name here